ಬೆಂಗಳೂರು–ಮೈಸೂರು ಹೆದ್ದಾರಿಯ ಸಮೀಪ, ಮಂಡ್ಯ ಜಿಲ್ಲೆಯ ಕೇರಗೋಡು ಹೋಬಳಿಯ ಈಲಾರ ಗ್ರಾಮ ಈಗಂತೂ ರೆಸಾರ್ಟ್‌ ಪ್ರಿಯರ ನೆಚ್ಚಿನ ಅಡ್ಡವಾಗಿ ರೂಪುಗೊಂಡಿದೆ. ವಾರಾಂತ್ಯಗಳಲ್ಲಿ ಬೆಂಗಳೂರು ಸಮೀಪದಲ್ಲೇ ವಾಸ್ತವ್ಯವನ್ನು ಹುಡುಕಾಡುವ ಮಂದಿ ನೆಲಮಂಗಲ,ತುಮಕೂರು, ಚಿಕ್ಕಬಳ್ಳಾಪುರ ರಸ್ತೆಗಳಿಂದ ದೂರವಾಗಿ ಸಕ್ಕರೆ ನಾಡಿನತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಕಳೆದ ಅನೇಕ ವರ್ಷಗಳಿಂದ ಸುದ್ದಿಯಲ್ಲಿರುವ ಆರ್‌ಜಿ ರೆಸಾರ್ಟ್ಸ್ ಆಂಡ್ ಲೆಷರ್.

Untitled design - 2026-09-17T125413.911

ಅಂಬರೀಶ್‌ ಅಭಿಮಾನಿ, ಆಪ್ತ, ಪ್ರೀತಿಪಾತ್ರನಾಗಿರುವ ರುದ್ರೇಗೌಡ ಅವರು ಅಂಬಿ ನೆನಪಿನಲ್ಲಿ ಇಲ್ಲಿ ಸುಂದರವಾದ ರೆಸಾರ್ಟ್‌ ಒಂದನ್ನು ನಿರ್ಮಿಸಿದ್ದು ಅದಕ್ಕೆ ʻಅಂಬಿ ವಿಲ್ಲಾʼ ಎಂದೇ ನಾಮಕರಣ ಮಾಡಿದ್ದಾರೆ. ಅಂಬಿಯೊಂದಿಗಿನ ಒಡನಾಟಕ್ಕೆ ಸಾಕ್ಷಿಯಾಗಿರುವ ಈ ರೆಸಾರ್ಟ್‌ನಲ್ಲಿ ಅಂಬಿ ಸಿನಿಮಾ ಹಾಡುಗಳಿಗೆ ಮೊದಲ ಪ್ರಾಶಸ್ತ್ಯ.

ಸಿನಿರಂಗದ ನಂಟು

ಚಿತ್ರರಂಗದ ಜತೆಗೆ ಮೊದಲಿನಿಂದಲೂ ನಂಟು ಹೊಂದಿರುವ ಈ ರೆಸಾರ್ಟ್‌ನಲ್ಲಿ ವಾರಾಂತ್ಯಗಳಲ್ಲಿ ಕಲಾವಿದರ ಭೇಟಿಯೇ ಹೆಚ್ಚಿರುತ್ತದೆ. ಮಂಡ್ಯ ಆಸುಪಾಸಿನಲ್ಲಿ ಧಾರಾವಾಹಿ ಹಾಗೂ ಸಿನಿಮಾ ಚಿತ್ರೀಕರಣವಿದ್ದಲ್ಲಿ, ಚಿತ್ರತಂಡ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುವ ತಾಣ ಆರ್‌ಜಿ ರೆಸಾರ್ಟ್ಸ್ ಆಂಡ್ ಲೆಷರ್‌. ಅಲ್ಲದೆ ನಗರ ಜೀವನದ ಗದ್ದಲದಿಂದ ದೂರವಾಗಿ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬಯಸುವ ರೆಸಾರ್ಟ್‌ ಪ್ರಿಯರು ಕುಟುಂಬ, ಸ್ನೇಹಿತರೊಂದಿಗೆ ಇಲ್ಲಿಗೆ ಭೇಟಿ ನೀಡುತ್ತಾರೆ.

Untitled design - 2026-09-17T125848.723

ವಾಸ್ತವ್ಯಕ್ಕಿದೆ ಸಾಕಷ್ಟು ಆಯ್ಕೆ

ರೆಸಾರ್ಟ್‌ನಲ್ಲಿ ಡೇ ಔಟ್‌ ಪ್ಯಾಕೇಜ್‌ ಅಷ್ಟೇ ಅಲ್ಲದೆ ನೈಟ್‌ ಪ್ಯಾಕೇಜ್‌ಗೂ ಸಕತ್‌ ಡಿಮ್ಯಾಂಡ್‌ ಇದೆ. ಟೆಂಟ್‌ ಸಸ್ಟೇ, ಕಪಲ್‌ ರೂಮ್‌, ಫ್ಯಾಮಿಲಿ ರೂಮ್‌, ವುಡನ್‌ ಕಾಟೇಜಸ್‌, ಗ್ಲಾಸ್‌ ಹೌಸ್‌, ಅಂಬಿ ವಿಲ್ಲಾ ಸೇರಿದಂತೆ ವಿವಿಧ ವರ್ಗದ ಕೊಠಡಿಗಳು ಇಲ್ಲಿದ್ದು, ಅಂಬಿ ವಿಲ್ಲಾಕ್ಕೆ ಹೆಚ್ಚಿನ ಬೇಡಿಕೆಯಿದೆ.

