Wednesday, March 18, 2026
Wednesday, March 18, 2026

ಪ್ಯಾರಾಶೂಟ್‌ ಏರಿ ಅಟ್ಲಾಂಟಿಕಾ ಸಾಗರದ ಮೇಲೆ ಹಾರಿ

ಭಯದಲ್ಲಿ ಪ್ಯಾರಾಸೇಲಿಂಗ್‌ ಆರಂಭವಾದರೂ ಕೆಳಗಿಳಿಯುವ ಮನಸಿರಲಿಲ್ಲ. ಆದರೆ ಅರ್ಧ ಗಂಟೆ ಕಳೆದೇ ಹೋಗಿತ್ತು. ಅನಿವಾರ್ಯವಾಗಿ ಕೆಳಗೆ ಇಳಿಯಲೇ ಬೇಕಾಯಿತು. ಸಾವಿರ ಅಡಿಗಳ ಎತ್ತರದಲ್ಲಿ ನಾನು ಕಂಡದ್ದು ಕೇವಲ ನೀಲಿಕಡಲನ್ನು ಮಾತ್ರವಲ್ಲ. ಅಲ್ಲಿ ಹಾರುವ ಟಿಟ್ಟಿಭದಂಥ ಹಕ್ಕಿಗಳು, ಜೋರಾಗಿ ಬೀಡುತ್ತಿದ್ದ ಗಾಳಿಯ ಅನುಭವ, ವಿಶಾಲ ಕಡಲಿನ ಅಲೆಗಳ ಏರಿಳಿತ ಹೀಗೆ ಕಂಡದ್ದೆಲ್ಲವೂ ಕಡಲಿನ ಸಾಮ್ರಜ್ಯವನ್ನು ಕಟ್ಟಿಕೊಡುವಂಥದ್ದು.

  • ಜಯಶ್ರೀ ದೇಶಪಾಂಡೆ

ಪ್ಯಾರಾಸೇಲಿಂಗ್‌ ಮಾಡಲೆಂದೇ ಅಂದು ನಾವು ಅಮೆರಿಕದ ಅಟ್ಲಾಂಟಿಕಾದಿಂದ ಇನ್ನೂರು ಮೈಲಿ ದೂರದ ಸವಾನಾ ಕಡಲತೀರಕ್ಕೆ ಪ್ರವಾಸ ಕೈಗೊಂಡಿದ್ದೆವು. ಎಷ್ಟೋ ಬಾರಿ ಕನಸಾಗಿ ಕಂಡಿದ್ದ ಸಮುದ್ರದ ಮಹಾನೀಲಿಯ ಮಧ್ಯೆ ಪ್ಯಾರಾಸೇಲಿಂಗ್, ಅಂದು ನನಸಾಗುವ ಸಮಯ ಬಂದಿತ್ತು. ಕಣ್ಣು ನೋಡಿ ಮುಗಿಯದಷ್ಟು ವಿಶಾಲವಾಗಿ ಹರಡಿದ್ದ ಸಮುದ್ರ ನೀಲಿಯ ಚೆಲುವನ್ನು ಅಂದು ನಾನು ಆಸ್ವಾಧಿಸಿದ್ದೆ. ಸಾವಿರ ಅಡಿಗಳ ಎತ್ತರಕ್ಕೆ ಪ್ಯಾರಾಶೂಟ್‌ನಿಂದ ಹಾರಿ ಅಲ್ಲಿಂದ ಸಮುದ್ರವನ್ನು ಕಣ್ತುಂಬಿಕೊಂಡಿದ್ದು ಇಂದಿಗೂ ನನ್ನ ನೆನಪಿನಲ್ಲಿ ಹಾಗೇ ಇದೆ.

