ಎಐ ಬಳಸಿ ಪ್ರವಾಸದ ಯೋಜನೆ ರೂಪಿಸಿ...
ನಿಮ್ಮ ಆದ್ಯತೆಗಳು, ಬಜೆಟ್, ಪ್ರಯಾಣದ ದಿನಾಂಕಗಳು, ನಿಮ್ಮ ಆಸಕ್ತಿಗಳನ್ನೆಲ್ಲ ತಾಳೆ ಹಾಕಿ, ನಿಮ್ಮ ಪಯಣಕ್ಕಾಗಿ ದಿ ಬೆಸ್ಟ್ ಆಯ್ಕೆಗಳನ್ನು ಕೊಡುತ್ತದೆ. ಅದಕ್ಕಾಗಿ ನೀವು ಎಐ ಟೂಲ್ಗಳನ್ನು ಬಳಸಿಕೊಳ್ಳಬಹುದು.
ಕೊರೊನಾ (Corona) ನಂತರ ಪ್ರವಾಸ(Travel)ಕ್ಕೆ ಹೋಗುವುದು ತುಂಬಾ ಕಾಮನ್ ಆಗಿದೆ. ಇತ್ತೀಚೆಗೆ ಎಲ್ಲ ಪ್ರೇಕ್ಷಣೀಯ ಸ್ಥಳಗಳು ಮೊದಲಿಗಿಂತ ಜಾಸ್ತಿ ಜನಜಂಗುಳಿಯಿಂದ ತುಂಬಿರುತ್ತದೆ. ಈಗೀಗ ಸೋಲೋ ಟ್ರಿಪ್ (Solo Trip) ಅಷ್ಟೇ ಅಲ್ಲದೆ ಗೆಳೆಯರು, ಕುಟುಂಬದವರು ಟ್ರಿಪ್ ಪ್ಲ್ಯಾನ್ (Trip Plan) ರೂಪಿಸುವುದು ಈಗ ಟ್ರೆಂಡ್. ಈ ಟ್ರಾವೆಲ್ ಟ್ರೆಂಡ್ (Travel Trend) ಜೊತೆ ಪ್ರಪಂಚದಲ್ಲಿ ಮತ್ತೊಂದು ಟ್ರೆಂಡ್ ಇದೆ ಅದೇ ಎಐ. ಕೃತಕ ಬುದ್ಧಿಯಮತ್ತೆಯನ್ನು (Artificial Intelligence) ಈಗಾಗಲೇ ಎಲ್ಲರೂ ಬಳಸುತ್ತಿದ್ದೇವೆ. ಅದರ ಜೊತೆಗೆ ಎಐ ಬಳಸಿಕೊಂಡು, ಬೆರಳ ತುದಿಯಲ್ಲೇ ಪರಿಪೂರ್ಣ ಪ್ರವಾಸದ ಯೋಜನೆಯನ್ನು ಹೇಗೆ ರಚಿಸುವುದು ಎಂದು ಇಲ್ಲಿ ತಿಳಿಯೊಣ.
ಎಐ ಆಧಾರಿತ ಪ್ರವಾಸ ಯೋಜನೆ ಕಸ್ಟಮೈಸ್ ಮಾಡಿದ ಪ್ರಯಾಣದ ವಿವರಗಳನ್ನು ರಚಿಸಲು ಕೃತಕ ಬುದ್ಧಿಮತ್ತೆ ಸಾಧನಗಳು ಮತ್ತು ಕ್ರಮಗಳ ಬಳಕೆಯನ್ನು ಸೂಚಿಸುತ್ತದೆ. ಈ ಟೂಲ್ಗಳು ನಿಮ್ಮ ಆದ್ಯತೆಗಳು, ಬಜೆಟ್, ಪ್ರಯಾಣದ ದಿನಾಂಕಗಳು, ನಿಮ್ಮ ಆಸಕ್ತಿಗಳನ್ನೆಲ್ಲ ತಾಳೆ ಹಾಕಿ, ನಿಮ್ಮ ಪಯಣಕ್ಕಾಗಿ ದಿ ಬೆಸ್ಟ್ ಆಯ್ಕೆಗಳನ್ನು ಕೊಡುತ್ತದೆ. ಅದಕ್ಕಾಗಿ ನೀವು ಎಐ ಟೂಲ್ಗಳನ್ನು ಬಳಸಿಕೊಳ್ಳಬಹುದು.
