Sunday, December 28, 2025
Sunday, December 28, 2025

ಬ್ಲಾಸಮ್ ಇದು AWESOME !

ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಚಿಕ್ಕಮಗಳೂರು ಒಂದು. ಮಳೆ, ಬೇಸಗೆಯ ಸುಡು ಬಿಸಿಲಷ್ಟೇ ಅಲ್ಲದೆ ಮೈ ನಡುಗುವ ಚಳಿಗಾಲದಲ್ಲೂ ಸಹ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಯಾವ ಬದಲಾವಣೆಯೂ ಆಗುವುದೇ ಇಲ್ಲ. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬರುವ ಅನೇಕ ಮಂದಿ ಇಲ್ಲಿನ ರೆಸಾರ್ಟ್‌ ಹಾಗೂ ಹೋಮ್‌ ಸ್ಟೇಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ಸೆಲೆಬ್ರಿಟಿಗಳಿಗೂ ಇಷ್ಟವಾಗುವ ಬಜೆಟ್‌ ಫ್ರೆಂಡ್ಲೀ ರೆಸಾರ್ಟ್‌ ಯಾವುದು ಗೊತ್ತಾ?

ಚಿಕ್ಕಮಗಳೂರಿನಂಥ ಕೂಲ್‌ ಪ್ಲೇಸ್‌ನಲ್ಲಿ ಕೂಲೆಸ್ಟ್‌ ಸೀಸನ್‌ನಲ್ಲಿ ಸ್ಟೇ ಮಾಡುವಾಸೆ ಎಲ್ಲರಿಗೂ ಇರುತ್ತೆ. ಆದರೆ ಗೂಗಲ್‌ ರಿವ್ಯೂ ಹಾಗೂ ರೇಟಿಂಗ್‌ ಬೆಸ್ಟ್‌ ಇದ್ದರೂ ಗೂಗಲ್‌ ಸರ್ಚ್‌ನಲ್ಲಿ ರೇಟ್‌ ನೋಡಿದ ಮೇಲೆ ನಮ್ಮೂರೇ ನಮಗೆ ಮೇಲು ಎನ್ನುವವರೇ ಹೆಚ್ಚಿನವರು. ಹಾಗಾದರೆ ಚಿಕ್ಕಮಗಳೂರಿನಲ್ಲಿ ಪಾಕೆಟ್‌ ಫ್ರೆಂಡ್ಲಿ ಎನಿಸುವ ರೆಸಾರ್ಟ್‌ ಯಾವುದು? ಹುಡುಕುವುದೇ ಬೇಡ, ದಿ ಬ್ಲಾಸಮ್‌ ರೆಸಾರ್ಟ್‌ ವೈಬ್‌ಸೈಟ್‌ನಲ್ಲಿ ಸ್ಟೇ ಡೇಟ್‌ ಕನ್ಫರ್ಮ್‌ ಮಾಡಿಕೊಂಡು ನೇರವಾಗಿ ಗೂಗಲ್‌ ಮ್ಯಾಪ್‌ ಜತೆ ಪ್ರಯಾಣ ಪ್ರಾರಂಭಿಸಿಯೇ ಬಿಡಬಹುದು.

ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರಿನ ವಾತಾವರಣ, ಬೆಳಗಿನ ಜಾವವಷ್ಟೇ ಅಲ್ಲದೆ, ನಡು ಮಧ್ಯಾಹ್ನವೂ ಇಲ್ಲಿ ಮೈ ನಡುಕ ಬರುವಷ್ಟು ಚಳಿ, ಮಂಜಿನ ವಾತಾವರಣದ ನಡುವೆ ಅದ್ಭುತವಾಗಿ ನೆಲೆನಿಂತಿರುವ ದಿ ಬ್ಲಾಸಮ್‌ ರೆಸಾರ್ಟ್‌ ಅನ್ನು ನೋಡುವುದೇ ಖುಷಿ. ರೆಸಾರ್ಟ್‌ ಒಳಗೆ ಬರುತ್ತಲೇ ಭಾರತೀಯ ಸಂಪ್ರದಾಯದಂತೆ ಹೆಣ್ಣುಮಕ್ಕಳಿಗೆ ಹಣೆಗೆ ಸಿಂದೂರವನ್ನಿಟ್ಟು ಬರಮಾಡಿಕೊಳ್ಳುವ ಇಲ್ಲಿನ ಸಿಬ್ಬಂದಿ, ರೂಮ್‌ ಬುಕ್ಕಿಂಗ್‌ ಆಗುತ್ತಲೇ ವೆಲ್‌ಕಮ್‌ ಡ್ರಿಂಕ್‌ ನೀಡಿ ಆದರದಿಂದ ಬರಮಾಡಿಕೊಳ್ಳುತ್ತಾರೆ.

The blossom resort Chikkamagaluru

ಇಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ರೂಮ್ಸ್‌ ನೀಡಲಾಗುತ್ತದೆ. ಗಾರ್ಡನ್‌ ನಡುವೆಯೇ ಇರುವ ಗಾರ್ಡನ್‌ ವ್ಯೂ ರೂಮ್ಸ್‌ಗಳನ್ನು ಆಯ್ದುಕೊಂಡರೆ, ಅಟ್ಯಾಚ್ಡ್‌ ಪೂಲ್‌ ಜಕೂಸಿಯ ಅನುಭವವನ್ನು ಪಡೆಯಬಹುದು. ಹಿಲ್‌ ವ್ಯೂ ರೂಮ್ಸ್‌ ಬುಕ್‌ ಮಾಡಿಕೊಂಡರೆ ಬಾಲ್ಕನಿಯಿಂದಲೇ ಮುಳ್ಳಯ್ಯನಗಿರಿ ಬೆಟ್ಟದ ವ್ಯೂ ನಿಮಗೆ ಸಿಗುತ್ತದೆ. ಸ್ಯೂಟ್ಸ್‌ ಸಹ ಲಭ್ಯವಿದ್ದು, ಸ್ನೇಹಿತರೊಂದಿಗೆ ಬಂದರೆ ನಿಮಗಿದು ಬೆಸ್ಟ್‌ ಚಾಯ್ಸ್.‌

ಸೌಲಭ್ಯಗಳೇನು?

