Thursday, April 23, 2026
Thursday, April 23, 2026

ಕಮ್ಮಿ ಬೆಲೆಗೆ ಟಿಕೆಟ್‌ ಸಿಕ್ತು ಅಂತ ಖುಷಿ ಆಗ್ಬೇಡಿ

ಎಮಿರೇಟ್ಸ್‌ ಸಂಸ್ಥೆ ಫೇಕ್‌ ಟಿಕೆಟ್‌ ಸ್ಕ್ಯಾಮ್‌ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಕೆಲವು ಸೂಚನೆಗಳನ್ನು ನೀಡಿದೆ. ಕಡಿಮೆ ಬೆಲೆಗೆ ಸಿಗುವ ಟಿಕೆಟ್‌ ಎಂದು ಖರೀದಿಗೆ ಮುಂದಾದರೆ ಖಾತೆಯಲ್ಲಿ ಇರುವ ಹಣವನ್ನೆಲ್ಲ ಕಳೆದುಕೊಳ್ಳುವ ಸನ್ನಿವೇಶ ಉಂಡಾಗಬಹುದು. ಎಚ್ಚರ!

ಆನ್‌ಲೈನ್‌ ವಂಚನೆಗಳನ್ನು ಗಮನಿಸಿದಾಗ ಯಾವ ರೀತಿಯ ಸ್ಕ್ಯಾಮ್‌ ಕೂಡ ನಡೆಯಬಹುದು ಎನ್ನುವುದು ಗೊತ್ತಾಗುತ್ತದೆ. ಉದಾಹರಣೆಗೆ, ಫೇಕ್‌ ಅಕೌಂಟ್‌ ಇಂದ ಹಣ ಕೇಳುವುದು, ಯಾವುದೋ ಲಿಂಕ್‌ ಮೆಸೇಜ್‌ ಮೂಲಕ ಕಳುಹಿಸಿ, ಅದನ್ನು ತೆರೆದಾಗ ಹಣ ಖಾಲಿ ಆಗುವುದು, ದೊಡ್ಡ ಕಾನ್ಸರ್ಟ್‌ ಟಿಕೆಟ್‌ ಕೊಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡುವುದು, ಹೀಗೆ ಹಲವು ಸ್ಕ್ಯಾಮ್‌ ನಡೆಯುತ್ತವೆ. ಈಗ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್, ತನ್ನ ಗ್ರಾಹಕರಿಗೆ ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಯ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಟಿಕೆಟ್ ಮಾರಾಟ, ಫಿಶಿಂಗ್ ಇಮೇಲ್‌ಗಳು ಮತ್ತು ವಂಚನೆಯ ಫೋನ್ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ.

New Project (29)

ಯಾವ ರೀತಿ ನಡೆಯುತ್ತದೆ?

ವಂಚಕರು ಜನರನ್ನು ಸ್ಕ್ಯಾಮ್‌ ಮಾಡಲು ವಿವಿಧ ದಾರಿಗಳನ್ನು ಬಳಸುತ್ತಿದ್ದಾರೆ. ಎಮಿರೇಟ್ಸ್‌ನ ಅಧಿಕೃತ ಬ್ರ್ಯಾಂಡಿಂಗ್ ಮತ್ತು ಲೋಗೋಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ʼಉಚಿತ ಟಿಕೆಟ್ʼ ಅಥವಾ ʼರಿಯಾಯಿತಿ ದರದಲ್ಲಿʼ ಎಂಬ ಜಾಹೀರಾತುಗಳನ್ನು ನೀಡುತ್ತಿದ್ದಾರೆ.