ಇದನ್ನೂ ಓದಿ:ಹೈದರಾಬಾದ್ ನಲ್ಲಿ ಲೀಲಾ!

ಈಜುಕೊಳ, ಮಕ್ಕಳ ಆಟದ ಪ್ರದೇಶ, ಒಳಾಂಗಣ ಹಾಗೂ ಹೊರಾಂಗಣ ಆಟಗಳು, ಹಸಿರಿನಿಂದ ಕೂಡಿದ ತೆರೆದ ವಾತಾವರಣ ಮತ್ತು ವಿಶ್ರಾಂತಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಕೃತಿಯ ನಡುವೆ ಸಮಯ ಕಳೆಯಲು ಬಯಸುವವರಿಗೆ ಇದು ಮನಸಿಗೆ ಹಿತ ನೀಡುವ ತಾಣವಾಗಿದೆ. ಜತೆಗೆ, ಹುಟ್ಟುಹಬ್ಬ, ವಾರ್ಷಿಕೋತ್ಸವ, ಕುಟುಂಬ ಸಮಾರಂಭಗಳು ಹಾಗೂ ಕಾರ್ಪೊರೆಟ್ ಕಾರ್ಯಕ್ರಮಗಳನ್ನು ಆಯೋಜಿಸಲು ಸಹ ಸೂಕ್ತ ವ್ಯವಸ್ಥೆಗಳಿವೆ.

ಮುದ್ದೆ ಸಾರಿಲ್ಲದೆ ಊಟವಿಲ್ಲ

ಇಲ್ಲಿ ಡೇ ಔಟ್‌ ಪ್ಯಾಕೇಜ್‌ ಮಾತ್ರವಲ್ಲದೇ ನೈಟ್‌ ಪ್ಯಾಕೇಜ್‌ ಬುಕಿಂಗ್‌ ಮಾಡಿಕೊಂಡ ಅತಿಥಿಗಳಿಗಾಗಿ ಹಲವಾರು ವೆಜ್‌ ಹಾಗೂ ನಾನ್‌ ವೆಜ್‌ ಆಯ್ಕೆಗಳು ಲಭ್ಯವಿದೆ. ಮೆನುವಿನ ಪ್ರಮುಖ ಆಕರ್ಷಣೆ ರಾಗಿ ಮುದ್ದೆ- ನಾಟಿಕೋಳಿ ಸಾರು.

Untitled design - 2026-09-17T130109.622

ಫೊಟೋ ಕ್ಲಿಕ್ಕಿಸಬೇಕಾ ?

ಕೈಯಲ್ಲಿ ಕ್ಯಾಮೆರಾ ಮೊಬೈಲ್‌ ಬಂದಮೇಲಂತೂ ಎಲ್ಲರೂ ಫೊಟೋಗ್ರಾಫರ್ರೇ. ಆದರೆ ಫೊಟೋ ತೆಗೆಯುವುದಕ್ಕೆ ಸೂಕ್ತವಾದ ತಾಣಬೇಕಷ್ಟೇ. ಇಲ್ಲಿಗೆ ಭೇಟಿ ನೀಡುವ ಅತಿಥಿಗಳಿಗಾಗಿ ಇಲ್ಲಿ ಸ್ಪೆಷಲ್‌ ಫೊಟೋ ಶೂಟ್‌ ಸ್ಪಾಟ್‌ಗಳನ್ನು ನಿರ್ಮಿಸಲಾಗಿದೆ. ಪೇಯ್ಡ್‌ ಫೊಟೋ ಶೂಟ್‌ ಮಾಡಲು ಬಯಸುವವರಿಗಾಗಿಯೂ ಪ್ರತ್ಯೇಕ ಯುನಿಟ್‌ ನಿರ್ಮಾಣವಾಗಿದೆ. ಪ್ರಾಪರ್ಟಿಯೊಳಗೆ ನಿಸರ್ಗದತ್ತವಾಗಿ ಹರಿಯುವ ಚಿಕ್ಕದಾದ ತೊರೆಯಿದ್ದು, ಮಳೆಗಾಲ ಬಂದರಂತೂ ಅದ್ಬುತ ನೋಟವನ್ನೇ ನೀಡುತ್ತದೆ.

