ಈ ದೇಶಗಳಿಗೆ ತಪ್ಪದೇ ಮೇ ತಿಂಗಳಲ್ಲಿ ಹೋಗಿ ಬನ್ನಿ..
ಎಪ್ರಿಲ್, ಮೇ ತಿಂಗಳು ಬಂದರೆ ಸಾಕು ಎಲ್ಲರಿಗೂ ಟ್ರಿಪ್ ಮೂಡ್ ಬಂದಿರುತ್ತದೆ. ಮಕ್ಕಳಿಗೆ ರಜೆಯ ಕಾಲವಾದ್ದರಿಂದ ಪ್ರವಾಸಕ್ಕಿದು ಸೂಕ್ತ ಸಮಯ. ಅದರಲ್ಲೂ ಮೇ ತಿಂಗಳಿನಲ್ಲಿ ಕಡಿಮೆ ಬೆಲೆಗೆ ಸೂಪರ್ ಆಗಿರುವ ವಿದೇಶ ಪ್ರಯಾಣ ಕೈಗೊಳ್ಳಬೇಕು ಎಂದುಕೊಳ್ಳುವವರಿಗಾಗಿ ಅನೇಕ ವಿದೇಶಿ ತಾಣಗಳನ್ನು ನಾವು ತಿಳಿಸ್ತೀವಿ.
ವಿದೇಶಿ ಪ್ರವಾಸವನ್ನು ಕೈಗೊಳ್ಳಬೇಕೆನ್ನುವ ಕನಸು ನಿಮ್ಮದಾದರೆ ಡಿಸೆಂಬರ್ ತಿಂಗಳು ಸೂಕ್ತ ಆಯ್ಕೆಯೇನೋ ಸರಿ. ಆದರೆ ಡಿಸೆಂಬರ್ ಗಿಂತ ಸ್ವಲ್ಪ ಕಡಿಮೆ ಬೆಲೆಯಲ್ಲಿ ಟಿಕೆಟ್, ವಸತಿ ಎಲ್ಲವೂ ಲಭ್ಯವಾಗುವುದು ಮೇ ತಿಂಗಳಲ್ಲಿ ಅನ್ನುವ ವಿಚಾರ ನಿಮಗೆ ಗೊತ್ತಾ? ಹೌದು..ಕೆಲವು ದೇಶಗಳು ಮೇ ತಿಂಗಳಿನಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅನೇಕ ಬಗೆಯ ಪ್ರವಾಸಿ ಆಯ್ಕೆಗಳನ್ನು ನೀಡುತ್ತಿದ್ದು, ಅಗ್ಗದ ಬೆಲೆಗೆ ದೇಶ ಸುತ್ತುವ ಅವಕಾಶವನ್ನೂ ಕಲ್ಪಿಸಿಕೊಟ್ಟಿವೆ. ವಿಶೇಷವಾದ ಪ್ರವಾಸಿ ಉದ್ಯಾನಗಳು, ಮ್ಯೂಸಿಯಂ, ಕಡಲ ತೀರಗಳು ಹೀಗೆ ಅನೇಕ ತಾಣಗಳನ್ನು ಒಂದೇ ದೇಶದಲ್ಲಿ ನೋಡುವ ಅವಕಾಶವನ್ನು ನೀವು ಬಳಸಿಕೊಳ್ಳಲೇಬೇಕು.
ದುಬೈ:
ಜೀವನದಲ್ಲಿ ಒಮ್ಮೆಯಾದರೂ ದುಬೈ ಸುತ್ತಬೇಕು ಎಂಬ ಹೆಬ್ಬಯಕೆ ಯಾರಿಗಿಲ್ಲ ಹೇಳಿ.. ಆದರೆ ಅಗ್ಗದ ಬೆಲೆಗೆ ಐಷಾರಾಮಿ ಸವಲತ್ತುಗಳನ್ನು ಅನುಭವಿಸುವ ಅವಕಾಶ ದುಬೈ ಪ್ರವಾಸದಲ್ಲಿ ಲಭ್ಯವಿದೆ ಎಂದರೆ ನಂಬಲೇಬೇಕು. ಇಲ್ಲಿ ವಿಶ್ವವಿಖ್ಯಾತ ಬುರ್ಜ್ ಖಲೀಫಾ, ಬುರ್ಜ್ ಅಲ್ ಅರಬ್, ದುಬೈ ಮಿರ್ಯಾಕಲ್ ಗಾರ್ಡನ್ , ದಿ ದುಬೈ ಫೌಂಟೇನ್ ಗಳನ್ನು ಆನಂದಿಸುತ್ತ, ಡ್ಯೂನ್ ಬಶಿಂಗ್ ಮತ್ತು ಒಂಟೆ ಸವಾರಿಯೊಂದಿಗೆ ಮರುಭೂಮಿ ಸಫಾರಿಯನ್ನುಆನಂದಿಸಬಹುದು. ಅಲ್ಲದೆ ವಿಶ್ವ ದರ್ಜೆಯ ಶಾಪಿಂಗ್ ಮಾಡುವ ಮನಸ್ಸು ನಿಮಗಿದ್ದರೆ ಅದಕ್ಕೆ ಇಲ್ಲಿ ಅನೇಕ ಅವಕಾಶಗಳಿವೆ.

