Thursday, June 11, 2026
Thursday, June 11, 2026

ಈ ರೆಸಾರ್ಟ್‌ಗೆ ಹೋದರೆ ನೀವೂ ತಗಲಾಕ್ಕೊಳ್ತೀರಿ

ಈ ಸುಂದರ ರೆಸಾರ್ಟ್‌ ಇರುವುದು ಸ್ಯಾಕ್ರೆಡ್ ವ್ಯಾಲಿಯಲ್ಲಿ. ಈ ವ್ಯಾಲಿ ಹೆಚ್ಚೂಕಮ್ಮಿ 90 ಡಿಗ್ರಿ ಕಡಿದಾಗಿದೆ! ಮೇಲಾಗಿ 1200 ಅಡಿ ಎತ್ತರ! ಅಲ್ಲಿಂದ ಬಿದ್ದರೆ ನೇರ ಪಾತಾಳಕ್ಕೆ! ಇಲ್ಲಿನ ಕೊಠಡಿಗಳು ಕ್ಯಾಪ್ಸುಲ್‌ ಆಕಾರದಲ್ಲಿದ್ದು, ತೂಗಾಡುತ್ತಿರುತ್ತವೆ. ಅಲ್ಲಿಗೆ ತಲುವುದೂ ಒಂದು ಸುಂದರ ಮತ್ತು ರೋಚಕ ಪಯಣ. ಸುಮಾರು 400 ಮೀಟರ್‌ಗಳಷ್ಟು ಎತ್ತರದ ಕಡಿದಾದ ಪರ್ವತವನ್ನು ಕ್ಲಿಪ್-ಆನ್ ಕ್ಲೈಂಬಿಂಗ್ ಮೂಲಕ ಹತ್ತಬೇಕು ಮತ್ತು ಜಿಪ್‌ಲೈನ್ ಬಳಸಿ ತಲುಪಬೇಕು. ಇಲ್ಲಿ ಅತಿಥಿಯ ಜತೆಗೆ ಒಬ್ಬ ತಜ್ಞರೂ ಇರುತ್ತಾರೆ.

ಪರ್ವತಾರೋಹಣ ಎಲ್ಲರಿಗೂ ದಕ್ಕುವ ಕಲೆಯಲ್ಲ. ಮೈ-ಕೈ ಬಿಗಿ ಇರಬೇಕು, ಇವುಗಳಿಗಿಂತ ಮನಸು ನೂರ್ಮಡಿ ಬಿಗಿಯಾಗಿರಬೇಕು. ಎಂಟೆದೆ ಗುಂಡಿಗೆ ಅಂತಾರಲ್ಲ ಹಾಗೆ. ಇಲ್ಲ ಎಂದಾದರೆ ಹುರುಪಿಗೆ ಒಂದಷ್ಟು ಎತ್ತರ ಏರಿ ಏರಿದಲ್ಲಿನಿಂದ ಬಿದ್ದು ಮೈಮೂಳೆಗಳೆಲ್ಲ ಮುರಿದುಹೋಗುತ್ತವೆ. ಇಷ್ಟೆಲ್ಲಾ ಗೊತ್ತಿದ್ದೇ ಆ ಗೋಜಿಗೆ ಹೋಗದವರಿದ್ದಾರೆ. ಅವರಲ್ಲಿ ಕೆಲವರಿಗೆ ಇಂದಿಗೂ ಕಡಿದಾದ ಬೆಟ್ಟದ ತುದಿಯಲ್ಲಿ ಹುಸ್ಸಪ್ಪ ಅಂತ ಮಲಗುವ ಆಸೆ ಜೀವಂತವಾಗಿರುತ್ತದೆ. ಅಂಥವರಿಗಾಗಿ ಪೆರುವಿನ ಈ ಸ್ಕೈ ಲಾಡ್ಜ್‌ ಅಡ್ವೆಂಚರ್‌ ಸೂಟ್ಸ್‌ ಹೇಳಿ ಮಾಡಿಸಿದ ತಾಣ.

ಇದನ್ನೂ ಓದಿ: ದಿ ನೆಸ್ಟ್ ಹೋಮ್ ಸ್ಟೇ ... ದಿ ಬೆಸ್ಟ್ ಹೋಮ್ ಸ್ಟೇ!

