Wednesday, May 13, 2026
Wednesday, May 13, 2026

ಬ್ರಿಟನ್‌ ನೆಲದಲ್ಲಿ ರೈತರ ಸಾಕುಪ್ರಾಣಿಗಳ ಫಾರ್ಮ್‌

ಇಲ್ಲಿ ಪ್ರಾಣಿಗಳು ಮಾತ್ರ ಅಲ್ಲ, ಕಡಲುಗಳ್ಳರ ಹಡಗಿನ ಪ್ರತಿಕೃತಿ, ಜಾರುಬಂಡಿ, ಮಿನಿ ಜೆಸಿಬಿ, ಗಾಳಿಯಲ್ಲಿ ಹಾರಾಡುವ ಬಲೂನ್ ಹೀಗೆ ಮಕ್ಕಳಿಗೆ ಖುಷಿಯಾಗಿ ಸಮಯ ಕಳೆಯಲು ಬೇಕಾದ ಎಲ್ಲವೂ ಉಂಟು.

  • ಪಿ. ಶ್ರೀಧರ್ ನಾಯಕ್

ಇಂಗ್ಲೆಂಡ್ ದೇಶದ ಬಿಲ್ಲಿಂಗ್ ಟನ್‌ನಲ್ಲಿನ ʻಮಿಡ್ ಓಪನ್ ಫಾರ್ಮ್ʼ ರೈತರು ಸಾಕುವ ಪ್ರಾಣಿಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವ ತಾಣ. ಮಕ್ಕಳು ಅವುಗಳನ್ನು ಅತೀ ಸಮೀಪದಿಂದ ನೋಡಿ ಆನಂದಿಸುವ ಅವಕಾಶವನ್ನು ಇದು ನೀಡುತ್ತದೆ.

ಇಲ್ಲಿ ಕುರಿಮರಿಗಳು, ನಾಟಿ ಕೋಳಿ, ಕುದುರೆ, ಕತ್ತೆ, ಮೇಕೆ, ಮೊಲ, ಬಾತುಕೋಳಿ, ಹಂದಿಗಳೂ ಇದ್ದು, ಮಕ್ಕಳು ಅವುಗಳಿಗೆ ಮೇವು ನೀಡಬಹುದು. ಮೇವನ್ನೂ ಇಲ್ಲಿ ಮಾರಾಟ ಮಾಡುತ್ತಾರೆ. ಇಲ್ಲಿನ ಪ್ರಮುಖ ಆಕರ್ಷಣೆ ಕುರಿಮರಿಗಳಿಗೆ ಹಾಲು ಕುಡಿಸುವುದು. ಹಾಲು ಕುಡಿಸಲು ಬಯಸುವವರಿಗೆ ಬಾಟಲಿಗಳಲ್ಲಿ ಹಾಲು ಕೊಡುತ್ತಾರೆ. ಇದಕ್ಕೆ ಪ್ರತ್ಯೇಕ ಹಣ ಪಾವತಿ ಮಾಡಬೇಕಾಗಿಲ್ಲ. ನೂರಾರು ಮರಿಗಳು ಜನರ ಬಳಿ ಧಾವಿಸಿ ಬರುತ್ತವೆ. ಬಾಟಲಿಯಿಂದ ಅವು ಹಾಲು ಕುಡಿಯುವುದನ್ನು ನೋಡುವುದು ಮನೋರಂಜನೆ ನೀಡುತ್ತದೆ. ನೂರಾರು ಮರಿಗಳು ಕೂಗುತ್ತಾ ಬಂದು ಹಾಲು ಕುಡಿಯುವುದನ್ನು ನೋಡುವುದು ಮಕ್ಕಳಿಗೆ ಖುಷಿ ನೀಡುತ್ತದೆ. ನಾವು ಹೋದಾಗ ನೂರಾರು ಮಕ್ಕಳು ಮತ್ತು ಅವರ ಪೋಷಕರೂ ಅಲ್ಲಿದ್ದರು.

