ಆಂದ್ರ ಪ್ರದೇಶದ ಶ್ರೀಶೈಲಂನಲ್ಲಿ ಯುಗಾದಿ ಸಮಯದಲ್ಲಿ ನಡೆಯುವ ಮಲ್ಲಿಕಾರ್ಜುನ ರಥೋತ್ಸವಕ್ಕೆ ಸಾಕಷ್ಟು ಜನ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರ ಸಂಚಾರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಾರಿಗೆ ನಿಗಮ, ಕಲಬುರ್ಗಿ ವಿಭಾಗ -2ರಿಂದ ಜಾತ್ರಾ ವಿಶೇಷ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.

ಮಾರ್ಚ್‌ 20ರವರೆಗೂ ಜಾತ್ರಾ ವಿಶೇಷ ಬಸ್‌ಗಳ ಸಂಚಾರ

ಈ ಕುರಿತು ನಿಗಮದ ಅಧಿಕಾರಿಗಳು ಪ್ರಕಟನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಶೈಲಂ ಜಾತ್ರಾ ವಿಶೇಷ ಬಸ್‌ಗಳ ಸಂಚಾರವು ಮಾರ್ಚ್‌ 20ರವರೆಗೂ ಮುಂದುವರೆಯಲಿದೆ. ಕಲಬುರಗಿ ವಿಭಾಗ -2 ಸೇರಿ ಕೇಂದ್ರ ಬಸ್‌ ನಿಲ್ದಾಣ, ಆಳಂದ, ಜೇವರ್ಗಿಯಿಂದಲೂ ಬಸ್‌ ಸಂಚಾರ ವ್ಯವಸ್ಥೆ ಇರಲಿದೆ. ಭಕ್ತರ ಶ್ರೀಶೈಲಂ ಸಂಚಾರದ ಅನುಕೂಲಕ್ಕಾಗಿ ನಿಗಮ ವಿಶೇಷ ಬಸ್‌ ಸಂಚಾರವನ್ನು ಆರಂಭಿಸಿದೆ.

ಗಮನಿಸಿ

ಶ್ರೀಶೈಲಂಗೆ ಹೊರಡುವ 40-45 ಜನರ ಗುಂಪು ಒಂದು ಗ್ರಾಮದಲ್ಲಿದ್ದರೆ ಅಲ್ಲಿಂದಲೇ ನಿಗಮ ಬಸ್‌ ಸಂಚಾರ ಸೌಲಭ್ಯವನ್ನು ಒದಗಿಸುವುದಾಗಿ ನಿಗಮ ಮಾಹಿತಿ ನೀಡಿದೆ.

ದುಬೈ ಪ್ರಯಾಣ ಮುಂದೂಡಿ: ಏರ್‌ ಇಂಡಿಯಾ

ಬುಕಿಂಗ್‌ ಮತ್ತು ಹೆಚ್ಚಿನ ಮಾಹಿತಿಗಾಗಿ

ನಿಮ್ಮ ಶ್ರೀಶೈಲಂ ಯಾತ್ರೆಗೆ ಮುಂಗಡ ಬುಕಿಂಗ್‌ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಶಾರದಾದೇವಿ, ವಿಭಾಗೀಯ ಸಂಚಾರ ಅಧಿಕಾರಿ : 7760984086

ಮಲ್ಲಿಕಾರ್ಜುನ, ಕಲಬುರಗಿ ಕೇಂದ್ರ ಬಸ್‌ನಿಲ್ದಾಣದ ಅಧಿಕಾರಿ : 8147905972

ಯೋಗಿನಾಥ ಸರಸಂಬಿ, ಆಳಂದ ಘಟಕ : 7760992116

ಕೃಷ್ಣ ಪವಾರ್‌, ಜೇವರ್ಗಿ ಘಟಕ : 7760992118

ಅಮೀನಪ್ಪ ಭೋವಿ, ಅಫಜಲಪುರ ಘಟಕ : 7760992121