Friday, March 6, 2026
Friday, March 6, 2026

ಇದು ವಿಮಾನ ಯಾನದ ಜಮಾನ

ನಮ್ಮ ಮಿದುಳಿನಲ್ಲಿನ ಸರ್ಕಾಡಿಯನ್ ರಿದಮ್ ಎಂಬ ಜೈವಿಕ ಗಡಿಯಾರವು ನಮ್ಮ ದಿನಚರಿಯನ್ನು ನಿಯಂತ್ರಿಸುತ್ತದೆ. ಇದು ಸೂರ್ಯನ ಬೆಳಕಿಗೆ ಅನುಗುಣವಾಗಿ ನಾವು ಯಾವಾಗ ಎಚ್ಚರವಾಗಬೇಕು ಮತ್ತು ಯಾವಾಗ ನಿದ್ರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ನಾವು ವಿಮಾನದ ಮೂಲಕ ಅತಿ ವೇಗವಾಗಿ ಹಲವು 'ಟೈಮ್ ಝೋನ್'ಗಳನ್ನು ದಾಟಿದಾಗ, ಹೊರಗಿನ ಸಮಯ ಬದಲಾಗಿರುತ್ತದೆ. ಆದರೆ, ನಮ್ಮ ದೇಹದ ಗಡಿಯಾರ ಹಳೆಯ ಸಮಯಕ್ಕೇ ಅಂಟಿಕೊಂಡಿರುತ್ತದೆ. ಈ ವ್ಯತ್ಯಾಸವೇ ಜೆಟ್‌ಲ್ಯಾಗ್‌ಗೆ ಕಾರಣ.

  • ಜ್ಯೋತಿ ಪ್ರಸಾದ್

ವಿಮಾನಯಾನ ದೂರದ ದೇಶಗಳನ್ನು ಹತ್ತಿರವಾಗಿಸಿದೆ. ಆದರೆ, ಈ ವೇಗದ ಪ್ರಯಾಣ ನಮ್ಮ ದೇಹದೊಳಗೆ ಉಂಟುಮಾಡುವ ತಾತ್ಕಾಲಿಕ ಏರುಪೇರು ಉಂಟು ಮಾಡುತ್ತದೆ. ಈ ಪರಿಣಾಮವನ್ನು 'ಜೆಟ್‌ಲ್ಯಾಗ್' (Jet Lag) ಎನ್ನುತ್ತೇವೆ. ವಿಮಾನ ಪ್ರಯಾಣಿಕರು ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಇದೂ ಒಂದು. ವೈದ್ಯಕೀಯ ಭಾಷೆಯಲ್ಲಿ ಇದನ್ನು 'ಡೆಸಿಂಕ್ರೋನೋಸಿಸ್' ಎನ್ನುತ್ತಾರೆ.

ಇದು ಕೇವಲ ಮಾನಸಿಕ, ದೈಹಿಕ ಆಯಾಸವಲ್ಲ. ಬದಲಾಗಿ ದೇಹದ ದೇಹದ ಕಾರ್ಯವೈಖರಿಯಲ್ಲಾಗುವ ತಾತ್ಕಾಲಿಕ ಏರುಪೇರು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ವಿಶೇಷವಾಗಿ ಟೈಮ್‌ಜೋನ್‌ಗಳನ್ನು ದಾಟಿ ವೇಗವಾಗಿ ಪ್ರಯಾಣಿಸಿದಾಗ ನಮ್ಮ ದೇಹದ ನೈಸರ್ಗಿಕ ಗಡಿಯಾರವು ಏರುಪೇರಾಗುತ್ತದೆ.

