Sunday, December 28, 2025
Sunday, December 28, 2025

ಘಾಟಿ ಈಶಾ ಫೌಂಡೇಷನ್‌ಗೆ ಬಿಎಂಟಿಸಿ ಬಸ್‌: ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಪ್ರವಾಸಿಗರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಪ್ರವಾಸಿ ಪ್ಯಾಕೇಜ್ ಘೋಷಿಸಿದ್ದು, ಒಂದು ದಿನದ ಪ್ರವಾಸಿ ಪ್ಯಾಕೇಜ್ ನಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿದೆ. ಬನಶಂಕರಿಯಿಂದ ನೇರವಾಗಿ ಈಶಾಗೆ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ ನಿಂದ ನೇರವಾಗಿ ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್‌ನ ಆದಿಯೋಗಿ ಶಿವನ ದೇಗುಲಕ್ಕೆ ಭೇಟಿ ನೀಡಬಯಸುವವರಿಗಿದು ಉತ್ತಮ ಆಯ್ಕೆ.

ಬೆಂಗಳೂರು: ನಗರದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಆರಂಭಿಸಲಾಗಿದ್ದ ದಿವ್ಯ ದರ್ಶನ ಟೂರ್ ಪ್ಯಾಕೇಜ್ ಮಾದರಿಯಲ್ಲಿ ಘಾಟಿ ಈಶಾ ಫೌಂಡೇಷನ್ ಹೆಸರಿನಡಿ ವಾರಾಂತ್ಯದ ದಿನ, ಸರಕಾರಿ ರಜೆಗಳಂದು ಆರಂಭಿಸಲಾದ ನಾನ್ ಏಸಿ ಬಸ್‌ ಪ್ರವಾಸಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಬೆಂಗಳೂರಿನ ಸುತ್ತಮುತ್ತಲಿನ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಬಿಎಂಟಿಸಿ ಈ ಪ್ರವಾಸಿ ಪ್ಯಾಕೇಜ್ ಘೋಷಿಸಿದ್ದು, ಒಂದು ದಿನದ ಪ್ರವಾಸಿ ಪ್ಯಾಕೇಜ್ ನಲ್ಲಿ ಬನಶಂಕರಿಯಿಂದ ನೇರವಾಗಿ ಈಶಾಗೆ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ ನಿಂದ ನೇರವಾಗಿ ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್‌ನ ಆದಿಯೋಗಿ ಶಿವನ ದೇಗುಲಕ್ಕೆ ಕರೆದೊಯ್ಯಲಿವೆ.

temple tour bmtc

ಬಿಎಂಟಿಸಿ ವೇಗದೂತ ಸೇವೆಗಳು ಹಾಗೂ ಘಾಟಿ ಈಶ ಪ್ರವಾಸದಡಿಯಲ್ಲಿ ಫೌಂಡೇಷನ್ ಪ್ಯಾಕೇಜ್ ಪರಿಚಯಿಸಲಾಗುತ್ತಿರುವ ನೂತನ ಮಾರ್ಗದ ಲೋಕಾರ್ಪಣೆಗೆ ಚಾಲನೆ ನೀಡಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತಾವಲಂಬಿತರಿಗೆ 1.5 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್‌ನ್ನು ವಿತರಿಸಿದ್ದೇವೆ. ಬಿಎಂಟಿಸಿ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಅನುಕೂಲಕ್ಕೆ ಪ್ರವಾಸಿ ಸ್ಥಳಗಳಿಗೆ ಟೂರ್ ಪ್ಯಾಕೇಜ್ ಘೋಷಿಸಿದೆ ಎಂದರು.

ಟೂರ್ ಪ್ಯಾಕೇಜ್ ದರ, ಸಮಯ ನಿಲ್ದಾಣಗಳು:

ಈಶಾ ಫೌಂಡೇಶನ್‌ಗೆ ಜೂನ್ 21ರಿಂದ ತ ಹೆಚ್ಚುವರಿ ಬಸ್ ಸೇವೆ ಲಭ್ಯವಾಗಲಿದ್ದು, ಇದರಲ್ಲಿ ಕೆಲವು ಧಾರ್ಮಿಕ ಸ್ಥಳಗಳು ಒಳಗೊಂಡಿದೆ. ಕೆಂಪೇಗೌಡ ಮೆಜೆಸ್ಟಿಕ್ ನಿಂದ ಬಸ್ ಬೆಳಗ್ಗೆ 9ಕ್ಕೆ ಸಂಚಾರ ಆರಂಭವಾಗುತ್ತದೆ. ಅಲ್ಲಿಂದ ಶ್ರೀ ನೇದಾಲಂಜ ನೇಯ ಸ್ವಾಮಿ ದೇವಸ್ಥಾನ, ನಂತರ ಶ್ರೀಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಜ್ಞಾನತೀರ್ಥ ಲಿಂಗ (ಮುದ್ದೇನಹಳ್ಳಿ), ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಮಿ ಮಠ (ಸ್ಕಂದಗಿರಿ), ಅಲ್ಲಿಂದ ಕಲ್ಯಾಣಿ (ಕಾರಂಜಿ) ಮುಂದೆ ಈಶಾ ಫೌಂಡೇಶನ್‌ ತಲುಪಲಾಗುತ್ತದೆ. ಮರಳಿ ರಾತ್ರಿ 9 ಗಂಟೆಗೆ ಪ್ರವಾಸಿ ಬಸ್ ಮೆಜೆಸ್ಟಿಕ್ ಬಂದು ತಲುಪುತ್ತದೆ. ಒಬ್ಬ ಪ್ರವಾಸಿಗೆ ಟಿಕೆಟ್ 600 ರುಪಾಯಿ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಮುಂಗಡ ಕಾಯ್ದಿರಿಸಲು ನೀವು www.ksrtc.in ಹಾಗೂ https://bit.ly/4ebRVmr ಅಧಿಕೃತ ಜಾಲ ತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..