Tuesday, March 17, 2026
Tuesday, March 17, 2026

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹತ್ತಕ್ಕೇರಿದ ಜೀಬ್ರಾಗಳ ಸಂಖ್ಯೆ

ಜನವರಿ 17ರಂದು ಎರಡೂವರೆ ವರ್ಷದ ಕೋಕಿಲ ಮತ್ತು ಜನವರಿ 28ರಂದು 12 ವರ್ಷದ ಕಾವೇರಿ ಎರಡು ಜೀಬ್ರಾಗಳು ತಲಾ ಒಂದೊಂದು ಮರಿಗಳಿಗೆ ಜನ್ಮ ನೀಡಿವೆ. ವಿಶೇಷವೆಂದರೆ ಈ ಎರಡೂ ಮರಿಗಳು ಹೆಣ್ಣು ಮರಿಗಳಾಗಿವೆ. ಸಧ್ಯ ಇತರೆ ಜೀಬ್ರಾಗಳೊಂದಿಗೇ ಅವುಗಳನ್ನೂ ಇರಿಸಲಾಗಿದ್ದು, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿ ಪಾಲಕರ ಆರೈಕೆಯಲ್ಲಿವೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜೀಬ್ರಾ (ಹೇಸರಗತ್ತೆ)ಗಳ ಸಂಖ್ಯೆ ಹತ್ತಕ್ಕೆ ಏರಿಕೆ ಕಂಡಿದೆ. 2026ರಲ್ಲಿ ಈ ಸಂಖ್ಯೆ 8 ಆಗಿತ್ತು. ಜನವರಿ ತಿಂಗಳೊಂದರಲ್ಲಿಯೇ ಎರಡು ಮರಿಗಳು ಜನಸಿದ್ದು ಈ ಸಂಖ್ಯೆ ಹತ್ತಕ್ಕೆ ಏರಿಕೆ ಕಂಡಿದೆ.

ಈ ಕುರಿತು ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ) ತಡವಾಗಿ ಮಾಹಿತಿ ಹಂಚಿಕೊಂಡಿದೆ. ಜನವರಿ 17ರಂದು ಎರಡೂವರೆ ವರ್ಷದ ಕೋಕಿಲ ಮತ್ತು ಜನವರಿ 28ರಂದು 12 ವರ್ಷದ ಕಾವೇರಿ ಎರಡು ಜೀಬ್ರಾಗಳು ತಲಾ ಒಂದೊಂದು ಮರಿಗಳಿಗೆ ಜನ್ಮ ನೀಡಿವೆ. ವಿಶೇಷವೆಂದರೆ ಈ ಎರಡೂ ಮರಿಗಳು ಹೆಣ್ಣು ಮರಿಗಳಾಗಿವೆ. ಸಧ್ಯ ಇತರೆ ಜೀಬ್ರಾಗಳೊಂದಿಗೇ ಅವುಗಳನ್ನೂ ಇರಿಸಲಾಗಿದ್ದು, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿ ಪಾಲಕರ ಆರೈಕೆಯಲ್ಲಿವೆ. ಹಾಗಾಗಿ ಇನ್ಮುಂದೆ ನೀವು ಬನ್ನೇರುಘಟ್ಟಕ್ಕೆ ಹೋದಾಗ ಈ ಪುಟಾಣಿ ಜೀಬ್ರಾ ಮರಿಗಳನ್ನು ಕಣ್ತುಂಬಿಕೊಳ್ಳು ಮರೆಯಬೇಡಿ.

ನಿಮಗಿದು ಗೊತ್ತಾ?

ಜೀಬ್ರಾ ಮರಿಗಳು ಆರಂಭದಲ್ಲಿ ಕಂದು ಮತ್ತು ಬಿಳಿ ಪಟ್ಟಿಗಳನ್ನು ಹೊಂದಿರುತ್ತವೆ. ಕಾಲಾನಂತರದಲ್ಲಿ ಈ ಕಂದು ಪಟ್ಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಜೀಬ್ರಾಗಳ ಗರ್ಭಾವಸ್ಥೆ 12 ತಿಂಗಳು ಕೆಲವೊಮ್ಮೆ ಇದು 13 ತಿಂಗಳುಗಳವರೆಗೂ ಮುಂದುವರೆಯಬಹುದು. ಅಲ್ಲದೆ ಮರಿಗಳ ಕುರಿತು ತಾಯಿ ಜೀಬ್ರಾಗಳು ಸದಾ ಕಾಳಜಿ ವಹಿಸುತ್ತವೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..