• ಶೋಭಾ ಪುರೋಹಿತ್

ರಾಮೇಶ್ವರ ಹಿಂದೂಗಳ ಪವಿತ್ರ ಯಾತ್ರಾಸ್ಥಳ. ಇದು ಬಂಗಾಳ ಕೊಲ್ಲಿ ಸಾಗರದ ಪಂಬನ್ ದ್ಪೀಪದಲ್ಲಿದೆ. ಭಾರತದ ದಕ್ಷಿಣ ಭಾಗದಿಂದ ರಾಮೇಶ್ವರಕ್ಕೆ ಕಂಬಗಳ ಸಹಾಯದಿಂದ ಪಂಬನ್‌ ರಸ್ತೆ ನಿರ್ಮಿಸಲಾಗಿದೆ. ಇದಕ್ಕೆ ಸಮಾನಾಂತರವಾಗಿ ಸಮುದ್ರದಲ್ಲಿ 2 ಕಿಮೀ ಉದ್ದದ ಪಂಬನ್‌ ರೈಲು ಸೇತುವೆಯೂ ಇದೆ. ಇದು 19ನೆಯ ಶತಮಾನದಲ್ಲಿ ಶ್ರೀಲಂಕಾದೊಡನೆ ವ್ಯಾಪಾರಕ್ಕಾಗಿ ಬ್ರಿಟಿಷರು ನಿರ್ಮಿಸಿದ ಸೇತುವೆ. ಪಂಬನ್‌ ರಸ್ತೆ ಸೇತುವೆ ನಿರ್ಮಾಣವಾಗುವ ಮುಂಚೆ, ರಾಮೇಶ್ವರಕ್ಕೆ ಹೋಗುವ ಜನರು ಈ ಮಾರ್ಗದಲ್ಲೇ ಸಂಚರಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಸಂಪರ್ಕಕ್ಕಾಗಿ ಕಟ್ಟಿದ ಸೇತುವೆ ಸಂಪತ್ತಾಯಿತು

ಇಂದಿಗೆ ಈ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಇದೊಂದು ಪ್ರೇಕ್ಷಣೀಯ ಸ್ಥಳ. ಇಲ್ಲಿ ಇಳಿದು ಈ ಬ್ರಿಜ್ ನೋಡಿಕೊಂಡೇ ಹೋಗುತ್ತಾರೆ. ನಾವೂ ಹೀಗೆ ಮಾಡಿದೆವು. ರಾಮೇಶ್ವರಕ್ಕೆ ಹೋಗುವಾಗ ಇಲ್ಲಿ ಇಳಿದು ಈ ಬ್ರಿಜ್ ನೋಡಿಕೊಂಡು ಪ್ರಯಾಣ ಮುಂದುವರೆಸಿದೆವು. ಸುನಾಮಿಯಿಂದಾಗಿ ಈ ಸೇತುವೆ ಹಾಳಾಗಿ ಮುಚ್ಚಲಾಗಿತ್ತು. ಇತ್ತೀಚೆಗೆ ಮೋದಿಯವರ ನೇತೃತ್ವದಲ್ಲಿ ಪಂಬನ್ ಬ್ರಿಜ್‌ಗೆ ಪರ್ಯಾಯವಾಗಿ, ನವೀಕರಿಸಿದ ಪಂಬನ್ ಸೇತುವೆಯನ್ನು ಮೋದಿಯವರು ಏಪ್ರಿಲ್ 6. 2025ರ ಶ್ರೀರಾಮನವಮಿ ದಿನದಂದು ಉದ್ಘಾಟಿಸಿದ್ದಾರೆ. ಇದು 2.8 ಕಿಮೀ ಉದ್ದವಿದೆ. ಇದರ ಮಧ್ಯದ 72 ಮೀ ಹಳಿಯನ್ನು 17ಮೀ ಲಂಬವಾಗಿ ಎತ್ತಲು ಸಾಧ್ಯವಾಗುವಂತೆ ನಿರ್ಮಿಸಿದ್ದಾರೆ. ಇದರ ಕೆಳಗೆ ಹಡಗುಗಳು ಹಾದು ಹೋಗಬಹುದು ಎಂಬುದು ವಿಶೇಷ.

ದಾರಿ ಹೇಗೆ?

ಮದುರೈ ಅಥವಾ ತಿರುಚಿರಾಪಳ್ಳಿಯಿಂದ ಮಂಡಪಂ ರೈಲು ನಿಲ್ದಾಣಕ್ಕೆ ತಲುಪುವ ರೈಲುಗಳು ಸಮುದ್ರದ ಮೇಲಿರುವ ಪಂಬನ್ ರೈಲ್ವೆ ಸೇತುವೆಯ ಮೇಲೆ ಸಾಗುತ್ತವೆ.