Tuesday, February 24, 2026
Tuesday, February 24, 2026

ಜಗತ್ತು ಸುತ್ತುವ ಸಂಗೀತ ಅವಳಲ್ಲೇ ಜಗತ್ತು ಕಂಡ ಪ್ರಸನ್ನ

ನನಗೆ ಹೆಚ್ಚೇನೂ ಆಸೆಯಿಲ್ಲ ಪ್ರಸನ್ನ. ನಾನು ಇಡೀ ಜಗತ್ತನ್ನು ಸುತ್ತಬೇಕು. ನೀನು ಸೈಕಲ್‌ ಅಲ್ಲಿ ಕರ್ಕೊಂಡು ಹೋಗ್ತಿಯೋ ಅಥವಾ ಫ್ಲೈಟ್‌ ಬುಕ್‌ ಮಾಡ್ತಿಯೋ ನನಗೆ ಗೊತ್ತಿಲ್ಲ. ಸುತ್ತಿಸು ಅಷ್ಟೇ. ಎಲ್ಲಿಗಾದರೂ ಸರಿ ನಾನು ಬರಲಿಕ್ಕೆ ರೆಡಿಯಿದ್ದೀನಿ. ಮತ್ಯಾವ ಕಂಡೀಷನ್‌ ಕೂಡ ಇಲ್ಲ. ಟ್ರಿಪ್‌ ಮಾಡ್ತಾ ಮಾಡ್ತಾ ನನಗೆ ನಿನ್ನ ಮೇಲೆ ಲವ್ವಾಗಬಹುದು. ಆ ಕ್ಷಣದಿಂದಲೇ ನಾನು ನಿನ್ನ ಸಪ್ನೋಕಿ ರಾಣಿ. ತೈವಾನ್‌ನಲ್ಲಿ ನೀನು ಕ್ರಾಫ್ಟ್ ಬಿಯರ್ ಹೀರುತ್ತಾ ಐ ಲವ್‌ ಯೂ ಅಂತ ಹೇಳ್ಬಿಡು.

