Wednesday, July 29, 2026
Wednesday, July 29, 2026

ಮೊದಲ ಟ್ರಾವೆಲೇಟರ್‌ ಹೊಂದಿದ ಸ್ಕೈವಾಕ್ ಶೀಘ್ರದಲ್ಲೇ ಲೋಕಾರ್ಪಣೆ

ಮುಂಬಯಿ ನಗರದ ಮಹಾಲಕ್ಷ್ಮೀ ಪ್ರದೇಶದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಟ್ರಾವೆಲೇಟರ್‌ (ಚಲಿಸುವ ಪಾದಚಾರಿ ಮಾರ್ಗ) ಹೊಂದಿದ ಸ್ಕೈವಾಕ್‌ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ತೆರೆಯಲಾಗುತ್ತಿದೆ.

ಮುಂಬಯಿ ನಗರದ ಮಹಾಲಕ್ಷ್ಮೀ ಪ್ರದೇಶದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಟ್ರಾವೆಲೇಟರ್‌ (ಚಲಿಸುವ ಪಾದಚಾರಿ ಮಾರ್ಗ) ಹೊಂದಿದ ಸ್ಕೈವಾಕ್‌ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ತೆರೆಯಲಾಗುತ್ತಿದೆ. ಸುಮಾರು 283 ಮೀಟರ್ ಉದ್ದ ಮತ್ತು 11 ಮೀಟರ್ ಅಗಲದ ಈ ಅತ್ಯಾಧುನಿಕ ಸ್ಕೈವಾಕ್‌ನಲ್ಲಿ ಆರು ಟ್ರಾವೆಲೇಟರ್‌ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರು ಮೆಟ್ರೋ, ಮೊನೊರೈಲು ಹಾಗೂ ಉಪನಗರ ರೈಲು ಸೇವೆಗಳ ನಡುವೆ ಸುಲಭವಾಗಿ ಸಂಚರಿಸಲು ಅನುಕೂಲವಾಗಲಿದೆ.

Untitled design - 2026-07-28T174432.294

ಮಹಾಲಕ್ಷ್ಮೀ ರೈಲು ನಿಲ್ದಾಣ, ಮುಂಬಯಿ ಮೆಟ್ರೋ-3 ಹಾಗೂ ಮೊನೊರೈಲು ಜಾಲವನ್ನು ಒಂದೇ ಸಂಪರ್ಕ ವ್ಯವಸ್ಥೆಯಡಿ ತರುವ ಉದ್ದೇಶದಿಂದ ಈ ಬಹುಮಾದರಿ ಸಂಪರ್ಕ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ಪ್ರಯಾಣಿಕರ ನಡೆದು ಹೋಗುವ ಸಮಯ ಕಡಿಮೆಯಾಗುವುದರ ಜತೆಗೆ, ಸಂಚಾರ ದಟ್ಟಣೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯೂ ಇಳಿಕೆಯಾಗಲಿದೆ.

ವಿಶೇಷವಾಗಿ ಹಿರಿಯ ನಾಗರಿಕರು, ದಿವ್ಯಾಂಗರು ಹಾಗೂ ಭಾರವಾದ ಸಾಮಾನುಗಳೊಂದಿಗೆ ಪ್ರಯಾಣಿಸುವವರಿಗೆ ಈ ಸ್ಕೈವಾಕ್ ಹೆಚ್ಚಿನ ಅನುಕೂಲ ಒದಗಿಸಲಿದೆ. ಮುಂಬಯಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಆಧುನಿಕ ಮತ್ತು ಸುಗಮಗೊಳಿಸುವ ಮಹತ್ವದ ಹೆಜ್ಜೆಯಾಗಿ ಈ ಯೋಜನೆಯನ್ನು ಪರಿಗಣಿಸಲಾಗಿದ್ದು, ದೇಶದ ಇತರ ಮಹಾನಗರಗಳಿಗೂ ಇದು ಮಾದರಿಯಾಗುವ ನಿರೀಕ್ಷೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!