ಇನ್ನು ಕೆಲವರು ಅಧಿಕೃತ ಇಮೇಲ್‌ಗಳಂತೆ ಕಾಣುವ ಸಂದೇಶಗಳನ್ನು ಕಳುಹಿಸುತ್ತಾರೆ. ಅದರಲ್ಲಿ ಹಲವು ಲಿಂಕ್‌ಗಳು ಇರುತ್ತವೆ. ಅದರಲ್ಲಿರುವ ಯಾವ ಲಿಂಕ್‌ ಅನ್ನು ಗೊತ್ತಿಲ್ಲದೆ ಅಥವಾ ಕೈ ತಪ್ಪಿನಿಂದ ಕ್ಲಿಕ್‌ ಮಾಡಿದರೆ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್‌ ವಿವರಗಳನ್ನು ವಂಚಕರು ಕದಿಯುತ್ತಾರೆ. ಕೈ ತಪ್ಪಿನಿಂದ ಯಾವುದಾದರೊಂದು ಲಿಂಕ್‌ ಮೇಲೆ ಕ್ಲಿಕ್‌ ಆಗುವಂತೆಯೇ ಆ ಮೇಲ್‌ ಇರುತ್ತದೆ.

ವೀಸಾ ಉಚಿತ ಹಿಡನ್ ಚಾರ್ಜ್ ಖಚಿತ!

ವಿಮಾನಯಾನ ಸಂಸ್ಥೆಯ ಪ್ರತಿನಿಧಿಗಳೆಂದು ಹೇಳಿಕೊಂಡು ಯಾರಾದರೂ ಕರೆ ಮಾಡಬಹುದು. ಅವರು ಬ್ಯಾಂಕ್‌ ಖಾತೆ ಪಾಸ್‌ವರ್ಡ್‌ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳಬಹುದು. ಒಂದು ವೇಳೆ ಈ ವಿವರ ಅಥವಾ ಒಟಿಪಿ ನೀಡಿದರೆ ಮುಗಿಯಿತು. ಕ್ಷಣಮಾತ್ರದಲ್ಲಿ ಬ್ಯಾಂಕ್‌ ಖಾತೆಯಲ್ಲಿರುವ ಹಣ ಮಾಯವಾಗುತ್ತದೆ.

ಏನಿದು ಎಮಿರೇಟ್ಸ್ ಸ್ಕೈವರ್ಡ್ಸ್?

ಎಮಿರೇಟ್ಸ್‌ ಇಂದ ಗ್ರಾಹಕರಿಗಾಗಿ ವಿಶೇಷ ಪ್ರೋಗಾಂ ಇದೆ. ಅದರ ಹೆಸರು ʼಸ್ಕೈವರ್ಡ್ಸ್‌ʼ. ಇದರಲ್ಲಿ ಗ್ರಾಹಕರಿಗೆ ವಿಶೇಷ ಪಾಯಿಂಟ್ಸ್‌ ನೀಡಲಾಗುತ್ತದೆ. ಉದಾಹರಣೆಗೆ ಕೆಲವು ಅಂಗಡಿಗಳಲ್ಲಿ ಅವರ ಕಾರ್ಡ್‌ ಬಳಸಿ ಖರೀದಿ ಮಾಡಿದಾಗ ಕೆಲವು ಪಾಯಿಂಟ್ಸ್‌ ಕಾರ್ಡ್‌ಗೆ ಬರುತ್ತದೆ. ಆ ಪಾಯಿಂಟ್ಸ್‌ ಇಂದ ಇನ್ನಷ್ಟು ಖರೀದಿ ಮಾಡಬಹುದು. ಅದೇ ರೀತಿಯ ವ್ಯವಸ್ಥೆ ಸ್ಕೈವರ್ಡ್ಸ್‌ ಕೂಡ. ಗ್ರಾಹಯಕರ ಲಾಯಲ್ಟಿ ಪ್ರೋಗ್ರಾಂ ಇದು. ವಂಚಕರು ಈ ಖಾತೆಗಳನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಗ್ರಾಹಕರ ಪಾಯಿಂಟ್ಸ್‌ ಕದಿಯಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಯಾವುದೇ ಅಪರಿಚಿತ ವ್ಯಕ್ತಿಗೆ ಲಾಗಿನ್ ವಿವರಗಳನ್ನು ನೀಡಬೇಡಿ ಎಂದು ಸಂಸ್ಥೆ ತಿಳಿಸಿದೆ.

New Project (27)

ಎಚ್ಚರಿಕೆ ಮುಖ್ಯ

ಒಂದು ವೇಳೆ ಈ ಜಾಲದೊಳಗೆ ಬೀಳಬಾರದು ಅಂದರೆ ಏನು ಮಾಡಬೇಕು ಅಥವಾ ನಕಲಿ ಸಂದೇಶಗಳನ್ನು ಹೇಗೆ ಕಂಡು ಹಿಡಿಯುವುದು ಎಂಬ ಪ್ರಶ್ನೆಯಿದ್ದರೆ ಕೆಲವು ಸೂಚನೆಗಳಿವೆ.

