• ಮೋಹನ ಭಟ್ಟ

ಯುರೋಪಿನ ಶತಮಾನಗಳ ಇತಿಹಾಸದಲ್ಲಿ ಇಂಗ್ಲೆಂಡ್ ಗುರುತಿಸಿಕೊಂಡಿದೆ. ತಾಂತ್ರಿಕತೆ, ಶಿಕ್ಷಣ, ಸಂಶೋಧನೆ, ಕ್ರೀಡೆ, ಸಾಹಿತ್ಯ, ಕಲೆ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ‌ ಮುಂಚೂಣಿಯಲ್ಲಿರುವ ಇಂಗ್ಲೆಂಡ್ ಇಂದು ಆಕರ್ಷಣೀಯ ದೇಶವಾಗಿರುವುದರಿಂದ ಅನೇಕರಿಗೆ ಎರಡನೆಯ‌ ತವರಾಗಿದೆ ಎಂದರೂ ಅತಿಶಯೋಕ್ತಿಯಲ್ಲ. ಯುರೋಪಿನ ವಿವಿಧ ರಾಷ್ಟ್ರಗಳಿಗೆ ನಿತ್ಯ ಸಂಪರ್ಕವನ್ನು ಹೊಂದಿರುವ ಇದು, ಸಾರಿಗೆ ವ್ಯವಸ್ಥೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಆ ಸಾರಿಗೆ ಮಾದರಿಗಳಲ್ಲಿ ದಿನದ ಗರಿಷ್ಟ ವೇಳೆ ಚಾಲನೆಯಲ್ಲಿರುವ ಭೂಗತ ವಿದ್ಯುತ್ ಚಾಲಿತ ಟ್ಯೂಬ್(ರೈಲು) ಜನಪ್ರಿಯತೆ ಗಳಿಸಿದೆ. ಜತೆಗೆ ಲಂಡನ್‌ನ ಜೀವನಾಡಿಯಾಗಿದೆ.

ಇದನ್ನು ಓದಿ :ಪಾರಂಪರಿಕ ಆಟಿಕೆ ರೈಲು ಸೇವೆ ಪುನರಾರಂಭ

ಈ ಭೂಗತ ವಿದ್ಯುತ್ ಚಾಲಿತ ಟ್ಯೂಬ್‌ ಪ್ರತಿದಿನ ಐದು ಮಿಲಿಯನ್ ಜನರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಪ್ರಮುಖ ಮತ್ತು ಕ್ಷಿಪ್ರ ಸಾರಿಗೆಯಾಗಿದೆ. 1863ರಲ್ಲಿ ಭೂಗತ ಸಾರಿಗೆ ಪ್ರಾರಂಭವಾಯಿತು. ಹೊಸ ತಾಂತ್ರಿಕತೆ ಹುಟ್ಟಿಕೊಂಡೊಡನೆ ಅದನ್ನು ಅಳವಡಿಸಿಕೊಳ್ಳುವಲ್ಲಿ ಈ ಸಾರಿಗೆ ಯಶಸ್ವಿಯಾಗಿದೆ. ಮಹಾನಗರದ ಎಲ್ಲಾ ದಿಕ್ಕುಗಳಲ್ಲಿನ ಬೃಹತ್ ರೈಲು, ವಿಮಾನ ನಿಲ್ದಾಣಗಳಿಗೆ ಇದು ಸಾರಿಗೆ ಸಂಪರ್ಕ‌ ಕಲ್ಪಿಸಿದೆ.

Untitled design (85)

24 ಗಂಟೆಯೂ ಚಲಿಸುವ ಟ್ಯೂಬ್‌!

ಈ ಟ್ಯೂಬ್‌ ವಾರಾಂತ್ಯದಲ್ಲಿ‌ ಸುಮಾರು 24 ಗಂಟೆಯೂ ಚಾಲನೆಯಲ್ಲಿರುತ್ತದೆ. ಇದರ ಸಂಚಾರ ಬಹುಪಾಲು ಭೂಮಿಯ ಅಡಿಯೇ ಆಗಿರುವುದರಿಂದ ದಿನವೂ ರಾತ್ರಿಯೆಂದು ಅನಿಸುತ್ತದೆ. ಗ್ರೇಟರ್ ಲಂಡನ್‌ಗೆ ಪ್ರಮುಖ ಜಾಗತಿಕ ವಾಣಿಜ್ಯ, ಹಣಕಾಸು, ಆಡಳಿತ, ಸಂಸತ್ತು, ಔಧ್ಯಮಿಕ ಕಾರ್ಯಾಲಯ, ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳಗಳಿರುವ ಥೇಮ್ಸ್ ನದಿ‌ತೀರದ ಪ್ರದೇಶಕ್ಕೆ, ಮುಂತಾದವುಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ಟ್ಯೂಬ್ ಬಿಡುವಿಲ್ಲದ ಸಮಯದಲ್ಲಿ ಎರಡು ನಿಮಿಷಕ್ಕೊಮ್ಮೆ ಚಲಿಸುತ್ತದೆ. ಸಾರ್ವಜನಿಕ ಭದ್ರತೆಗೆ ಗರಿಷ್ಠ ಆದ್ಯತೆಯನ್ನು ನೀಡುವ ಆಡಳಿತ ಎಐ ಕ್ಯಾಮೆರಾಗಳನ್ನು ಎಲ್ಲೆಡೆ ಅಳವಡಿಸಿದೆ. ಇದರಿಂದಾಗಿ ಜನರ ಹಗಲು- ರಾತ್ರಿ ಓಡಾಟ ಟ್ಯೂಬ್‌ನಿಂದಲೇ! ಟ್ಯೂಬ್ ಓಡಾಟ ಸ್ಥಗಿತವಾದರೆ ಆ ದಿನ ಲಂಡನ್‌ಗೆ ರಜೆ!

Untitled design (84)

ಹನ್ನೊಂದು ವರ್ಣಗಳಲ್ಲಿ ವಿವಿದೆಡೆ ಚಲಿಸುವ ಟ್ಯೂಬ್‌ಗೆ 272 ನಿಲ್ದಾಣಗಳಿವೆ. ಡಿಜಿಟಲ್ ಪೇಮೆಂಟನ್ನು ಹೆಚ್ಚು ಬಳಕೆ ಮಾಡುವುದರಿಂದ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನದಲ್ಲಿ ವಿಳಂಬ ಎದುರಾಗದು. ಇವುಗಳಿಂದಲೂ ಜಾಗತಿಕ ಪ್ರವಾಸಿ ಪ್ರಮುಖ ತಾಣವಾಗಿದೆ ಲಂಡನ್.