Friday, April 3, 2026
Friday, April 3, 2026

ಮಹಾರಾಷ್ಟ್ರ ಸಾಹಸ ಪ್ರವಾಸೋದ್ಯಮ ನೀತಿ

ಸಾಹಸ ಕ್ರೀಡೆಗಳ ಹೆಸರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮತ್ತು ಪ್ರವಾಸಿಗರ ಪ್ರಾಣ ರಕ್ಷಣೆಗೆ ಮಹಾರಾಷ್ಟ್ರ ಸರಕಾರದ ಈ 'ಸೇಫ್ಟಿ ಸರ್ಟಿಫಿಕೇಶನ್' ಅಭಿಯಾನವು ಅತ್ಯಂತ ಪರಿಣಾಮಕಾರಿ.

ಮಹಾರಾಷ್ಟ್ರ ಸರಕಾರವು ಜಾರಿಗೆ ತಂದಿರುವ ಸಾಹಸ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ಇದುವರೆಗೆ ರಾಜ್ಯಾದ್ಯಂತ ಒಟ್ಟು 692 ಸಾಹಸ ಪ್ರವಾಸೋದ್ಯಮ ಆಪರೇಟರ್‌ಗಳು ಅಧಿಕೃತವಾಗಿ ನೋಂದಾಯಿಸಿಕೊಂಡು ಸರಕಾರದ ಅನುಮೋದನೆ ಪಡೆದಿದ್ದಾರೆ.

ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಪ್ರವಾಸಿಗರ ಸುರಕ್ಷತೆ ಈ ನೀತಿಯ ಉದ್ದೇಶವಾಗಿದ್ದು, ಆಪರೇಟರ್‌ಗಳು ಕಟ್ಟುನಿಟ್ಟಾದ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭೋಪಾಲ್‌ನಲ್ಲಿ ಅಡ್ವೆಂಚರ್ ಪ್ರವಾಸೋದ್ಯಮ ಸುರಕ್ಷತೆಗೆ ತರಬೇತಿ

ಚಾರಣ, ಪರ್ವತಾರೋಹಣ, ಸೈಕ್ಲಿಂಗ್, ವೈಟ್ ವಾಟರ್ ರಾಫ್ಟಿಂಗ್, ಸ್ಕೂಬಾ ಡೈವಿಂಗ್, ಕಯಾಕಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಹಾಟ್ ಏರ್ ಬಲೂನ್ ರೈಡ್‌ಗಳು ಸೇರಿದಂತೆ ಹಲವು ಸಾಹಸ ಚಟುವಟಿಕೆಗಳಿಗೆ ಈ ನೀತಿ ಜಾರಿ ಮಾಡಲಾಗಿದೆ.

ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯು ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಆನ್‌ಲೈನ್ ಪೋರ್ಟಲ್ ಪರಿಚಯಿಸಿದೆ. ಆಪರೇಟರ್‌ಗಳು ತಮ್ಮ ತರಬೇತಿ ಪಡೆದ ಸಿಬ್ಬಂದಿ, ಉಪಕರಣಗಳ ಗುಣಮಟ್ಟ ಮತ್ತು ವಿಮಾ ಸೌಲಭ್ಯಗಳ ವಿವರಗಳನ್ನು ಒದಗಿಸಿದ ನಂತರವೇ ಈ ಮಾನ್ಯತೆಯನ್ನು ನೀಡಲಾಗುತ್ತದೆ. ಪ್ರತಿ ಆಪರೇಟರ್ ಪ್ರತಿ ಎರಡು ವರ್ಷಕ್ಕೊಮ್ಮೆ ತಮ್ಮ ಪರವಾನಗಿಯನ್ನು ಅಪ್ಡೇಟ್ ಮಾಡಬೇಕಾಗುತ್ತದೆ.

ಪ್ರವಾಸಿಗರು ಯಾವುದೇ ಸಾಹಸ ಚಟುವಟಿಕೆಯನ್ನು ಕೈಗೊಳ್ಳುವ ಮೊದಲು, ಆಯಾ ಆಪರೇಟರ್ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದಿದ್ದಾರೆಯೇ ಎಂದು ಪರಿಶೀಲಿಸುವಂತೆ ಸರಕಾರ ಸೂಚಿಸಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!