ಫಸ್ಟ್ ಕ್ಲಾಸ್ ಸೀಟ್ ಬೇಕಾ? ಇಷ್ಟು ಮಾಡಿ ಸಾಕು!
ಎಷ್ಟೋ ಸಲ ಕೊಟ್ಟ ಹಣಕ್ಕೆ ಪ್ರತಿಯಾಗಿ ಬೇಕಾದ ಸೌಲಭ್ಯಗಳು ಸಿಗುವುದೇ ಇಲ್ಲ, ಇನ್ನೂ ಕೆಲವೆಡೆ, ಕೆಲವೊಮ್ಮೆ ಬ್ಯುಸಿನೆಸ್ ಕ್ಲಾಸ್‌ನ ಸೀಟುಗಳಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಆಗುವುದಿಲ್ಲ, ಟಿವಿಗಳೂ ಇರೋದಿಲ್ಲ, ಇನ್ನೂ ಕೆಲವೊಮ್ಮೆ ಎಲ್ಲರಿಗೂ ಕೊಡುತ್ತಿದ್ದ ಊಟವನ್ನೇ ಕೊಡುತ್ತಾರೆ.
ಯಾರೇ ಇರಲಿ, ವಿಮಾನದಲ್ಲಿ ಪಯಣಿಸುವುದು ಒಂದು ಕನಸು, ಅದರಲ್ಲೂ ಫಸ್ಟ್ ಕ್ಲಾಸ್ ಟಿಕೆಟ್ ಇದ್ದರೆ ಬಂಪರ್ ಲಾಟರಿಯೂ ಹೌದು. ಆದರೆ, ಫಸ್ಟ್ ಕ್ಲಾಸ್ ಟಿಕೆಟ್ ಎಲ್ಲರ ಜೇಬಿಗೆ ಸಹಕರಿಸಬೇಕಲ್ಲವೆ? ಕೆಲವು ಜನ ಕಡಿಮೆ ದರದಲ್ಲಿಯೇ ಫಸ್ಟ್ ಕ್ಲಾಸ್‌ನಲ್ಲಿ ಓಡಾಡುತ್ತಾರೆ, ಅದು ಹೇಗೆ ಗೊತ್ತೇ?
ಜನ ಸಾದಾ ಟಿಕೆಟ್‌ಗಳನ್ನು ಬುಕ್ ಮಾಡಿ, ಆನಂತರ ಬಿಡ್ ಮಾಡಿ ಫಸ್ಟ್ ಕ್ಲಾಸ್‌ನಲ್ಲಿ ಕುಳಿತು ಪ್ರಯಾಣ ಮುಗಿಸಿಬಿಡುತ್ತಾರೆ. ಆದರೆ ಎಲ್ಲವೂ ಇಷ್ಟೇ ಸುಲಭದಲ್ಲಿ ಆಗುವುದಿದ್ದರೆ, ಈ ಲೇಖನದ ಅಗತ್ಯ ಬೀಳುತ್ತಲೇ ಇರಲಿಲ್ಲ. ಏಕೆಂದರೆ, ಕೆಲವೊಮ್ಮೆ ನೀವು ಒಂದಷ್ಟು ಸಾವಿರಗಳನ್ನು ಕೊಟ್ಟು ಬ್ಯುಸಿನೆಸ್ ಅಥವಾ ಫಸ್ಟ್ ಕ್ಲಾಸ್‌ಗೆ ಹೋದಾಗ ಕೆಲವೊಮ್ಮೆ ಅತೀ ಕೆಟ್ಟ ಅನುಭವಗಳೂ ಆಗಬಹುದು. ಇನ್ನೂ ಕೆಲವೊಮ್ಮೆ ಎಕಾನಮಿ ಸೀಟ್ ಗಳೇ ಚೆನ್ನಾಗಿತ್ತಲ್ವಾ ಅನಿಸಲು ಶುರುವಾಗುತ್ತದೆ.

