Friday, March 13, 2026
Friday, March 13, 2026

ಚಿತ್ರೋತ್ಸವದ ಜತೆ ಕೈ ಜೋಡಿಸಿದ ಗ್ರೀಕ್ ಟೂರಿಸಂ

ಒಂದು ಸಿನಿಮಾ ಚಿತ್ರೀಕರಣವಾದರೆ ಅಲ್ಲಿನ ಪ್ರವಾಸೋದ್ಯಮಕ್ಕೆ ಶಕ್ತಿ ಬರುತ್ತದೆ ಎನ್ನುವುದು ಗೊತ್ತಿರುವ ವಿಷಯ. ಈಗ ಗ್ರೀಕ್ ಟೂರಿಸಂ ಇಲಾಖೆ ಕೂಡ ಇದಕ್ಕೆ ಮುಂದಾಗಿದೆ.

ಗ್ರೀಕ್‌ ಪ್ರವಾಸೋದ್ಯಮ ಇಲಾಖೆ ಹಾಗೂ ಥೆಸ್ಸಲೊಂಕಿ ಅಂತಾರಾಷ್ಟ್ರೀಯ ಚಿತ್ರೋತ್ಸವ ಜತೆಗೂಡಿ ಗ್ರೀಸ್‌ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ಅದರ ಪ್ರಚಾರವನ್ನು ಹೆಚ್ಚಿಸುವ ಹೊಸ ಯೋಜನೆಗಳನ್ನು ರೂಪಿಸಿವೆ. ಗ್ರೀಸ್‌ ದೇಶವನ್ನು ಉನ್ನತ ಟ್ರಾವೆಲ್‌ ತಾಣಗಳನ್ನಾಗಿ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವ ಉದ್ದೇಶವಿದೆ. ಗ್ರೀಕ್‌ ಸಂಸ್ಕೃತಿ, ಸಿನಿಮಾ ಹಾಗೂ ಪ್ರವಾಸದ ಬಗ್ಗೆ ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಈ ವರ್ಷ ದೊಡ್ಡ ಮಟ್ಟದಲ್ಲಿ ತಲುಪುವ ಉದ್ದೇಶವಿದೆ.

ಕಳೆದ ವರ್ಷವೇ ಈ ಯೋಜನೆ ರೂಪುಗೊಂಡಿದ್ದು, ಈ ವರ್ಷ ಇದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈಗ ಆಗಿರುವ ಒಪ್ಪಂದದ ಪ್ರಕಾರ ಕಾನ್ಸ್‌, ವೆನಿಸ್‌, ಲೆಸ್‌ ಆರ್ಕ್ಸ್‌ ಸೇರಿದಂತೆ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಗ್ರೀಕ್‌ ದ್ವೀಪಗಳ ಬಗ್ಗೆ ಪ್ರಚಾರ ಕಾರ್ಯ ನಡೆಯಲಿದ್ದು, ಫಿಲ್ಮ್‌ ಮೇಕರ್ಸ್‌ ಹಾಗೂ ಪ್ರವಾಸಿಗರಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸ ಆಗಲಿದೆ. ಆರಂಭಿಕ ಹಂತದಲ್ಲಿ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಗುರಿಯಾಗಿಸಿಕೊಂಡು, ಹೆಚ್ಚು ಸಿನಿಮಾ ನಿರ್ಮಾಣ ಕೆಲಸಗಳು ಗ್ರೀಕ್‌ ತೀರಕ್ಕೆ ತರುವ ಯೋಜನೆ ರೂಪಿಸಲಾಗಿದೆ. ತಮ್ಮಲ್ಲೂ ಅದ್ಭುತ ದೃಶ್ಯಗಳನ್ನು ಚಿತ್ರಿಸಲು ಬೇಕಾದ ಸುಂದರ ಪರಿಸರವಿದೆ ಹಾಗೂ ಒಂದು ಸಿನಿಮಾ ನಿರ್ಮಾಣಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ತರಬಹುದಾದ ಸ್ಥಳಾವಕಾಶ ಹಾಗೂ ಸೌಲಭ್ಯಗಳು ಒದಗಿಸುವ ಶಕ್ತಿ ಇದೆ ಎನ್ನುವುದನ್ನು ಸಿನಿಕರ್ಮಿಗಳಿಗೆ ಮನದಟ್ಟು ಮಾಡಿಸುವ ಮೂಲಕ ಹೆಚ್ಚು ಸಿನಿಮಾ ನಿರ್ಮಾಣಗಳಿಗೆ ಅವಕಾಶ ನೀಡುವ ಗುರಿ ಹೊಂದಿದೆ.