ಇದನ್ನೂ ಓದಿ:ಉಡುಪಿಯಲ್ಲಿ 'ಮಿತ್ರ ಸಮಾಜ' ಕಂಡಿರಾ

ಬಾಕ್ಸ್‌ ಬೈಟ್‌

ಚಿತ್ರೀಕರಣದ ಭಾಗವಾಗಿ ಮಂಡ್ಯದಲ್ಲಿ ಸುಮಾರು ಹೆಚ್ಚು ದಿನಗಳ ಕಾಲ ಉಳಿದುಕೊಳ್ಳಬೇಕಾಗಿಬಂದಾಗ ಆರ್‌ಜಿ ರೆಸಾರ್ಟ್‌ನಲ್ಲಿ ವಾಸ್ತವ್ಯದ ಅವಕಾಶ ಸಿಕಿತ್ತು. ಇಲ್ಲಿ ಕಳೆದ ಕ್ಷಣಗಳನ್ನು ಮರೆಯುವುದು ಕಷ್ಟ. ಯಾಕೆಂದರೆ ಮನೆಯಲ್ಲಿಲ್ಲದಿದ್ದರೂ ಮನೆಯ ಅನುಭವವನ್ನು ನೀಡುವಂಥ ರೆಸಾರ್ಟ್‌ಗಳ ಪೈಕಿ ಆರ್‌ಜಿ ರೆಸಾರ್ಟ್ಸ್ ಆಂಡ್ ಲೆಷರ್ ಹೆಸರುಮಾಡಿದೆ. ಚಿತ್ರೀಕರಣ, ಗದ್ದಲ, ಗಲಾಟೆಯಾಚೆಗೆ ಇಲ್ಲಿನ ಹಸಿರಿನ ವಾತಾವರಣ ಮನಸಿಗೆ ನೆಮ್ಮದಿಯನ್ನು ನೀಡಿದೆ. ಹೋಮ್ಲೀ ಅನಿಸುತ್ತಿದೆ.

- ರಾಗಿಣಿ ದ್ವಿವೇದಿ, ನಟಿ

Untitled design - 2026-09-17T130415.618

ಅಂಬರೀಶ್‌ ಅವರ ಅತ್ಯಂತ ಪ್ರೀತಿಪಾತ್ರರಾದ ರುದ್ರೇಗೌಡ ಅವರ ಮುಂದಾಳುತ್ವದ ಆರ್‌ಜಿ ರೆಸಾರ್ಟ್‌ಗಗೆ ಮೊದಲ ಬಾರಿಗೆ ಭೇಟಿ ನೀಡಿದಾಗಲೇ ಇಲ್ಲಿ ವಾತಾವರಣಕ್ಕೆ ಮನಸೋತಿದ್ದೇನೆ. ಸುತ್ತಲೂ ಹಸಿರಿನಿಂದ ತುಂಬಿಕೊಂಡಿರುವ ಈ ರೆಸಾರ್ಟ್‌ನಲ್ಲಿ ಅತಿಥಿಗಳಿಗೆ ಅಗತ್ಯವಿರುವ ಎಲ್ಲ ಅನುಕೂಲವನ್ನೂ ಕಲ್ಪಿಸಲಾಗಿದೆ. ಖಾಸಗಿ ಕಾರ್ಯಕ್ರಮಗಳ ಆಯೋಜನೆಗಂತೂ ಈ ರೆಸಾರ್ಟ್‌ ಹೇಳಿಮಾಡಿಸಿದಂತಿದೆ. ಅದಕ್ಕಿಂತಲೂ ಹೆಚ್ಚಿಗೆ ನನಗೆ ಮೆಚ್ಚುಗೆಯಾಗಿರುವುದು ಇಲ್ಲಿನ ಆಹಾರ.ಇಲ್ಲಿ ಮನೆಯೂಟಕ್ಕಿಂತಲೂ ಶುಚಿ-ರುಚಿಯಾದ ಅಡುಗೆಯನ್ನು ಬಂದಿರುವ ಅತಿಥಿಗಳಿಗಾಗಿ ತಯಾರಿಸಿ, ಪ್ರೀತಿಯಿಂದ ಉಣಬಡಿಸುತ್ತಾರೆ. ಅದಕ್ಕಿಂತ ಖುಷಿ ಬೇರೇನು ಬೇಕು ?

- ದೊಡ್ಡಣ್ಣ, ಹಿರಿಯ ನಟ

ಅಡ್ವೆಂಚರ್‌ ಆಕ್ಟಿವಿಟೀಸ್‌

ಜಿಪ್‌ ಲೈನ್‌

ಸ್ಕೈ ಸೈಕ್ಲಿಂಗ್‌

ರೋಪ್‌ ವೇ

ಎಟಿವಿ ಬೈಕ್‌ ರೈಡ್‌

ಇಂಡೋರ್‌ ಹಾಗೂ ಔಟ್‌ ಡೋರ್‌ ಗೇಮ್ಸ್‌

ಸ್ವಿಮ್ಮಿಂಗ್‌ ಪೂಲ್‌

ರೈನ್‌ ಡ್ಯಾನ್ಸ್‌