ಎಷ್ಟೋ ಸಲ ಕೊಟ್ಟ ಹಣಕ್ಕೆ ಪ್ರತಿಯಾಗಿ ಬೇಕಾದ ಸೌಲಭ್ಯಗಳು ಸಿಗುವುದೇ ಇಲ್ಲ, ಇನ್ನೂ ಕೆಲವೆಡೆ, ಕೆಲವೊಮ್ಮೆ ಬ್ಯುಸಿನೆಸ್ ಕ್ಲಾಸ್‌ನ ಸೀಟುಗಳಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಆಗುವುದಿಲ್ಲ, ಟಿವಿಗಳೂ ಇರೋದಿಲ್ಲ, ಇನ್ನೂ ಕೆಲವೊಮ್ಮೆ ಎಲ್ಲರಿಗೂ ಕೊಡುವ ಊಟವನ್ನೇ ಕೊಡುತ್ತಾರೆ. ಉಚಿತ ಡ್ರಿಂಕ್ಸ್ ಸಿಗೋದಿಲ್ಲ. ಹಾಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ವಿಚಾರಗಳನ್ನು ಇಲ್ಲಿ ಬರೆಯಬಹುದು. ಈ ರೀತಿ ಶಾರ್ಟ್ ಕಟ್ ಮೂಲಕ ಫಸ್ಟ್ ಕ್ಲಾಸ್ ಟಿಕೆಟ್ ಪಡೆದು ಎಷ್ಟೊಂದು ಜನ ಹಲವಾರು ಬಾರಿ ಮೂರ್ಖರಾಗಿದ್ದಾರೆ. ಎಷ್ಟೋ ಸಾವಿರಗಳನ್ನು ಬಿಡ್ ಮಾಡಿ ಹೈ ಕ್ಲಾಸ್ ತೆಗೆದುಕೊಂಡು, ಸಾಧಾರಣ ಸೇವೆ ಪಡೆಯುವುದು ಯಾರಿಗಾದರೂ ಖುಷಿ ಕೊಡುತ್ತಾ ನೀವೇ ಹೇಳಿ? ಹೀಗಾಗಿ ಮೊದಲಿಗೆ ಹಣವನ್ನು ಕೊಟ್ಟು ಮೂರ್ಖರಾಗುವುದಕ್ಕಿಂತ, ಇಲ್ಲಿ ನೀಡಿರುವ ಕೆಲವು ಸುಲಭ ಉಪಾಯಗಳನ್ನು ಬಳಸಿ, ತಪ್ಪಾಗದಂತೆ ನೋಡಿಕೊಳ್ಳಿ
ದಾರಿಯ ಬಗ್ಗೆ ಗೊತ್ತಿರಲಿ
ನಿಮ್ಮ ದುಬಾರಿ ಮತ್ತು ಗುಣಮಟ್ಟದ ಫಸ್ಟ್ ಕ್ಲಾಸ್ ಸೀಟುಗಳು ಹೋಗುವ ದಾರಿಯ ಮೇಲೆಯೂ, ಎಲ್ಲಿಂದ ಪ್ರಯಾಣ ಶುರುಮಾಡುತ್ತೀರಿ ಎಂಬುದರ ಮೇಲೆಯೂ ಡಿಪೆಂಡ್ ಆಗಿರುತ್ತದೆ. ಏಕೆಂದರೆ, ವಿಮಾನದಲ್ಲಿ ಎರಡು ರೀತಿಯ ಫಸ್ಟ್ ಕ್ಲಾಸ್ ಸೀಟುಗಳು ಇರುತ್ತದೆ. ನೀವೇನಾದರೂ ಇರುವ ದೇಶದಲ್ಲೇ ಸುತ್ತಾಡುವವರಾಗಿದ್ದರೆ, domestic first class ಸೀಟುಗಳು ಅಂತಾರಾಷ್ಟ್ರೀಯ ವಿಮಾನದ ಪ್ರೀಮಿಯಂ ಎಕಾನಮಿ ಅಥವಾ ಬ್ಯುಸಿನೆಸ್ ಕ್ಲಾಸ್‌ಗೆ ಕೊಡುವ ಸೇವೆಗಳನ್ನೇ ಕೊಡುತ್ತವೆ.
ಒಂದು ಚಿಕ್ಕ ಉದಾಹರಣೆ. ಬೆಂಗಳೂರಿನಿಂದ ದೆಹಲಿಗೆ ಕೆಲವು ವಿಮಾನದಲ್ಲಿ ಹೋದಾಗ, ದಾರಿ ಮಧ್ಯದಲ್ಲಿ ಒಂದು ಊಟ ಸಿಗಬಹುದು, ಕಾಲಿಡಲು ಜಾಸ್ತಿ ಜಾಗ ಇರಬಹುದು, ವಿಮಾನ ಟೇಕ್ ಆಫ್ ಆಗುವುದಕ್ಕೂ ಮುಂಚೆ ಒಂದು ಸಾಫ್ಟ್ ಡ್ರಿಂಕ್ಸ್ ಕೂಡ ಕೊಡಬಹುದು. ಆದರೆ ಅದೇ ವಿಮಾನವನ್ನು ಬೆಂಗಳೂರಿನಿಂದ ಪ್ಯಾರಿಸ್‌ಗೆ ಕಾಯ್ದಿರಿಸಿದರೆ, ಚಾಲಕ ಸಹಿತ ಟ್ಯಾಕ್ಸಿಯಿಂದ ಹಿಡಿದು, ಲಗೇಜ್ ಹಿಡಿಯಲು ಸಹಾಯಕ, ಹಾಗೆ ಪೈಜಾಮ ಮತ್ತು ಟಾಯ್ಲೆಟರಿಗಳ ಜತೆ ಶಾಂಪೆನ್ ಸಹ ಸಿಗಬಹುದು.

