ಭಾರತದ ಪ್ರಮುಖ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್‌ಫಾರ್ಮ್ 'ಸ್ವಿಗ್ಗಿ' ತನ್ನ ಬಹುನಿರೀಕ್ಷಿತ 'ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಅತಿ ದೊಡ್ಡ ಸಮೀಕ್ಷೆಯಲ್ಲಿ, ಫುಡ್ ಡೆಲಿವರಿ ಹಾಗೂ ಡೈನ್-ಔಟ್ ವಿಭಾಗಗಳಲ್ಲಿ ಬೆಂಗಳೂರಿನ ಲೆಗಸಿ ಬ್ರ್ಯಾಂಡ್‌ಗಳು ಮತ್ತು ಹೊಸ ತಲೆಮಾರಿನ ನೆಚ್ಚಿನ ಹೊಟೇಲ್‌ಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಇದನ್ಣೂ ಓದಿ: ಜಾಗತಿಕ ಮಟ್ಟದಲ್ಲಿ ಈಗ ಮಸಾಲೆ ದೋಸೆಯ ರುಚಿ

ಮನೆಗೆ ಅಥವಾ ಕಚೇರಿಗೆ ಆನ್‌ಲೈನ್ ಮೂಲಕ ಅತಿ ಹೆಚ್ಚು ಆರ್ಡರ್ ಮತ್ತು ಮೆಚ್ಚುಗೆ ಪಡೆದ ಹೊಟೇಲ್‌ಗಳ ಪಟ್ಟಿಯಲ್ಲಿ ಟ್ರಫಲ್ಸ್, ನಂದನ ಪ್ಯಾಲೇಸ್, ಮೇಘನಾ ಫುಡ್ಸ್, ಮ್ಯಾಗ್ನೋಲಿಯಾ ಬೇಕರಿ ಹಾಗೂ ಆರ್‌ಎನ್‌ಆರ್ ಬಿರಿಯಾನಿ - ಟೇಸ್ಟ್ ಆಫ್ 1953 ಅಗ್ರಸ್ಥಾನ ಪಡೆದುಕೊಂಡಿವೆ. ವಾರಾಂತ್ಯ ಅಥವಾ ಬಿಡುವಿನ ವೇಳೆಯಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಭೇಟಿ ನೀಡಿ ಊಟ ಸವಿಯುವ ಅತ್ಯುತ್ತಮ ತಾಣಗಳಾಗಿ ಲಿಯಾನ್ಸ್-ಬರ್ಗರ್ಸ್ & ವಿಂಗ್ಸ್, ಹಾರ್ಲಿಸ್ ಫೈನ್ ಬೇಕಿಂಗ್, ಶರೀಫ್ ಭಾಯ್ ಬಿರಿಯಾನಿ, ಗ್ಲಾಡಿಯಾ ಬ್ರೂವರಿ & ಕಿಚನ್ ಹಾಗೂ ಐರನ್ ಹಿಲ್ ಬೆಂಗಳೂರು ಆಯ್ಕೆಯಾಗಿವೆ.

ರಾಷ್ಟ್ರಮಟ್ಟದಲ್ಲಿ ಒಟ್ಟು 7.02 ಲಕ್ಷ ಮತಗಳನ್ನು ಪಡೆಯುವ ಮೂಲಕ 'ಬಿರಿಯಾನಿ' ಮತ್ತೊಮ್ಮೆ ಅತಿ ಜನಪ್ರಿಯ ಖಾದ್ಯವಾಗಿ ಹೊರಹೊಮ್ಮಿದೆ. ಇದರ ನಂತರದ ಸ್ಥಾನಗಳನ್ನು ಪಿಜ್ಜಾ, ನಾರ್ತ್ ಇಂಡಿಯನ್, ಬರ್ಗರ್ ಮತ್ತು ಚೈನೀಸ್ ಖಾದ್ಯಗಳು ಪಡೆದುಕೊಂಡಿವೆ.

ಈ ಬಾರಿಯ ಪ್ರಶಸ್ತಿ ಸಮಾರಂಭಕ್ಕಾಗಿ ದೇಶಾದ್ಯಂತ ಒಟ್ಟು 6.43 ಲಕ್ಷ ವಿಶಿಷ್ಟ ಗ್ರಾಹಕರು ಬರೋಬ್ಬರಿ 1.3 ಕೋಟಿಗೂ ಅಧಿಕ ಮತಗಳನ್ನು ಚಲಾಯಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.2 ಪಟ್ಟು ಹೆಚ್ಚಿನ ಮತದಾನ ದಾಖಲಾಗಿದೆ.

ಈ ಕುರಿತು ಮಾತನಾಡಿರುವ ಸ್ವಿಗ್ಗಿ ಫುಡ್ ಮಾರ್ಕೆಟ್‌ಪ್ಲೇಸ್‌ನ ಮುಖ್ಯ ವ್ಯಾಪಾರ ಅಧಿಕಾರಿ ಸಿದ್ಧಾರ್ಥ್ ಭಾಕೂ, ʻಭಾರತದ ಅತ್ಯಂತ ಕ್ರಿಯಾಶೀಲ ಆಹಾರ ಮಾರುಕಟ್ಟೆಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಇಲ್ಲಿನ ಗ್ರಾಹಕರು ತಮ್ಮ ಆಯ್ಕೆಗಳ ಮೂಲಕವೇ ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸುತ್ತಾರೆ. ಈ ಬಾರಿಯ ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್‌ನಲ್ಲಿ ಕಂಡುಬಂದಿರುವ ಬೃಹತ್ ಸ್ಪಂದನೆ, ಬೆಂಗಳೂರಿಗರಿಗೆ ಊಟದ ಮೇಲಿರುವ ಅಪಾರ ಪ್ರೀತಿಯನ್ನು ತೋರಿಸುತ್ತದೆ. ಹಳೆಯ ಐಕಾನಿಕ್ ಬ್ರ್ಯಾಂಡ್‌ಗಳಿಂದ ಹಿಡಿದು ಹೊಸ ತಲೆಮಾರಿನ ಫೇವರಿಟ್‌ಗಳವರೆಗೆ, ಬೆಂಗಳೂರಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಹೊಟೇಲ್‌ಗಳನ್ನು ಸನ್ಮಾನಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ," ಎಂದಿದ್ದಾರೆ.