ಇದನ್ನೂ ಓದಿ: ಮಿರಾಕಲ್ಸ್‌ಗಳ ಆಗರ ಮೆರಮಿಕ್‌ ಕೆವರ್ನ್ಸ್‌

ನಾವು ಹತ್ತಾರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿ ಬೇರೆ ದೇಶಕ್ಕೆ ಹೋದಾಗ, ಅಲ್ಲಿನ ಸಮಯಕ್ಕೂ ನಮ್ಮ ದೇಹದ ಗಡಿಯಾರಕ್ಕೂ ಹೊಂದಾಣಿಕೆಯಾಗುವುದಿಲ್ಲ. ಉದಾಹರಣೆಗೆ, ನಾವು ಭಾರತದಿಂದ ಅಮೆರಿಕಕ್ಕೆ ಹೋದಾಗ, ಅಲ್ಲಿ ಹಗಲಿದ್ದಾಗ ನಮ್ಮ ದೇಹಕ್ಕೆ ರಾತ್ರಿಯ ಅನುಭವವಾಗುತ್ತಿರುತ್ತದೆ. ಈ ಅಂತರವನ್ನೇ 'ಜೆಟ್‌ಲ್ಯಾಗ್' ಎನ್ನುತ್ತೇವೆ.

Untitled design - 2026-03-06T143406.479

ನಮ್ಮ ಮಿದುಳಿನಲ್ಲಿನ ಸರ್ಕಾಡಿಯನ್ ರಿದಮ್ ಎಂಬ ಜೈವಿಕ ಗಡಿಯಾರವು ನಮ್ಮ ದಿನಚರಿಯನ್ನು ನಿಯಂತ್ರಿಸುತ್ತದೆ. ಇದು ಸೂರ್ಯನ ಬೆಳಕಿಗೆ ಅನುಗುಣವಾಗಿ ನಾವು ಯಾವಾಗ ಎಚ್ಚರವಾಗಬೇಕು ಮತ್ತು ಯಾವಾಗ ನಿದ್ರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ನಾವು ವಿಮಾನದ ಮೂಲಕ ಅತಿ ವೇಗವಾಗಿ ಹಲವು 'ಟೈಮ್ ಝೋನ್'ಗಳನ್ನು ದಾಟಿದಾಗ, ಹೊರಗಿನ ಸಮಯ ಬದಲಾಗಿರುತ್ತದೆ. ಆದರೆ, ನಮ್ಮ ದೇಹದ ಗಡಿಯಾರ ಹಳೆಯ ಸಮಯಕ್ಕೇ ಅಂಟಿಕೊಂಡಿರುತ್ತದೆ. ಈ ವ್ಯತ್ಯಾಸವೇ ಜೆಟ್‌ಲ್ಯಾಗ್‌ಗೆ ಕಾರಣ.

ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ರಾತ್ರಿ ಸಮಯದಲ್ಲಿ ಎಚ್ಚರವಾಗುವುದು, ಹಗಲಿನಲ್ಲಿ ಅತಿಯಾದ ನಿದ್ರೆ ಬರುವುದು, ದಿನವಿಡೀ ಆಯಾಸವಾಗುವುದು, ಏಕಾಗ್ರತೆಯ ಕೊರತೆ, ತಲೆನೋವು, ಹಸಿವಾಗದಿರುವುದು, ಮಲಬದ್ಧತೆ, ಅತಿಸಾರ, ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು, ಕಾರಣವಿಲ್ಲದೆ ಕೋಪ ಅಥವಾ ಅಸಮಾಧಾನದಂಥ ಮಾನಸಿಕ ಕಿರಿಕಿರಿಯಾಗುವುದು ಇವೆಲ್ಲವೂ ಜೆಟ್‌ಲ್ಯಾಗ್ ನಿಂದಾಗುವ ತೊಂದರೆಗಳು.

Untitled design - 2026-03-06T143424.007

ಜೆಟ್‌ಲ್ಯಾಗ್ ತೀವ್ರತೆ ಕಡಿಮೆ ಮಾಡಲು ಹೀಗೆ ಮಾಡಿ

  1. ಸಾಧ್ಯವಾದರೆ ಪ್ರಯಾಣಕ್ಕೆ ಕೆಲವು ದಿನಗಳ ಮೊದಲೇ ನಮ್ಮ ನಿದ್ರೆಯ ಸಮಯವನ್ನು ನಾವು ಹೋಗುವ ದೇಶದ ಸಮಯಕ್ಕೆ ತಕ್ಕಂತೆ ಸ್ವಲ್ಪ ಬದಲಾಯಿಸಿಕೊಳ್ಳಬಹುದು.
  2. ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯುವುದು.

