Wednesday, October 7, 2026
Wednesday, October 7, 2026

ಬರಾಪುಲ್ಲಾ ಫ್ಲೈಓವರ್‌: ಸಂಚಾರ ಅವ್ಯವಸ್ಥೆ

12 ವರ್ಷಗಳ ವಿಳಂಬದ ಬಳಿಕ ಉದ್ಘಾಟನೆಯಾದ ಬರಾಪುಲ್ಲಾ ಫೇಸ್‌-3 ಫ್ಲೈಓವರ್‌ನಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಲೇನ್‌ಗಳ ವಿಲೀನ ವಿನ್ಯಾಸ ಮತ್ತು ತೀಕ್ಷ್ಣ ತಿರುವು ಪ್ರಮುಖ ಸಮಸ್ಯೆಯಾಗಿದ್ದು, ಹೊಸ ರಸ್ತೆಯ ಟ್ರಾಫಿಕ್‌ ಮಾಹಿತಿ ಗೂಗಲ್‌ ಮ್ಯಾಪ್ಸ್‌ನಲ್ಲಿ ತಡವಾಗಿ ಅಪ್‌ಡೇಟ್‌ ಆಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.

12 ವರ್ಷಗಳ ವಿಳಂಬದ ಬಳಿಕ ಸೆಪ್ಟೆಂಬರ್‌ 29ರಂದು ಉದ್ಘಾಟನೆಯಾದ ಬರಾಪುಲ್ಲಾ ಫೇಸ್‌-3 ಫ್ಲೈಓವರ್‌ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ದೆಹಲಿ ಸಂಚಾರ ಪೊಲೀಸರ ಪರಿಶೀಲನೆಯಲ್ಲಿ ವಿನ್ಯಾಸ ದೋಷ ಪ್ರಮುಖ ಸಮಸ್ಯೆಯಾಗಿ ಗುರುತಿಸಲಾಗಿದೆ. ಮಯೂರ್‌ ವಿಹಾರ್‌ನಿಂದ ಸರಾಯ್‌ ಕಾಲೆ ಖಾನ್‌ ಮೂಲಕ ಏಮ್ಸ್‌ವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಿಂದ ಪ್ರಯಾಣ ಸಮಯ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಉದ್ಘಾಟನೆಯ ಕೆಲವೇ ದಿನಗಳಲ್ಲಿ ಪ್ರಯಾಣಿಕರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ.

ಫ್ಲೈಓವರ್‌ನ ಎರಡು ಪ್ರಮುಖ ಸ್ಥಳಗಳಲ್ಲಿ ತಲಾ ಮೂರು ಲೇನ್‌ಗಳ ಎರಡು ರಸ್ತೆಗಳು ಒಂದೇ ಮೂರು ಲೇನ್‌ ರಸ್ತೆಗೆ ವಿಲೀನಗೊಳ್ಳುತ್ತವೆ. ಇದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಎರಡು ಬಾಟಲ್‌ನೆಕ್‌ಗಳು ನಿರ್ಮಾಣವಾಗಿವೆ. ಅಲ್ಲದೆ, ಸುಂಡಿಯಲ್‌ ಪಾರ್ಕ್‌ ಸಮೀಪದ ವಿಲೀನ ಸ್ಥಳದಲ್ಲಿ ರಸ್ತೆಯ ತಿರುವು ತೀಕ್ಷ್ಣವಾಗಿದ್ದು, ವಾಹನಗಳು ಸುಗಮವಾಗಿ ಸೇರುವುದಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ವಿನ್ಯಾಸವನ್ನು ಮರುರೂಪಿಸುವಂತೆ ಸಂಚಾರ ಪೊಲೀಸರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.

ಇದರ ಜತೆಗೆ ಹೊಸ ರಸ್ತೆಯ ಸಂಚಾರ ದಟ್ಟಣೆಯ ಮಾಹಿತಿಯನ್ನು ಗೂಗಲ್‌ ಮ್ಯಾಪ್ಸ್‌ನಲ್ಲಿ ತಕ್ಷಣ ತೋರಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೊಸ ರಸ್ತೆಯ ಸಂಚಾರ ಮಾಹಿತಿ ಅಪ್‌ಡೇಟ್‌ ಆಗಲು ಸುಮಾರು 15 ದಿನ ಬೇಕಾಗುತ್ತದೆ ಎಂದು ದೆಹಲಿ ಪಿಡಬ್ಲ್ಯುಡಿ ಸಚಿವ ಪರ್ವೇಶ್‌ ವರ್ಮಾ ತಿಳಿಸಿದ್ದಾರೆ. ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ವಾಹನ ಸವಾರರಿಗೆ ಸೂಚಿಸಿದ್ದಾರೆ. ಯೋಜನೆಯ ಪರಿಷ್ಕೃತ ವೆಚ್ಚ ಸುಮಾರು ರು.1,635 ಕೋಟಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!