ತ್ರಿಪುರಾದ ಚಾಬಿಮುರಾದಲ್ಲಿ ವಿಶ್ವ ದರ್ಜೆಯ ಪರಿಸರ ಪ್ರವಾಸೋದ್ಯಮ ಕೇಂದ್ರ
ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವಲ್ಲಿ ಸುಮಾರು ಶೇ. 35 ರಷ್ಟು ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಈ ವರ್ಷದೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ಈ ಯೋಜನೆಯು ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, ಪ್ರದೇಶದ ನೈಸರ್ಗಿಕ ಪರಿಸರ ಮತ್ತು ಶ್ರೀಮಂತ ಪುರಾತತ್ವ ಪರಂಪರೆಯ ರಕ್ಷಣೆಯ ಬಗೆಗೂ ಗಮನಹರಿಸಲಿದೆ ಎಂದು ಚೌಧರಿ ಹೇಳಿದರು
ತ್ರಿಪುರಾದ ಪ್ರಸಿದ್ಧ ತಾಣವಾದ ಚಾಬಿ ಮುರಾವನ್ನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಬೆಂಬಲದೊಂದಿಗೆ ವಿಶ್ವ ದರ್ಜೆಯ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಮಾಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸುಶಾಂತ ಚೌಧರಿ ತಿಳಿಸಿದ್ದಾರೆ. ಇದಕ್ಕಾಗಿ 60 ಕೋಟಿ ರುಪಾಯಿ ಹೂಡಿಕೆಯಾಗಲಿದೆ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವಲ್ಲಿ ಸುಮಾರು ಶೇ. 35 ರಷ್ಟು ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಈ ವರ್ಷದೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ಈ ಯೋಜನೆಯು ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, ಪ್ರದೇಶದ ನೈಸರ್ಗಿಕ ಪರಿಸರ ಮತ್ತು ಶ್ರೀಮಂತ ಪುರಾತತ್ವ ಪರಂಪರೆಯ ರಕ್ಷಣೆಯ ಬಗೆಗೂ ಗಮನಹರಿಸಲಿದೆ ಎಂದು ಚೌಧರಿ ಹೇಳಿದರು
ಈ ಅಭಿವೃದ್ಧಿ ಯೋಜನೆಯಲ್ಲಿ 26 ಪರಿಸರ ಸ್ನೇಹಿ ಮರದ ಗುಡಿಸಲುಗಳು, ಕೆಫೆಟೇರಿಯಾ, ಮಕ್ಕಳ ಆಟದ ಪ್ರದೇಶ, ಸುಸಜ್ಜಿತ ನಡಿಗೆ ಮಾರ್ಗಗಳು ಮತ್ತು ಇತರ ಸೌಲಭ್ಯಗಳ ನಿರ್ಮಾಣ ಸೇರಿಕೊಂಡಿವೆ. ಅಕ್ಟೋಬರ್ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ದೇಶ ವಿದೇಶಿ ಪ್ರವಾಸಗರನ್ನು ಇದು ಸೆಳೆಯಲಿದೆ.