ಒಡಿಶಾ ಪ್ರವಾಸೋದ್ಯಮ ವಲಯವು ಪ್ರಸ್ತುತ ಒಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದರೂ, ಆದಾಯ ಹೆಚ್ಚಾಗುತ್ತಿಲ್ಲ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಒಡಿಶಾಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿದೆ. ಆದರೆ, ಪ್ರವಾಸಿಗರು ರಾಜ್ಯದಲ್ಲಿ ಕಳೆಯುವ ಸರಾಸರಿ ಸಮಯ ಮತ್ತು ವೆಚ್ಚವು ಕಡಿಮೆಯಾಗಿದೆ. ಅಂದರೆ, ಪ್ರವಾಸಿಗರು ಬರುತ್ತಿದ್ದಾರೆ ಆದರೆ ಹೆಚ್ಚಿನ ಹಣವನ್ನು ಅಲ್ಲಿ ಖರ್ಚು ಮಾಡುತ್ತಿಲ್ಲ ಅಥವಾ ಅತಿ ಕಡಿಮೆ ಅವಧಿಯ ಅಲ್ಲಿ ಉಳಿಯುತ್ತಿದ್ದಾರೆ. ಇದು ಆದಾಯದ ಮೇಲೆ ಪೆಟ್ಟು ನೀಡಿದೆ.

ಇದನ್ನೂ ಓದಿ: ಯುರೋಪ್‌ನ ಅತ್ಯುತ್ತಮ ಪ್ರವಾಸಿ ತಾಣಗಳಿಗೆ ಪೈಪೋಟಿ ನೀಡುವ ಒಡಿಶಾ ಕಡಲು

ಈ ವಿರೋಧಾಭಾಸವನ್ನು ಸರಿಪಡಿಸಲು ಒಡಿಶಾ ಸರಕಾರವು ಈಗ ಕೇವಲ ಪ್ರವಾಸಿಗರ ಸಂಖ್ಯೆಯ ಮೇಲೆ ಗಮನ ಹರಿಸುವ ಬದಲು ಗುಣಮಟ್ಟದ ಪ್ರವಾಸೋದ್ಯಮದ ಮೇಲೆ ಗಮನ ಹರಿಸಲು ಮುಂದಾಗಿದೆ. ವಿದೇಶಿ ಪ್ರವಾಸಿಗರನ್ನು ಮತ್ತು ಭಾರತದ ಇತರ ಶ್ರೀಮಂತ ನಗರಗಳ ಪ್ರವಾಸಿಗರನ್ನು ಸೆಳೆಯಲು 'ಒಡಿಶಾ: ಇಂಡಿಯಾಸ್ ಬೆಸ್ಟ್ ಕೆಪ್ಟ್ ಸೀಕ್ರೆಟ್' ಎಂಬ ಅಭಿಯಾನವನ್ನು ಹೊಸ ಆಯಾಮದಲ್ಲಿ ಮರುರೂಪಿಸಲಾಗುತ್ತಿದೆ.

ಪ್ರವಾಸಿ ತಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳು, ಐಷಾರಾಮಿ ರೆಸಾರ್ಟ್‌ಗಳು ಮತ್ತು ಉತ್ತಮ ಸಾರಿಗೆ ಸಂಪರ್ಕವನ್ನು ಕಲ್ಪಿಸುವುದು ಸರಕಾರದ ಗುರಿ. ಹಾಗೆಯೇ ಪುರಿ ಜಗನ್ನಾಥನ ದರ್ಶನದ ಜತೆಗೆ ಕಡಲತೀರಗಳು, ಸಾಂಸ್ಕೃತಿಕ ಪರಂಪರೆ ಮತ್ತು ಸಾಹಸ ಕ್ರೀಡೆಗಳ ಪ್ರಚಾರ ಮಾಡಲು ಸರಕಾರ ಮುಂದಾಗಿದೆ. ಇನ್ನು ಆದಾಯ ಹೆಚ್ಚಿಸಲು ಖಾಸಗಿ ವಲಯದ ಸಹಭಾಗಿತ್ವ ಅತ್ಯಗತ್ಯ ಎಂದು ಹೊಸ ಹೊಟೇಲ್‌ಗಳು ಮತ್ತು ಮನೋರಂಜನಾ ಪಾರ್ಕ್‌ಗಳನ್ನು ನಿರ್ಮಿಸಲು ಹೂಡಿಕೆದಾರರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.