ಬಳಸಬಹುದಾದ ಎಐ ಟೂಲ್ ಗಳು
ವೈಯಕ್ತೀಕರಿಸಿದ ಪ್ರಯಾಣಗಳು: ಎಐ ನಿಮ್ಮ ಪ್ರಯಾಣದ ಶೈಲಿಯನ್ನು ಅರ್ಥಮಾಡಿಕೊಳ್ಳುತ್ತದೆ. ನೀವು ಸಾಹಸ ಪ್ರಿಯರಾಗಿರಲಿ, ಬೀಚ್ ಪ್ರಿಯರಾಗಿರಲಿ ಅಥವಾ ಸಂಸ್ಕೃತಿ, ಪರಂಪರೆಯ ಆರಾಧಕರಾಗಿರಲಿ ಎಐ ಮೂಲಕ ನಿಮಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಎಐ ಪ್ರಯಾಣದ ಅಗತ್ಯಗಳನ್ನು ರೂಪಿಸಿಕೊಂಡು ಪ್ಲ್ಯಾನ್ ಮಾಡಿ ಕೊಡುತ್ತದೆ.
ಸಮಯದ ಉಳಿತಾಯ: ಬಹಳಷ್ಟು ಸಮಯ ಬ್ರೌಸಿಂಗ್ ಮಾಡುವ ಬದಲು, ಎಐ ಟೂಲ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ದೈನಂದಿನ ಪ್ರಯಾಣದ ವಿವರಗಳನ್ನು ರಚಿಸಬಹುದು.
ಬಜೆಟ್ ಆಪ್ಟಿಮೈಸೇಶನ್: ಎಐ ಟೂಲ್ ಮೂಲಕ ಕಡಿಮೆ ದರದಲ್ಲಿ ಸಾರಿಗೆ, ವಾಸ್ತವ್ಯ ಯೋಜನೆ ಮತ್ತು ಬೇರೆ ಎಲ್ಲ ಚಟುವಟಿಕೆಗಳನ್ನು ಪ್ಲ್ಯಾನ್ ಮಾಡಿಕೊಳ್ಳಬಹುದು.
ಸ್ಮಾರ್ಟ್ ಅನ್ವೇಷಣೆ: ಪ್ರವಾಸ ಮಾರ್ಗದರ್ಶಿ ಪುಸ್ತಕಗಳಲ್ಲಿ ಇಲ್ಲದ ಗುಪ್ತ ಸ್ಥಳಗಳು ಮತ್ತು ಸ್ಥಳೀಯರ ಫೇವರಿಟ್ ಆಯ್ಕೆಗಳೂ ಸಿಗಬಹುದು.
ನೈಜ-ಸಮಯದ ಸಲಹೆಗಳು: ಕೆಲವು ಎಐ ಟ್ರಾವೆಲ್ ಅಪ್ಲಿಕೇಶನ್ಗಳು ಹವಾಮಾನ, ಸಂಚಾರ ಮತ್ತು ಸ್ಥಳೀಯ ಘಟನೆಗಳ ಬಗ್ಗೆ ಲೈವ್ ಅಪ್ಡೇಟ್ಗಳನ್ನು ಸಹ ನೀಡುತ್ತವೆ. ಹೀಗಾಗಿ ಟ್ರಾವೆಲ್ ಪ್ಲ್ಯಾನ್ ರೂಪಿಸುವುದು ಸುಲಭ.
ಕೆಲವು ಜನಪ್ರಿಯ ಎಐ ಟೂಲ್ ಗಳು
ಗೂಗಲ್ ಟ್ರಾವೆಲ್ - ಸ್ಮಾರ್ಟ್ ಸಲಹೆಗಳು, ಬುಕಿಂಗ್ ಮತ್ತು ದಿನವಾರು ಪ್ರಯಾಣಗಳು.
ಮೈಕ್ರೋಸಾಫ್ಟ್ ಕೊ ಪೈಲಟ್- ಮೈಕ್ರೋಸಾಫ್ಟ್ನ ಕೊ ಪೈಲಟ್ ಎಐ ಟೂಲ್ ಮೂಲಕ ಪ್ರವಾಸದ ಯೋಜನೆ ರೂಪಿಸುವುದು ಸುಲಭ. ಉದಾಹರಣೆಗೆ, ನೀವು ಮಂಗಳೂರು ಅಥವಾ ಉಡುಪಿಗೆ ಹೋಗಲು ಯೋಚಿಸುತ್ತಿದ್ದೀರಿ ಎಂದಾದರೆ, ಆರಾಮವಾಗಿ ಮಂಗಳೂರು ಟ್ರಾವೆಲ್ ಪ್ಲ್ಯಾನ್ ಎಂದು ಪ್ರಾಂಪ್ಟ್ ಕೊಟ್ಟರೆ ಸಾಕು. ಅದರಲ್ಲಿ ನೀವು ಎಷ್ಟು ದಿನಗಳ ಪ್ರವಾಸ ಯೋಜಿಸಿದ್ದೀರಿ ಎನ್ನುವ ಬಗ್ಗೆ ಪ್ರಾಂಪ್ಟ್ ಕೊಟ್ಟರೆ ಸಾಕು, ಅದರಲ್ಲಿಯೇ ನಿಮ್ಮ ಟ್ರಿಪ್ ಯೋಜನೆ ಸಿದ್ಧವಾಗುತ್ತದೆ.