ಪೆರು, ಇಲ್ಲಿನ ಶೇಕಡ 60ರಷ್ಟು ಪ್ರದೇಶ ಅಮೇಜಾನ್‌ ಮಳೆ ಕಾಡಿನ ಭಾಗವಾಗಿದೆ. ಸುಂದರ ಪ್ರವಾಸಿ ತಾಣ. ದಟ್ಟವಾದ ಅಮೇಜಾನ್‌ ಕಾಡಿನ ಮಧ್ಯೆ ಅಡ್ಡಾಡುವ ಮತ್ತು ಅಲ್ಲಿನ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳುವ ಕಾರಣಕ್ಕೆ ಸಾಕಷ್ಟು ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಂಕಾನಾ ಸಿಟಿ, ಯುನೆಸ್ಕೋ ಪಾರಂಪರಿಕ ತಾಣ ಮಾಚು-ಪಿಚು ಹೀಗೆ ಇಲ್ಲಿನ ಸುಂದರ ಪ್ರವಾಸಿ ತಾಣಗಳು ಇಲ್ಲಿವೆ

ರೋಚಕ ಮತ್ತು ಸುಂದರ ಮಾರ್ಗ

ಈ ಸುಂದರ ರೆಸಾರ್ಟ್‌ ಇರುವುದು ಸ್ಯಾಕ್ರೆಡ್ ವ್ಯಾಲಿಯಲ್ಲಿ. ಈ ವ್ಯಾಲಿ ಹೆಚ್ಚೂಕಮ್ಮಿ 90 ಡಿಗ್ರಿ ಕಡಿದಾಗಿದೆ! ಮೇಲಾಗಿ 1200 ಅಡಿ ಎತ್ತರ! ಅಲ್ಲಿಂದ ಬಿದ್ದರೆ ನೇರ ಪಾತಾಳಕ್ಕೆ! ಇಲ್ಲಿನ ಕೊಠಡಿಗಳು ಕ್ಯಾಪ್ಸುಲ್‌ ಆಕಾರದಲ್ಲಿದ್ದು, ತೂಗಾಡುತ್ತಿರುತ್ತವೆ. ಅಲ್ಲಿಗೆ ತಲುವುದೂ ಒಂದು ಸುಂದರ ಮತ್ತು ರೋಚಕ ಪಯಣ. ಸುಮಾರು 400 ಮೀಟರ್‌ಗಳಷ್ಟು ಎತ್ತರದ ಕಡಿದಾದ ಪರ್ವತವನ್ನು ಕ್ಲಿಪ್-ಆನ್ ಕ್ಲೈಂಬಿಂಗ್ ಮೂಲಕ ಹತ್ತಬೇಕು ಮತ್ತು ಜಿಪ್‌ಲೈನ್ ಬಳಸಿ ತಲುಪಬೇಕು. ಇಲ್ಲಿ ಅತಿಥಿಯ ಜತೆಗೆ ಒಬ್ಬ ತಜ್ಞರೂ ಇರುತ್ತಾರೆ. ಕ್ಯಾಪ್ಸೂಲ್‌ಗೆ ತಲುಪುವ ಮಾರ್ಗವೇ ಒಂದು ಅಡ್ವೆಂಚರ್‌. ಇಲ್ಲಿ ಉಳಿಯುವುದಂತೂ ರೋಚಕತೆಗಿಂತ ಇನ್ನೂ ಒಂದು ಹೆಜ್ಜೆ ಮುಂದೆ.

Untitled design (68)

ಕ್ಯಾಪ್ಸೂಲ್‌ ಕುರಿತು

1200 ಅಡಿ ಎತ್ತರದಲ್ಲಿ ಈ ಕ್ಯಾಪ್ಸೂಲ್‌ಗಳು ನೇತಾಡುತ್ತಿದ್ದು, ಗಾಜಿನ ಮಾದರಿಯ ಕೋಣೆಗಳಾಗಿವೆ. ಆದರೆ ಇವುಗಳ ತಯಾರಿಸಲು ಬಳಸಲಾಗಿರುವುದು ವಿಮಾನಯಾನದಲ್ಲಿ ಬಳಸುವ ಅಲ್ಯೂಮಿನಿಯಂ ಮತ್ತು ಹವಾಮಾನ ನಿರೋಧಕ ಪಾಲಿಕಾರ್ಬೊನೇಟ್‌ ಅನ್ನು. ಒಂಥರಾ ಏರೋಸ್ಪೇಸ್‌ ಟೆಕ್ನಾಲಜಿ ಎನ್ನಬಹುದು. ಗಾಳಿಯಲ್ಲೆ ತೇಲಾಡುತ್ತಾ ಇರುತ್ತವೆ. ಅಲ್ಲಿಂದ ಸುತ್ತಲಿನ ನೋಟವನ್ನು ಕಣ್ತುಂಬಿಕೊಳ್ಳಬಹುದು. ಹಗಲಿನದತ್ತ ಇರಲಿ ಇರುಳಿನ ನೋಟ ಇಲ್ಲಿ ಅದ್ಭುತವಾಗಿರುತ್ತದೆ. ಅಷ್ಟು ಎತ್ತರದಿಂದ ತೂಗಾಡುವ ಕೋಣೆಗಳಿಂದ ಸುತ್ತಲಿನ ಗಾಢ ಹಸಿರು ನೋಡಲಿಕ್ಕೂ ಪುಣ್ಯ ಮಾಡಿರಬೇಕು ಅನ್ನಬಹುದು ಅಲ್ಲಿ ಉಳಿಯುವ ಅತಿಥಿಗಳು.