ಅವಳ ಹೆಸರು ಸಂಗೀತ, ಪಕ್ಕಾ ಮಿಡಲ್‌ ಕ್ಲಾಸ್‌ ಹುಡುಗಿ. ಮನೆ ಮತ್ತು ಕಾಲೇಜಿನ ಹೊರತಾಗಿ ಬೇರೆ ಜಗತ್ತು ನೋಡಿರಲಿಲ್ಲ. ಪ್ರಸನ್ನ ಬಿಂದಾಸ್‌ ಹುಡುಗ. ಸಿಗರೇಟ್‌, ಬಿಯರ್‌ ಮತ್ತು ಸುತ್ತಾಟ ಅವನ ಹವ್ಯಾಸಗಳು. ಈ ಪ್ರಸನ್ನನಿಗೆ ಸಂಗೀತಳನ್ನು ಒಲಿಸಿಕೊಳ್ಳುವ ಆಸೆಯಾಯಿತು. ಅವಳ ಡೇರ್‌ ಡೆವಿಲ್‌ ವರ್ತನೆ ಮತ್ತು ಬೋಲ್ಡ್‌ನೆಸ್‌ ನೋಡಿ ಕ್ರಷ್‌ ಆಯಿತು. ನಮ್ಮ ಹುಡುಗ ಫುಲ್ ಲವ್‌ ಮೂಡ್‌ನಲ್ಲಿ, ರೆಟ್ರೋ ಸ್ಟೈಲ್‌ನಲ್ಲಿ ಪ್ರಪೋಸ್‌ ಮಾಡಿದ. ʼನಿನಗಾಗಿ ನಾನು ಏನು ಬೇಕಾದರೂ ಮಾಡ್ತೀನಿ. ಒಂದೊಳ್ಳೆ ಕೆಲಸದಲ್ಲಿದ್ದೀನಿ. ಲಕ್ಷಗಟ್ಟಲೆ ಸಂಬಳ ಬರುತ್ತೆ. ನೀನು ಆರಾಮವಾಗಿ ಮನೆಯಲ್ಲಿದ್ರೆ ಸಾಕು. ನಿನ್ನನ್ನು ರಾಣಿ ಥರ ನೋಡ್ಕೋತೀನಿʼ ಅಂದ ಪ್ರಸನ್ನ. ಈ ʼಆರಾಮವಾಗಿ ಮನೆಯಲ್ಲಿದ್ರೆ ಸಾಕುʼ ಅನ್ನೋದು ಕೇಳಿಯೇ ಸಂಗೀತ ಉರಿದುಬಿದ್ದಳು. ʼಹಲೋ ಮಿಸ್ಟರ್.‌ ಮನೆಯಲ್ಲಿದ್ರೆ ಆರಾಮವಾಗಿ ಇರ್ತೀನಿ ಅಂತ ನಿಮಗೆ ಯಾರು ಹೇಳಿದ್ದು? ಈಗಲೂ ಮನೆಯಲ್ಲೇ ಇದ್ದೀನಿ. ಮನೆಬಿಟ್ಟು ನನಗೆ ಬೇರೆ ಪ್ರಪಂಚ ಗೊತ್ತಿಲ್ಲ. ಈ ಬಂಧನದ ಗೋಡೆಯಿಂದ ಹೊರಬಂದರೆ ಸಾಕು ಅಂತಿದ್ದೀನಿʼ ಸಂಗೀತ ಮಾತನಾಡುತ್ತಾ ಹೋದಳು. ʼನಿನಗಾಗಿ ಮತ್ತೇನು ಮಾಡಲಿ ಹೇಳು?ʼ ಪ್ರಸನ್ನ ಅಂಗಾಲಾಚಿದ. ಸಂಗೀತಳಿಗೆ ಲವ್‌ ಅಂದ್ರೆ ಅಲರ್ಜಿ ಅನ್ನುವಷ್ಟೇನೂ ಇರಲಿಲ್ಲ.

