ದೆಹಲಿ–ಪಾಟ್ನಾ: ಬುಲೆಟ್ ರೈಲು ಯೋಜನೆ ಪ್ರಸ್ತಾವ
ಭಾರತದ ಬುಲೆಟ್ ರೈಲು ಜಾಲವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ದೆಹಲಿ–ವಾರಾಣಸಿ–ಪಾಟ್ನಾ ಮಾರ್ಗವನ್ನು ಒಳಗೊಂಡ ಹೊಸ ಹೈಸ್ಪೀಡ್ ರೈಲು ಕಾರಿಡಾರ್ ಪ್ರಸ್ತಾಪಿಸಲಾಗಿದೆ.
ಭಾರತದ ಬುಲೆಟ್ ರೈಲು ಜಾಲವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ದೆಹಲಿ–ವಾರಾಣಸಿ–ಪಾಟ್ನಾ ಮಾರ್ಗವನ್ನು ಒಳಗೊಂಡ ಹೊಸ ಹೈಸ್ಪೀಡ್ ರೈಲು ಕಾರಿಡಾರ್ ಪ್ರಸ್ತಾಪಿಸಲಾಗಿದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಯೋಜನೆಯು ದೇಶದ ಎರಡನೆಯ ಬುಲೆಟ್ ರೈಲು ಕಾರಿಡಾರ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಯೋಜನೆ ಜಾರಿಗೆ ಬಂದರೆ ದೆಹಲಿಯಿಂದ ಪಾಟ್ನಾಗೆ ಪ್ರಯಾಣದ ಅವಧಿ ಸುಮಾರು 4.5 ಗಂಟೆಗಳಿಗೆ ಇಳಿಯಲಿದೆ.
ಈ ಮಾರ್ಗದಲ್ಲಿ ಪ್ರಮುಖ ನಗರಗಳ ನಡುವಿನ ಪ್ರಯಾಣವೂ ತ್ವರಿತವಾಗಲಿದೆ. ದೆಹಲಿಯಿಂದ ಆಗ್ರಾಗೆ ಕೇವಲ 58 ನಿಮಿಷಗಳಲ್ಲಿ ಮತ್ತು ವಾರಾಣಸಿಗೆ ಸುಮಾರು 3.5 ಗಂಟೆಗಳಲ್ಲಿ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಈ ನಗರಗಳ ನಡುವಿನ ರೈಲು ಪ್ರಯಾಣಕ್ಕೆ ಹೆಚ್ಚು ಸಮಯ ಬೇಕಾಗುವುದರಿಂದ ಹೊಸ ಹೈಸ್ಪೀಡ್ ಸಂಪರ್ಕ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ.
ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಜಪಾನ್‌ನ ಶಿಂಕಾನ್ಸೆನ್ ತಂತ್ರಜ್ಞಾನವನ್ನು ಆಧರಿಸಿದೆ. ಹೊಸ ಯೋಜನೆಯೂ ದೇಶದ ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ವೇಗಗೊಳಿಸುವ ಉದ್ದೇಶ ಹೊಂದಿದೆ.