ಇಲ್ಲಿ ಇರುವುದ ಕೇವಲ ನಾಲ್ಕು ಕ್ಯಾಪ್ಸೂಲ್‌ಗಳು ಅವುಗಳಲ್ಲಿ ಒಂದು ಸಿಬ್ಬಂದಿಗೆ ಇನ್ನುಳಿದವು ಅತಿಥಿಗಳಿಗೆ. ಒಂದೊಂದು ಕ್ಯಾಪ್ಸೂಲ್‌ನಲ್ಲೂ ಹೆಚ್ಚೆಂದರೆ ನಾಲ್ಕು ಜನರು ಉಳಿಯಬಹುದು. ಅಲ್ಲಿಗೆ ಮೂರು ಕ್ಯಾಪ್ಸೂಲ್‌ ಸೇರಿ 12 ಜನ ಅತಿಥಿಗಳು ಒಮ್ಮೆಲೆ ಉಳಿಯಲು ಇಲ್ಲಿ ಅವಕಾಶವಿದೆ ಎಂದಾಯಿತು.

ಇಲ್ಲಿ ಒಂದು ಕ್ಯಾಪ್ಸೂಲ್‌ನಿಂದ ಇನ್ನೊಂದು ಕ್ಯಾಪ್ಸೂಲ್‌ಗೆ ಹೋಗಲು ಸೇತುವೆಯಿಲ್ಲ! ಕಬ್ಬಿಣದ ಸರಳಿನ ಮೆಟ್ಟಿಲುಗಳು ಮತ್ತು ಕೇಬಲ್‌ ಆಧರಿಸಿಯೇ ಹೋಗಬೇಕು. ಸಿಬ್ಬಂದಿಯೂ ಅಷ್ಟೆ ನೀವು ಆರ್ಡರ್‌ ಮಾಡಿದ ಆಹಾರವನ್ನು ಜತೆಗೆ ಮದ್ಯವನ್ನೂ ಬೆನ್ನಿಗೆ ಕಟ್ಟಿಕೊಂಡು ಕ್ಲಿಪ್-ಆನ್ ಕ್ಲೈಂಬಿಂಗ್ ಮೂಲಕ ನಿಮಗೆ ತಲುಪಿಸುತ್ತಾರೆ. ಆದರೆ ಮದ್ಯದ ಮತ್ತು ಹೆಚ್ಚಾಗಿ ಅಲ್ಲಿಂ ಹಕ್ಕಿಯಂತೆ ಹಾರುವ ಪ್ರಯತ್ನ ಯಾರಾದರು ಮಾಡಿದರೆ ಸೆಕೆಂಡುಗಳ ಕಾಲ ದೇಹ ಮತ್ತು ನಂತರ ಸದಾಕಾಲ ಆತ್ಮ ಗಾಳಿಯಲ್ಲಿ ಹಾರಾಡುತ್ತದಷ್ಟೆ. ಆದರೆ ಹೆದರಬೇಡಿ. ಇಲ್ಲಿ ಹೆಚ್ಚಾಗುವಷ್ಟು ಎಣ್ಣೆ ನೀಡುವ ಸೌಲಭ್ಯವಿಲ್ಲ. ಎಲ್ಲವೂ ಹಿತಮಿತ.