  • ಮೊದಲಿಗೆ ಬಂದಿರುವ ಇಮೇಲ್‌ ಅಥವಾ ಇತರ ಸಂದೇಶ ಅಧಿಕೃತ ಮೇಲ್‌ ಐಡಿ ಇಂದ ಬಂದಿದೆಯೇ ಎಂದು ನೋಡಬೇಕು.
  • ಕೆಲವು, ʼನಿಮ್ಮ ಟಿಕೇಟ್‌ ಇಂದೇ ರದ್ದಾಗುತ್ತದೆ, ತಕ್ಷಣ ಹಣ ಪಾವತಿಸಿʼ ಎಂಬ ತುರ್ತು ಸಂದೇಶಗಳು ಬರಬಹುದು. ಇವುಗಳನ್ನು ನಂಬಬಾರದು.
  • ಸಂದೇಶಗಳಲ್ಲಿ ವಾಕ್ಯದೋಷ ಅಥವಾ ಅಕ್ಷರದೋಷ ಅಥವಾ ಅನಧಿಕೃತ ಲೋಗೋ ಬಳಕೆಯನ್ನು ಗಮನಿಸಬೇಕು.
  • ಅತೀ ಕಡಿಮೆ ಬೆಲೆಗೆ ಟಿಕೆಟ್‌ ನೀಡುವುದಾಗಿ ಹೇಳಿದರೆ ಹುಷಾರಾಗಿರಬೇಕು

ಏನು ಮಾಡಬೇಕು?

  • ಎಮಿರೇಟ್ಸ್ ತನ್ನ ಗ್ರಾಹಕರಿಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.
  • ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯಬೇಡಿ.
  • ಯಾವುದೇ ಮಾಹಿತಿ ನೀಡುವ ಮೊದಲು ಕರೆ ಮಾಡಿದವರು ಯಾರು, ಏನು ಎಂದು ವಿಚಾರಿಸಿ. ಅನುಮಾನ ಬಂದರೆ ತಕ್ಷಣ ಕರೆ ಕಡಿತಗೊಳಿಸಿ ಅಧಿಕೃತ ಕಚೇರಿಯನ್ನು ಸಂಪರ್ಕಿಸಿ.
  • ಟಿಕೆಟ್ ಬುಕಿಂಗ್ ಮತ್ತು ಇತರ ಸೇವೆಗಳಿಗಾಗಿ ಕೇವಲ ಅಧಿಕೃತ ವೆಬ್‌ಸೈಟ್ (www.emirates.com) ಅಥವಾ ಅಧಿಕೃತ ಮೊಬೈಲ್ ಆ್ಯಪ್ ಅನ್ನು ಮಾತ್ರ ಬಳಸಿ.
  • ಸಂಶಯಾಸ್ಪದ ಇಮೇಲ್‌ಗಳನ್ನು ಸಂಸ್ಥೆಯ ಅಧಿಕೃತ 'ಅಬ್ಯೂಸ್ ರಿಪೋರ್ಟಿಂಗ್' ವಿಳಾಸಕ್ಕೆ ಫಾರ್ವರ್ಡ್ ಮಾಡಿ ದೂರು ನೀಡಿ.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಜಾಹೀರಾತುಗಳ ಹಾವಳಿ ಹೆಚ್ಚಾಗಿರುವುದರಿಂದ, ಎಮಿರೇಟ್ಸ್ ತನ್ನ ಕೆಲವು ಸಾಮಾಜಿಕ ಮಾಧ್ಯಮ ಜಾಹೀರಾತು ಅಭಿಯಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಅಧಿಕೃತ ಮೂಲಗಳ ಮೇಲೆ ನಂಬಿಕೆ ಇಡಿ ಮತ್ತು ನಿಮ್ಮ ಹಣವನ್ನು ನೀವೇ ಕಾಪಾಡಿಕೊಳ್ಳಬೇಕು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!