Wednesday, September 2, 2026
Wednesday, September 2, 2026

ರೈಲ್ವೇಯಿಂದ 11 ದಿನಗಳ ‘ಗ್ರೀನ್ ಎಸ್ಕೇಪ್’ ಪ್ರವಾಸ ಪ್ಯಾಕೇಜ್

ಭಾರತೀಯ ರೈಲ್ವೇಯ ಪ್ರವಾಸೋದ್ಯಮ ವಿಭಾಗ IRCTC ‘ದಿ ಗ್ರೀನ್ ಎಸ್ಕೇಪ್-3 ಸ್ಟೇಟ್ಸ್, ಎಕ್ಸ್ ಗುವಾಹಟಿ’ ಎಂಬ 11 ದಿನ-10 ರಾತ್ರಿ ಪ್ರವಾಸ ಪ್ಯಾಕೇಜ್ ಘೋಷಿಸಿದೆ.

ಈಶಾನ್ಯ ಭಾರತದ ಪ್ರಕೃತಿ ಸೌಂದರ್ಯ, ವನ್ಯಜೀವಿ ಮತ್ತು ಪರ್ವತ ಪ್ರದೇಶಗಳನ್ನು ಒಂದೇ ಪ್ರವಾಸದಲ್ಲಿ ಅನುಭವಿಸಲು ಭಾರತೀಯ ರೈಲ್ವೇಯ ಪ್ರವಾಸೋದ್ಯಮ ವಿಭಾಗ IRCTC ‘ದಿ ಗ್ರೀನ್ ಎಸ್ಕೇಪ್-3 ಸ್ಟೇಟ್ಸ್, ಎಕ್ಸ್ ಗುವಾಹಟಿ’ ಎಂಬ 11 ದಿನ-10 ರಾತ್ರಿ ಪ್ರವಾಸ ಪ್ಯಾಕೇಜ್ ಘೋಷಿಸಿದೆ.

ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳನ್ನು ಒಳಗೊಂಡಿರುವ ಈ ಪ್ರವಾಸ ಗುವಾಹಟಿಯಿಂದ ಆರಂಭವಾಗುತ್ತದೆ. ಶಿಲ್ಲಾಂಗ್, ಚಿರಾಪುಂಜಿ, ಮಾವ್ಲಿನ್ನಾಂಗ್, ಡಾವ್ಕಿ, ಕಾಜಿರಂಗ, ದಿರಾಂಗ್ ಮತ್ತು ತವಾಂಗ್ ಪ್ರಮುಖ ತಾಣಗಳಾಗಿವೆ.

ಪ್ರವಾಸದಲ್ಲಿ ಕಾಮಾಖ್ಯಾ ದೇವಾಲಯ, ಉಮಿಯಂ ಸರೋವರ, ಎಲಿಫೆಂಟ್ ಫಾಲ್ಸ್, ನೊಹ್ಕಲಿಕೈ ಜಲಪಾತ, ಉಮಾಂಗೋಟ್ ನದಿ, ಸೇಲಾ ಪಾಸ್, ಜಸ್ವಂತ್ ಗಢ್ ಯುದ್ಧ ಸ್ಮಾರಕ, ಜಂಗ್ ಜಲಪಾತ ಮತ್ತು ತವಾಂಗ್ ಮಠಕ್ಕೆ ಭೇಟಿ ನೀಡಲಾಗುತ್ತದೆ. ತವಾಂಗ್‌ನಲ್ಲಿ ಸಂಗೇಸ್ಟರ್ ಸರೋವರ ಹಾಗೂ ಬುಮ್ಲಾ ಪಾಸ್ ಪ್ರವಾಸಕ್ಕೂ ಅವಕಾಶವಿದೆ.

ಪ್ಯಾಕೇಜ್ ದರ ವ್ಯಕ್ತಿಗೆ 49,170 ರು. ನಿಂದ ಆರಂಭವಾಗುತ್ತದೆ. ಹೊಟೇಲ್ ವಾಸ, ಉಪಾಹಾರ, ರಾತ್ರಿ ಊಟ, ಸ್ಥಳೀಯ ಸಾರಿಗೆ, ವೀಕ್ಷಣೆ, ವಿಮೆ, ಅಗತ್ಯ ಪರವಾನಗಿ ಮತ್ತು ಜಿಎಸ್‌ಟಿ ಒಳಗೊಂಡಿವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!