ದುಬೈ ʼಬಂಗಾರದ ನಗರಿʼಯಾಗಿದ್ದು ಹೇಗೆ ಗೊತ್ತಾ?

ಸುಂದರ ಪರಿಸರದ ದೃಶ್ಯಗಳು ಒಂದೆಡೆಯಾದರೆ ಗ್ರೀಕ್‌ ಪ್ರವಾಸೋದ್ಯಮ ಇಲಾಖೆ ಅಲ್ಲಿನ ಪ್ರಸ್ತುತ ಸಂಸ್ಕೃತಿ ಹಾಗೂ ಕಲಾತ್ಮಕ ಕ್ರಿಯಾಶೀಲತೆಯನ್ನು ಕೂಡ ಜಾಗತಿಕ ಮಟ್ಟಕ್ಕೆ ಕರೆದೊಯ್ಯಬೇಕು ಎಂದು ಯೋಜನೆ ಹಾಕಿಕೊಂಡಿದೆ. ಈಗ ಥೆಸ್ಸಲೊಂಕಿ ಚಿತ್ರೋತ್ಸವದ ಜತೆ ಕೈ ಜೋಡಿಸಿರುವುದು ಈ ಹೆಜ್ಜೆಗೆ ಇನ್ನಷ್ಟು ಶಕ್ತಿ ನೀಡಲಿದೆ. ಚಲನಚಿತ್ರಗಳ ಜತೆಗೊಂದು ಭಾವನಾತ್ಮಕ ಸಂಬಂಧ ಬೆಸೆಯುತ್ತದೆ, ಅದು ಗ್ರೀಸ್‌ಗೆ ಬರುವ ಪ್ರವಾಸಿಗರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಪ್ರವಾಸಕ್ಕೆ ಬಂದಾಗ ಆ ಸ್ಥಳಗಳು ಇನ್ನಷ್ಟು ಆಪ್ತವಾಗುತ್ತವೆ ಎನ್ನುವುದು ಅವರ ನಂಬಿಕೆ. ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯಲಿರುವ ಯೂರೋಪ್‌ ಚಲನಚಿತ್ರೋತ್ಸವವನ್ನು ಗ್ರೀಕ್‌ ಸಾಂಸ್ಕೃತಿಕ ವಿಭಾಗ ಅಥೆನ್ಸ್‌ ಅಲ್ಲಿ ಆಯೋಜಿಸುತ್ತಿದೆ. ಈ ಕಾರ್ಯಕ್ರಮ ಯೂರೋಪಿಯನ್‌ ಚಿತ್ರರಂಗವನ್ನು ತನ್ನತ್ತ ಸೆಳೆದುಕೊಳ್ಳುವ ಅವಕಾಶ ಒದಗಿಸಿಕೊಡುತ್ತದೆ. ಇಂಥ ಪ್ರತಿಷ್ಠಿತ ಚಿತ್ರೋತ್ಸವಗಳ ಜತಗೆ ಕೈ ಜೋಡಿಸುವುದರಿಂದ ಗ್ರೀಕ್‌ ಹಲವು ದೊಡ್ಡ ಅವಕಾಶಗಳನ್ನು ಪಡೆಯಲಿವೆ.

ಈಗಾಗಲೇ ಡಿಜಿಟಲ್‌ ಪ್ರಚಾರ ಹಾಗೂ ಸ್ಥಳೀಯ ಸಾಂಸ್ಕೃತಿಕ ಸ್ಥಳಗಳನ್ನು ಪ್ರಚಾರ ಮಾಡುವ ಕಲಸ ಆರಂಭವಾಗಿದ್ದು, ಸರಿಯಾದ ರೀತಿಯಲ್ಲಿ ಮುಂದುವರಿದರೆ ಹೆಚ್ಚಿನ ಸಿನಿಮಾಗಳು ಚಿತ್ರೀಕರಣಕ್ಕೆ ಗ್ರೀಸ್‌ಗೆ ಬರಲು ಶುರು ಮಾಡಿದರೆ ಹೆಚ್ಚಿನ ಜಾಹೀರಾತು ಹಾಗೂ ಆದಾಯವನ್ನು ಪಡೆಯಬಹುದು ಎಂಬ ನಿರೀಕ್ಷೆ ಗ್ರೀಕ್‌ ಪ್ರವಾಸೋದ್ಯಮ ಇಲಾಖೆಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...