ಬೆಂಗಳೂರಿನ ಬೆಟ್ಟಹಳ್ಳಿ ಮಾರ್ಗದಲ್ಲಿ ಹೋಗಿ ಅಲ್ಲಿಂದ ಕಗ್ಗಲಹಳ್ಳಿ ದಾಟಿಕೊಂಡು ಹೋದರೆ ಅದ್ಭುತವಾದ ರೆಸಾರ್ಟ್‌ ಒಂದು ಕಾಣಸಿಗುತ್ತದೆ. ವಿಶಾಲವಾದ ಎಕರೆಗಟ್ಟಲೆ ಜಾಗದಲ್ಲಿ ಟೆಂಟ್‌ ಹೌಸ್‌ಗಳು, ಹಳ್ಳಿ ಮಾದರಿಯ ವುಡ್‌ ಹೌಸ್‌ಗಳು ಕಾಣಿಸುತ್ತವೆ. ಕಣ್ಣು ನೆಟ್ಟು ನೋಡಿದರೆ ಈಜುಕೊಳ, ಆಚೆ ಕಡೆಗೆ ಟ್ರೆಕ್ಕಿಂಗ್‌ ಜಾಗ ಮತ್ತು ಜಿಪ್‌ಲೈನ್‌ ರೋಪ್‌ವೇಗಳೂ ಕಾಣುತ್ತವೆ. ವಾರಪೂರ್ತಿ ಬೇಸತ್ತು, ಮನೆ, ಆಫೀಸು ಮತ್ತು ಸಂಸಾರದಿಂದ ಸಾಕಪ್ಪಾ ಅನಿಸಿ ರಿಲ್ಯಾಕ್ಸ್‌ ಬೇಕಾದವರಿಗೆ ಜಂಗಲ್‌ ಟ್ರಯಲ್ಜ್‌ ರೆಸಾರ್ಟ್‌ ದಿ ಬೆಸ್ಟ್‌. ಇಲ್ಲಿನ ಊಟವಂತೂ ಬೊಂಬಾಟ್‌ ಆಗಿರುತ್ತದೆ. ವೆಜ್‌ ಮತ್ತು ನಾನ್‌ವೆಜ್‌ನಲ್ಲಿ ನಳಪಾಕದಂಥ ಊಟ ಸಿಗುತ್ತದೆ. ನಿಸರ್ಗದ ಚೆಲುವನ್ನು ಆಸ್ವಾದಿಸುತ್ತಾ, ಹಕ್ಕಿಗಳ ಚಿಲಿಪಿಲಿ ಗಾನಕ್ಕೆ ಕಿವಿಕೊಡುತ್ತಾ ಮುದಗೊಳ್ಳಬಹುದು.

ನಗರ ಜೀವನದ ಜಂಜಾಟದಿಂದ ದೂರವಾಗಿ ಸ್ವಲ್ಪ ಸಮಯ ಕಳೆಯುವ ಮತ್ತು ಸಾಹಸ ಚಟುವಟಿಕೆಯ ಭಾಗವಾಗುವ ಆಸೆ ಹಲವರಲ್ಲಿ ಇದ್ದೇ ಇರುತ್ತದೆ. ನೀವು ಬೆಂಗಳೂರು ನಗರದವರಾದರೆ ಸುಮ್ಮನೆ ನಿಮ್ಮ ಕಾರು ಅಥವಾ ಬೈಕಿನಲ್ಲಿ ಸಿಂಪಲ್‌ ರೈಡ್‌ ಬಂದರೆ ಸಾಕು. ನೇರವಾಗಿ ಜಂಗಲ್ ಟ್ರಯಲ್ಜ್‌ನ ಅಂಗಳಕ್ಕೆ ಬರಬಹುದು. ಈ ರೆಸಾರ್ಟ್‌ ಬೆಂಗಳೂರಿನ ಕನಕಪುರ ರಸ್ತೆಯಿಂದ ಕೇವಲ 30 ಕಿಮೀ ದೂರದಲ್ಲಿದೆ. 12 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಕರ್ನಾಟಕದ ಅತಿ ಉದ್ದವಾದ ಮತ್ತು ಅತಿ ಎತ್ತರದ ಜಿಪ್‌ಲೈನ್ ಇಲ್ಲಿದೆ. ನಿಮಗೆ ಅಗತ್ಯವಿರುವ ವಿಶ್ರಾಂತಿ ನೀಡಲು ಅನೇಕ ಸಾಹಸ ಕ್ರೀಡೆಗಳು, ಕೊಳದಲ್ಲಿ ಈಜುವುದು, ನೀರಿನ ಜಿಪ್‌ಲೈನ್ ಇತ್ಯಾದಿಗಳಿವೆ. ಎಲ್ಲಾ ಸಾಹಸ ಕ್ರೀಡೆಗಳನ್ನು ತಜ್ಞರ ನೇತೃತ್ವದಲ್ಲಿಯೇ ನಡೆಸಲಾಗುತ್ತದೆ. ನಿಮ್ಮ ವೀಕೆಂಡ್‌ ಪಾರ್ಟಿ ಮತ್ತು ಬ್ಯುಸಿನೆಸ್‌ ಪಾರ್ಟಿಯನ್ನೂ ಇಲ್ಲಿ ಮಾಡಬಹುದು. ನೇಚರ್‌ ಥೆರಪಿಯೊಂದಿಗೆ ಕಾಲ ಕಳೆಯಲು ಇದು ಅತ್ಯಂತ ಸೂಕ್ತವಾದ ರೆಸಾರ್ಟ್‌ ಎಂಬುದು ಪ್ರವಾಸಿಗರ ಅಭಿಪ್ರಾಯ.

