ಅಫ್ಘಾನಿಸ್ಥಾನ ತನ್ನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇ-ವೀಸಾವನ್ನು ಜಾರಿಗೆ ತಂದಿದೆ. ಇನ್ಮುಂದೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಇ-ವೀಸಾದ ಮೂಲಕ ಅಫ್ಘಾನಿಸ್ಥಾನ ಪ್ರಯಾಣ ಸುಲಭವಾಗಲಿದೆ. ಆದರೆ, ಭಾರತೀಯ ಪ್ರಯಾಣಿಕರಿಗೆ ಈ ಸೌಲಭ್ಯ ಇನ್ನೂ ಲಭ್ಯವಾಗಿಲ್ಲ. ರಾಯಾಭಾರ ಕಚೇರಿಗಳ ಮೂಲಕವೇ ವೀಸಾ ಪಡೆದು ಪ್ರಯಾಣ ಬೆಳೆಸುವ ಪದ್ದತಿ ಮುಂದುವರೆಯಲಿದೆ.

ಇ-ವೀಸಾದಿಂದ ಪ್ರಯೋಜನ ಏನು?

New Project (2)

ಮೊರಕ್ಕೊದತ್ತ ಭಾರತೀಯ ಪ್ರವಾಸಿಗರ ಒಲವೇಕೆ?

  • ವೀಸಾ ಪಡೆಯಲು ಅನಗತ್ಯ ವ್ಯಯಗಳು ಕಡಿಮೆಯಾಗಬಹುದು ಮತ್ತು ವೀಸಾ ಪ್ರಕ್ರಿಯೆ ಸುಲಭವಾಗಲಿದೆ.
  • ಆನ್‌ಲೈನ್‌ ಅರ್ಜಿ ಸಲ್ಲಿಸಿ ರಾಯಭಾರ ಕಚೇರಿಗೆ ಭೇಟಿ ನೀಡದೆಯೇ ತಮ್ಮ ಅರ್ಜಿಗಳನ್ನು ಟ್ರ್ಯಾಕ್ ಮಾಡಬಹುದು.
  • ಅಫ್ಘಾನಿಸ್ಥಾನಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು.
  • ಅಫ್ಘಾನಿಸ್ಥಾನ ಪ್ರವಾಸೋದ್ಯಮ ಚೇತರಿಕೆ ಪಡೆದುಕೊಳ್ಳಬಹುದು.
  • ಭಾರತೀಯ ಪ್ರವಾಸಿಗರ ಸಂಖ್ಯೆ ಅಫ್ಘಾನಿಸ್ಥಾನಕ್ಕೆ ಕಡಿಮೆಯಾಗುವ ಸಾಧ್ಯತೆ ಇದೆ.

ಅಫ್ಘಾನಿಸ್ಥಾನ ಜಾರಿಗೆ ತಂದಿರುವ ಈ ಇ-ವೀಸಾವು ವಿದೇಶಿ ಪ್ರವಾಸಿಗರಿಗೆ 30 ದಿನಗಳ ಸಿಂಗಲ್‌ ಎಂಟ್ರಿ ವೀಸಾ ಆಗಿದ್ದು, ಒಮ್ಮೆ ಈ ವೀಸಾ ಪಡೆದ ಪ್ರವಾಸಿಗರು 30 ದಿನಗಳ ಅವಧಿಯವರೆಗೂ ಅಫ್ಘಾನಿಸ್ಥಾನದಲ್ಲಿ ಪ್ರವಾಸ ಮಾಡಬಹುದು. 30 ದಿನಗಳ ಅವಧಿ ಮುಗಿದರೆ ಅಥವಾ ಈ ಅವಧಿ ಮುಗಿಯು ಮೊದಲೇ ಅಫ್ಘಾನಿಸ್ಥಾನ ಗಡಿಯಿಂದ ಹೊರಗೆ ಬಂದರೆ ಮತ್ತೆ ಎಂಟ್ರಿ ಪಡೆಯಲು ಅವರು ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.