Wednesday, January 7, 2026
Wednesday, January 7, 2026

ಕೋಟಾ ಪ್ರವಾಸೋದ್ಯಮ ಉತ್ತೇಜನಕ್ಕೆ ಸರಕಾರ–ಖಾಸಗಿ ವಲಯ ಸಹಕಾರ

ಈ ಸಹಕಾರದ ಭಾಗವಾಗಿ ನಡೆದ ಕೋಟಾ–ಹಡೌಟಿ ಟ್ರಾವೆಲ್ ಮಾರ್ಟ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 600ಕ್ಕೂ ಹೆಚ್ಚು ಪ್ರವಾಸೋದ್ಯಮ ವೃತ್ತಿಪರರು, ಹೊಟೇಲ್ ಉದ್ಯಮಿಗಳು ಮತ್ತು ಟೂರ್ ಆಪರೇಟರ್‌ಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಚಂಬಲ್ ನದಿ ಕಣಿವೆ, ಪರಿಸರ ಸ್ನೇಹಿ ಜಲಕ್ರೀಡೆ, ನದೀತಟ ಪ್ರವಾಸ ಮಾರ್ಗಗಳು ಹಾಗೂ ಇತಿಹಾಸ ಪ್ರಸಿದ್ಧ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕುರಿತು ಚರ್ಚೆ ನಡೆಯಿತು.

ಕೋಚಿಂಗ್ ನಗರವಾಗಿ ಪ್ರಸಿದ್ಧವಾಗಿರುವ ಕೋಟಾವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ರಾಜ್ಯ ಸರಕಾರ ಮತ್ತು ಖಾಸಗಿ ವಲಯ ಒಟ್ಟಾಗಿ ಕೈಜೋಡಿಸಿವೆ. ಈ ಹಿನ್ನೆಲೆಯಲ್ಲಿ ಕೋಟಾ ಮತ್ತು ಹಡೌಟಿ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಲವು ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಹಕಾರದ ಭಾಗವಾಗಿ ನಡೆದ ಕೋಟಾ–ಹಡೌಟಿ ಟ್ರಾವೆಲ್ ಮಾರ್ಟ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 600ಕ್ಕೂ ಹೆಚ್ಚು ಪ್ರವಾಸೋದ್ಯಮ ವೃತ್ತಿಪರರು, ಹೊಟೇಲ್ ಉದ್ಯಮಿಗಳು ಮತ್ತು ಟೂರ್ ಆಪರೇಟರ್‌ಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಚಂಬಲ್ ನದಿ ಕಣಿವೆ, ಪರಿಸರ ಸ್ನೇಹಿ ಜಲಕ್ರೀಡೆ, ನದೀತಟ ಪ್ರವಾಸ ಮಾರ್ಗಗಳು ಹಾಗೂ ಇತಿಹಾಸ ಪ್ರಸಿದ್ಧ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕುರಿತು ಚರ್ಚೆ ನಡೆಯಿತು.

Beyond Coaching_ Kota Eyes Tourism Boost with Govt–Private Partnership

ಅಧಿಕಾರಿಗಳ ಪ್ರಕಾರ, ಕೋಟಾ ನಗರದ ಆರ್ಥಿಕತೆ ದೀರ್ಘಕಾಲದಿಂದ ಕೋಚಿಂಗ್ ಉದ್ಯಮದ ಮೇಲೆ ಅವಲಂಭಿತವಾಗಿರುವುದರಿಂದ, ಪ್ರವಾಸೋದ್ಯಮದ ಮೂಲಕ ಆರ್ಥಿಕ ವೈವಿಧ್ಯತೆ ತರಲು ಸರಕಾರ ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ, ನಗರದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸುಮಾರು 700 ಎಕರೆ ಭೂಮಿಯನ್ನು ಮೀಸಲಿಡಲಾಗಿದ್ದು, ಸುಮಾರು 25 ಹೊಸ ಹೊಟೇಲುಗಳು ನಿರ್ಮಾಣ ಹಂತದಲ್ಲಿವೆ.

ಇದೇ ವೇಳೆ, ಪರಿಸರ ತಜ್ಞರು ಚಂಬಲ್ ನದಿಯ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ನದಿಯ ಶುದ್ಧತೆ ಮತ್ತು ಜಲಸಂಪನ್ಮೂಲಗಳ ರಕ್ಷಣೆಯತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ. ಚಂಬಲ್ ನದಿ ಕೋಟಾ ಮತ್ತು ಹಡೌಟಿ ಪ್ರದೇಶದ ಪ್ರಮುಖ ಕುಡಿಯುವ ನೀರಿನ ಮೂಲವಾಗಿರುವುದರಿಂದ, ಸಮತೋಲನದ ಅಭಿವೃದ್ಧಿ ಅಗತ್ಯವೆಂದು ಅವರು ತಿಳಿಸಿದ್ದಾರೆ.

ಸರಕಾರ–ಖಾಸಗಿ ವಲಯದ ಈ ಸಹಕಾರದಿಂದ ಕೋಟಾ ನಗರವು ಮುಂದಿನ ದಿನಗಳಲ್ಲಿ ಕೋಚಿಂಗ್ ಜತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಹೊಸ ಗುರುತನ್ನು ಪಡೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!