ಇದನ್ನೂ ಓದಿ: ವಿಶ್ವಮಾನ್ಯತೆ ಪಡೆದಿರುವ ಮೈಸೂರಿನ ʻಶುಕʼವನ

ಪ್ರಸನ್ನ ಹೇಳಿಕೇಳಿ ಕಟ್ಟುಮಸ್ತಾಗಿದ್ದ. ತೀರಾ ಸ್ಪುರದ್ರೂಪಿ ಅಲ್ಲದಿದ್ದರೂ ನೋಡಲು ಚೆನ್ನಾಗಿದ್ದ. ಕೈತುಂಬಾ ಸಂಬಳ ತೆಗೀತಿದ್ದ. ಎರಡು ತಲೆಮಾರಿಗೆ ಆಗುವಷ್ಟು ಆಸ್ತಿಯಿತ್ತು. ರಿಜೆಕ್ಟ್‌ ಮಾಡುವ ಯಾವ ಮೈನಸ್‌ ಪಾಯಿಂಟ್‌ಗಳು ಕೂಡ ಸಂಗೀತಳಿಗೆ ಕಾಣಲಿಲ್ಲ. ʼ ನನಗೆ ಹೆಚ್ಚೇನೂ ಆಸೆಯಿಲ್ಲ ಪ್ರಸನ್ನ. ನಾನು ಇಡೀ ಜಗತ್ತನ್ನು ಸುತ್ತಬೇಕು. ನೀನು ಸೈಕಲ್‌ ಅಲ್ಲಿ ಕರ್ಕೊಂಡು ಹೋಗ್ತಿಯೋ ಅಥವಾ ಫ್ಲೈಟ್‌ ಬುಕ್‌ ಮಾಡ್ತಿಯೋ ನನಗೆ ಗೊತ್ತಿಲ್ಲ. ಸುತ್ತಿಸು ಅಷ್ಟೇ. ಎಲ್ಲಿಗಾದರೂ ಸರಿ ನಾನು ಬರಲಿಕ್ಕೆ ರೆಡಿಯಿದ್ದೀನಿ. ಮತ್ಯಾವ ಕಂಡೀಷನ್‌ ಕೂಡ ಇಲ್ಲ. ಟ್ರಿಪ್‌ ಮಾಡ್ತಾ ಮಾಡ್ತಾ ನನಗೆ ನಿನ್ನ ಮೇಲೆ ಲವ್ವಾಗಬಹುದು. ಆ ಕ್ಷಣದಿಂದಲೇ ನಾನು ನಿನ್ನ ಸಪ್ನೋಕಿ ರಾಣಿ. ತೈವಾನ್‌ನಲ್ಲಿ ನೀನು ಕ್ರಾಫ್ಟ್ ಬಿಯರ್ ಹೀರುತ್ತಾ ಐ ಲವ್‌ ಯೂ ಅಂತ ಹೇಳ್ಬಿಡುʼ ಸಂಗೀತ ಧೈರ್ಯ ಮಾಡಿ ಹೇಳಿಬಿಟ್ಟಳು. ಮೊದಲೇ ತಿರುಗಾಲ ಪ್ರಾಣಿಯಾಗಿದ್ದ ಪ್ರಸನ್ನನಿಗೆ ಒಳ್ಳೆಯ ಜೋಡಿ ಸಿಕ್ಕಂತಾಯಿತು. ಮನೆ, ಕಾಲೇಜು ಹೊರತಾಗಿ ಮತ್ತೇನನ್ನೂ ನೋಡಿರದ ಸಂಗೀತ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ನಿಂತುಬಿಟ್ಟಳು. ಪ್ರಸನ್ನ ತನ್ನ ದಿಲ್ ಕಿ ದಡ್ಕನ್ ಆಗುವ ಹುಡುಗಿಯ ಕೈಹಿಡಿದು ವಿಶ್ವಪರ್ಯಟನೆ ಮಾಡಿಸಿದ.

Untitled design (62)

ಟ್ರಾವೆಲ್‌ ಕಹಾನಿ

ಸಂಗೀತ ಜಗತ್ತು ಸುತ್ತಿರಲಿಲ್ಲ ಅಷ್ಟೇ. ಆದರೆ ಅವಳಿಗೆ ಜಗತ್ತಿನ ಬಗ್ಗೆ ಅರಿವಿತ್ತು. ಪ್ರತಿ ದೇಶದ ಬಗ್ಗೆಯೂ ಅವಳಲ್ಲಿ ಮಾಹಿತಿಯಿತ್ತು. ಓದಿ,ಕೇಳಿ ತಿಳಿದುಕೊಂಡಿದ್ದಳು. ಜಗತ್ತು ಸುತ್ತುತ್ತಾ ಸಂಗೀತ ಪ್ರಸನ್ನಳಾದಳು. ಪ್ರಸನ್ನ ಅವಳ ಕನಸಿಗೆ ರೆಕ್ಕೆ ಕಟ್ಟಿ ಹಾರಲುಬಿಟ್ಟ. ಅವಳಲ್ಲೇ ಜಗತ್ತನ್ನು ಕಂಡ. ಇಪ್ಪತ್ತೈದು ವರ್ಷಗಳಿಂದ ಇಬ್ಬರೂ ಸುತ್ತುತ್ತಲೇ ಇದ್ದಾರೆ. ಸುತ್ತುತ್ತಾ ಇಬ್ಬರೂ ಅಮರ ಪ್ರೇಮಿಗಳಾದರು. ಒಬ್ಬರಿಗೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡರು. ತಮ್ಮನ್ನು ಅರ್ಪಿಸಿಕೊಂಡರು. ಇಬ್ಬರಿಗೆ ಮದುವೆಯೂ ಆಯಿತು. ಸುಖೀ ದಂಪತಿಗಳಾದರು. ಬೆಸ್ಟ್‌ ಟ್ರಾವೆಲರ್‌ ಕಪಲ್ಸ್‌ ಎಂದು ಕರೆಸಿಕೊಂಡರು. ಪ್ರತಿ ವರ್ಷದ ವ್ಯಾಲೆಂಟೈನ್ಸ್‌ ದಿನದಂದು ಈ ಲವರ್ಸ್‌ಗಳು ಟ್ರಿಪ್‌ನಲ್ಲಿರುತ್ತಾರೆ. ಪ್ರಸನ್ನ ಐವತ್ತರ ಹರೆಯದಲ್ಲೂ ತನ್ನ ಮುದ್ದಿನ ಹುಡುಗಿಗೆ ಬೀಚ್‌, ಮೌಂಟೇನ್‌ ಮತ್ತು ವಂಡರ್‌ ಅನ್ನಿಸುವಂಥ ಡೆಸ್ಟಿನೇಶನ್‌ಗಳಲ್ಲಿ ʼಐ ಲವ್‌ಯೂ ಬೇಬಿʼ ಎಂದು ಸಖತ್‌ ಹಾಟಾಗಿ ಪ್ರಪೋಸ್‌ ಮಾಡುತ್ತಾರೆ. ಸಂಗೀತ ಈಗಲೂ ನಾಚಿ ನೀರಾಗುತ್ತಾರೆ.

