Tuesday, September 8, 2026
Tuesday, September 8, 2026

ರಾಜಸ್ಥಾನದ 2 ಹೊಟೇಲ್‌ಗಳಿಗೆ ವಿಶ್ವಮಾನ್ಯತೆ

ರಾಜಸ್ಥಾನದ ಜೈಪುರ ಮತ್ತು ಉದಯಪುರದಲ್ಲಿರುವ ಎರಡು ಐಷಾರಾಮಿ ಹೊಟೇಲ್‌ಗಳು 2026ರ ವಿಶ್ವದ ಅತ್ಯುತ್ತಮ ಹೊಟೇಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ರಾಜಸ್ಥಾನದ ಜೈಪುರ ಮತ್ತು ಉದಯಪುರದಲ್ಲಿರುವ ಎರಡು ಐಷಾರಾಮಿ ಹೊಟೇಲ್‌ಗಳು 2026ರ ವಿಶ್ವದ ಅತ್ಯುತ್ತಮ ಹೊಟೇಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. The World’s 50 Best Hotels ಸಂಸ್ಥೆ ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡಿದ 51ರಿಂದ 100ನೆಯ ಸ್ಥಾನದ ವಿಸ್ತೃತ ಪಟ್ಟಿಯಲ್ಲಿ ಜೈಪುರದ ದಿ ಜೋಹ್ರಿ 94ನೆಯ ಸ್ಥಾನ ಹಾಗೂ ಉದಯಪುರದ ದಿ ಒಬೆರಾಯ್ ಉದಯವಿಲಾಸ್ 98ನೆಯ ಸ್ಥಾನ ಗಳಿಸಿವೆ.

23 ಪ್ರದೇಶಗಳು ಮತ್ತು 40 ನಗರಗಳ ಹೊಟೇಲ್‌ಗಳನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ಏಷ್ಯಾದ 20 ಹೊಟೇಲ್‌ಗಳು ಸ್ಥಾನ ಪಡೆದಿವೆ. ಭಾರತದ ಪರವಾಗಿ ಸ್ಥಾನ ಪಡೆದ ಎರಡೂ ಹೊಟೇಲ್‌ಗಳು ರಾಜಸ್ಥಾನದಲ್ಲಿರುವುದು ವಿಶೇಷ. ಈ ಬಾರಿ ದಿ ಒಬೆರಾಯ್ ಉದಯವಿಲಾಸ್ ಮೊದಲ ಬಾರಿಗೆ ಪಟ್ಟಿಗೆ ಸೇರ್ಪಡೆಯಾಗಿದೆ.

ಪಿಚೋಲಾ ಸರೋವರದ ತಟದಲ್ಲಿರುವ ಉದಯವಿಲಾಸ್ 30 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಮೇವಾಡಿ ಅರಮನೆ ಶೈಲಿಯ ವಾಸ್ತುಶಿಲ್ಪ, ಉದ್ಯಾನಗಳು, ಕಾರಂಜಿಗಳು, ಐಷಾರಾಮಿ ಸ್ಪಾ ಮತ್ತು ಖಾಸಗಿ ಪೂಲ್‌ಗಳಿರುವ ಕೊಠಡಿಗಳಿಂದ ಗಮನ ಸೆಳೆಯುತ್ತದೆ.

ಇನ್ನು ಜೈಪುರದ ದಿ ಜೋಹ್ರಿ, ಐತಿಹಾಸಿಕ ಜೋಹ್ರಿ ಬಜಾರ್‌ನಲ್ಲಿರುವ ಪುನರ್‌ನವೀಕರಿಸಿದ 19ನೆಯ ಶತಮಾನದ ಲಾಲ್ ಹವೇಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಐದು ಸೂಟ್‌ಗಳಿರುವ ಈ ಬೂಟಿಕ್ ಹೊಟೇಲ್‌ನ ಪ್ರತಿಯೊಂದು ಕೊಠಡಿಯೂ ವಿಭಿನ್ನ ರತ್ನಗಳಿಂದ ಪ್ರೇರಿತ ವಿನ್ಯಾಸ ಹೊಂದಿದೆ.

ಪಟ್ಟಿಯ ಅಂತಿಮ 50 ಹೊಟೇಲ್‌ಗಳ ಘೋಷಣೆ ಸೆಪ್ಟೆಂಬರ್ 15ರಂದು ಪ್ಯಾರಿಸ್‌ನಲ್ಲಿ ನಡೆಯಲಿದೆ. ಹೀಗಾಗಿ ಭಾರತದ ಈ ಎರಡು ಹೊಟೇಲ್‌ಗಳು ಟಾಪ್ 50ರಲ್ಲಿ ಸ್ಥಾನ ಪಡೆಯುತ್ತವೆಯೇ ಎಂಬ ಕುತೂಹಲ ಮೂಡಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!