ಅಡಿಗಾಸ್ ಯಾತ್ರಾದಿಂದ ಹಿಮಾಚಲ ಪ್ರದೇಶ ಪ್ರವಾಸ
ಪ್ರವಾಸಿಗರ ಅನುಕೂಲಕ್ಕಾಗಿಯೇ ಅಡಿಗಾಸ್ ಯಾತ್ರಾದಿಂದ ವರ್ಷಪೂರ್ತಿ ಹಿಮಾಚಲ ಪ್ರದೇಶದ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಲಕ್ಸುರಿ, ಕಸ್ಟಮೈಸ್ಡ್ ಮತ್ತು ಸಸ್ಯಾಹಾರಿ ಊಟೋಪಚಾರಗಳೊಂದಿಗೆ ಗ್ರೂಪ್ ಟೂರ್‌ಗಳನ್ನೂ ಮಾಡಬಹುದು.
ನೀವು ಈ ಬಾರಿ ಬೇಸಗೆಯಲ್ಲಿ ತಂಪಾದ ಮತ್ತು ಪ್ರಕೃತಿ ಸೌಂದರ್ಯದ ತಾಣವನ್ನು ವೀಕ್ಷಿಸಲು ಬಯಸುತ್ತೀರಾ? ಹಾಗಾದರೆ ಹಿಮಾಚಲ ಪ್ರದೇಶ ನಿಮಗೆ ಸೂಕ್ತವಾದ ತಾಣ. ಪ್ರವಾಸಿಗರ ಅನುಕೂಲಕ್ಕಾಗಿಯೇ ಅಡಿಗಾಸ್ ಯಾತ್ರಾದಿಂದ ವರ್ಷಪೂರ್ತಿ ಹಿಮಾಚಲ ಪ್ರದೇಶದ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಲಕ್ಸುರಿ, ಕಸ್ಟಮೈಸ್ಡ್ ಮತ್ತು ಸಸ್ಯಾಹಾರಿ ಊಟೋಪಚಾರಗಳೊಂದಿಗೆ ಗ್ರೂಪ್ ಟೂರ್‌ಗಳನ್ನೂ ಮಾಡಬಹುದು.
ಹಿಮಾಚಲ ಪ್ರದೇಶದ ಶಿಮ್ಲಾದಿಂದ 20 ಕಿಲೋಮೀಟರ್ ದೂರದಲ್ಲಿ, ನಿಸರ್ಗ ರಮಣೀಯ, ಹಿಮಾಚ್ಛಾದಿತ ಕುರ್ಫಿ ಗುಡ್ಡಗಾಡು ಪ್ರದೇಶ ಪ್ರವಾಸಿಗರಿಗೆ ಬೇಸಗೆ ಕಾಲದ ಮೊದಲ ಆಯ್ಕೆಯಾಗಿರುತ್ತದೆ. ಇಲ್ಲಿ ಹಿಮಾಲಯದ ವನ್ಯಜೀವಿಗಳ ಮೃಗಾಲಯವೂ ಇದ್ದು, ಅಪರೂಪದ ಜಿಂಕೆಗಳು, ಬೆಕ್ಕುಗಳು, ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ!
ಹಿಮಾಚಲ ಪ್ರದೇಶದ ಬಿಯಾಸ್ ನದಿಯ ದಂಡೆಯಲ್ಲಿರುವ ಕುಲು ಪಟ್ಟಣ ಭುಂಟಾರ್ ಏರ್ ಪೋರ್ಟ್‌ನಿಂದ 10 ಕಿಲೋಮೀಟರ್ ದೂರದಲ್ಲಿದ್ದು, ಬಿಯಾಸ್ ನದಿಯು ಕುಲು ಮತ್ತು ಮನಾಲಿ ಕಣಿವೆಯ ನಡುವೆ ಹರಿಯುತ್ತದೆ. ಕುಲು ಕಣಿವೆಯು ದೇವಾಲಯ, ಪೈನ್ ಹಾಗೂ ದೇವದಾರು ವೃಕ್ಷಗಳಿಗೆ ಹೆಸರುವಾಸಿಯಾಗಿದೆ. ಕುಲುವಿಗೆ ಸಮೀಪದ ಮನಾಲಿ ಪಟ್ಟಣವು ಶಿಮ್ಲಾದಿಂದ 270 ಕಿಲೋಮೀಟರ್ ದೂರದಲ್ಲಿದ್ದು, ದಿಲ್ಲಿಯಿಂದ 544 ಕಿಲೋಮೀಟರ್ ದೂರದಲ್ಲಿದೆ.
ಇಲ್ಲಿನ ರೋಹ್ಟಾಂಗ್ ಪಾಸ್‌ನಲ್ಲಿ ಅಟಲ್ ಟನೆಲ್ ಪ್ರವಾಸಿಗರ ಆಕರ್ಷಣೆಯಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿರುವ ಈ ಸುರಂಗ ಮಾರ್ಗ 9 ಕಿಮೀ ಉದ್ದವಿದೆ. ರಾಷ್ಟ್ರೀಯ ಹೆದ್ದಾರಿ 3ರಲ್ಲಿದೆ. ಸಮುದ್ರ ಮಟ್ಟಕ್ಕಿಂತ 10,000 ಅಡಿ ಎತ್ತರದಲ್ಲಿರುವ ಅತಿ ಉದ್ದದ ಸಿಂಗಲ್ ಟ್ಯೂಬ್ ಟನೆಲ್ ಇದಾಗಿದ್ದು ಬೇಸಗೆಕಾಲ ಮುಗಿಯುವ ಮುನ್ನ ಇಲ್ಲಿಗೊಮ್ಮೆ ಭೇಟಿ ನೀಡಿ ಎನ್ನುತ್ತದೆ ಅಡಿಗಾಸ್ ಯಾತ್ರಾ ಸಂಸ್ಥೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ: 7975001525/ 7022259008 / 9449478944
Website: www. adigasyatra.com