Friday, March 27, 2026
Friday, March 27, 2026

ಮೊರಕ್ಕೊದತ್ತ ಭಾರತೀಯ ಪ್ರವಾಸಿಗರ ಒಲವೇಕೆ?

ಏಷ್ಯಾದಲ್ಲಿ ಚೀನಾದ ನಂತರ ಭಾರತವು ಮೊರಕ್ಕೊಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮುಂಬರುವ ವರ್ಷಗಳಲ್ಲಿ ಭಾರತವು ಮೊರಕ್ಕೊದ ಟಾಪ್ 10 ಪ್ರವಾಸಿ ಮೂಲ ರಾಷ್ಟ್ರಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

ಆಫ್ರಿಕಾದ “ಬೆಳಕಿನ ಸಾಮ್ರಾಜ್ಯ” ಎಂದೇ ಪ್ರಸಿದ್ಧಿ ಹೊಂದಿರುವ ಮೊರಕ್ಕೊ, ಭಾರತೀಯ ಪ್ರವಾಸಿಗರ ಪಾಲಿಗೆ ವಿಶೇಷ ಅಕರ್ಷಕ ಪ್ರವಾಸಿ ತಾಣವಾಗುತ್ತಿದೆ. ಇತಿಹಾಸ, ಆರ್ಕಿಟೆಕ್ಚರ್ ಮತ್ತು ಅರಬ್-ಆಫ್ರಿಕನ್ ಸಂಸ್ಕೃತಿಯ ಗಮನ ಸೆಳೆಯುವ ಅಂಶಗಳಿರುವ ಈ ದೇಶವು ಭಾರತೀಯ ಪ್ರವಾಸಿಗರನ್ನು ಸೆಳೆಯಲು ಹೊಸ ಯೋಜನೆಗಳನ್ನು ರೂಪಿಸಿದೆ.

ಮೊರಕ್ಕೊ ರಾಷ್ಟ್ರೀಯ ಪ್ರವಾಸೋದ್ಯಮ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ 2019ಕ್ಕೆ ಹೋಲಿಸಿದರೆ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ 224% ರಷ್ಟು ಭಾರಿ ಏರಿಕೆ ಕಂಡುಬಂದಿದೆ. 2024ರಲ್ಲಿ ಸುಮಾರು 41,000 ಭಾರತೀಯರು ಭೇಟಿ ನೀಡಿದ್ದರೆ, 2025ರಲ್ಲಿ ಈ ಸಂಖ್ಯೆ 54,000ಕ್ಕೆ ಏರಿಕೆಯಾಗಿದೆ. ಅಂದರೆ ವಾರ್ಷಿಕವಾಗಿ 31% ಬೆಳವಣಿಗೆ ಕಂಡಿದೆ ಎಂದರ್ಥ. ಈ ವರ್ಷದ ಅಂತ್ಯದ ವೇಳೆಗೆ 80,000 ದಿಂದ 1 ಲಕ್ಷ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಮೊರಕ್ಕೊ ಹೊಂದಿದೆ.

ಇದನ್ನೂ ಓದಿ: ಥೈಲ್ಯಾಂಡ್ ಪ್ರವಾಸೋದ್ಯಮ ಬಿಕ್ಕಟ್ಟು

ಪ್ರಸ್ತುತ ಭಾರತ ಮತ್ತು ಮೊರಾಕೊ ನಡುವೆ ನೇರ ವಿಮಾನಯಾನ ಸೌಲಭ್ಯವಿಲ್ಲ. ಪ್ರವಾಸಿಗರು ದುಬೈ, ದೋಹಾ ಅಥವಾ ಯುರೋಪಿಯನ್ ನಗರಗಳ ಮೂಲಕ ಪ್ರಯಾಣಿಸಬೇಕಿದೆ. ಭಾರತೀಯ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ 1 ಲಕ್ಷ ತಲುಪಿದ ತಕ್ಷಣ, ಎರಡೂ ದೇಶಗಳ ನಡುವೆ ನೇರ ವಿಮಾನಯಾನ ಪ್ರಾರಂಭಿಸಲು ಮೊರಕ್ಕೊ ಸರಕಾರ ಮಾತುಕತೆ ನಡೆಸುತ್ತಿದೆ.

ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಮೊರಕ್ಕೊ ಪರಿಚಯಿಸಿರುವ ಸುಲಭ ಇ-ವೀಸಾ ವ್ಯವಸ್ಥೆ. ಈ ವೀಸಾವನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಕೇವಲ 24 ರಿಂದ 72 ಗಂಟೆಗಳಲ್ಲಿ ಪಡೆಯಬಹುದು. ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರಿಗೆ ಮೊರಕ್ಕೊ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಅಲ್ಲಿ ಚಿತ್ರೀಕರಣ ಮಾಡುವ ತಂಡಗಳಿಗೆ 30% ವರೆಗೆ ತೆರಿಗೆ ರಿಯಾಯಿತಿ ನೀಡುವ ಭರವಸೆ ನೀಡಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...