Tuesday, October 6, 2026
Tuesday, October 6, 2026

‘ixigo for work’ ಆರಂಭಿಸಿದ ixigo

ವ್ಯವಹಾರ ಪ್ರವಾಸವನ್ನು ಸುಲಭಗೊಳಿಸಲು ixigo ‘ixigo for work’ ಎಂಬ ಹೊಸ ವೈಶಿಷ್ಟ್ಯವನ್ನು ಆರಂಭಿಸಿದೆ. ಇದರ ಮೂಲಕ ಪ್ರತ್ಯೇಕ ಬ್ಯುಸಿನೆಸ್ ಖಾತೆಯ ಅಗತ್ಯವಿಲ್ಲದೆ ದೇಶೀಯ ವಿಮಾನಗಳ ಕಾರ್ಪೊರೇಟ್ ದರಗಳನ್ನು ಸಾಮಾನ್ಯ ದರಗಳೊಂದಿಗೆ ಹೋಲಿಸಿ ಬುಕಿಂಗ್ ಮಾಡಬಹುದು. ಕಡಿಮೆ ರದ್ದತಿ ಶುಲ್ಕ, ಉಚಿತ ಸೀಟ್ ಆಯ್ಕೆ, ಊಟ ಹಾಗೂ GSTIN ದಾಖಲಿಸುವ ಸೌಲಭ್ಯವೂ ಇದರಲ್ಲಿ ಲಭ್ಯವಿದೆ.

ವ್ಯವಹಾರ ಪ್ರವಾಸ ಕೈಗೊಳ್ಳುವವರಿಗೆ ವಿಮಾನ ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ixigo ‘ixigo for work’ ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ixigo ಆ್ಯಪ್‌ನಲ್ಲೇ ಲಭ್ಯವಿರುವ ಈ ವೈಶಿಷ್ಟ್ಯದ ಮೂಲಕ ಪ್ರತ್ಯೇಕ ಬ್ಯುಸಿನೆಸ್ ಖಾತೆ ತೆರೆಯುವ ಅಗತ್ಯವಿಲ್ಲದೆ ದೇಶೀಯ ವಿಮಾನಗಳ ಅರ್ಹ ಕಾರ್ಪೊರೇಟ್ ದರಗಳನ್ನು ಬಳಕೆದಾರರು ಪಡೆಯಬಹುದು.

ದೇಶೀಯ ವಿಮಾನಗಳಿಗಾಗಿ ಹುಡುಕಾಟ ಆರಂಭಿಸುವ ಮುನ್ನ ‘ixigo for work’ ಅನ್ನು ಸಕ್ರಿಯಗೊಳಿಸಬಹುದು. ಬಳಿಕ ಅರ್ಹ ಕಾರ್ಪೊರೇಟ್ ದರಗಳನ್ನು ಸಾಮಾನ್ಯ ದರಗಳೊಂದಿಗೆ ಒಂದೇ ಬುಕಿಂಗ್ ಇಂಟರ್‌ಫೇಸ್‌ನಲ್ಲಿ ಹೋಲಿಕೆ ಮಾಡಿ ಆಯ್ಕೆ ಮಾಡಬಹುದಾಗಿದೆ. ಕಾರ್ಪೊರೇಟ್ ದರಗಳಲ್ಲಿ ಕಡಿಮೆ ರದ್ದತಿ ಮತ್ತು ಮರುನಿಗದಿಪಡಿಸುವ ಶುಲ್ಕ, ಉಚಿತ ಸೀಟ್ ಆಯ್ಕೆ ಹಾಗೂ ಊಟದಂಥ ಪ್ರಯೋಜನಗಳು ದೊರೆಯುತ್ತವೆ.

ಇದಲ್ಲದೆ, ಬಳಕೆದಾರರು ತಮ್ಮ ಕಂಪನಿಯ GSTIN ಅನ್ನು ixigo ಆ್ಯಪ್‌ನಲ್ಲಿ ಉಳಿಸಿಕೊಳ್ಳಬಹುದು. ಇದರಿಂದ ಅನ್ವಯವಾಗುವ GST ಇನ್‌ಪುಟ್ ಕ್ರೆಡಿಟ್ ಪಡೆಯಲು ಅನುಕೂಲವಾಗಲಿದೆ. ಬುಕಿಂಗ್ ಸಂದರ್ಭದಲ್ಲಿ ‘Assured’ ಸೌಲಭ್ಯವನ್ನೂ ಆಯ್ಕೆ ಮಾಡಬಹುದಾಗಿದ್ದು, ರದ್ದತಿಯ ಸಂದರ್ಭದಲ್ಲಿ ತಕ್ಷಣ ಪೂರ್ಣ ಮರುಪಾವತಿ ಸೇರಿದಂತೆ ಪ್ರಯಾಣ ವಿಮೆ, ವಿಮಾನ ನಿಲ್ದಾಣ ಕ್ಯಾಬ್ ಮತ್ತು ವಿಮಾನ ವಿಳಂಬ ರಕ್ಷಣೆಯಂಥ ಸೇವೆಗಳನ್ನು ಪಡೆಯಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!