ಎಐ / ಚಾಟ್ ಜಿಪಿಟಿ ಆಧಾರಿತ ಟೂಲ್ - ಪ್ರಾಂಪ್ಟ್ ಆಧಾರದ ಮೇಲೆ ಪ್ರವಾಸ ಯೋಜನೆ.
ಟ್ರಿಪ್ಹೋಬೊ / ಸಿಜಿಕ್ ಟ್ರಾವೆಲ್ - ಎಐ ಆಧಾರಿತ ಆಪ್ಟಿಮೈಸೇಶನ್ನೊಂದಿಗೆ ದೃಶ್ಯ ಪ್ರವಾಸ ಯೋಜನೆ ಸಾಧನಗಳು.
ಸ್ಕೈಸ್ಕ್ಯಾನರ್ / ಹಾಪರ್ - ಎಐ-ಚಾಲಿತ ಶುಲ್ಕ ಮುನ್ಸೂಚನೆಗಳು ಮತ್ತು ವಿಮಾನ ಪ್ರಯಾಣ ಸಲಹೆಗಳು.
ಪ್ರವಾಸಕ್ಕಾಗಿ ಎಐ ಅನ್ನು ಬಳಸುವುದು ಹೇಗೆ?
ನಿಮ್ಮ ಆದ್ಯತೆಗಳನ್ನು ತಿಳಿಸಿ: ನಿಮ್ಮ ತಲುಪಬೇಕಾದ ಸ್ಥಾನ, ಪ್ರಯಾಣದ ದಿನಾಂಕಗಳು ಮತ್ತು ಆಸಕ್ತಿಗಳನ್ನು ಆರಿಸಿ.
ಎಐ ಟ್ರಾವೆಲ್ ಟೂಲ್ ಅಥವಾ ಅಸಿಸ್ಟೆಂಟ್ ಬಳಸಿ: ನಿಮ್ಮ ವಿವರಗಳನ್ನು ಚಾಟ್ ಬಾಟ್ ಅಥವಾ ಅಪ್ಲಿಕೇಶನ್ನಲ್ಲಿ ಟೈಪ್ ಮಾಡಿ.
ಪ್ರಯಾಣದ ವಿವರವನ್ನು ಪರಿಶೀಲಿಸಿ: ಭೇಟಿ ನೀಡಬೇಕಾದ ಸ್ಥಳಗಳು, ಪ್ರಯಾಣದ ಮಾರ್ಗಗಳು, ಆಹಾರ ಆಯ್ಕೆಗಳು ಸೇರಿದಂತೆ ಸಂಪೂರ್ಣ ವಿವರಗಳನ್ನು ಪಡೆಯಿರಿ.
ಬುಕ್ ಆಂಡ್ ಗೋ: ಅನೇಕ ಟೂಲ್ಗಳು ಪಾಲುದಾರ ಪ್ಲಾಟ್ಫಾರ್ಮ್ಗಳ ಮೂಲಕ ನೇರ ಬುಕಿಂಗ್ಗೆ ಅನುಮತಿಸುತ್ತವೆ.
ಕೃತಕ ಬುದ್ಧಿಮತ್ತೆ ನಾವು ಪ್ರಯಾಣಿಸುವ ವಿಧಾನವನ್ನು ಮರುರೂಪಿಸುತ್ತಿದೆ. ಪ್ರವಾಸ ಯೋಜನೆಯನ್ನು ಹಿಂದೆಂದಿಗಿಂತಲೂ ಚುರುಕಾಗಿ, ವೇಗವಾಗಿ ಮತ್ತು ಹೆಚ್ಚು ವೈಯಕ್ತೀಕರಿಸುತ್ತಿದೆ. ನೀವು ಹಿಮಾಲಯವನ್ನು ಅನ್ವೇಷಿಸುತ್ತಿರಲಿ, ಕೇರಳ ಹಿನ್ನೀರಿನ ಮೂಲಕ ಪ್ರಯಾಣಿಸುತ್ತಿರಲಿ ಎಐ-ಚಾಲಿತ ಸಾಧನಗಳು ನಿಮ್ಮ ಆಸಕ್ತಿಗಳು, ಬಜೆಟ್ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಪರಿಪೂರ್ಣ ಪ್ರಯಾಣವನ್ನು ರೂಪಿಸಲು ಸಹಾಯ ಮಾಡುತ್ತದೆ.