ಅಪರೂಪದ ರೆಸಾರ್ಟ್‌

New Project (48)

ಜಂಗಲ್ ಟ್ರಯಲ್ಜ್‌ ರೆಸಾರ್ಟ್‌ ಎಲ್ಲ ರೆಸಾರ್ಟ್‌ಗಳನ್ನು ಮೀರಿದ್ದು. ಪ್ರತಿ ಪ್ರವಾಸಿಗನಿಗೂ ವಿಶೇಷ ಅನುಭೂತಿಯನ್ನು ನೀಡುತ್ತದೆ. ಪ್ರಕೃತಿಯ ಜತೆಗೆ ಆಪ್ತವಾಗಿ ಬೆರೆತು ಅಡ್ವೆಂಚರ್‌ ಆಕ್ಟಿವಿಟಿಗಳಲ್ಲಿ ಪಾಲ್ಗೊಳ್ಳಬಹುದು. ಜಂಗಲ್‌ ಟ್ರಯಲ್ಜ್‌ನಲ್ಲಿ ಉತ್ತಮ ನೈರ್ಮಲ್ಯ, ಸ್ವಚ್ಛ ಕೊಠಡಿಗಳು ಮತ್ತು ಟೆಂಟ್‌ಗಳಿವೆ. ಲ್ಯಾವೆಟರಿಗಳು ಕೂಡ ಚೆನ್ನಾಗಿವೆ. ಅತಿಥಿಗಳ ಸತ್ಕಾರಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಥೇಟ್‌ ಮನೆಯವರಂತೆಯೇ ಇರುವಷ್ಟೂ ಹೊತ್ತು ಆತಿಥ್ಯ ನೀಡಲಾಗುತ್ತದೆ. ಇನ್ನು ಜಂಗಲ್ ಟ್ರಯಲ್ಜ್‌ ರೆಸಾರ್ಟ್‌ಗೆ ಸುದೀರ್ಘ ಇತಿಹಾಸವಿದೆ. ಚಿಕ್ಕಮಗಳೂರು, ಕಬಿನಿ ಮತ್ತು ಬೀಮೇಶ್ವರದಲ್ಲೂ ಇದರ ಘಟಕಗಳಿವೆ. ಈ ರೆಸಾರ್ಟ್‌ ತನ್ನ ಆರಂಭಿಕ ವರ್ಷಗಳಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ ಒಂದು ಸಣ್ಣ ಘಟಕವಾಗಿತ್ತು. ಕೆಲವು ಅತಿಥಿಗಳಿಗೆ ಮಾತ್ರ ಸೇವೆ ಸಲ್ಲಿಸುತ್ತಿತ್ತು. ಆತಿಥ್ಯ ಉದ್ಯಮದಲ್ಲಿ 10 ವರ್ಷಗಳಿಗೂ ಹೆಚ್ಚಿನ ಅನುಭವದೊಂದಿಗೆ ಈಗ ವಿಸ್ತಾರವಾಗಿದೆ. ಚಿಕ್ಕಮಗಳೂರಿನಲ್ಲಿರುವ ರೆಸಾರ್ಟ್‌ ಅಂತೂ ನಿಸರ್ಗವನ್ನೇ ಹೊದ್ದು ಮಲಗಿದಂತಿದೆ.

ಜಂಗಲ್‌ ಟ್ರಯಲ್ಜ್‌ನಲ್ಲಿ ಉಳಿದರೆ ಇಷ್ಟೆಲ್ಲಾ?