ಇದನ್ನೂ ಓದಿ: ಬಲಿ ಜಾತ್ರಾ - ದೂರ ತೀರದ ಯಾನ

ಕುರಿ ಮರಿಗಳ ಹಿಂಡು ನೋಡಿ ಮುಂದೆ ನಡೆದರೆ ಅಲ್ಲಿ ಎತ್ತರದ ಕುದುರೆ ಮತ್ತು ಕತ್ತೆ ಇವೆ. ಅಲ್ಲಿಂದ ಮುಂದಕ್ಕೆ ಹಸುಗಳು. ನಮ್ಮ ಹಸುಗಳನ್ನು ಈ ಹಸುಗಳ ಜತೆ ಹೋಲಿಸುವಂತಿಲ್ಲ. ಅವು ಅಷ್ಟು ದಷ್ಟಪುಷ್ಟವಾಗಿವೆ. ಜನರು ಮುಂದಕ್ಕೆ ಬಂದು ನಿಂತರೆ ಸಾಕು, ಅವು ಬಾಯಿ ತೆರೆದು ನಿಲ್ಲುತ್ತವೆ.

Untitled design - 2026-05-13T190748.370

ಹಸುಗಳನ್ನು ಕಂಡು ಮುಂದೆ ನಡೆದರೆ, ಅಲ್ಲಿ ಮೊಲಗಳಿವೆ. ದಷ್ಟಪುಷ್ಟ ಬೆಳೆದ ಈ ಮೊಲಗಳು ಏಕಾಂಗಿಯಾಗಿ ಕುಳಿತಲ್ಲೇ ತೂಕಡಿಸುತ್ತಿರುತ್ತವೆ. ಇಲ್ಲಿ ಸಾಕಷ್ಟು ವೈವಿಧ್ಯಮಯ ತಳಿಗಳ ಮೊಲಗಳಿವೆ. ಇವುಗಳ ಪಕ್ಕದಲ್ಲಿ ಹೋದರೆ ನಾಟಿ ಕೋಳಿಗಳಿವೆ. ಬಣ್ಣ ಬಣ್ಣದ ಕೋಳಿ ಮರಿಗಳೂ ಇವೆ. ಬಹುಶಃ ಅವುಗಳಿಗೆ ಬಣ್ಣ ಹಚ್ಚಿರಬೇಕು. ಇನ್ನು ಹಂದಿಗಳು, ಬೃಹತ್ ಆಕಾರದವು. ಪ್ರತ್ಯೇಕ ಗೂಡುಗಳಲ್ಲಿ ತೂಕಡಿಸುತ್ತಾ ಶುದ್ಧ ಸೋಮಾರಿಗಳಂತೆ ಬಿದ್ದಿದ್ದವು.

ಇಲ್ಲಿ ಪ್ರಾಣಿಗಳು ಮಾತ್ರ ಅಲ್ಲ, ಕಡಲುಗಳ್ಳರ ಹಡಗಿನ ಪ್ರತಿಕೃತಿ, ಜಾರುಬಂಡಿ, ಮಿನಿ ಜೆಸಿಬಿ, ಗಾಳಿಯಲ್ಲಿ ಹಾರಾಡುವ ಬಲೂನ್ ಹೀಗೆ ಮಕ್ಕಳಿಗೆ ಖುಷಿಯಾಗಿ ಸಮಯ ಕಳೆಯಲು ಬೇಕಾದ ಎಲ್ಲವೂ ಉಂಟು.

Untitled design - 2026-05-13T190741.330

ಮಿನಿ ಜೆಸಿಬಿ ಪಕ್ಕದಲ್ಲಿ ಮರಳು ಇದ್ದು ಇಲ್ಲಿ ಮಕ್ಕಳು ಮರಳಿನಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಾರೆ. ಸಾಕು ಪ್ರಾಣಿಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವ ವ್ಯವಸ್ಥೆಯನ್ನು ನಮ್ಮಲ್ಲಿ ಎಲ್ಲಾ ಕಡೆಗಳಲ್ಲಿ ಆರಂಭಿಸುವುದು ಉತ್ತಮ. ಶನಿವಾರ, ಭಾನುವಾರ ಮತ್ತು ಇತರ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯಲು ಈ ವ್ಯವಸ್ಥೆ ಉಪಯುಕ್ತವಾಗುತ್ತದೆ. ಮಕ್ಕಳಿಗೆ ರೈತರು ಸಾಕುವ ಪ್ರಾಣಿಗಳನ್ನು ಸಮೀಪದಿಂದ ನೋಡುವ ಅವಕಾಶದ ಅಗತ್ಯವಿದೆ. ಬೆಂಗಳೂರಿನ ಜಿಕೆವಿಕೆ ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯಗತ ಮಾಡಿದರೆ, ಮಕ್ಕಳ ಜ್ಞಾನವೃದ್ಧಿಗೆ ಸಹಾಯ ಮಾಡಿದಂತಾಗುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...