Monday, January 12, 2026
Monday, January 12, 2026

ಕಲ್ಪತರು ನಾಡಿನಲ್ಲಿ ಕೆಕೆ ಜಂಗಲ್‌ ರೆಸಾರ್ಟ್‌

ಸ್ವಿಮ್ಮಿಂಗ್‌ ಪೂಲ್‌, ರೈನ್‌ ಡ್ಯಾನ್ಸ್‌ ಬಯಸುವವರು ದಿ ಬೆಸ್ಟ್‌ ಆಯ್ಕೆ ಇಲ್ಲಿದೆ. ಮಣ್ಣಿನಲ್ಲಿ ಆಡುವ ಮನಸಿದ್ದರೆ ಮಡ್‌ ಗೇಮ್ಸ್‌, ಔಟ್‌ ಡೋರ್‌ ಪಾರ್ಟಿ ಹಾಗೂ ಇವೆಂಟ್ಸ್‌ ಸ್ಪೇಸ್‌, ಡಿಜೆ ಪ್ರಿಯರಿಗಾಗಿ ಸ್ಪೆಷಲ್‌ ರೂಮ್‌, ಮಕ್ಕಳ ಜತೆಗೆ ಬಂದವರಿದ್ದರೆ ಅಚ್ಚುಕಟ್ಟಾದ ಪ್ಲೇ ಏರಿಯಾ ಹೀಗೆ ಒಂದಲ್ಲ, ಎರಡಡಲ್ಲ, ಇಲ್ಲಿಗೆ ಬರುವ ಗ್ರಾಹಕರಿಗೆ ಆಯ್ಕೆಗಳು ಲೆಕ್ಕಕ್ಕೆ ಸಿಗದಷ್ಟಿವೆ.

ಬಜೆಟ್‌ ಫ್ರೆಂಡ್ಲಿಯಾಗಿರುವ ರೆಸಾರ್ಟ್‌ ಬೇಕೆಂಬ ಬೇಡಿಕೆಯೊಂದೇ ಅಲ್ಲ, ಫನ್‌ ಆಕ್ಟಿವಿಟೀಸ್‌, ಸೂಪರ್‌ ಸ್ಟೇ ಇವೆಲ್ಲದಕ್ಕೂ ವಿಶೇಷ ವ್ಯವಸ್ಥೆ ಕಲ್ಪಿಸಿರುವ ರೆಸಾರ್ಟ್‌ ಬೆಂಗಳೂರು ಸಮೀಪದಲ್ಲಿ ಇದೆಯಾ? ಈ ಪ್ರಶ್ನೆ ನಿಮ್ಮದಾದರೆ ʻಕೆಕೆ ಜಂಗಲ್‌ ರೆಸಾರ್ಟ್‌ʼ ಬಗ್ಗೆ ನೀವು ತಿಳಿಯಲೇಬೇಕು.

ಕೊಕೋ ಶೆಲ್‌ನೊಳಗೆ ಸುಖವಾಸ

kk1

ಡೇ ಔಟ್‌ ಪ್ಯಾಕೇಜ್‌ಗೂ ಇಲ್ಲಿ ಅವಕಾಶವಿದ್ದು, 1000ರುಪಾಯಿಗೆ ಪ್ರಾರಂಭವಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಅನ್‌ ಲಿಮಿಟೆಡ್ ಲಂಚ್‌, ಬ್ರೇಕ್‌ಫಾಸ್ಟ್‌ ಅಷ್ಟೇ ಅಲ್ಲದೆ 45ಕ್ಕೂ ಹೆಚ್ಚು ಆಕ್ಟಿವಿಟೀಸ್‌, ಇಂಡೋರ್‌ ಹಾಗೂ ಔಟ್‌ ಡೋರ್‌ ಗೇಮ್ಸ್‌ ಹೀಗೆ ಅನೇಕ ಸೌಲಭ್ಯಗಳಿರುತ್ತವೆ. ವಿಶೇವೆಂದರೆ ಇಲ್ಲಿ 14 ವಿಐಪಿ ಕಾಟೇಜಸ್‌, 20 ಸ್ಟ್ಯಾಂಡರ್ಡ್‌ ಕಾಟೇಜಸ್‌, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಡಾರ್ಮೆಟ್ರಿಗಳಿವೆ. ಆದರೆ ಇವೆಲ್ಲದಕ್ಕೂ ವಿಭಿನ್ನವೆಂಬಂತೆ ಇಲ್ಲಿರುವ ಕೊಕೋ ಶೆಲ್‌ ಕಾಟೇಜಸ್‌ಗೆ ಗ್ರಾಹಕರಿಂದ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ. ತೆಂಗಿನ ಚಿಪ್ಪಿನಂತಿರುವ ಕಾಟೇಜ್‌ ಒಳಗೆ ಒಂದಿರುಳನ್ನು ಕಳೆಯುವುದಕ್ಕಾಗಿ ಮುಂಗಡ ಬುಕಿಂಗ್‌ ಮಾಡುವವರ ಸಂಖ್ಯೆಯಂತೂ ಲೆಕ್ಕವೇ ಇಲ್ಲ.