3.ಕಾಫಿ, ಟೀ ಅಥವಾ ಆಲ್ಕೋಹಾಲ್ ಸೇವನೆಯಿಂದ ನಿದ್ರೆಯ ಕ್ರಮ ಏರುಪೇರಾಗಬಹುದು. ಹಾಗಾಗಿ ಪ್ರಯಾಣದ ಸಮಯದಲ್ಲಿ ಇವುಗಳಿಂದ ದೂರವಿರಿ.

  1. ಸೂರ್ಯನ ಬೆಳಕು ನಮ್ಮ ಚಟುವಟಿಕೆಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ತಲುಪಿದ ದೇಶದಲ್ಲಿ ಹಗಲಿನಲ್ಲಿ ಸೂರ್ಯನ ಬೆಳಕಿಗೆ ಮೈಯೊಡ್ಡಿ. ಸೂರ್ಯನ ಬೆಳಕು ಮಿದುಳಿಗೆ ಎಚ್ಚರವಾಗಬೇಕಾದ ಸಮಯ ಎಂಬ ಸಂಕೇತ ನೀಡುತ್ತದೆ. ಇದರಿಂದ ದೇಹದ ಜೈವಿಕ ಗಡಿಯಾರ ಬೇಗನೆ ಹೊಂದಿಕೊಳ್ಳುತ್ತದೆ.

5.ಹೊಸ ಜಾಗಕ್ಕೆ ಹೋದಾಗ ಅಲ್ಲಿನ ಸಮಯಕ್ಕೆ ಅನುಗುಣವಾಗಿ ಆಹಾರ ಸೇವಿಸಲು ಪ್ರಾರಂಭಿಸಬೇಕು.

  1. ತಲುಪಿದ ಸಮಯ ಹಗಲು ಆಗಿದ್ದರೆ, ಅತಿಯಾದ ಆಯಾಸವಿದ್ದರೆ 20-30 ನಿಮಿಷಗಳ ಕಿರುನಿದ್ರೆ ಮಾಡಿ. ದೀರ್ಘಕಾಲ ನಿದ್ರಿಸಿದರೆ ರಾತ್ರಿ ನಿದ್ರೆ ಬರುವುದಿಲ್ಲ.
  2. ಸಂಜೆಯ ವೇಳೆಯಲ್ಲಿ ಅರ್ಧಗಂಟೆ ಲಘುವಾಯುವಿಹಾರ ಮಾಡುವುದರಿಂದ ದೇಹವು ಸ್ವಲ್ಪ ದಣಿದು ರಾತ್ರಿ ನಿದ್ದೆ ಬರುವ ಸಂಭವ ಹೆಚ್ಚುತ್ತದೆ.
  3. ಆದಷ್ಟೂ ವಿಮಾನದಲ್ಲಿ ಆಗಿಂದಾಗ್ಗೆ ಎದ್ದು ಸ್ವಲ್ಪ ಓಡಾಡಿ ಮತ್ತು ಸ್ಟ್ರೆಚಿಂಗ್ ಮಾಡಿ.

ಪದೇ ಪದೇ ವಿದೇಶ ಪ್ರಯಾಣ ಮಾಡುವ ಕೆಲವರು ಜೆಟ್‌ಲ್ಯಾಗ್‌ ಸಮಸ್ಯೆಯನ್ನು ಕಡಿಮೆ ಮಾಡಲು 'ಮೆಲಟೋನಿನ್' ಎಂಬ ಹಾರ್ಮೋನ್ ಪೂರಕಗಳನ್ನು ಬಳಸುತ್ತೇವೆಂದೂ ಇದು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯೆಂದೂ ಹೇಳುವುದುಂಟು. ಆದರೆ, ಇದನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.

