Friday, May 22, 2026
Friday, May 22, 2026

ಐಆರ್‌ಸಿಟಿಸಿ ವಿಮಾನ ಪ್ರವಾಸ ಪ್ಯಾಕೇಜ್‌

ಈ ಪ್ರವಾಸ ಪ್ಯಾಕೇಜುಗಳಲ್ಲಿ ಆರ್ಥಿಕ ವರ್ಗದ ವಿಮಾನ ಟಿಕೆಟ್‌ಗಳು, 3-ಸ್ಟಾರ್ ಹೊಟೇಲ್‌ಗಳಲ್ಲಿ ವಸತಿ, ಪ್ರವಾಸ ಸ್ಥಳಗಳ ವೀಕ್ಷಣೆ ಹಾಗೂ ವಾಹನ ವ್ಯವಸ್ಥೆ, ಊಟ, ಪ್ರವೇಶ ಶುಲ್ಕ, ಪ್ರವಾಸ ವಿಮೆ, ಸ್ಥಳೀಯ ಪ್ರವಾಸ ಮಾರ್ಗದರ್ಶಕರ ಸೇವೆ ಮತ್ತು ಅನ್ವಯಿಸುವ ತೆರಿಗೆಗಳು ಒಳಗೊಂಡಿರುತ್ತವೆ ಎಂದು ಐಆರ್‌ಸಿಟಿಸಿ ಪ್ರವಾಸೋದ್ಯಮ ವ್ಯವಸ್ಥಾಪಕರು ಮಾಲತಿ ರಥಿನಂ ತಿಳಿಸಿದ್ದಾರೆ.

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್‌ಸಿಟಿಸಿ), ರೈಲ್ವೆ ಸಚಿವಾಲಯ, ಭಾರತ ಸರಕಾರದ ಅಧೀನದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಪ್ರಯಾಣಿಕರ ಅನುಕೂಲತೆ, ಆರಾಮ ಮತ್ತು ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರುದಿಂದ ವಿವಿಧ ವಿಮಾನ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸುತ್ತಿದೆ.

ಇದೇ ಜುಲೈ 29ರಂದು ಹಾಗೂ ಆಗಸ್ಟ್‌12ರಂದು 4 ರಾತ್ರಿ / 5 ದಿನಗಳ ಭಕ್ತಿಪರ ಯಾತ್ರಾ ಪ್ರವಾಸವನ್ನು ಹಮ್ಮಿಕೊಂಡಿದ್ದು, ಐಆರ್‌ಸಿಟಿಸಿ ಯ ಮೂಲಕ ಅಯೋಧ್ಯಾ, ಕಾಶಿ (ವಾರಾಣಸಿ), ಪ್ರಯಾಗರಾಜ್ ಮತ್ತು ಗಯಾ ಸೇರಿದಂತೆ ಪವಿತ್ರ ಕ್ಷೇತ್ರಗಳ ಆಧ್ಯಾತ್ಮಿಕ ಯಾತ್ರೆಯನ್ನು ಆಯೋಜಿಸಿದೆ. ಪ್ರತಿ ವ್ಯಕ್ತಿಗೆ 31,900 ರು.ನಿಂದ ಪ್ಯಾಕೇಜ್‌ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಭಾರತ್ ಗೌರವ್‌ನಿಂದ ದಕ್ಷಿಣದ ದೇಗುಲಗಳ ದರ್ಶನ

ಐಆರ್‌ಸಿಟಿಸಿ ಯ ಪವಿತ್ರ ಚಾರ್ ಧಾಮ್ ಯಾತ್ರೆಯಲ್ಲಿ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದ್ರಿನಾಥ, ದೇವಪ್ರಯಾಗ ಹಾಗೂ ಋಷಿಕೇಶ ಸ್ಥಳಗಳನ್ನು ಭೇಟಿ ಮಾಡುವ ಅವಕಾಶ ಲಭ್ಯವಿದೆ. ಬೆಂಗಳೂರಿನಿಂದ ಜೂನ್‌02ರಂದು ಪ್ರಾರಂಭವಾಗುವ ಈ ಯಾತ್ರೆಯು 12 ರಾತ್ರಿ / 13 ದಿನಗಳ ಸಮಗ್ರ ಧಾರ್ಮಿಕ ಪ್ರವಾಸವಾಗಿದೆ. ಪ್ಯಾಕೇಜ್ ಶುಲ್ಕ ಪ್ರತಿ ವ್ಯಕ್ತಿಗೆ 65,900 ರು. ನಿಂದ ಆರಂಭವಾಗುತ್ತದೆ.

