Tuesday, August 19, 2025
Tuesday, August 19, 2025

ಫ್ರಾನ್ಸ್ ನ ಬ್ಲ್ಯೂ ಕಾರ್ಡ್ ನಲ್ಲಿ ಬದಲಾವಣೆ; ವೀಸಾ ಪ್ರಕ್ರಿಯೆ ಮತ್ತಷ್ಟು ಸುಲಭ

ಕನಿಷ್ಠ ಮೂರು ವರ್ಷಗಳ ಡಿಗ್ರಿ ಹೊಂದಿರಬೇಕು. ಆದರೆ ಈಗ, ಯಾರಾದರೂ ಕಳೆದ 7 ವರ್ಷಗಳಲ್ಲಿ 3 ವರ್ಷ ಪೂರ್ತಿಯಾಗಿ ಒಂದು ಕ್ಷೇತ್ರದಲ್ಲಿ ಕೆಲಸಮಾಡಿದ ಅನುಭವವಿದ್ದರೆ, ಅವರಿಗೆ ಡಿಗ್ರಿಯ ಅಗತ್ಯವಿಲ್ಲ ಇನ್ನೂ ಅನೇಕ ಬದಲಾವಣೆಗಳು

ಫ್ರಾನ್ಸ್ (France) ತನ್ನ ಇಯು ಬ್ಲೂ ಕಾರ್ಡ್ ವೀಸಾ (Blue Card Visa) ಯೋಜನೆಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಮೇ 2025ರಿಂದ ಈ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಇದರ ಮೂಲಕ, ಫ್ರಾನ್ಸ್‌ ಸರಕಾರ ಹೆಚ್ಚು ಸಂಖ್ಯೆಯ ಕೌಶಲ್ಯಯುತ ವಿದೇಶಿ ನೌಕರರನ್ನು ಆಕರ್ಷಿಸಲು ಮುಂದಾಗಿದೆ. ಡಿಗ್ರಿ ಮಾಡದವರಿಗೂ ಈಗ ಇಯು ಬ್ಲೂ ಕಾರ್ಡ್‌ಗೆ ಅರ್ಜಿ ಹಾಕುವ ಅವಕಾಶ ಸಿಗುತ್ತದೆ.

ಹಳೆಯ ನಿಯಮದಂತೆ, ಯಾರಾದರೂ ಈ ವೀಸಾ ಪಡೆಯಬೇಕು ಅಂದರೆ ಅವರು ಕನಿಷ್ಠ ಮೂರು ವರ್ಷಗಳ ಡಿಗ್ರಿ ಹೊಂದಿರಬೇಕು. ಆದರೆ ಈಗ, ಯಾರಾದರೂ ಕಳೆದ 7 ವರ್ಷಗಳಲ್ಲಿ 3 ವರ್ಷ ಪೂರ್ತಿಯಾಗಿ ಒಂದು ಕ್ಷೇತ್ರದಲ್ಲಿ ಕೆಲಸಮಾಡಿದ ಅನುಭವವಿದ್ದರೆ, ಅವರಿಗೆ ಡಿಗ್ರಿಯ ಅಗತ್ಯವಿಲ್ಲ. ಈ ಬದಲಾವಣೆಯಿಂದಾಗಿ, ಪ್ರಾಯೋಗಿಕ ಅನುಭವವಿರುವ ಆದರೆ ಡಿಗ್ರಿ ಇಲ್ಲದ ಲಕ್ಷಾಂತರ ಜನರಿಗೆ ಫ್ರಾನ್ಸ್‌ನಲ್ಲಿ ಕೆಲಸ ಮಾಡುವ ದಾರಿ ತೆರೆದುಕೊಳ್ಳುತ್ತದೆ.

ಇನ್ನೊಂದು ಪ್ರಮುಖ ಬದಲಾವಣೆ ಎಂದರೆ – ಕೆಲಸದ ಒಪ್ಪಂದದ ಕನಿಷ್ಠ ಅವಧಿ 1 ವರ್ಷದಿಂದ 6 ತಿಂಗಳಿಗೆ ಕಡಿಮೆ ಮಾಡಲಾಗಿದೆ. ಇದು ತಾತ್ಕಾಲಿಕ ಮತ್ತು ಪ್ರಾಜೆಕ್ಟ್ ಆಧಾರಿತ ಕೆಲಸಗಳಿಗೆ ಸರಿಹೊಂದುವ ಜನರಿಗೆ ಅಸರೆಯಾಗುತ್ತದೆ.

ಇದರ ಜೊತೆಗೆ, ಇತರ ಯುರೋಪಿಯನ್ ದೇಶಗಳಲ್ಲಿ ಇಯು ಬ್ಲೂ ಕಾರ್ಡ್ ಪಡೆದು 12 ತಿಂಗಳಿಗಿಂತ ಹೆಚ್ಚು ಕಾಲ ವಾಸಿಸಿದವರು ಈಗ ಫ್ರಾನ್ಸ್‌ಗೆ ಬೇರೆ ವೀಸಾ ತೆಗೆದುಕೊಳ್ಳದೆ ಬಂದು ಕೆಲಸ ಮಾಡಬಹುದು.

ಈ ಹೊಸ ಸೌಲಭ್ಯಗಳೊಂದಿಗೆ, ಫ್ರಾನ್ಸ್ ತನ್ನ ದುಡಿಯುವ ಜನಶಕ್ತಿಗೆ ಹೊಸ ಬಲ ತುಂಬುತ್ತಿದೆ. ತಂತ್ರಜ್ಞಾನ, ಆರೋಗ್ಯ, ಎಂಜಿನಿಯರಿಂಗ್, ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ನಿಪುಣರನ್ನು ಆಕರ್ಷಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಲಿದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!