kk4

ಬರ್ತ್‌ ಡೇ ಪಾರ್ಟಿ, ಫಂಕ್ಷನ್ಸ್, ಗ್ರೂಪ್‌ ಪಾರ್ಟಿಗಳಿಗಾಗಿ ಇಲ್ಲಿ ಪ್ರತ್ಯೇಕ ಸ್ಥಳವಕಾಶವನ್ನೇ ಕಲ್ಪಿಸಲಾಗಿದ್ದು, ಕೆಕೆ ಉತ್ಸವ್‌ ಮಹಲ್‌ನಲ್ಲಿ ಸೀಟಿಂಗ್‌ ವ್ಯವಸ್ಥೆ, ಕ್ಯಾಟರಿಂಗ್‌ ಗೂ ಅವಕಾಶವಿದೆ.

ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ತೈಲಾಭ್ಯಂಜನಕ್ಕೂ ಇಲ್ಲಿ ಅನುವುಮಾಡಿಕೊಟ್ಟಿದ್ದು, ಇದು ಪ್ಯಾಕೇಜ್‌ ಮಿತಿಯಿಂದ ಹೊರಗಿದೆ. ಇನ್ನು ಸ್ವಿಮ್ಮಿಂಗ್‌ ಪೂಲ್‌, ರೈನ್‌ ಡ್ಯಾನ್ಸ್‌ ಬಯಸುವವರು ದಿ ಬೆಸ್ಟ್‌ ಆಯ್ಕೆ ಇಲ್ಲಿದೆ. ಮಣ್ಣಿನಲ್ಲಿ ಆಡುವ ಮನಸಿದ್ದರೆ ಮಡ್‌ ಗೇಮ್ಸ್‌, ಔಟ್‌ ಡೋರ್‌ ಪಾರ್ಟಿ ಹಾಗೂ ಇವೆಂಟ್ಸ್‌ ಸ್ಪೇಸ್‌, ಡಿಜೆ ಪ್ರಿಯರಿಗಾಗಿ ಸ್ಪೆಷಲ್‌ ರೂಮ್‌, ಮಕ್ಕಳ ಜತೆಗೆ ಬಂದವರಿದ್ದರೆ ಅಚ್ಚುಕಟ್ಟಾದ ಪ್ಲೇ ಏರಿಯಾ ಹೀಗೆ ಒಂದಲ್ಲ, ಎರಡಡಲ್ಲ, ಇಲ್ಲಿಗೆ ಬರುವ ಗ್ರಾಹಕರಿಗೆ ಆಯ್ಕೆಗಳು ಲೆಕ್ಕಕ್ಕೆ ಸಿಗದಷ್ಟಿವೆ.

ಫನ್‌ ಗೇಮ್ಸ್‌

kk8

ಜಿಪ್‌ ಲೈನ್‌, ಜಿಪ್‌ ಸೈಕ್ಲಿಂಗ್‌, ಮಡ್‌ ವಾಲಿಬಾಲ್‌, 360 ಸೈಕ್ಲಿಂಗ್‌, ಬಂಜಿ ಜಂಪ್‌, ಬುಲ್‌ ರೈಡ್‌, ರೋಪ್‌ ಆಕ್ಟಿವಿಟೀಸ್‌, ಎಟಿವಿ ಬೈಕ್‌, ಹಾರ್ಸ್‌ ರೈಡ್‌ ಇಲ್ಲಿನ ಪ್ರಮುಖ ಆಕರ್ಷಣೆ.

ಇಮೇಲ್‌ ವಿಳಾಸ: resortkkjungle@gmail.com

ಸಂಪರ್ಕ ಸಂಖ್ಯೆ:

+91 88847 44455

+91 88847 44466

ವಿಳಾಸ: ಕೆಕೆ ಜಂಗಲ್‌ ರೆಸಾರ್ಟ್‌, ನಂ.14/2, ತಲೆಕೊಪ್ಪ ಗ್ರಾಮ, ಚೇಳೂರು ಹೋಬಳಿ, ಗುಬ್ಬಿ ತಾಲ್ಲೂಕು, ತುಮಕೂರು, ಕರ್ನಾಟಕ-572117

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