ಭಾರತಕ್ಕೆ ಜಪಾನ್‌ನ ಶಿಂಕಾನ್ಸೆನ್ ಬುಲೆಟ್ ಟ್ರೈನ್ಸ್ ಉಡುಗೊರೆ: ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲ್ವೆ ಯಾತ್ರೆಗೆ ಹೊಸ ವೇಗ!
ಭಾರತದ ಮಹತ್ವಾಕಾಂಕ್ಷೆಯ ಹೈ-ಸ್ಪೀಡ್ ರೈಲ್ವೆ (High-Speed Railway) ಯೋಜನೆಗೆ ಮತ್ತೊಂದು ದೊಡ್ಡ ಪುಶ್ ಸಿಕ್ಕಿದೆ. ಜಪಾನ್ ತನ್ನ ಐಕಾನಿಕ್ ಶಿಂಕಾನ್ಸೆನ್ (Shinkansen) ಬುಲೆಟ್ ಟ್ರೈನ್ಗಳ (Bullet Train) ಪೈಕಿ ಎರಡು ಸೆಟ್‌ಗಳನ್ನು ಭಾರತಕ್ಕೆ ಉಚಿತವಾಗಿ ಉಡುಗೊರೆಯಾಗಿ ನೀಡಲು ಸಿದ್ಧವಾಗಿದೆ.
ದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಹೈ-ಸ್ಪೀಡ್ ರೈಲ್ವೆ (High-Speed Railway) ಯೋಜನೆಗೆ ಮತ್ತೊಂದು ದೊಡ್ಡ ಪುಶ್ ಸಿಕ್ಕಿದೆ. ಜಪಾನ್ ತನ್ನ ಐಕಾನಿಕ್ ಶಿಂಕಾನ್ಸೆನ್ (Shinkansen) ಬುಲೆಟ್ ಟ್ರೈನ್ಗಳ (Bullet Train) ಪೈಕಿ ಎರಡು ಸೆಟ್‌ಗಳನ್ನು ಭಾರತಕ್ಕೆ ಉಚಿತವಾಗಿ ಉಡುಗೊರೆಯಾಗಿ ನೀಡಲು ಸಿದ್ಧವಾಗಿದೆ. ಈ ಟ್ರೈನ್‌ಗಳು ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಮಾರ್ಗದಲ್ಲಿ ಪ್ರಯೋಗಾತ್ಮಕ ಓಟಗಳಿಗಾಗಿ ಬಳಸಲಾಗಲಿದೆ.
ಎಲ್ಲಿ ಬರುತ್ತಿದೆ, ಯಾವುದು ಬರುತ್ತದೆ?
2026ರ ಪ್ರಾರಂಭದಲ್ಲಿ ಭಾರತಕ್ಕೆ ಆಗಮಿಸಲಿರುವ ಈ ಎರಡು ಶಿಂಕಾನ್ಸೆನ್ ಸೆಟ್‌ಗಳಲ್ಲಿ, ಒಂದು E5 ಸೀರಿಸ್ ಮತ್ತು ಇನ್ನೊಂದು E3 ಸೀರಿಸ್ ಮಾದರಿಯದು. ಇವೆಗೆ ಭಾರತೀಯ ಪರಿಸ್ಥಿತಿಗೆ ತಕ್ಕಂತೆ ವಿಶಿಷ್ಟ ಇನ್ಸ್‌ಪೆಕ್ಷನ್ ಉಪಕರಣಗಳನ್ನು ಫಿಟ್ ಮಾಡಲಾಗುವುದು.
ಈ ರೈಲುಗಳು ಕೆವಲ ಟ್ರಯಲ್‌ಗಾಗಿ ಅಲ್ಲ – ಇವು ಭಾರತದಲ್ಲಿ ಮುಂದಿನ ಪೀಳಿಗೆ E10 ಶಿಂಕಾನ್ಸೆನ್ ರೈಲುಗಳ ಉತ್ಪಾದನೆಗೆ ಡೇಟಾ ಸಂಗ್ರಹ, ತಾಪಮಾನ, ಧೂಳು ಮತ್ತು ಇತರೆ ಚಾಲನಾ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಹಾಯ ಮಾಡಲಿವೆ.

ಗರಿಷ್ಠ ವೇಗ?
ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕ, ಈ ಮಾರ್ಗದಲ್ಲಿ ರೈಲುಗಳು 320 ಕಿಮೀ/ಗಂಟೆ ವೇಗದಲ್ಲಿ ಚಲಿಸುವ ಭರವಸೆ ಇದೆ – ಇದು ಭಾರತದಲ್ಲಿ ಮೊತ್ತಮೊದಲ ಬಾರಿಗೆ ನಡೆಯಲಿರುವ ಅತ್ಯಂತ ವೇಗದ ರೈಲೂ ಹೌದು!
ಮೇಕ್ ಇನ್ ಇಂಡಿಯಾ!
ಈ ಪ್ರಾಜೆಕ್ಟ್ ಭಾರತದ ರಾಷ್ಟ್ರೀಯ ಹೈ-ಸ್ಪೀಡ್ ರೈಲ್ವೆ ನಿಗಮ (NHSRC) ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹೈ-ಸ್ಪೀಡ್ ಮಾರ್ಗ ಸುಮಾರು 500 ಕಿಲೋಮೀಟರ್ ಉದ್ದವಿದ್ದು, ಭಾರತದ ಮ್ಯಾಜರ್ ಇಕಾನಾಮಿಕ್ ಕಾರಿಡಾರ್ ಆಗಿ ಬೆಳೆಯಲಿದೆ.
ಈ ಯೋಜನೆಗೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಗಿನ ಜಪಾನ್ ಪ್ರಧಾನಿ ಶಿನ್‌ಜೋ ಅಬೆ ನಡುವೆ ಒಪ್ಪಂದವಾಗಿತ್ತು. ಇದರಡಿ ಜಪಾನ್ ತನ್ನ ತಂತ್ರಜ್ಞಾನವನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿಸಿತ್ತು.

ಫಂಡಿಂಗ್ ಫ್ಲೋ ಹೇಗಿದೆ?
ಒಟ್ಟು ₹1.8 ಲಕ್ಷ ಕೋಟಿಗಳಷ್ಟು ಮೊತ್ತದ ಈ ಯೋಜನೆಯ ಶೇ. 80ರಷ್ಟು ವೆಚ್ಚವನ್ನು ಜಪಾನ್‌ನ ಲೋ ಇಂಟರೆಸ್ಟ್ ಯೆನ್ ಲೋನ್ ಮೂಲಕ ನಿಭಾಯಿಸಲಾಗುತ್ತಿದೆ. ಆದರೆ ವೆಚ್ಚದಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ, ಜಪಾನ್-ಭಾರತ ಸರಕಾರಗಳು ಹೊಸ ಲೋನ್ ಫ್ರೇಮ್ವರ್ಕ್ ರೂಪಿಸಲು ಮುಂದಾಗಿವೆ. ಈ ಬಗ್ಗೆ ಅಂತಿಮ ನಿರ್ಧಾರ ಮೋದಿಯ ಮುಂದಿನ ಜಪಾನ್ ಭೇಟಿ ವೇಳೆ ಘೋಷಣೆಯಾಗುವ ನಿರೀಕ್ಷೆ ಇದೆ.