ಸಾದಾ ಕ್ಲಾಸ್ ನ ಪಕ್ಕದಲ್ಲೇ ಬುಕ್ ಮಾಡಿ
47 ಬಿ ಯಿಂದ 1 ಎ ಗೆ ವರ್ಗಾಯಿಸಿಕೊಳ್ಳುವುದು ಅಸಾಧ್ಯವೆಂದೇ ಹೇಳುತ್ತಾರೆ. ಏಕೆಂದರೆ ಏರ್ ಲೈನ್ ಗಳು ಒಂದು ಸಲಕ್ಕೆ ಒಂದೇ ಶ್ರೇಣಿ ಹೆಚ್ಚಿಸಿಕೊಡುತ್ತವೆ. ಅದಕ್ಕೋಸ್ಕರ ನಿಮಗೇನಾದರೂ ಫಸ್ಟ್ ಕ್ಲಾಸ್ ಬೇಕಿದ್ದಲ್ಲಿ ಬ್ಯುಸಿನೆಸ್ ಕ್ಲಾಸನ್ನು ಬುಕ್ ಮಾಡಿ ಅಥವಾ ಬ್ಯುಸಿನೆಸ್ ಕ್ಲಾಸ್ ಬೇಕಿದ್ದರೆ ಪ್ರೀಮಿಯಂ ಎಕಾನಮಿ ಟಿಕೆಟ್ ಕೊಂಡಾಗ ಬ್ಯುಸಿನೆಸ್ ಕ್ಲಾಸ್‌ಗೆ ಬದಲಾಯಿಸಿಕೊಳ್ಳುವುದು ಶಾಣ್ಯಾತನ!
ಇದು ಅತಿ ಕಡಿಮೆ ಖರ್ಚಿನಲ್ಲಿ ಆಗುವ ವಿಧಾನ. ನೀವು ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ ಅಥವಾ ಮೆಯ್ಲ್ ಗಳನ್ನು ಬಳಸಿಕೊಂಡು ಈ ರೀತಿಯ ಸವಲತ್ತುಗಳನ್ನು ಪಡೆಯಬಹುದು.
ಕ್ಯಾಷ್ ಮತ್ತು ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ ಅನ್ನು ಸೇರಿಸಿ
ಪಾಯಿಂಟ್ಸ್, ಮೆಯ್ಲ್ಸ್ ಮತ್ತು ರುಪಾಯಿಗಳನ್ನು ಸೇರಿಸಿ ಫಸ್ಟ್ ಕ್ಲಾಸ್‌ಗೆ ಹೋಗಬಹುದು, ಕ್ರೆಡಿಟ್ ಕಾರ್ಡ್‌ನ ಪಾಯಿಂಟ್‌ಗಳನ್ನು ಏರ್ಲೈನ್‌ನ ಮೈಲೇಜ್ ಪ್ರೋಗ್ರಾಮ್ ಬದಲಿಸಿಕೊಂಡಾಗ ಹಲವಾರು ರಿವಾರ್ಡ್‌ಗಳ ಜತೆಗೆ ಕಡಿಮೆ ದರದಲ್ಲಿಯೂ ಫಸ್ಟ್ ಕ್ಲಾಸ್ ಬುಕ್ ಮಾಡಬಹುದು. ನಮಗೆ ಮತ್ತಷ್ಟು ಸಹಾಯವಾಗಲು Point.me, roame.travel ಮತ್ತು pointhund ಗಳಂತಹ ವೆಬ್ ಸೈಟ್ ಗಳು ನೀವು ಹೋಗುತ್ತಿರುವ ಸ್ಥಳದ ದಾರಿಯನ್ನು ಪತ್ತೆ ಹಚ್ಚಿ, ಏರ್ ಲೈನ್‌ಗಳಿಂದ ನಿಮಗೆ ಸಿಗುವ ಬೆಸ್ಟ್ ಡೀಲ್‌ಗಳನ್ನೂ ಹುಡುಕುತ್ತವೆ.
