Wednesday, July 23, 2025
Wednesday, July 23, 2025

ಇ ಪಾಸ್: ಕೊಡೈಕೆನಾಲ್ ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಇಳಿಕೆ

ತಮಿಳುನಾಡು ಮದ್ರಾಸ್ ಹೈಕೋರ್ಟ್ (Madras High court) ಆದೇಶದಂತೆ, ಸ್ಥಳೀಯರಲ್ಲದವರು ಕೊಡೈಕನಾಲ್ ಪ್ರವೇಶಿಸಲು ಇ-ಪಾಸ್ (E-Pass) ಪಡೆಯುವುದು ಕಡ್ಡಾಯವಾಗಿದೆ.

ಕೊಡೈಕನಾಲ್‌ನಲ್ಲಿ (Kodaikanal) ಈ ವರ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಜನಪ್ರಿಯ ಸ್ಥಳಗಳಲ್ಲಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಸ್ಥಳಗಳು ಈಗ ಪ್ರವಾಸಿಗರಿಗಾಗಿ ಕಾಯುತ್ತಿವೆ. ಆದರೆ, ವಾರಾಂತ್ಯಗಳಲ್ಲಿ ಮಾತ್ರವೇ ಕೆಲವಷ್ಟು ಪ್ರವಾಸಿಗರ ಓಡಾಟ ನಡೆಯುತ್ತಿದೆ.

ತಮಿಳುನಾಡು ಮದ್ರಾಸ್ ಹೈಕೋರ್ಟ್ (Madras High court) ಆದೇಶದಂತೆ, ಸ್ಥಳೀಯರಲ್ಲದವರು ಕೊಡೈಕನಾಲ್ ಪ್ರವೇಶಿಸಲು ಇ-ಪಾಸ್ (E-Pass) ಪಡೆಯುವುದು ಕಡ್ಡಾಯವಾಗಿದೆ. ಈ ಹೊಸ ವ್ಯವಸ್ಥೆಯು ಏಪ್ರಿಲ್ 1ರಿಂದಲೇ ಜಾರಿಗೆ ಬಂದು, ಪ್ರವಾಸಿಗರ ಸಂಖ್ಯೆ ಮೇಲೆ ತಕ್ಷಣ ಪರಿಣಾಮ ಬೀರಿದೆ. ಕಳೆದ ವರ್ಷದ ಇದೇ ಅವಧಿಯೊಂದಿಗೆ ಹೋಲಿಸಿದರೆ, ಈ ವರ್ಷ ಕೊಡೈಕನಾಲ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಸ್ಪಷ್ಟವಾಗಿ ಕಡಿಮೆಯಾಗಿದೆ.

ಕೊಡೈಕನಾಲ್

ಈ ಪ್ರವಾಸೋದ್ಯಮ ಇಳಿಕೆಯಿಂದಾಗಿ, ಏಪ್ರಿಲ್-ಮೇ ತಿಂಗಳ ಏಕೈಕ ಆದಾಯದ ಅವಧಿಗೆ ಅವಲಂಬಿತವಾದ ತಮಿಳುನಾಡಿನ ಪ್ರವಾಸೋದ್ಯಮ ವ್ಯಾಪಾರಿಗಳು ಕಂಗೆಟ್ಟಿದ್ದಾರೆ. ಈ ನಡುವೆ ಇ-ಪಾಸ್ ವ್ಯವಸ್ಥೆ ಪ್ರವಾಸಿಗರನ್ನು ಕೊಡೈಕನಾಲ್ ಕಡೆಗೆ ಹೋಗುವುದನ್ನು ಕಡಿಮೆ ಮಾಡಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಆದರೆ ಪ್ರವಾಸಿಗರ ಅನುಭವವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ, ಘಾಟ್ ರಸ್ತೆಯ ಚೆಕ್ ಪೋಸ್ಟ್‌ನಲ್ಲಿ ವಿಶೇಷ ತಂಡ ನಿಯೋಜಿಸಲಾಗಿದೆ. ಅವರು ಪ್ರವಾಸಿಗರಿಗೆ ಇ-ಪಾಸ್ ಪಡೆಯುವಲ್ಲಿ ಸಹಾಯ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಈಗ ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿದ್ದು, ಈ ಬೇಸಿಗೆ ಹವಾಮಾನದಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಹೊಸ ಕಾರ್ಯತಂತ್ರ ರೂಪಿಸಬೇಕಾಗಿದೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!