Tuesday, March 3, 2026
Tuesday, March 3, 2026

ಮಿರಾಕಲ್ಸ್‌ಗಳ ಆಗರ ಮೆರಮಿಕ್‌ ಕೆವರ್ನ್ಸ್‌

ಮೆರಮಿಕ್ ಕೆವರ್ನ್ಸ್‌ ಮೇಲಿನ ಹಂತದಲ್ಲಿರುವ ಈ ಕೋಣೆಗೆ 58 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಪ್ರಪಂಚದ ಅದ್ಭುತ ಗುಹೆ ಇದಾಗಿದೆ. ಇಲ್ಲಿ ಎಲ್ಲೆಡೆ ದ್ರಾಕ್ಷಿಗೊಂಚಲಿನ ಆಕಾರದ ಕಲಾಕೃತಿಗಳು ಇವೆ. ಕ್ಯಾಲ್ಶಿಯಂ ಕಾರ್ಬೋನೆಟ್‌ನಿಂದ ಕೆಲವು ಹರಳಿನ ರೂಪ ಪಡೆದಿವೆ. ಒಂದೆಡೆ 6 ಅಡಿ ಎತ್ತರದ 3 ಕಾಲುಗಳಿರುವ ಟೇಬಲ್‌ನ ಆಕಾರ ನಿರ್ಮಾಣವಾಗಿದೆ. ಹಾಗಾಗಿ ಇದಕ್ಕೆ ವೈನ್ ಟೇಬಲ್ ಎಂದು ಹೆಸರಿಸಲಾಗಿದೆ.

- ಸೀತಾ ಎಸ್. ನಾರಾಯಣ

ಅಮೆರಿಕದ ಮಿಜೌರಿ ರಾಜ್ಯಕ್ಕೆ `ಕೇವ್ ಸ್ಟೇಟ್’ ಎಂಬ ಹೆಸರಿದೆ. ಸರ್ವೆ ಪ್ರಕಾರ ಈ ರಾಜ್ಯದಲ್ಲಿ 6000 ಗುಹೆಗಳಿವೆ. ಅವುಗಳಲ್ಲಿ ಸೇಂಟ್ ಲೂಯಿಸ್‌ನ ಪಶ್ಚಿಮದ 40 ಕಿಮೀ ದೂರದಲ್ಲಿನ `ಮೆರಮೆಕ್ ಕೆವರ್ನ್ಸ್‌’ ಅತ್ಯಂತ ದೊಡ್ಡದಾಗಿದ್ದು, ಕಮರ್ಶಿಯಲ್ ಗುಹೆಯೆನಿಸಿದೆ.

ಅಮೆರಿಕ ಪ್ರವಾಸದಲ್ಲಿ ನಮಗೆ ರಂಜನೀಯವೆನಿಸಿದ ಸ್ಥಳಗಳಲ್ಲಿ ಈ `ಮೆರಮಿಕ್ ಕೆವರ್ನ್ಸ್‌ʼ ಸಹ ಒಂದು. ನಾವು ಅಲ್ಲಿಗೆ ಹೋದಾಗ ಗುಹೆಯ ಹೊರಗೆ 35 ಡಿಗ್ರಿಯಷ್ಟು ಮೈಸುಡುವ ಬಿಸಿಲಿದ್ದರೂ ಒಳಗೆ 14.44 ಡಿಗ್ರಿ ಇತ್ತು. ವರ್ಷದ ಯಾವುದೇ ಋತುವಿನಲ್ಲೂ ಅಲ್ಲಿ ಅದೇ ತಾಪಮಾನ ಇರುತ್ತದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

ಇದನ್ನೂ ಓದಿ: ರಾಯಲ್ ಫೊಟೋಗ್ರಫರ್‌ನ ರೋಚಕ ಜೀವನಗಾಥೆ

ಕೆವರ್ನ್ಸ್‌ ಎಂಬ ಪದ ಫ್ರೆಂಚ್ ಭಾಷೆಯ `ಕೆವರನ್’ ಎಂಬ ಪದದಿಂದ ಬಂದಿದೆ. ಕೆವರ್ನ್ಸ್‌ ಎಂದರೆ ದೊಡ್ಡ ಗುಹೆಯ ಭಾಗಗಳು ಎಂಬ ಅರ್ಥವಿದೆ. ಈ ಗುಹೆಯು 47000 ಮೈಲಿ ಹರಡಿರುವ ಓಝರ್ಕ್ಸ್ನ ಒಂದು ಭಾಗದಲ್ಲಿದೆ. ಮೆರಮೆಕ್ ನದಿಯ ಬಳಿ ಇರುವುದರಿಂದ `ಮೆರಮಿಕ್ ಕೆವರ್ನ್ಸ್‌’ ಎಂಬ ಹೆಸರಿದೆ. ಇಲ್ಲಿನ ನದಿಯು ಸ್ವಚ್ಛ ಸುಂದರವಾಗಿದೆ. ಇಲ್ಲಿ ಬೋಟಿಂಗ್, ಜಿಪ್‌ಲೈನ್ ಮುಂತಾದ ಮನರಂಜನೆಗೂ ಅವಕಾಶವಿದೆ.

ಗುಹೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಹೆಸರಿನೊಂದಿಗೆ `ಜೆಸ್ಸಿ ಜೇಮ್ಸ್ ಹೈಡ್ ಔಟ್’ ಎಂಬ ಫಲಕ ಕಾಣಿಸುತ್ತದೆ. ಗುಹೆಯಲ್ಲಿ ಅಡಗಿದ್ದ ಜೆಸ್ಸಿ ಜೇಮ್ಸ್ ಎಂಬ ಬ್ಯಾಂಕ್ ಹಾಗೂ ರೈಲು ದರೋಡೆಕೋರರನ್ನು 1870ರಲ್ಲಿ ಪೋಲೀಸರು ಮುತ್ತಿಗೆ ಹಾಕಿದಾಗ ಅವರು ಈ ಗುಹೆಯ ಇನ್ನೊಂದು ಬದಿಯಿಂದ ತಪ್ಪಿಸಿಕೊಂಡರು ಎನ್ನಲಾಗಿದೆ. ಆಗಲೇ ಈ ಗುಹೆ ಹೊರ ಜಗತ್ತಿಗೆ ಪರಿಚಯವಾಯಿತು ಎನ್ನುತ್ತಾರೆ.

Untitled design - 2026-03-03T114035.112

ಸುಣ್ಣದ ಕಲ್ಲಿನಿಂದ ಸೃಷ್ಠಿಯಾದ ಮೆರಮಿಕ್ ಗುಹೆಯು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಗುಹೆಯಾಗಿದೆ. ಇದು ಭೂಮಿಯ ಆಳದಲ್ಲಿ ನಿಸರ್ಗ ನಿರ್ಮಿಸಿದ ಅದ್ಭುತ ಆಭರಣದಂತಿದೆ. ಈ ಗುಹೆಯು ಸ್ಟ್ಯಾಲಕ್ಟೈಟ್ ಮತ್ತು ಸ್ಟ್ಯಾಲಾಗ್ಮೈಟ್‌ಗಳಿಂದ ವಿವಿಧ ಆಕೃತಿಗಳನ್ನು ಹೊಂದಿರುವ ಗುಹೆಗಳಲ್ಲಿಯೇ ಅತ್ಯಂತ ವಿಶಿಷ್ಠವೆನಿಸಿದೆ. ನೋಡುಗರನ್ನು ಬೆರಗುಗೊಳಿಸಿ ರಂಜಿಸುವ ಈ ಗುಹೆಯು 4-6 ಕಿಮೀ ದೊಡ್ಡದಿದ್ದರೂ ಒಂದೂಕಾಲು ಮೈಲಿಯಷ್ಟು ಮಾತ್ರ ನಾವು ನೋಡಲು ಸಾಧ್ಯ. ಅಷ್ಟನ್ನೂ ನೋಡಲು ಒಂದೂವರೆ ಗಂಟೆಯ ಸಮಯ ಬೇಕಾಗುತ್ತದೆ.

ಇಲ್ಲಿ ತರಬೇತಿ ಪಡೆದ ಗೈಡ್‌ಗಳು ಇರುತ್ತಾರೆ. ಅರ್ಧ ಗಂಟೆಗೆ ಒಂದು ಜನರ ಗುಂಪಿನಂತೆ ಗುಹೆಯನ್ನು ತೋರಿಸಲು ಕರೆದೊಯ್ಯುತ್ತಾರೆ. ಕತ್ತಲು ತುಂಬಿದ ಗುಹೆಯಲ್ಲಿ ದೀಪ ಬೆಳಗಿಸುತ್ತಾ ವಿವರಣೆ ನೀಡುತ್ತಾರೆ. ಇಲ್ಲಿನ ಕಲಾಕೃತಿಗಳು ಸುಮಾರು 400 ಮಿಲಿಯನ್ ವರ್ಷಗಳಿಂದ ರೂಪುಗೊಂಡಿವೆ. ಇವುಗಳು ಒಂದು ಇಂಚು ರೂಪುಗೊಳ್ಳಲು 100 ವರ್ಷ ತೆಗೆದುಕೊಳ್ಳುತ್ತವೆ ಎನ್ನಲಾಗಿದೆ.