ಈ ಜೋಡಿ ಸುತ್ತಿದ್ದು 190 ದೇಶ

1998ರಲ್ಲಿ ಸಂಗೀತಳಿಗೆ ಪ್ರಸನ್ನ ʼಐ ಲವ್‌ ಯೂʼ ಅಂದರು. ಸುದೀರ್ಘ ಎರಡೂವರೆ ದಶಕಗಳಲ್ಲಿ ಈ ಲವರ್ಸ್‌ಗಳು 190ಕ್ಕೂ ಹೆಚ್ಚು ದೇಶ ಸುತ್ತಿದ್ದಾರೆ. ಚೀನಾ, ಸಿಂಗಾಪುರ್, ಥೈಲ್ಯಾಂಡ್, ಮಲೇಷ್ಯಾ, ಟರ್ಕಿ, ಇಸ್ರೇಲ್‌, ಇರಾಕ್‌, ಇರಾನ್‌, ಫ್ರಾನ್ಸ್‌, ಸೌತ್‌ ಆಫ್ರಿಕಾ, ಸ್ವಿಟ್ಜರ್‌ಲ್ಯಾಂಡ್‌, ತೈವಾನ್‌, ಜಾರ್ಜಿಯಾ, ದುಬೈ, ಅಂಟಾರ್ಟಿಕಾ, ಜರ್ಮನಿ, ಜಪಾನ್‌, ಬೊಲಿವಿಯಾ ಈ ದೇಶಗಳಿಗೆ ಕನಿಷ್ಠ ಮೂರ್ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಇಬ್ಬರೂ ಕಡಲ ತೀರದಲ್ಲಿ ಕಾಲು ಚಾಚಿಕೊಂಡು ಕೂತು ಬಿಯರ್‌ ಹೀರುತ್ತಾ ಚಿಯರ್ಸ್‌ ಹೇಳುತ್ತಾರೆ. ʼನಾವಿಬ್ಬರೂ ನಮ್ಮ ಕೊನೆಗಾಲದವರೆಗೂ ಸುತ್ತುತ್ತೇವೆ. ಪ್ರಸನ್ನ ನನಗೆ ಇಡೀ ಜಗತ್ತನ್ನು ತೋರಿಸುತ್ತೇನೆ ಎಂದು ಪ್ರಾಮಿಸ್‌ ಮಾಡಿಯೇ ಲವ್‌ ಮಾಡಿದರು. ನಾನು ಅವರನ್ನು ಲವ್‌ ಮಾಡಿದ್ದೂ ಅದೇ ಕಾರಣಕ್ಕೆ. ಈಗ ನಾವಿಬ್ಬರೂ ಫರ್ಪೆಕ್ಟ್‌ ಲವರ್.‌ ನಮ್ಮಿಬ್ಬರದ್ದು ಸಕ್ಸಸ್‌ಫುಲ್‌ ಲವ್‌ಸ್ಟೋರಿ. ದಂಪತಿಗಳಾದ ಮೇಲೂ ನಾವು ಲವರ್‌ಗಳಾಗಿಯೇ ಉಳಿದಿದ್ದೇವೆ. ಒಂದು ಗಂಡಿಗೊಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡಿದ್ದೇವೆ. ನಮ್ಮದು ಲಾಂಗ್‌ ಜರ್ನಿʼ ಎನ್ನುತ್ತಾರೆ ಸಂಗೀತ. ಈ ಪ್ರೇಮಿಗಳಿಗೆ ಹ್ಯಾಪಿ ವ್ಯಾಲೆಂಟೈನ್ಸ್‌ ಡೇ. ಈ ಬಾರಿಯ ವ್ಯಾಲೈಂಟೈನ್ಸ್‌ ಡೇ ದಿನವನ್ನು ಈ ಜೋಡಿಗಳು ಸೀಶೆಲ್ಸ್‌ನಲ್ಲಿ ಆಚರಿಸಿಕೊಳ್ಳಲಿದ್ದಾರೆ. ಅವರ ಟ್ರಾವೆಲ್ ಜರ್ನಿ ಮತ್ತು ಲೈಫ್‌ ಜರ್ನಿಗೆ ಬೆಸ್ಟ್‌ ಆಫ್‌ ಲಕ್.‌