ಊಟ-ವಸತಿ ಎಲ್ಲಾ ಉಂಟು

ಇಲ್ಲಿನ ಪ್ರತಿ ಕ್ಯಾಪ್ಸುಲ್‌ನಲ್ಲೂ ಮಲಗಲು ಹಾಸಿಗೆಗಳಿವೆ. ಖಾಸಗಿ ಶೌಚಾಲಯವೂ ಇದೆ. ಊಟವನ್ನು ಮಾತ್ರ ಮೊದಲೇ ಹೇಳಿರಬೇಕು. ಬೆಟ್ಟ ಹತ್ತುವ ಆರಂಭದಲ್ಲಿ ಆರ್ಡರ್‌ ಮಾಡಿದ ಮತ್ತು ಸೀಮಿತ ಮೆನುವಿನ ಆಹಾರ ಮಾತ್ರ ಇಲ್ಲಿ ಸಿಗುತ್ತದೆ. ಆದರೆ ಮೇಲೆ ಹೋಗಿ ಮದ್ಯವನ್ನೂ ಸೇವಿಸಬಹುದು. ಸಿಬ್ಬಂದಿ ಸೇವೆ ಇರುತ್ತದೆ ಎಂದಮೇಲೆ ಪಕ್ಕಾ ಅಲ್ಲಿ ಅವರಿಗಾಗಿಯೂ ಒಂದು ಕ್ಯಾಪ್ಸೂಲ್‌ ಇರಲೇಬೇಕು ಅಲ್ವಾ? ಮೇಲಾಗಿ ನಿಮ್ಮನ್ನು ನಿಮ್ಮ ಕ್ಯಾಪ್ಸೂಲ್‌ಗಳಿಗೆ ತಲುಪಿಸುವ ತಜ್ಞರೇ ಇಲ್ಲಿ ಅಡುಗೆ ಮತ್ತು ಸುರಕ್ಷತಾ ಸಿಬ್ಬಂದಿ.

Untitled design (65)

ಸುರಕ್ಷತೆಗೆ ಒತ್ತು

ಈ ಕ್ಯಾಪ್ಸೂಲ್‌ಗಳಲ್ಲಿ ಬಳಕೆಯಾಗಿರುವ ವಸ್ತುಗಳು ಮತ್ತು ವಿನ್ಯಾಸ ಇದರ ಸುರಕ್ಷತೆಗೆ ಪ್ರಮಾಣ ನೀಡುತ್ತದೆ. ಅತಿಯಾದ ಗಾಳಿ, ಮಳೆ ಮತ್ತು ಹಿಮ ಸುರಿದರೂ ಅವುಗಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಈ ಕ್ಯಾಪ್ಸೂಲ್‌ಗಳಿಗಿದೆ. ಏರೋಸ್ಪೇಸ್ ತಂತ್ರಜ್ಞಾನ ಬಳಸಿ ಇವುಗಳನ್ನು ನಿರ್ಮಿಸಲಾಗಿದೆ. ಇಷ್ಟರ ನಂತರವೂ ಸುರಕ್ಷತಾ ಕ್ರಮವಾಗಿ ಪ್ರತಿ ಪ್ರವಾಸಿಯ ಜತೆಗೆ ಸದಾ ಒಬ್ಬ ತರಬೇತಿ ಪಡೆದ ಸಾಹಸ ಕಲಾ ತಜ್ಞರು ಇರುತ್ತಾರೆ. ಆದರೆ ಇಲ್ಲಿನ ಬೇಸರದ ಸಂಗತಿಯೇ ದರ. ಆದರೂ ಜನರು ವಾಸ್ತವ್ಯದ ಅವಕಾಶಕ್ಕಾಗಿ ಸಾಲು ನಿಲ್ಲುತ್ತಿದ್ದಾರೆ. ಬೇಡಿಕೆ ಹೆಚ್ಚು ಪೂರೈಕೆ ಕಮ್ಮಿ.

ದಾರಿ ಹೇಗೆ?

ಪೆರುವಿನ ಸ್ಕೈಲಾಡ್ಜ್ ಅಡ್ವೆಂಚರ್ ಸೂಟ್ಸ್, ಪೆರು ದೇಶದ ಕುಸ್ಕೋ ನಗರದಿಂದ ಸುಮಾರು 60 ಕಿಮೀ ದೂರದ ಸ್ಯಾಕ್ರೆಡ್ ವ್ಯಾಲಿಯಲ್ಲಿದೆ. ಅಲ್ಲಿಂದ ಕ್ಲಿಪ್‌ ಆನ್‌ ಕ್ಲೈಂಬಿಗ್‌ ಮತ್ತು ಜಿಪ್‌ ಲೈನ್‌ ಮೂಲಕ ತಲುಪಬಹುದು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...