ಗುಹೆಯ ಒಳಗೆ ಹೋಗುತ್ತಿದ್ದಂತೆ ಒಂದು ವಿಶಾಲ ಕೊಠಡಿ ಸಿಗುತ್ತದೆ. ಇದು 50 ಅಡಿ ಉದ್ದ 50 ಅಗಲವಿರುವ ಕೊಠಡಿ. ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದಕ್ಕೆ `ಬಾಲ್ ರೂಮ್’ ಎಂಬ ಹೆಸರಿದೆ. 1960ರಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ಭೂಮಿ ತಿರುಗುತ್ತದೆ ಎಂದು ಪ್ರಮಾಣೀಕರಿಸಲು ಇಲ್ಲಿ ಪೆಂಡ್ಯುಲಮ್ ಅಳವಡಿಸಿದರು. ಈ ಪೆಂಡ್ಯುಲಮ್ 6 ಗಂಟೆಗೊಮ್ಮೆ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣವಾಗಿ ದಿಕ್ಕು ಬದಲಾಯಿಸುತ್ತದೆ. 1000 ಪೌಂಡ್ ತೂಕ ಇರಬೇಕಾಗಿದ್ದ ಇದು ಕಡಿಮೆ ತೂಕದಿಂದಾಗಿ ಅಷ್ಟು ಪರಿಪೂರ್ಣತೆ ಪಡೆಯಲಿಲ್ಲ ಎನ್ನಲಾಗಿದೆ. ಸಿವಿಲ್ ವಾರ್ ಸಮಯದಲ್ಲಿ ಇಲ್ಲಿ ಗನ್ ಪೌಡರ್ ತಯಾರಿಸಿ ಇದರ ಮುಂದೆ ಹರಿಯುತ್ತಿರುವ ಮೆರಮಿಕ್ ನದಿಯಿಂದ ಸಾಗಾಣಿಕೆ ಮಾಡಲಾಗುತ್ತಿತ್ತು.

ವೈನ್ ರೂಮ್

ಮೇಲಿನ ಹಂತದಲ್ಲಿರುವ ಈ ಕೋಣೆಗೆ 58 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಪ್ರಪಂಚದ ಅದ್ಭುತ ಗುಹೆ ಇದಾಗಿದೆ. ಇಲ್ಲಿ ಎಲ್ಲೆಡೆ ದ್ರಾಕ್ಷಿಗೊಂಚಲಿನ ಆಕಾರದ ಕಲಾಕೃತಿಗಳು ಇವೆ. ಕ್ಯಾಲ್ಶಿಯಂ ಕಾರ್ಬೋನೆಟ್‌ನಿಂದ ಕೆಲವು ಹರಳಿನ ರೂಪ ಪಡೆದಿವೆ. ಒಂದೆಡೆ 6 ಅಡಿ ಎತ್ತರದ 3 ಕಾಲುಗಳಿರುವ ಟೇಬಲ್‌ನ ಆಕಾರ ನಿರ್ಮಾಣವಾಗಿದೆ. ಹಾಗಾಗಿ ಇದಕ್ಕೆ ವೈನ್ ಟೇಬಲ್ ಎಂದು ಹೆಸರಿಸಲಾಗಿದೆ.

Untitled design - 2026-03-03T114057.637

ಮಿರರ್ ರೂಮ್

ಇಲ್ಲಿ ಕೇವಲ ಒಂದೂವರೆ ಅಡಿಯಷ್ಟು ನೀರಿನ ಝರಿ ಇದೆ. ಬೆಳಕಿನ ಪ್ರತಿಫಲನದಿಂದಾಗಿ 50 ಅಡಿ ಇದ್ದಂತೆ ಕಾಣಿಸುತ್ತದೆ. ಮೇಲ್ಚಾವಣಿಯಲ್ಲಿ ರೂಪುಗೊಂಡಿರುವ ಕಲಾಕೃತಿಗಳು ಅದರಲ್ಲಿ ಪ್ರತಿಫಲಿಸಿ ಸುಂದರವಾಗಿ ಕಾಣಿಸುತ್ತವೆ. ಬೃಹದಾಕಾರದ ಗೋಡೆಯು ಇಲ್ಲಿದೆ. ಆ ಗೋಡೆಯು ಪರದೆಯಂತೆ ಇದ್ದು, ಬೆಳಕು-ಧ್ವನಿಯ ಒಂದು ಛಾಯಾಚಿತ್ರ ಅಲ್ಲಿ ತೋರಿಸಲಾಗುತ್ತದೆ.

ಹಾಲಿವುಡ್ ರೂಮ್

1973ರಲ್ಲಿ ಇಲ್ಲಿನ ಹಲವು ಸುಂದರ ದೃಶ್ಯಗಳನ್ನು ಹಾಲಿವುಡ್ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ಈ ಗುಹೆಗೆ ಈ ಹೆಸರು ಬಂದಿದೆ.

ಈ ಗುಹೆಯ ವೀಕ್ಷಣೆಗೆ ವರ್ಷಕ್ಕೆ ಒಂದೂವರೆ ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಾರೆ. ವಯಸ್ಕರಿಗೆ 21 ಡಾಲರ್, ಮಕ್ಕಳಿಗೆ 11 ಡಾಲರ್ ಶುಲ್ಕವಿದ್ದು, 4 ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. `ಥ್ಯಾಂಕ್ಸ್ ಗಿವಿಂಗ್ ಡೆʼ ಹಾಗೂ `ಕ್ರಿಸ್ಮಸ್ ಡೆ’ ಬಿಟ್ಟು ವರ್ಷದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 9 ಗಂಟೆಯಿಂದ ವೀಕ್ಷಣೆಗೆ ಅವಕಾಶವಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...