ಸೀಟ್ ಮ್ಯಾಪ್ ಗಳನ್ನು ನೋಡಿಕೊಳ್ಳಿ
ನೀವು ಬುಕ್ ಮಾಡುವ ಮೊದಲು, ವಿಮಾನದ ಸೀಟಿಂಗ್ ಚಾರ್ಟ್‌ಗಳನ್ನೂ ನೋಡಿಕೊಳ್ಳಿ. ಕೆಲವೊಮ್ಮೆ ಕೆಲವು ಸೀಟುಗಳು ಎಕಾನಮಿ ಕ್ಲಾಸ್ ಪಕ್ಕವೇ ಇದ್ದರೆ, ನಿಮ್ಮ ಪ್ರಯಾಣಕ್ಕೆ ಸಿಗುವ ಸೌಲಭ್ಯಗಳು ಕಡಿಮೆಯಾಗಬಹುದು. ಆದ್ದರಿಂದ ವಿಮಾನದ ಸೀಟನ್ನು ಬುಕ್ ಮಾಡುವ ಮೊದಲು ಬಸ್ ಬುಕಿಂಗ್ ಮಾಡುವಾಗ ಸೀಟುಗಳಲ್ಲಿ ಲೆಕ್ಕಾಚಾರ ಹಾಕುತ್ತೇವಲ್ಲ, ಅದೇ ರೀತಿಯ ಲೆಕ್ಕಾಚಾರವಿದ್ದರೇ ಭಾರಿ ಒಳ್ಳೆಯದು. ನೀವು ಟಿಕೆಟ್ ಕಾಯ್ದಿರಿಸುವ ಮುನ್ನ, ವಿಮಾನ ಮತ್ತು ಏರ್ ಲೈನ್ ಗಳ ಒಂದು ಗೂಗಲ್ ಸರ್ಚ್ ಮಾಡಿದರೆ ಸೀಟ್ ಮ್ಯಾಪ್ ತೋರಿಸುತ್ತದೆ.

ಆರಾಮದಿಂದಿರಿ, ಸಮಯ ಬಂದಾಗ ಪುಟಿಯಿರಿ
ಸಾದಾ ಸೀಟಿನಿಂದ ಪ್ರೀಮಿಯಂ ಅಥವಾ ಬ್ಯುಸಿನೆಸ್ ಕ್ಲಾಸ್‌ಗೆ ಬದಲಿಸುವವರಿದ್ದರೆ, ಎಷ್ಟು ಖರ್ಚಾಗಬಹುದು? ಯಾವಾಗ ದರ ಬದಲಾಗುತ್ತದೆ? ಹಾಗೆ ಎಷ್ಟು ಜನರು ಎಷ್ಟು ಹಣವನ್ನು ಕೊಟ್ಟು ಸೀಟುಗಳನ್ನು ದೊರಕಿಸಿಕೊಳ್ಳಲು ಕ್ಯೂನಲ್ಲಿ ನಿಂತಿದ್ದಾರೆ? ನೀವು ಬುಕ್ ಮಾಡುವ ಸಮಯದಲ್ಲೇ ಅಪ್ ಗ್ರೇಡ್ ಮಾಡಿಕೊಳ್ಳುವುದು ಒಳ್ಳೆಯದಾ? ಅಥವಾ ಹಾರುವ ದಿನದವರೆಗೂ ಕಾಯಬೇಕಾ? ಇಲ್ಲ ಹಾಗೇನೂ ರೂಲ್ ಇಲ್ಲ.
ಬದಲಿಗೆ ಆಗಾಗ ಏರ್ ಲೈನ್ಸ್ ಆಪ್‌ಗಳನ್ನು ನೋಡಿಕೊಳ್ಳುತ್ತಿರಿ. ಸೀಟುಗಳ ದರ ಕಡಿಮೆಯಾದಾಗ ಆ ಆಫರ್‌ಗಳನ್ನು ನೋಡಿರಿ, ಏಕೆಂದರೆ ವಿಮಾನದ ಮೊದಲ ಸಾಲುಗಳಲ್ಲಿ ಕುಳಿತು ಪಯಣಿಸುವ ಅನುಭವ ಅನುಭವಿಸಿದಾಗಲೇ ಗೊತ್ತಾಗುವುದು.
ಪ್ರತಿ ವಿಮಾನಯಾನವು ಒಂದೊಂದು ಅನುಭವ. ಎಷ್ಟೋ ಜನರಿಗೆ ತಾವು ಹೋಗುವ ಗಮ್ಯಕ್ಕಿಂತ ವಿಮಾನದಲ್ಲಿನ ಅನುಭವವೇ ಮಜವಾಗಿರುತ್ತದೆ. ಅಂಥ ವಿಶೇಷ ಅನುಭವ ಪಡೆಯಲು ಕೆಲವು ಸರಳ ಟಿಪ್‌ಗಳನ್ನು ಅನುಸರಿಸಿ ಒಳ್ಳೆಯ ಪ್ರವಾಸ ನಿಮ್ಮದಾಗಲಿ.