ಕಾಂಬೋಡಿಯಾ:
ಆಘ್ನೇಯ ಏಷ್ಯಾದ ಈ ದೇಶವು ಇಂಡೋ- ಚೀನಾ ಪರ್ಯಾಯ ದ್ವೀಪದಲ್ಲಿದೆ. ಅಗ್ಗದ ಬೆಲೆಯಲ್ಲಿ ವೀಕ್ಷಿಸಬಹುದಾದ ಪ್ರವಾಸಿ ತಾಣ ಇದಾಗಿದ್ದು, ಪ್ರಾಚೀನ ದೇವಾಲಯಗಳು ಮತ್ತು ಶ್ರೀಮಂತ ಇತಿಹಾಸವನ್ನು ಇದು ಹೊಂದಿದೆ. ಬಟ್ಟಂಬಾಗ್, ಕೊಹ್ ರಾಂಗ್ ದ್ವೀಪ ಸಮೂಹ, ಮೊಂಡುಲ್ ಕಿರಿ, ಪ್ರೀಹ್ ವಿಹಾರ್ ದೇವಾಲಯ, ಬಾನ್ಲುಂಗ್ ಹೀಗೆ ಅನೇಕ ವೀಕ್ಷಣೀಯ ಸ್ಥಳನ್ನು ಒಳಗೊಂಡಿದೆ.
ಮಾಲ್ಡೀವ್ಸ್:
ಮಾಲ್ಡೀವ್ಸ್ ದ್ವೀಪಗಳು ಅಧಿಕೃತವಾಗಿ ಮಾಲ್ಡೀವ್ಸ್ ಗಣರಾಜ್ಯ, ಇದು ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ದೇಶ. ಮಾಲ್ಡೀವ್ಸ್ ತನ್ನ ವಿಭಿನ್ನ ಸಂಸ್ಕೃತಿ, ರೋಮಾಂಚನಗೊಳಿಸುವ ಜಲಕ್ರೀಡೆಗಳು ಮತ್ತು ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ಯಾರಾಸೈಲಿಂಗ್, ಸರ್ಫಿಂಗ್, ಗಾಳಿಪಟ ಸರ್ಫಿಂಗ್ ಮತ್ತು ಇನ್ನೂ ಹೆಚ್ಚಿನ ಜಲಕ್ರೀಡೆಗಳನ್ನು ಇಲ್ಲಿ ಪ್ರಯತ್ನಿಸಬಹುದು. ಮಾಳೆ ಸಿಟಿ, COMO ಕೊಕೊ ದ್ವೀಪ, ವಧೂ ದ್ವೀಪ, ಅಡ್ಡೂ ನಗರ ಇಂತಹ ವಿಭಿನ್ನ ತಾಣಗಳನ್ನು ನೀವು ಭೇಟಿ ನೀಡಲೇ ಬೇಕು.

ಥೈಲ್ಯಾಂಡ್:
ದೇಶ ವಿದೇಶಿಗರನ್ನು ಸೆಳೆಯುವ ಪ್ರಮುಖ ಪ್ರವಾಸಿ ತಾಣ ಥೈಲ್ಯಾಂಡ್. ಥಾಯ್ ಆಹಾರ ಇಲ್ಲಿನ ಪ್ರಮುಖ ಆಕರ್ಷಣೆ. ಇದರ ಜೊತೆಗೆ ಸ್ಪಷ್ಟವಾದ ಕಡಲತೀರಗಳು, ವಿಭಿನ್ನ ಸಂಸ್ಕೃತಿಯನ್ನು ನೀವು ಅನುಭವಿಸಲೇಬೇಕು. ಫಿ ಫಿ ದ್ವೀಪ, ಚಿಯಾಂಗ್ ಮಾಯ್, ಫಾಂಗ್ ನ್ಗಾ ಬೇ, ಅಯುತಾಯ, ಕ್ರಾಬಿ ಪ್ರಾಂತ್ಯದ ರೈಲೇ ಬೀಚ್ ಈ ತಾಣಗಳನ್ನು ಭೇಟಿ ಮಾಡಲು ಮರೆಯದಿರಿ.