ವ್ಯಾಲೆಂಟೈನ್ಸ್‌ ದಿನದಂದು ನಮ್ಮ ಹುಡುಗಿಯ ಜತೆಗೆ ನಾವು ಒಂದು ಟ್ರಿಪ್‌ ಹೋಗಿ ಬರಬಹುದಲ್ವಾ? ಒಂದು ಲಾಂಗ್‌ ಡ್ರೈವ್‌, ಅವಳಿಗಾಗಿ ಹಬೆಯಾಡುವ ಕಾಫಿ, ಚಾಕೋಲೇಟ್‌, ರಸ್ತೆಬದಿಯಲ್ಲಿ ಬಿಸಿಬಿಸಿ ಇಡ್ಲಿ ವಡೆ, ಒಂದು ಸಣ್ಣ ಟ್ರೆಕ್ಕಿಂಗ್‌, ಫಾಲ್ಸ್‌ ಕೆಳಗೆ ಇಬ್ಬರೂ ಒಟ್ಟಿಗೆ ನಿಂತು ಮೇಘಸ್ನಾನ! ಇಷ್ಟು ಸಾಕಲ್ಲವೇ? ನಮ್ಮನ್ನು ಪ್ರೀತಿಸುವ ಮತ್ತು ಕಾಡುವ ಆರ್ಡಿನರಿ ಹುಡುಗಿಗೆ. ಒಪ್ಪಿಗೆಯಿದ್ದರೆ ಒಂದು ಹೋಮ್‌ ಸ್ಟೇಯಲ್ಲಿ ಸ್ಟೇ ಆಗಿ ಕ್ಯಾಂಪ್‌ ಫೈಯರ್‌ ನಲ್ಲಿ ಚಳಿ ಕಾಯಿಸಿಕೊಳ್ಳುತ್ತಾ ಒಂದು ಬೆಚ್ಚನೆಯ ಅಪ್ಪುಗೆ ಮತ್ತು ಸಿಹಿಮುತ್ತು ರಾಶಿ ಕನಸುಗಳೊಂದಿಗೆ ಅವಳೊಳಗೆ ಭರವಸೆಯನ್ನು ಬಿತ್ತುತ್ತಾ!...

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!