New Project (45)

ವುಡ್‌ಹೌಸ್ ಸ್ಟೇ

ಅದ್ಭುತ ವ್ಯೂ ಪಾಯಿಂಟ್

ಆರಾಮದಾಯಕ ಡೇರೆಗಳು

ಬಜೆಟ್‌ ಫ್ರೆಂಡ್ಲಿ ಬೆಲೆ

ಜಿಪ್‌ಲೈನ್

ಅಡ್ವೆಂಚರ್‌ ಕ್ಯಾಂಪ್

ದೃಶ್ಯವೀಕ್ಷಣೆ

ಜಂಗಲ್ ಟ್ರಯಲ್ಜ್‌ ಚಟುವಟಿಕೆಗಳು

ಜಿಪ್‌ಲೈನ್

ಬರ್ಮಾ ಬ್ರಿಡ್ಜ್‌

ಲಾಗ್ ವಾಕ್

ರೋಪ್‌ವಾಕ್

ಸ್ವಿಮ್ಮಿಂಗ್

ಟ್ರೆಕ್ಕಿಂಗ್

ಕ್ಯಾಂಪ್‌ ಫೈರ್

ಬುಕ್‌ ನೌ!

New Project (46)

ಜಂಗಲ್‌ ಟ್ರಯಲ್ಜ್‌ ರೆಸಾರ್ಟ್‌ನ ಸಿಬ್ಬಂದಿ ಹಗಲು/ರಾತ್ರಿ ರೂಮ್‌ ಬುಕಿಂಗ್ ಪ್ರಕ್ರಿಯೆಯನ್ನು ಸರಳವಾಗಿ ಮುಗಿಸಿಕೊಡುತ್ತಾರೆ. ಆದ್ದರಿಂದ ಆರಾಮವಾಗಿ ಬುಕಿಂಗ್ ಮಾಡಬಹುದು. ರೆಸಾರ್ಟ್‌ನ ಸಿಬ್ಬಂದಿಯ ಜತೆಗೆ ಫೋನ್‌ ಕರೆಯ ಮೂಲಕ ಮಾತನಾಡಿದರೂ ಸಾಕು. ವಾಸ್ತವ್ಯ ಸೇರಿದಂತೆ ಉಳಿದ ಸೌಲಭ್ಯಗಳನ್ನು ಒದಗಿಸುತ್ತಾರೆ.

ಇಲ್ನೋಡಿ

ವೃತ್ತಿಪರ ತಜ್ಞರು

ಕೈಗೆಟುಕುವ ಬೆಲೆ

ಸ್ನೇಹಪರ ಸಿಬ್ಬಂದಿ

ನುರಿತ ಗೈಡ್

ಬಳಕೆದಾರ ಸ್ನೇಹಿ ವೆಬ್‌ಸೈಟ್


ಹೋಗಲೇಬೇಕಾದ ಸ್ಥಳ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಹೋದರೆ ಸಖತ್‌ ಎಂಜಾಯ್‌ ಮಾಡಬಹುದು. ನಾವು ಪಕೃತಿಗೆ ತೀರಾ ಹತ್ತಿರವಾದಷ್ಟು ಅನುಭವ ತುಂಬಾ ಅದ್ಭುತವಾಗಿರುತ್ತದೆ. ಜಿಪ್ ಲೈನ್ ತುಂಬಾ ರೋಮಾಂಚನಕಾರಿಯಾಗಿತ್ತು. ತುಂಬಾ ಎಂಜಾಯ್‌ ಮಾಡಿದೆವು.
-ಸಿನೂಪ್ ಶ್ರೀಧರನ್
ಬೆಂಗಳೂರಿನ ಜಂಗಲ್ ಟ್ರಯಲ್ಜ್‌ ಅದ್ಭುತ ಅನುಭವ ನೀಡಿತು. ಟೆಂಟ್ನ ವಾಸ್ತವ್ಯ, ಅತಿ ಉದ್ದದ ಜಿಪ್ ಲೈನ್ ಮತ್ತು ಹಗ್ಗದ ಚಟುವಟಿಕೆಗಳು ನಿಜವಾಗಿಯೂ ಚೆನ್ನಾಗಿದ್ದವು.
-ವಿಶ್ವಾಸ್ ಆಚಾರ್ಯ

ಸಂಪರ್ಕ:
105, ಬೆಟ್ಟಹಳ್ಳಿ, ಕಗ್ಗಲಹಳ್ಳಿ ಪೋಸ್ಟ್
ಕನಕಪುರ ಮುಖ್ಯ ರಸ್ತೆ, ಗೊಟ್ಟಿಗೆಹಳ್ಳಿ
ಕರ್ನಾಟಕ 562112
ದೂರವಾಣಿ: 080 6945 5344