Wednesday, January 7, 2026
Wednesday, January 7, 2026

ಯುನಿಟಿ ಪ್ರೊಮೊ ಫೆಸ್ಟ್ 2025: ತ್ರಿಪುರಾದ ಸಂಸ್ಕೃತಿ–ಪ್ರವಾಸೋದ್ಯಮಕ್ಕೆ ಬಲ

ನವೆಂಬರ್ 8ರಿಂದ ಡಿಸೆಂಬರ್ 12ರವರೆಗೆ ನಡೆದ ಈ ಫೆಸ್ಟ್ ನಾರಿಕಲ್ ಕುಂಜ, ಬೆಲೋನಿಯಾ, ಉದಯಪುರ, ಜಂಪುಯಿ ಬೆಟ್ಟಗಳು, ನೀರ್ಮಹಲ್ ಮತ್ತು ಅಗರ್ತಲಾ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಜರುಗಿತು. ಉತ್ಸವದ ವೇಳೆ ಸಾಂಸ್ಕೃತಿಕ ಪ್ರದರ್ಶನಗಳು, ಪಾರಂಪರಿಕ ನೃತ್ಯ–ಸಂಗೀತ ಕಾರ್ಯಕ್ರಮಗಳು, ಸ್ಥಳೀಯ ಶಿಲ್ಪ ಮತ್ತು ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ, ಪಾರಂಪರಿಕ ಆಹಾರ ಮೇಳಗಳು ಪ್ರವಾಸಿಗರ ಗಮನ ಸೆಳೆದವು.

ತ್ರಿಪುರಾ ಸರಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಯೋಜಿಸಲಾದ ʼಯುನಿಟಿ ಪ್ರೊಮೊ ಫೆಸ್ಟ್ 2025ʼ ರಾಜ್ಯದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 2024ರಲ್ಲಿ ಆರಂಭವಾದ ಈ ಉತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ, 2025ರಲ್ಲಿ ಇದನ್ನು ಮತ್ತಷ್ಟು ವಿಸ್ತೃತವಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲೂ ಆಯೋಜಿಸಲಾಗಿತ್ತು.

ನವೆಂಬರ್ 8ರಿಂದ ಡಿಸೆಂಬರ್ 12ರವರೆಗೆ ನಡೆದ ಈ ಫೆಸ್ಟ್ ನಾರಿಕಲ್ ಕುಂಜ, ಬೆಲೋನಿಯಾ, ಉದಯಪುರ, ಜಂಪುಯಿ ಬೆಟ್ಟಗಳು, ನೀರ್ಮಹಲ್ ಮತ್ತು ಅಗರ್ತಲಾ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಜರುಗಿತು. ಉತ್ಸವದ ವೇಳೆ ಸಾಂಸ್ಕೃತಿಕ ಪ್ರದರ್ಶನಗಳು, ಪಾರಂಪರಿಕ ನೃತ್ಯ–ಸಂಗೀತ ಕಾರ್ಯಕ್ರಮಗಳು, ಸ್ಥಳೀಯ ಶಿಲ್ಪ ಮತ್ತು ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ, ಪಾರಂಪರಿಕ ಆಹಾರ ಮೇಳಗಳು ಪ್ರವಾಸಿಗರ ಗಮನ ಸೆಳೆದವು.

freepik__tripura-unity-promo-fes-1

ಡಿಸೆಂಬರ್ 12ರಂದು ಅಗರ್ತಲಾದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಗಾಯಕ ಜುಬಿನ್ ನೌಟಿಯಲ್ ಅವರ ಸಂಗೀತ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ಇದೇ ಸಂದರ್ಭದಲ್ಲಿ ‘ಯುನಿಟಿ’ ಎಂಬ ವಿಶೇಷ ಲೋಗೋವನ್ನು ಬಿಡುಗಡೆ ಮಾಡಲಾಗಿದ್ದು, ಇದು ಏಕತೆ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ಸಮನ್ವಯದ ಸಂಕೇತವೆಂದು ವಿವರಿಸಲಾಗಿದೆ.

ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳಿಂದ 120ಕ್ಕೂ ಹೆಚ್ಚು ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಿ2ಬಿ ಸಂಪರ್ಕ ಮತ್ತು ಸಹಕಾರವನ್ನು ಬಲಪಡಿಸಿದೆ. ತ್ರಿಪುರಾ ಸರಕಾರದ ಪ್ರಕಾರ, ಯುನಿಟಿ ಪ್ರೊಮೊ ಫೆಸ್ಟ್ ರಾಜ್ಯದ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ತಾಣಗಳು ಮತ್ತು ಸಂಸ್ಕೃತಿಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸಲು ಸಹಕಾರಿಯಾಗಲಿದೆ.

ʼಯುನಿಟಿ ಪ್ರೊಮೊ ಫೆಸ್ಟ್ 2025ʼ ಮೂಲಕ ತ್ರಿಪುರಾ ಪ್ರವಾಸೋದ್ಯಮಕ್ಕೆ ಹೊಸ ಗುರುತು ದೊರೆತಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ವ್ಯಕ್ತವಾಗಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!