Tuesday, August 19, 2025
Tuesday, August 19, 2025

ಸ್ಯಾನಿಟರಿ ಪ್ಯಾಡ್ ಅರ್ಪಿಸಿದರೆ ಪ್ರೀತಳಾಗುತ್ತಾಳೆ ಭೋಪಾಲ್‌ನ ಈ ದೇವಿ..

ಅಸ್ಸಾಂನ ಗುವಾಹಟಿಯಲ್ಲಿ ವಿಶೇಷವಾದ ಕಾಮಾಕ್ಯ ದೇವಿಯ ದೇವಾಲಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಆ ದೇವಾಲಯದಿಂದ ಪ್ರೇರಿತರಾಗಿ ಭೋಪಾಲ್‌ ನಲ್ಲಿ ಹುಟ್ಟಿಕೊಂಡ ಅನ್ನಪೂರ್ಣ ದೇವಿಯ ದೇಗುಲದ ಬಗ್ಗೆ ನಿಮಗೆ ಗೊತ್ತಾ? ಇಲ್ಲಿ ದೇವಿಗೆ ಹೂವು ಹಣ್ಣುಗಳ ಬದಲಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಅರ್ಪಿಸುತ್ತಾರಂತೆ..

ಐತಿಹಾಸಿಕ ದೇವಾಲಯಗಳ ತವರೂರು ನಮ್ಮ ಭಾರತ. ಇಲ್ಲಿನ ಪ್ರತಿಯೊಂದು ರಾಜ್ಯದಲ್ಲಿಯೂ ಒಂದಿಲ್ಲೊಂದು ವಿಶೇಷವಾದ ದೇವಾಲಯಗಳಿವೆ. ಆ ದೇವಾಲಯಕ್ಕೊಂದು ಐತಿಹ್ಯ, ನಂಬಿಕೆಗಳು ಇದ್ದೇ ಇದೆ. ಕೆಲವು ದೇಗುಲಗಳು ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವು ದೇಗುಲಗಳು ಅದ್ಯಾಕೆ ಹೀಗೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮಾಂಸ ಮೆಚ್ಚಿಕೊಳ್ಳುವ ದೇವರು, ಆಲ್ಕೋಹಾಲ್ ಅರ್ಪಿಸಿದರೆ ತೃಪ್ತನಾಗುವ ದೇವರು, ಹೀಗೆ ವಿಶಿಷ್ಠ ದೇಗುಲಗಳನ್ನು ನೀವು ಭಾರತದಲ್ಲಿ ಕಾಣಬಹುದು. ಆದರೆ ಸ್ಯಾನಿಟರಿ ಪ್ಯಾಡ್ಗಳನ್ನು (Sanitary Pads) ಸ್ವೀಕರಿಸುವ ಭಾರತದ ದೇವಾಲಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ?

19799830_a

ಹೂಗಳಿಗಿಂತಲೂ ಸ್ಯಾನಿಟರಿ ಪ್ಯಾಡ್‌ಗಳೇ ಪ್ರಿಯ ಈ ದೇವಿಗೆ:

ಹೌದು, ಸಾಂಪ್ರದಾಯಿಕ ದೇವಾಲಯಗಳಿಗಿಂತ ಭಿನ್ನವಾಗಿದೆ, ಭೋಪಾಲ್‌ ನ ದುರ್ಗಾ ಬರಿಯಲ್ಲಿಈ ಅನ್ನಪೂರ್ಣ ದೇವಿ ದೇವಸ್ಥಾನ. ಯಾಕೆಂದರೆ ಇಲ್ಲಿ ನೆಲೆಸಿರುವ ದೇವಿಗೆ ಹೂವುಗಳು ಅಥವಾ ಹಾರಗಳ ಬದಲು ಸ್ಯಾನಿಟರಿ ಪ್ಯಾಡ್ಗಳನ್ನು ನೀಡಲಾಗುತ್ತದೆ. ಈ ದೇವಾಲಯದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ದೇವರಿಗೆ ನೀಡುವ ಪರಿಕಲ್ಪನೆಯು ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದೇವಾಲಯದಿಂದ (Kamakhya Devi Temple Guwahati) ಬಂದಿದೆ. ಈ ಕಾಮಾಕ್ಯ ದೇವಿ ಮಂದಿರಲ್ಲಿ ದೇವಿಯ ಯೋನಿಯನ್ನು ಇಲ್ಲಿ ಪೂಜಿಸಲಾಗುತ್ತೆ. ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯ ರೀತಿ ನೀತಿಗಳನ್ನು ಕಂಡು ಪ್ರೇರಿತರಾದ ಭೋಪಾಲ್ ನ ಹೆಶೆಲ್ ಫೌಂಡೇಶನ್ನ (Heshel foundation) ನಿರ್ದೇಶಕ ದೀಪಾಂಜನ್ ಮುಖರ್ಜಿ ಅವರು ದುರ್ಗಾ ಬಾರಿಯಲ್ಲಿ ಇದೇ ರೀತಿಯ ಕಲ್ಪನೆಯನ್ನು ಜಾರಿಗೆ ತಂದರು.

19799830_ss

ಮುಟ್ಟಿನ ಆರೋಗ್ಯದ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಇದನ್ನು ಆರಂಭಿಸಲಾಗಿದ್ದು, ಕೇವಲ ನಾಲ್ಕು ತಿಂಗಳಲ್ಲಿ ಅನ್ನಪೂರ್ಣ ದೇವಿ ದೇವಸ್ಥಾನದಲ್ಲಿ 11,000 ಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್ಗಳನ್ನು ದಾನ ಮಾಡಲಾಗಿದೆ. ಕುಟುಂಬ ಯೋಜನಾ ಸಂಘದ ಸಹಾಯದಿಂದ, ಭಕ್ತರು ದಾನವಾಗಿ ನೀಡಿದ ಈ ಸ್ಯಾನಿಟರಿ ಪ್ಯಾಡ್ ಗಳನ್ನು ಭೋಪಾಲ್ನ ಕೊಳೆಗೇರಿ ಪ್ರದೇಶಗಳಲ್ಲಿ ಮತ್ತು ಬಾಲಕಿಯರ ಸರ್ಕಾರಿ ಶಾಲೆಗಳಲ್ಲಿ ವಿತರಿಸಲಾಗುತ್ತದೆ.

ಒಟ್ಟಿನಲ್ಲಿ ದೇವಾಲಯ ಮೂಲಕ ಮಹಿಳೆಯರ ಆರೋಗ್ಯದ ರಕ್ಷಣೆಯ ಬಗ್ಗೆ, ಋತುಚಕ್ರದ ನೈರ್ಮಲ್ಯದ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಈ ಯೋಜನೆಯ ಬಗ್ಗೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!