Tuesday, August 19, 2025
Tuesday, August 19, 2025

ಪ್ರವಾಸಕ್ಕಿಂತ ಜಾಸ್ತಿ ಅನುಭವದತ್ತ ಮುಖಮಾಡುತ್ತಿರುವ ಚೀನಿ ಪ್ರವಾಸಿಗರು!

ಚೀನೀ ಪ್ರವಾಸಿಗರು ಇಂದು ಸಾಮಾನ್ಯ ಟೂರಿಸ್ಟ್ ಡೆಸ್ಟಿನೇಶನ್‌ಗಳನ್ನು ಬಿಟ್ಟು ವಿಶಿಷ್ಟ ಅನುಭವಗಳ ಕಡೆ ಮುಖ ಮಾಡುತ್ತಿದ್ದಾರೆ

ಇತ್ತೀಚಿನ ವರ್ಷಗಳಲ್ಲಿ, ಚೀನಾದ ಪ್ರವಾಸಿಗರು (China Tourist) ಸಾಮಾನ್ಯ ಪ್ಯಾಕೇಜ್ ಟೂರಿಸಂ‌ನಿಂದ ದೂರ ಸರಿದು, ಹೆಚ್ಚು ವೈಯಕ್ತಿಕ, ಸ್ಥಳೀಯ ಸಂಸ್ಕೃತಿಗೆ ಹತ್ತಿರದ, ನೈಜ ಅನುಭವಗಳನ್ನು ಹುಡುಕುತ್ತಿರುವ ದೃಷ್ಟಿಕೋನಕ್ಕೆ ತಿರುಗಿದ್ದಾರೆ. ಕಲಿಕೆ ಮತ್ತು ಸ್ಥಳೀಯ ಜೀವನ ಶೈಲಿಯೊಂದಿಗೆ ಬೆರೆಯುವ ಅಭಿಲಾಷೆಯನ್ನು ಹೊಂದಿದ್ದಾರೆ. ಇದು ಇಂಟರ್‌ನ್ಯಾಷನಲ್ ಪ್ರವಾಸೋದ್ಯಮದಲ್ಲಿ ಭರವಸೆ ಮೂಡಿಸಿದೆ.

ಚೀನೀ ಪ್ರವಾಸಿಗರು ಇಂದು ಸಾಮಾನ್ಯ ಟೂರಿಸ್ಟ್ ಡೆಸ್ಟಿನೇಶನ್‌ಗಳನ್ನು ಬಿಟ್ಟು ವಿಶಿಷ್ಟ ಅನುಭವಗಳ ಕಡೆ ಮುಖ ಮಾಡುತ್ತಿದ್ದಾರೆ. ಜಪಾನ್‌ನಲ್ಲಿ ಟೀ ಸೆರೆಮನಿ ಅಥವಾ ಖಡ್ಗ ತಯಾರಿ ವರ್ಕ್‌ಶಾಪ್‌ಗಳಲ್ಲಿ ಪಾಲ್ಗೊಳ್ಳುವುದು, ಇಟಲಿಯಲ್ಲಿ ವೈನ್‌ಟೇಸ್ಟಿಂಗ್, ಥೈಲ್ಯಾಂಡ್‌ನಲ್ಲಿ ಸ್ಟ್ರೀಟ್ ಫುಡ್ ಟೂರ್ಸ್ ಇವು ಅವರಿಗೆ ಆಕರ್ಷಕವಾಗಿವೆ.

ಇದೀಗ ದಕ್ಷಿಣ ಕೊರಿಯಾ ಕೂಡ ವೈಶಿಷ್ಟ್ಯತೆಯಿಂದ ಬೆಳೆಯುತ್ತಿದೆ – ಮುಖ್ಯವಾಗಿ ಮೆಡಿಕಲ್ ಟೂರಿಸಂನ ಮೂಲಕ. ಸೌಲಿನಲ್ಲಿ ಚೀನೀ ಪ್ರವಾಸಿಗರು ಕಾಸ್ಮೆಟಿಕ್ ಸರ್ಜರಿ, ಸ್ಕಿನ್ ಟ್ರೀಟ್ಮೆಂಟ್‌ಗಾಗಿ ಪ್ರವಾಸ ಮಾಡುತ್ತಿದ್ದಾರೆ. ದಿನದ ಸರಾಸರಿ ಖರ್ಚು $129.43 ಮೀರಿರುವುದು ಇದಕ್ಕೆ ಸಾಕ್ಷಿ.

ಚೀನೀ ಪ್ರವಾಸಿಗರು ಈಗ ಟ್ಯಾಕ್ಸಿ ಅಥವಾ ಟೂರಿಸ್ಟ್ ಬಸ್ಸುಗಳ ಬದಲು ಬಸ್, ಮೆಟ್ರೋ, ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ವರ್ಷ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆಯಲ್ಲಿ 53% ರಷ್ಟು ವೃದ್ಧಿ ಕಂಡುಬಂದಿದೆ. ಇದು ಸ್ಥಳೀಯ ಬದುಕಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನಿಸುವ ಪ್ರವಾಸಿಗರ ಹೊಸ ಮನೋಭಾವವನ್ನು ತೋರಿಸುತ್ತದೆ.

ಅಲಿಪೇ ಮುಂತಾದ ಮೊಬೈಲ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳು ಪಬ್ಲಿಕ್ ಟ್ರಾನ್ಸಿಟ್‌ ವ್ಯವಸ್ಥೆಗಳಲ್ಲಿ ಸೇರಿದರಿಂದ ಹಣ ವಿನಿಮಯ ಮಾಡುವುದು ಮತ್ತಷ್ಟು ಸುಲಭವಾಗಿದೆ.

ಚೀನೀ ಪ್ರವಾಸಿಗರು ಈಗ ಸ್ಥಳೀಯ ಆಹಾರದ ಮೂಲಕ ಸಂಸ್ಕೃತಿಯನ್ನು ಆಸ್ವಾದಿಸಲು ಹೆಚ್ಚು ಇಚ್ಛಿಸುತ್ತಿದ್ದಾರೆ. ಜಪಾನ್‌ನ ಫಿಶ್ ಮಾರ್ಕೆಟ್ ಟೂರ್ಸ್, ಇಟಲಿಯ ಕುಕ್ಕಿಂಗ್ ಕ್ಲಾಸಸ್, ಥೈಲ್ಯಾಂಡ್‌ನ ಥೈ ಫುಡ್ ಸ್ಟ್ರೀಟ್ ರೊಮ್ಯಾಂಸ್ – ಎಲ್ಲವೂ ಆಹಾರದ ಮೂಲಕ ಸಾಂಸ್ಕೃತಿಕ ಅನುಭವಕ್ಕೆ ದಾರಿ ಒದಗಿಸುತ್ತಿವೆ.

ಚಿನೀ ಪ್ರವಾಸಿಗರು ಪರಿಸರ ಸ್ನೇಹಿ ಪ್ರಯಾಣದತ್ತ ತಿರುಗುತ್ತಿದ್ದಾರೆ – ಸ್ಥಳೀಯವಾಗಿ ತಯಾರಾದ ಆಹಾರ, ಪರಿಸರ ಸ್ನೇಹಿ ಹೋಟೆಲ್‌ಗಳು, ಜನಪ್ರಿಯತೆಯ ಪಾಠದಿಂದ ದೂರದ ನೈಸರ್ಗಿಕ ಸ್ಥಳಗಳು – ಇವುಗಳೆಲ್ಲಾ ಹೆಚ್ಚು ಆಕರ್ಷಿಸುತ್ತಿವೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!