ಗುಲ್ಮಾರ್ಗ್‌ನಲ್ಲಿ ಸುರಿಯುತ್ತಿರುವ ಮಂಜು; ಪ್ರವಾಸೋದ್ಯಮ ಚಟುವಟಿಕೆಗಳಿಗೆ ಚೈತನ್ಯ
ಮಂಜು ಬೀಳುತ್ತಿರುವ ಪರಿಣಾಮ ಸ್ಕೀಯಿಂಗ್ ಸೇರಿದಂತೆ ಚಳಿಗಾಲದ ಕ್ರೀಡೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಪ್ರವಾಸೋದ್ಯಮ ವಲಯದವರು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ನಿರೀಕ್ಷಿಸುತ್ತಿದ್ದಾರೆ. ಪ್ರವಾಸಿಗರು ಹಿಮದಲ್ಲಿ ಆಟವಾಡುವುದು, ಫೊಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ.
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರಸಿದ್ಧ ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿ ಅತಿಯಾಗಿ ಮಂಜು ಬೀಳುತ್ತಿದ್ದು, ವಿಂಟರ್ ಟೂರಿಸಂನ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಬಿಳಿ ಹಿಮದಿಂದ ಆವೃತಗೊಂಡ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಬಂದ ಪ್ರವಾಸಿಗರು ಹಿಮದ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.
ಮಂಜು ಬೀಳುತ್ತಿರುವ ಪರಿಣಾಮ ಸ್ಕೀಯಿಂಗ್ ಸೇರಿದಂತೆ ವಿಂಟರ್‌ನ ಕ್ರೀಡೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಪ್ರವಾಸೋದ್ಯಮ ವಲಯದವರು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ನಿರೀಕ್ಷಿಸುತ್ತಿದ್ದಾರೆ. ಪ್ರವಾಸಿಗರು ಹಿಮದಲ್ಲಿ ಆಟವಾಡುವುದು, ಫೊಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ.

ಪ್ರವಾಸೋದ್ಯಮ ಅಧಿಕಾರಿಗಳು, ಹವಾಮಾನ ಪರಿಸ್ಥಿತಿ ಪ್ರಸ್ತುತ ಪ್ರವಾಸಿಗರ ಸಂಚಾರಕ್ಕೆ ಅನುಕೂಲಕರವಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಹಿಮದ ಪ್ರದೇಶಗಳಲ್ಲಿ ಸಂಚರಿಸುವಾಗ ಮತ್ತು ಕ್ರೀಡೆಗಳಲ್ಲಿ ತೊಡಗುವಾಗ ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.
ಹಿಮಪಾತ ಮತ್ತು ಸ್ಕೀಯಿಂಗ್‌ಗೆ ಖ್ಯಾತಿಯುಳ್ಳ ಗುಲ್ಮರ್ಗ್, ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇತ್ತೀಚಿನ ಮಂಜಿನ ಹಿನ್ನೆಲೆಯಲ್ಲಿ ವಿಂಟರ್ ಟೂರಿಸಂಗೆ ಹೊಸ ಉತ್ತೇಜನ ದೊರಕಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.