ಫ್ರೀ ವೈಫೈ

ಟೀ/ ಕಾಫಿ ಮೇಕರ್‌

ಔಟ್‌ ಡೋರ್‌ ಫೈರ್‌ ಪ್ಲೇಸ್‌

ಸ್ವಿಮ್ಮಿಂಗ್‌ ಪೂಲ್‌

ಇಂಡೋರ್‌ ಹಾಗೂ ಔಟ್‌ಡೋರ್‌ ಆಕ್ಟಿವಿಟೀಸ್‌

The blossom resort

ಫುಡ್‌ ಆಂಡ್‌ ಫನ್‌

ರೆಸಾರ್ಟ್‌ ಅಂದಮೇಲೆ ರುಚಿಕರವಾದ ಆಹಾರವಿಲ್ಲದಿದ್ದರೆ ಹೇಗೆ? ಇಲ್ಲಿ ಅನ್‌ ಲಿಮಿಟೆಡ್‌ ವೆಜ್‌ ಹಾಗೂ ನಾನ್‌ ವೆಜ್‌ ನೀಡುವ ವಿಶೇಷವಾದ ರೆಸ್ಟೋರೆಂಟ್‌ ಇದೆ. ಆಹಾರವಷ್ಟೇ ಅಲ್ಲದೆ ಇಂಡೋರ್‌ ಹಾಗೂ ಔಟ್‌ಡೋರ್‌ ಗೇಮ್ಸ್‌, ರೋಪ್‌ ಆಕ್ಟಿವಿಟೀಸ್‌, ಕಿಡ್ಸ್‌ ಪ್ಲೇ ಏರಿಯಾ, ಸ್ಟ್ರೆಸ್‌ಫುಲ್‌ ಲೈಫ್‌ನಿಂದ ಹೊರಬರುವುದಕ್ಕಾಗಿ ಪೆಟಲ್ಸ್‌ ಸ್ಪಾ ಇಲ್ಲಿದ್ದು ಪ್ಯಾಕೇಜ್‌ ಅನುಗುಣವಾಗಿ ಸೂಪರ್‌ ಮಸಾಜ್‌ ಸಹ ಲಭ್ಯವಿದೆ. ಹೀಗೆ ಒಂದಲ್ಲಾ ಎರಡಲ್ಲಾ, ಸುಂದರವಾದ ವಾತಾವರಣದಲ್ಲಿ ಕಾಲ ಕಳೆಯಲು ಹೇಳಿಮಾಡಿಸಿದಂತಿದೆ.

ಮದುವೆಯಾದ ಮೇಲೆ ಮೊದಲ ಬಾರಿಗೆ ನಾನು ಮತ್ತು ಪತಿ ಹೀಗೆ ʻಮಿ ಟೈಮ್‌ʼ ಗಾಗಿ ಚಿಕ್ಕಮಗಳೂರಿನ ದಿ ಬ್ಲಾಸಮ್‌ ರೆಸಾರ್ಟ್‌ಗೆ ಬಂದಿದ್ದೇವೆ. ಇಲ್ಲಿನ ಫುಡ್‌ ಹಾಗೂ ರೂಮ್ಸ್‌ ತುಂಬಾ ಖುಷಿ ನೀಡಿದೆ. ಇಲ್ಲಿನ ಸಿಬ್ಬಂದಿಯಂತೂ ಪ್ರೊಫೆಷನಲ್ ಆಗಿದ್ದು ಅತಿಥಿಗಳೊಂದಿಗೆ ಬೆರೆಯವ ರೀತಿ ಮೆಚ್ಚಿಕೊಳ್ಳಲೇ ಬೇಕು. ಇಲ್ಲಿಗೆ ಬಂದರೆ ಇಂಡೋರ್‌ ಹಾಗೂ ಔಟ್‌ಡೋರ್‌ ಗೇಮ್ಸ್‌ ಟ್ರೈ ಮಾಡುವುದನ್ನೂ ಮರೆಯಬೇಡಿ. ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಲು ಬಯಸುವವರು ನೀವಾದರೆ ತಪ್ಪದೇ ಇಲ್ಲಿಗೆ ಭೇಟಿ ಕೊಡಿ
- ಚೈತ್ರಾ ಕುಂದಾಪುರ

The Blossom Resort (1)

ಸಂಪರ್ಕಿಸಿ:

ದಿ ಬ್ಲಾಸಮ್‌, ಎಸ್‌ಹೆಚ್-‌57, ಭದ್ರಾ ವೈಲ್ಡ್‌ ಲೈಫ್‌ ಸ್ಯಾಂಚುರಿ, ತರೀಕೆರೆ ರಸ್ತೆ, ಚಿಕ್ಕಮಗಳೂರು, ಕರ್ನಾಟಕ- 577137

ಮೊ:

+91 9945191922
+91 8296116185

ಇ ಮೇಲ್‌

reservationblossomresort@gmail.com

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