ಇದನ್ನೂ ಓದಿ: ಇಸ್ರೋ ಸಂಸ್ಥೆಯಿಂದ ಐತಿಹಾಸಿಕ ತಾಣಗಳ ರಕ್ಷಣೆ

ಅಂದು ನಾವು ಪ್ಯಾರಾಸೇಲಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೋಗಿ ತಲುಪಿದೆವು. ಅದಕ್ಕಾಗಿ ನಿಗದಿಪಡಿಸಿದ ಬೋಟ್ ಒಂದು ನಮ್ಮನ್ನೆಲ್ಲ ಕೆಲವು ಮೈಲಿಗಳಷ್ಟು ದೂರಕ್ಕೆ ಕರೆದೊಯ್ದಿತ್ತು. ನೀರಿಗೆ ಬಿದ್ದರೆ ಮುಳುಗದಂತೆ ಸುರಕ್ಷಾ ಕವಚ, ಪ್ಯಾರಾಶೂಟ್‌ ಸೇರಿ ಅಗತ್ಯ ಮೂಲ ಸೌಕರ್ಯಗಳ ಉಡುಗೆ ತೊಡಿಸಿದರು. ಪ್ಯಾರಾಶೂಟ್‌ನ ಆ ಬುಟ್ಟಿಯಲ್ಲಿ ಇಬ್ಬಿಬ್ಬರು ಕೂರಲು ವ್ಯವಸ್ಥೆ ಇತ್ತು. ಪ್ಯಾರಾಸೇಲಿಂಗ್ ಆರಂಭವಾಗುತ್ತಿದ್ದಂತೆ ದೈತ್ಯಾಕಾರದ ಪ್ಯಾರಾಶೂಟ್ ನಿಧಾನಕ್ಕೆ ರೋಪ್ ಸಹಾಯದಿಂದ ನಮ್ಮನ್ನು ಮೇಲೇರಿಸಿತು. ಸಾವಿರ ಪ್ಲಸ್ ಅಡಿಗಳಷ್ಟು ಎತ್ತರಕ್ಕೆ ಅದು ನಮ್ಮನ್ನು ಕರೆದೊಯ್ಯಿತು. ಭೂಮ್ಯಾಕಾಶಗಳ ನಡುವೆ ನಾವು ಇದ್ದಾಗ ಥೇಟ್ ಹಕ್ಕಿಯಂತೆ ಹಾರಾಡುತ್ತಿದ್ದೆವು. ಭಯದಲ್ಲಿ ʻಕಣ್ಣೇಕೆ ಮುಚ್ಚುತ್ತೀಯ ನೋಡಲ್ಲಿ ಕೆಳಗಿನ ಅದ್ಭುತʼ ಎಂದು ಜತೆಗಿದ್ದ ನನ್ನ ಮಗ ತಟ್ಟಿದಾಗಲೇ ಕಣ್ಣು ನಾನು ಆ ವಿಶಾಲವಾದ ಅಂಟಾರ್ಟಿಕಾ ಸಾಗರವನ್ನು ನೋಡಿದ್ದೆ. ಭಯದಲ್ಲಿ ಪ್ಯಾರಾಸೇಲಿಂಗ್‌ ಆರಂಭವಾದರೂ ಕೆಳಗಿಳಿಯುವ ಮನಸಿರಲಿಲ್ಲ. ಆದರೆ ಅರ್ಧ ಗಂಟೆ ಕಳೆದೇ ಹೋಗಿತ್ತು. ಅನಿವಾರ್ಯವಾಗಿ ಕೆಳಗೆ ಇಳಿಯಲೇ ಬೇಕಾಯಿತು. ಸಾವಿರ ಅಡಿಗಳ ಎತ್ತರದಲ್ಲಿ ನಾನು ಕಂಡದ್ದು ಕೇವಲ ನೀಲಿಕಡಲನ್ನು ಮಾತ್ರವಲ್ಲ. ಅಲ್ಲಿ ಹಾರುವ ಟಿಟ್ಟಿಭದಂಥ ಹಕ್ಕಿಗಳು, ಜೋರಾಗಿ ಬೀಡುತ್ತಿದ್ದ ಗಾಳಿಯ ಅನುಭವ, ವಿಶಾಲ ಕಡಲಿನ ಅಲೆಗಳ ಏರಿಳಿತ ಹೀಗೆ ಕಂಡದ್ದೆಲ್ಲವೂ ಕಡಲಿನ ಸಾಮ್ರಜ್ಯವನ್ನು ಕಟ್ಟಿಕೊಡುವಂಥದ್ದು.

Untitled design (65)

ಅಷ್ಟು ಎತ್ತರಕ್ಕೆ ಹಾರುವಾಗ ತಲೆಯ ಮೇಲಿನ ಮೋಡಗಳು ಇನ್ನೇನು ಕೈಎತ್ತಿದರೆ ಎಟುಕುತ್ತವೇನೋ ಅನಿಸುತ್ತಿತ್ತು. ಅದೊಂದು ಥರದ ಸಂಭ್ರಮ, ಭಯ, ಉದ್ವೇಗ ಒಟ್ಟೊಟ್ಟಿಗೇ ಆಗುವ ಸನ್ನಿವೇಶ. ಆದರೂ ಆ ನಿಮಿಷಗಳಲ್ಲಿ ಅಲ್ಲಿದ್ದದ್ದು ಅಸೀಮ ಶಾಂತಿ ಮಾತ್ರ. ಮಹಾಸಾಗರದ ಅಡ್ವೆಂಚರ್‌ ಸ್ಪೋರ್ಟ್ಸ್‌ಗಳಿಗಾಗಿ ಅಲ್ಲಿ ಅತಿ ಸುಂದರ ಮತ್ತು ಅಚ್ಚುಕಟ್ಟಾದ ವ್ಯವಸ್ಥೆಗಳಿದ್ದವು.

ಪ್ರವಾಸ ಕೊಡುವುದು ಅಂತಿಂಥ ಅನುಭವವನ್ನಲ್ಲ ಮೊಗೆದಷ್ಟೂ ಮುಗಿಯದ ರೋಚಕ ಸ್ಮೃತಿಗಳನ್ನು!

ದಾರಿ ಹೇಗೆ?

ಸವಾನ, ಅಮೆರಿಕದ ಜಾರ್ಜಿಯಾ ರಾಜ್ಯದ ಒಂದು ನಗರ. ಇದು ತನ್ನ ಕಡಲತೀರದ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಸವಾನದ ಸಮೀಪದಲ್ಲೇ ಸಾಕಷ್ಟು ಐಲ್ಯಾಂಡ್‌ಗಳಿದ್ದು, ಕೌಟುಂಬಿಕ ಸಮಯ ಕಳೆಯಲು ಮತ್ತು ಸಾಹಸ ಚಟುವಟಿಕೆಗಳಿಗಾಗಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...