Untitled design - 2026-03-06T143309.020

ಜೆಟ್‌ಲ್ಯಾಗ್ ಎನ್ನುವುದು ಸಮಯದ ವ್ಯತ್ಯಾಸದ ಕಾರಣದಿಂದ ಆಗುವುದಾದರೂ ಸ್ವಲ್ಪಮಟ್ಟಿಗೆ ಪ್ರಯಾಣದ ಸೌಕರ್ಯದ ಮೇಲೂ ಅವಲಂಬಿತವಾಗಿರುತ್ತದೆ. ಇಲ್ಲಿ ಎಕಾನಮಿ ಮತ್ತು ಬಿಸಿನೆಸ್ ಕ್ಲಾಸ್‌ಗಳ ನಡುವಿನ ವ್ಯತ್ಯಾಸ ಎದ್ದುಕಾಣುತ್ತದೆ. ಬಿಸಿನೆಸ್ ಕ್ಲಾಸ್‌ನಲ್ಲಿ ಸೀಟುಗಳು ಪೂರ್ಣವಾಗಿ ಹಾಸಿಗೆಯಂತೆ ಬದಲಾಗುತ್ತವೆ. ಇದರಿಂದ ಪ್ರಯಾಣಿಕರು ಸುಖವಾಗಿ ನಿದ್ರಿಸಬಹುದು. ಗಾಢ ನಿದ್ರೆಯು ‘ಸರ್ಕಾಡಿಯನ್ ರಿದಮ್‘ ಅನ್ನು ಸಮತೋಲನದಲ್ಲಿಡಲು ಸಹಕಾರಿ. ಕಾಲುಗಳನ್ನು ಚಾಚಲೂ ಇಲ್ಲಿ ಹೆಚ್ಚಿನ ಸ್ಥಳವಿರುತ್ತದೆ. ಇದು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಆದರೆ, ಎಕಾನಮಿ ಕ್ಲಾಸ್‌ನಲ್ಲಿ ಸೀಟುಗಳು ಕಿರಿದಾಗಿದ್ದು, ಕುಳಿತೇ ಪ್ರಯಾಣಿಸಬೇಕು. ಹಾಗಾಗಿ ಬೆನ್ನು ನೋವು ಮತ್ತು ನಿದ್ರಾಹೀನತೆ ಉಂಟಾಗಿ ಜೆಟ್‌ಲ್ಯಾಗ್ ತೀವ್ರವಾಗುತ್ತದೆ. ಇಲ್ಲಿ ದೀರ್ಘಕಾಲ ಕಾಲು ಮಡಚಿ ಕುಳಿತುಕೊಳ್ಳುವುದರಿಂದ ದೇಹವು ಜಡವಾಗಿ, ಪ್ರಯಾಣ ಮುಗಿದ ಮೇಲೆ ಅತಿಯಾದ ಆಯಾಸದ ಅನುಭವವಾಗುತ್ತದೆ.

ಜೆಟ್‌ಲ್ಯಾಗ್ ಎನ್ನುವುದು ತಾತ್ಕಾಲಿಕ ಸಮಸ್ಯೆ. ಇದು ನಮ್ಮ ಪ್ರವಾಸದ ಉತ್ಸಾಹವನ್ನು ಕುಂದಿಸಬಹುದು. ಆದರೆ ಸರಿಯಾದ ಯೋಜನೆ ಮತ್ತು ದೇಹಕ್ಕೆ ಅಗತ್ಯವಿರುವ ವಿಶ್ರಾಂತಿ ನೀಡುವ ಮೂಲಕ ಇದನ್ನು ನಿಭಾಯಿಸಬಹುದು. ಆದರೂ ಪ್ರತಿಬಾರಿ ಉತ್ಸಾಹದಿಂದ ವಿಮಾನವೇರುವ ನನಗೆ ಗಮ್ಯಸ್ಥಾನವನ್ನು ತಲುಪಿದ ನಂತರ ಈ ಜೆಟ್‌ಲ್ಯಾಗ್ ಜತೆಗಿನ ಸಂಘರ್ಷ ಸವಾಲೆನಿಸುವುದು ಸತ್ಯ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!