Friday, May 8, 2026
Friday, May 8, 2026

ಇದು ಜಗತ್ತಿನ ಅತಿದೊಡ್ಡ ಹೂಗಳ ಹಬ್ಬ

ಮೂವತ್ತೆರಡು ಎಕರೆ ವಿಸ್ತಾರವಾದ ಹೂದೋಟ ನೋಡಲು ವೀಕ್ಷಕರಿಗೆ ಅವಕಾಶವಿದ್ದು, ಅಲ್ಲೇ ಇರುವ ನಾಲೆಯಲ್ಲಿ ಬ್ಯಾಟರಿ ಚಾಲಿತ ದೋಣಿಗಳ ವ್ಯವಸ್ಥೆ ಮಾಡಲಾಗಿದೆ, ವಾಹನಗಳು, ಸೈಕಲ್ ಗಳೂ ಇವೆ. ವೆಹಿಕಲ್‌ಗಳನ್ನು ಬಾಡಿಗೆಗೆ ಪಡೆದು, ವೀಕ್ಷಕರು ವಿಹರಿಸುತ್ತಾ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

  • ಮೋಹನ ಭಟ್ಟ,ಅಗಸೂರು

ವಸಂತ ಮಾಸ ಬಂತೆಂದರೆ ಒಣ ಮರಗಳೂ ಚಿಗುರು ಒಡೆಯಲು ಹಾತೊರೆಯುತ್ತವೆ. ಇದು ನೆದರ್ಲ್ಯಾಂಡ್ಸ್‌ನ ಕ್ಯುಕೆನ್ ಹಾಫ್‌ನ ಸ್ಪ್ರಿಂಗ್ ಗಾರ್ಡನ್ ನೋಡಿದ ಪುಷ್ಪಪ್ರಿಯರ ಮಾತುಗಳು. ಇದನ್ನೂ ಓದಿ: ಚಿಸಿಕ್‌ನಲ್ಲೊಂದು ಹೂಗಳ ಸಂತೆ…

ಸ್ಪ್ರಿಂಗ್ ಗಾರ್ಡನ್, ಮೂವತ್ತೆರಡು ಎಕರೆ ಪ್ರದೇಶದಲ್ಲಿ ಸುಂದರವಾಗಿ ನಿರ್ಮಾಣವಾಗಿರುವ ಹೂದೋಟ. ಇಲ್ಲಿ ಸುಮಾರು 850 ಕ್ಕೂ ಹೆಚ್ಚು ಪ್ರಭೇದದ ಹೂಗಿಡಗಳಿವೆ. ವಿಶೇಷವಾಗಿ ವೈವಿಧ್ಯಮಯ ವರ್ಣಗಳ ಟುಲಿಪ್ ಹೂಗಳು, ಆರ್ಕಿಡ್‌ಗಳು, ಹೈಸಿಂತಾ, ಡೆಫೋಡಿಲ್‌ಗಳು ಸೇರಿ ವೈವಿಧ್ಯಮಯ ಬಣ್ಣಗಳ ಹೂಗಳೂ ಇಲ್ಲಿವೆ. ಹಾಗಾಗಿ ಈ ಹೂದೋಟ ಸಧಾ ಆಕರ್ಷಣೀಯವಾಗಿರುತ್ತದೆ. ನೋಡುಗರ ಮನಸಿಗೆ ಮುದ ನೀಡುತ್ತದೆ.

ವಿಹಾರಕ್ಕುಂಟು

ಮೂವತ್ತೆರಡು ಎಕರೆ ವಿಸ್ತಾರವಾದ ಹೂದೋಟ ನೋಡಲು ವೀಕ್ಷಕರಿಗೆ ಅವಕಾಶವಿದ್ದು, ಅಲ್ಲೇ ಇರುವ ನಾಲೆಯಲ್ಲಿ ಬ್ಯಾಟರಿ ಚಾಲಿತ ದೋಣಿಗಳ ವ್ಯವಸ್ಥೆ ಮಾಡಲಾಗಿದೆ, ವಾಹನಗಳು, ಸೈಕಲ್ ಗಳೂ ಇವೆ. ವೆಹಿಕಲ್‌ಗಳನ್ನು ಬಾಡಿಗೆಗೆ ಪಡೆದು, ವೀಕ್ಷಕರು ವಿಹರಿಸುತ್ತಾ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

New Project (5)

