Friday, September 4, 2026
Friday, September 4, 2026

ಬಿಇಎಂಎಲ್ ಪಾಲಿಗೆ ವಂದೇ ಭಾರತ್ ಗುತ್ತಿಗೆ

ದೇಶದಲ್ಲಿ ಆಧುನಿಕ ರೈಲು ಸಂಚಾರಕ್ಕೆ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಬಿಇಎಂಎಲ್ ಪಡೆದಿರುವ ಈ ಗುತ್ತಿಗೆಯು ಕಂಪೆನಿಯ ಆದಾಯ ಮತ್ತು ವ್ಯವಹಾರದ ಬೆಳವಣಿಗೆಗೆ ಹೆಚ್ಚಿನ ಬಲ ತುಂಬಲಿದೆ.

ಸಾರ್ವಜನಿಕ ವಲಯದ ಪ್ರಮುಖ ಎಂಜಿನಿಯರಿಂಗ್ ದಿಗ್ಗಜ ಹಾಗೂ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಬಿಇಎಂಎಲ್ ಲಿಮಿಟೆಡ್, ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ICF) ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಅಂದಾಜು 180.60 ಕೋಟಿ ರು. ಮೌಲ್ಯದ ಹೆಚ್ಚುವರಿ ಗುತ್ತಿಗೆಯನ್ನು ಪಡೆದುಕೊಂಡಿದೆ. ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಪ್ರೀಮಿಯಂ ಮತ್ತು ದೀರ್ಘ ದೂರದ ರಾತ್ರಿ ಪ್ರಯಾಣದ ರೈಲು ಯೋಜನೆಯಲ್ಲಿ ಬಿಇಎಂಎಲ್‌ನ ಪಾತ್ರವು ಮತ್ತಷ್ಟು ವಿಸ್ತರಣೆಯಾಗಿದೆ.

ಇದನ್ನೂ ಓದಿ: ವಂದೇ ಭಾರತ್ ಮೂಲಕ ಜೈಪುರಕ್ಕೆ ಪ್ರಯಾಣಿಸಿದ ನಿರ್ಮಲಾ ಸೀತಾರಾಮನ್

ಷೇರುಪೇತ್ರೆಗೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ICF) ಈ ಹೊಸ ಆರ್ಡರ್ ಲಭಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದ ವಂದೇ ಭಾರತ್ ಸ್ಲೀಪರ್ ಕೋಚ್‌ಗಳನ್ನು ಸಿದ್ಧಪಡಿಸಿ ಪೂರೈಸುವ ಜವಾಬ್ದಾರಿಯನ್ನು ಕಂಪನಿ ಹೊತ್ತಿದೆ. ಸಾಂಪ್ರದಾಯಿಕ ಚೇರ್-ಕಾರ್ ಆವೃತ್ತಿಗಳಿಂದ ಆಚೆಗೆ, ದೇಶಾದ್ಯಂತ ಹೈ-ಸ್ಪೀಡ್ ರೈಲು ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಕೈಗೊಂಡಿರುವ ಮುಂದಿನ ಪೀಳಿಗೆಯ ಹೆಜ್ಜೆಯಿದಾಗಿದೆ.

ದೇಶದಲ್ಲಿ ಆಧುನಿಕ ರೈಲು ಸಂಚಾರಕ್ಕೆ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಬಿಇಎಂಎಲ್ ಪಡೆದಿರುವ ಈ ಗುತ್ತಿಗೆಯು ಕಂಪೆನಿಯ ಆದಾಯ ಮತ್ತು ವ್ಯವಹಾರದ ಬೆಳವಣಿಗೆಗೆ ಹೆಚ್ಚಿನ ಬಲ ತುಂಬಲಿದೆ. ಇತ್ತೀಚೆಗಷ್ಟೇ ವಂದೇ ಭಾರತ್ ಸ್ಲೀಪರ್ ರೈಲುಗಳು 180 ಕಿಮೀ. ವೇಗದ ಹೈ-ಸ್ಪೀಡ್ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವುದು ಗಮನಾರ್ಹ. ದೀರ್ಘ ದೂರದ ಪ್ರಯಾಣಿಕರಿಗೆ ವಿಮಾನದಂಥ ಅತ್ಯಾಧುನಿಕ ಸೌಲಭ್ಯಗಳು ಮತ್ತು ವೇಗದ ಅನುಭವವನ್ನು ಒದಗಿಸುವ ಉದ್ದೇಶದಿಂದ ಈ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಪ್ರಮುಖ ಬೆಳವಣಿಗೆಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಬಿಇಎಂಎಲ್ ಷೇರುಗಳ ಬೆಲೆಯಲ್ಲಿ ಸಕಾರಾತ್ಮಕ ಚಲನೆ ಕಂಡುಬಂದಿದ್ದು, ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೆ ಮತ್ತು ಮೆಟ್ರೋ ವಿಭಾಗದಲ್ಲಿ ತನ್ನ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸಿಕೊಳ್ಳುತ್ತಿರುವ ಬಿಇಎಂಎಲ್, 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಭಾರತೀಯ ರೈಲ್ವೆಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