ಮಲೇಷ್ಯಾ:
ಭಾರತೀಯ ಪ್ರವಾಸಿಗರು ಮಲೇಷ್ಯಾ ಪ್ರವಾಸವನ್ನು ಹೆಚ್ಚಿಗೆ ಇಷ್ಟಪಡುತ್ತಾರೆ. ಲಿಟಲ್ ಇಂಡಿಯಾ ಎಂದೇ ಖ್ಯಾತವಾಗಿರುವ ಮಲೇಷ್ಯಾ, ಬಜೆಟ್ ಸ್ನೇಹಿ ಪ್ರವಾಸ ಮಾಡುವವರಿಗೆ ಮೊದಲ ಆಯ್ಕೆಯಾಗಿರುತ್ತದೆ. ಮಲೇಷ್ಯಾದಲ್ಲಿ ಅತ್ಯಂತ ಪ್ರಸಿದ್ಧವಾದ, ಸೆಲಂಗೋರ್ನ ಬಟು ಗುಹೆಗಳು, ಅದರ ಎತ್ತರದ ಮುರುಗನ್ ಪ್ರತಿಮೆ, ಥೈಪುಸಮ್ ಹಬ್ಬದ ಸಮಯದಲ್ಲಿ ಸಾವಿರಾರು ಭಾರತೀಯ ಭಕ್ತರನ್ನು ಸೆಳೆಯುತ್ತದೆ.
ವಿಯೆಟ್ನಾಂ:
ಬಜೆಟ್ ಫ್ರೆಂಡ್ಲಿ ಟೂರ್ ಹೋಗಬಯಸುವ ಮಂದಿಗೆ ಉತ್ತಮ ಆಯ್ಕೆ ವಿಯೆಟ್ನಾಂ. ಇಲ್ಲಿನ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯವು ದೇಶ ವಿದೇಶದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ವಿಯೆಟ್ನಾಂಗೆ ಪ್ರವಾಸ ಕೈಗೊಳ್ಳಲ್ಲು ಮೇ ತಿಂಗಳು ಉತ್ತಮ. ಹನೋಯಿ ಮತ್ತು ಹೋ ಚಿ ಮಿನ್ಹ್ ಸಿಟಿ ಸೇರಿದಂತೆ ವಿಯೆಟ್ನಾಂನ ಪ್ರಮುಖ ನಗರಗಳೀಗೆ ಭೇಟಿ ಕೊಟ್ಟು, ಇಲ್ಲಿ ಅಕ್ಕಿ ಟೆರೇಸ್ಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಾಂಪ್ರದಾಯಿಕ ಹಳ್ಳಿಗಳನ್ನು ನೋಡಿ ಬರುವುದನ್ನು ಮರೆಯಬೇಡಿ.

ಜಪಾನ್:
ಮೇ ತಿಂಗಳಲ್ಲಿ ಜಪಾನ್ ಪ್ರವಾಸ ಕೈಗೊಳ್ಳುವುದು ಸೂಕ್ತ ಸಮಯ. ವಿಶೇಷವಾಗಿ ಅರಳಿ ನಿಂತಿರುವ ಚೆರ್ರಿ ಉದ್ಯಾನವನಗಳು, ಅನೇಖ ವಸ್ತು ಸಂಗ್ರಹಾಲಯಗಳು ಮಾತ್ರವಲ್ಲದೆ ಆಧ್ಯಾತ್ಮಿಕ ದೇವಾಲಯಗಳು ಇಲ್ಲಿನ ವಿಶೇಷ. ಸ್ನೋಬೋರ್ಡಿಂಗ್, ಸ್ಕೀಯಿಂಗ್ ಮತ್ತು ಸ್ನೋಶೂಯಿಂಗ್ ಸೇರಿದಂತೆ ಅನೇಕ ಸಾಹಸ ಚಟುವಟಿಕೆಗಳನ್ನು ಇಲ್ಲಿ ಆನಂದಿಸಬಹುದು.