Friday, April 3, 2026
Friday, April 3, 2026

ಭಾರತೀಯ ರೈಲ್ವೆಯ ಹೊಸ ಸಾಹಸಗಳು

ಭಾರತದ ರೈಲ್ವೆ ವ್ಯವಸ್ಥೆಯು ಹೈ-ಸ್ಪೀಡ್ ಬುಲೆಟ್ ರೈಲುಗಳಿಂದ ಹಿಡಿದು ವಿಮಾನ ನಿಲ್ದಾಣಗಳಂತೆಯೇ ಇರುವ ಆಧುನಿಕ ನಿಲ್ದಾಣಗಳವರೆಗೆ, ದೇಶವು ಲಕ್ಷಾಂತರ ಜನರ ದೈನಂದಿನ ಪ್ರಯಾಣದ ರೀತಿಯನ್ನೇ ಬದಲಿಸುತ್ತಿದೆ.

ಭಾರತದ ಮೊದಲ ಹೈ-ಸ್ಪೀಡ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ. ಇದರ ಯಶಸ್ಸಿನ ನಂತರ, ಸರಕಾರವು ದೇಶದಾದ್ಯಂತ ಇನ್ನೂ ಏಳು ಹೊಸ ಹೈ-ಸ್ಪೀಡ್ ಕಾರಿಡಾರ್‌ಗಳನ್ನು ಘೋಷಿಸಿದೆ. ಈ ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಗುರಿ ಹೊಂದಿದ್ದು, ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿವೆ.

ಭಾರತ ಎಕ್ಸ್‌ಪ್ರೆಸ್ ರೈಲುಗಳನ್ನು ಆಧುನಿಕ ವಂದೇ ಭಾರತ್ ರೈಲುಗಳ ಮೂಲಕ ಹಂತಹಂತವಾಗಿ ಬದಲಾಯಿಸುತ್ತಿದೆ. ದೂರದ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರದಲ್ಲೇ ಬರಲಿದೆ. ಈ ರೈಲುಗಳು ಪ್ರಸ್ತುತ ಗಂಟೆಗೆ 160-180 ಕಿ.ಮೀ ವೇಗದಲ್ಲಿ ಚಲಿಸುತ್ತಿವೆ.

ಇದನ್ನೂ ಓದಿ: ಅಮೃತ್ ಭಾರತ್, ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ

ಅಲ್ಪಾವಧಿಯ ಮತ್ತು ಸ್ವಲ್ಪ ದೂರದ ಪ್ರಯಾಣಕ್ಕಾಗಿ ನಮೋ ಭಾರತ್ ರಾಪಿಡ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಸುರಕ್ಷತೆಗೆಂದು ಕವಚ ಎಂಬ ಆಧುನಿಕ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದನ್ನು 44,000 ಕಿ.ಮೀ ರೈಲು ಮಾರ್ಗಗಳಲ್ಲಿ ಅಳವಡಿಸುವ ಯೊಜನೆಯನ್ನು ಸರಕಾರ ಹೊಂದಿದೆ.

ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಮರು ಅಭಿವೃದ್ಧಿಪಡಿಸಲಾಗುತ್ತಿದೆ. 2030ರ ವೇಳೆಗೆ ಸಂಪೂರ್ಣ ರೈಲು ಸಂಪರ್ಕದ ಜಾಲವನ್ನು ವಿದ್ಯುದ್ದೀಕರಣ ಮಾಡುವ ಗುರಿಯನ್ನು ಹೊಂದಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