Untitled design (31)

ಲಡಾಖ್‌ನ ಮನೋಹರ ಮತ್ತು ಅದ್ಭುತ ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಐಆರ್‌ಸಿಟಿಸಿ ಆಗಸ್ಟ್‌12ರಂದು ವಿಶೇಷ ವಿಮಾನ ಪ್ರವಾಸ ಪ್ಯಾಕೇಜ್ ಅನ್ನು ರೂಪಿಸಿದೆ. 6 ರಾತ್ರಿ / 7 ದಿನಗಳ ಈ ಪ್ರವಾಸವು ಲೇಹ್ ನಗರ, ಶ್ಯಾಮ್ ಕಣಿವೆ, ನುಬ್ರಾ ಕಣಿವೆ, ತುರ್ತುಕ್ ಗ್ರಾಮ ಹಾಗೂ ಪ್ಯಾಂಗಾಂಗ್ ಸರೋವರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಪ್ಯಾಕೇಜ್ ಶುಲ್ಕ ಪ್ರತಿ ವ್ಯಕ್ತಿಗೆ 49,000 ರು.ನಿಂದ ಆರಂಭವಾಗಲಿದೆ. ಈ ಪ್ರವಾಸವು ಹಿಮಾಲಯ ಪರ್ವತ ಶ್ರೇಣಿಗಳ ವೈಭವ, ಪ್ರಕೃತಿ ವೈವಿಧ್ಯತೆ ಹಾಗೂ ಸ್ಥಳೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಅನುಭವಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.

ಡಾರ್ಜಿಲಿಂಗ್, ಗ್ಯಾಂಗ್ಟಾಕ್ ಮತ್ತು ಕಾಲಿಂಪಾಂಗ್ ಒಳಗೊಂಡ ಉತ್ತರ ಪೂರ್ವ ಭಾರತದ ಮನೋಹರ ಪ್ರವಾಸವನ್ನು ಅನುಭವಿಸಲು ಜೂನ್‌29ರಂದು ಐಆರ್‌ಸಿಟಿಸಿ ಅವಕಾಶ ಕಲ್ಪಿಸಿಕೊಟ್ಟಿದೆ. 5 ರಾತ್ರಿ / 6 ದಿನಗಳ ಈ ಪ್ರವಾಸವು ಹಿಮಾಲಯದ ಅದ್ಭುತ ದೃಶ್ಯಗಳು, ಚಹಾ ತೋಟಗಳು ಹಾಗೂ ಸುಂದರ ಹಿಲ್ ಸ್ಟೇಷನ್‌ಗಳ ಸೌಂದರ್ಯವನ್ನು ಪರಿಚಯಿಸುತ್ತದೆ. ಕುಟುಂಬ ಹಾಗೂ ಪ್ರಕೃತಿ ಪ್ರಿಯರಿಗೆ ಇದು ಅತ್ಯುತ್ತಮ ಪ್ರವಾಸವಾಗಿದ್ದು,
ಪ್ರತಿ ವ್ಯಕ್ತಿಗೆ 39,200 ರು. ವೆಚ್ಚವಾಗಲಿದೆ.

ಈ ಪ್ರವಾಸ ಪ್ಯಾಕೇಜುಗಳಲ್ಲಿ ಆರ್ಥಿಕ ವರ್ಗದ ವಿಮಾನ ಟಿಕೆಟ್‌ಗಳು, 3-ಸ್ಟಾರ್ ಹೊಟೇಲ್‌ಗಳಲ್ಲಿ ವಸತಿ, ಪ್ರವಾಸ ಸ್ಥಳಗಳ ವೀಕ್ಷಣೆ ಹಾಗೂ ವಾಹನ ವ್ಯವಸ್ಥೆ, ಊಟ, ಪ್ರವೇಶ ಶುಲ್ಕ, ಪ್ರವಾಸ ವಿಮೆ, ಸ್ಥಳೀಯ ಪ್ರವಾಸ ಮಾರ್ಗದರ್ಶಕರ ಸೇವೆ ಮತ್ತು ಅನ್ವಯಿಸುವ ತೆರಿಗೆಗಳು ಒಳಗೊಂಡಿರುತ್ತವೆ ಎಂದು ಐಆರ್‌ಸಿಟಿಸಿ ಪ್ರವಾಸೋದ್ಯಮ ವ್ಯವಸ್ಥಾಪಕರು ಮಾಲತಿ ರಥಿನಂ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಬುಕ್ಕಿಂಗ್‌ಗಾಗಿ ಐಆರ್‌ಸಿಟಿಸಿ ಅನ್ನು ಸಂಪರ್ಕಿಸಿ ಅಥವಾ www.irctctourism.com ಗೆ ಭೇಟಿ ನೀಡಿ.

ಐಆರ್‌ಸಿಟಿಸಿ ಸಂಪರ್ಕ ಸಂಖ್ಯೆ: 8595931290 / 8595931292 / 9003140699

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