ಆಗ ಮತ್ತು ಈಗ

ಕ್ಯುಕೆನ್ ಹಾಫ್‌ನ ಈ ಹೂದೋಟ ಸುಮಾರು ಹದಿನೈದನೆಯ ಶತಮಾನದಲ್ಲಿ ನಿರ್ಮಾಣವಾಯಿತು. ಜಾಕ್ಲೀನ್ ಎಂಬುವವರು ಇದರ ನಿರ್ಮಾಣಕ್ಕೆ ಮೂಲಕಾರಣ ಎಂದು ಹೇಳಲಾಗುತ್ತದೆ. 1857ರಲ್ಲಿ ಹೂದೋಟವು ಸುಂದರ ನೋಟ ಪಡೆಯಿತು. ಜನರನ್ನು ಆಕರ್ಷಿಸತೊಡಗಿತು. ಆದರೆ ಇದು ಮತ್ತಷ್ಟು ಸುಂದರವಾಗಿ ನಿರ್ಮಾಣವಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಯುರೋಪಿನ ಪುಷ್ಪಪ್ರಿಯರನ್ನು ಸೆಳೆದು, ಜನಪ್ರಿಯವಾಗಿದ್ದು 1950ರಿಂದ ಈಚೆಗೆ. 2024ರಲ್ಲಿ ಈ ಹೂದೋಟಕ್ಕೆ ಬರೋಬ್ಬರಿ ಎಪ್ಪತ್ತೈದು ವರ್ಷ. ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ 23.6 ಲಕ್ಷ ವೀಕ್ಷಕರು ಆಗಮಿಸಿದ್ದರು. ಇದು ಗಮನಾರ್ಹ ವಿಷಯ. ಒಳಾಂಗಣದಲ್ಲಿ ಪುಷ್ಪ ಪ್ರದರ್ಶನ, ಹಲವು ವಿಧದ ಪುಷ್ಪಾಲಂಕಾರಗಳನ್ನು ಆಗ ಇಲ್ಲಿ ಏರ್ಪಡಿಸಲಾಗಿತ್ತು.

New Project (3)

ಜನಪ್ರಿಯ ವಸಂತೋತ್ಸವ

ಕ್ಯುಕೆನ್ ಹಾಫ್‌ನ ಸ್ಪ್ರಿಂಗ್ ಗಾರ್ಡನ್ ಹೆಚ್ಚು ಪ್ರಸಿದ್ಧವಾಗಿರುವುದು ವಸಂತೋತ್ಸವಕ್ಕೆ. ಈ ಸಮಯದಲ್ಲಿ ಇಲ್ಲಿ ಲಕ್ಷಗಟ್ಟಲೆ ಹೂಗಳು ಅರಳಿ ನಿಂತಿರುತ್ತವೆ. ವಿಶ್ವದ ಅತಿದೊಡ್ಡ ಹೂಗಳ ಹಬ್ಬ ಇದು ಎಂದು ಪ್ರಸಿದ್ಧವಾಗಿದೆ. ನೂರಾರು ಪ್ರಭೇದದ ಟುಲಿಪ್‌ ಹೂಗಳನ್ನೂ ಅಲ್ಲಿ ಕಣ್ತುಂಬಿಕೊಳ್ಳಬಹುದು. ಇದೇ ಕಾರಣಕ್ಕೆ ಈ ಸಮಯದಲ್ಲಿ ಸಾಕಷ್ಟು ಜನರೂ ಸೇರಿರುತ್ತಾರೆ. ಕಂಡವನೇ ಕಂಡ ಕ್ಯುಕೆನ್ ಹಾಫ್‌ನ ಸ್ಪ್ರಿಂಗ್ ಗಾರ್ಡನ್‌ನ ಅಂದ…

ಉತ್ತಮ ಸಮಯ

ಮಾರ್ಚ್ ಎರಡನೆಯ ವಾರದಿಂದ ಮೇ ಎರಡನೆಯ ವಾರದವರೆಗೆ (ಈ ಸಮಯ ಋತುಮಾನಕ್ಕೆ ತಕ್ಕಂತೆ ಬದಲಾಗಲೂಹಬಹುದು) ಹೂದೋಟ ಸುಂದರವಾಗಿರುತ್ತದೆ. ಆಗ ಲಕ್ಷಾಂತರ ಹೂಗಳು ಅರಳಿ ನಿಂತಿರುತ್ತವೆ. ಮೊಗ್ಗುಗಳಿಂದ ಹಿಡಿದು ಪೂರ್ತಿ ಅರಳಿದ ಹೂಗಳನ್ನು ಕಾಣಬಹುದು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...