ಪ್ರಕೃತಿಯಲ್ಲಿದೆ ನಿಮ್ಮ ಆರೋಗ್ಯ
ಮೆಟ್ರೋ ನಗರಿಯ ಧಾವಂತದಲ್ಲಿ, ಗಡಿಬಿಡಿ ಜೀವನ ಶೈಲಿ ಹಾಗೂ ಹಾದಿ ತಪ್ಪಿದ ಆಹಾರ ಪದ್ಧತಿಯಿಂದ ಉಂಟಾಗಿರುವ ಕಾಯಿಲೆಗಳನ್ನು ಗುಣಮಾಡುವುದು ಇದರ ಪ್ರಮುಖ ಉದ್ದೇಶದೊಂದಿಗೆ ಬೆಂಗಳೂರು ಎಂಬ ಮಹಾನಗರದಲ್ಲಿ ʼಕ್ಷೇಮವನʼ ಎಂಬ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಯಿತು.
ನಿಮಗೆ ಕ್ಷೇಮವನದ ಬಗ್ಗೆ ಗೊತ್ತಾ? ವೆಲ್ ನೆಸ್ ಟೂರಿಸಂ ಅಡಿಯಲ್ಲಿ ಸಿಗುವ ಕರ್ನಾಟಕದ ಅತ್ಯುತ್ತಮ ತಾಣ ಅಂದರೆ ಅದು ಕ್ಷೇಮವನ. ಪ್ರಾಕೃತಿಕ ಜೀವನಶೈಲಿಯಲ್ಲಿರುವ ಕ್ಷೇಮವನದ ಮೂಲ ಇರುವುದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ. 35 ವರ್ಷಗಳ ಹಿಂದೆ, ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಮುಂದಾಲೋಚನೆಯಲ್ಲಿ ಶುರುವಾದ ಭಾರತದ ಮೊದಲ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ನಿಸರ್ಗ ಚಿಕಿತ್ಸೆಗೆ ಮುನ್ನುಡಿ ಬರೆಯಿತು. ಮೊದಲಿಗೆ ಧರ್ಮಸ್ಥಳ ಸಮೀಪದಲ್ಲಿ ʼಶಾಂತಿವನʼ ಹಾಗೂ ನಂತರ ಮಣಿಪಾಲ್‌ನಲ್ಲಿ ʼಸೌಖ್ಯವನʼ ಆರಂಭಗೊಂಡು ನಿಸರ್ಗ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾದವು. ಅದರ ಯಶಸ್ಸಿನಿಂದ ಆರಂಭಗೊಂಡಿದ್ದೇ, ಬೆಂಗಳೂರಿನ ನೆಲಮಂಗಲ ಸಮೀಪವಿರುವ ʼಕ್ಷೇಮವನ”.

ಬೆಂಗಳೂರು ಎಂಬ ಮಹಾನಗರದಲ್ಲಿ ʼಕ್ಷೇಮವನʼ ಎಂಬ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಕೂಡ ಕಾರಣಗಳಿವೆ. ಮೆಟ್ರೋ ನಗರಿಯ ಧಾವಂತದಲ್ಲಿ, ಗಡಿಬಿಡಿ ಜೀವನ ಶೈಲಿ ಹಾಗೂ ಹಾದಿ ತಪ್ಪಿದ ಆಹಾರ ಪದ್ಧತಿಯಿಂದ ಉಂಟಾಗಿರುವ ಕಾಯಿಲೆಗಳನ್ನು ಗುಣಮಾಡುವುದು ಇದರ ಪ್ರಮುಖ ಉದ್ದೇಶ. ಬದಲಾಗಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಿಂದ ನಗರ ಭಾಗದ ಜನರು ಬಹು ಬೇಗ ಕಾಯಿಲೆಗಳಿಗೆ ತುತ್ತಾಗಿ ಬಿಡುತ್ತಾರೆ. ಅವರಿಗೆ ಭಾರತದ ಪ್ರಾಚೀನ ಜ್ಞಾನ ಶಾಖೆಗಳು ಹಾಗೂ ಆಧುನಿಕ ವಿಧಾನಗಳನ್ನು ಬಳಸಿಕೊಂಡು ಪ್ರಕೃತಿ ಚಿಕಿತ್ಸೆ, ಯೋಗ ಮತ್ತು ಔಷಧರಹಿತ ಚಿಕಿತ್ಸೆಯ ಮೂಲಕ ಕ್ಷೇಮವನ ಹಲವಾರು ಕಾಯಿಲೆಗಳನ್ನು ವಾಸಿ ಮಾಡಿದೆ.
ನಗರದ ಸಮೀಪದಲ್ಲೇ ಪ್ರಕೃತಿಯ ಮಡಲಿನಲ್ಲಿರುವ ಕ್ಷೇಮವನವು ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಆಧುನಿಕ ಜೀವನ ಪದ್ಧತಿಯಿಂದ ಬಂದಿರುವ ಕಾಯಿಲೆಗಳನ್ನು ದೇಹದ ಆರೋಗ್ಯದ ಮೇಲೆ ದೈಹಿಕ, ಭಾವನಾತ್ಮಕ, ಅಧ್ಯಾತ್ಮಿಕ ಮತ್ತು ಪ್ರಾಕೃತಿಕ ಪ್ರಭಾವಗಳಿಂದಾಗುವ ಪರಿಣಾಮಗಳನ್ನು ದೃಷ್ಠಿಯಲ್ಲಿರಿಸಿಕೊಂಡು, ಅದಕ್ಕೆ ಪೂರಕವಾದ ವಿಧಾನಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ.

ದೇಹದ ಸ್ವಾಭಾವಿಕ ಹೀಲಿಂಗ್ ಪದ್ಧತಿ ಮೂಲಕ ಪ್ರಕೃತಿ ಸಹಜ ಜೀವನ ಶೈಲಿಯ ಮೂಲಕ ಆಹಾರ, ನಿದ್ರೆ, ಮನಸ್ಸು ಮತ್ತು ದೇಹದ ಆರೋಗ್ಯದ ಮೂಲಕ ಚಿಕಿತ್ಸಾ ಪದ್ಧತಿಯನ್ನು ಕ್ಷೇಮವನದಲ್ಲಿ ಅಳವಡಿಸಿಕೊಳ್ಳಲಾಗಿದೆ.
ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್, ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಪ್ರಾಕೃತಿಕ ಚಿಕಿತ್ಸಾ ವಿಧಾನದ ಮೂಲಕ ಶುಶ್ರೂಷೆ ನೀಡಲಾಗುತ್ತದೆ. ಕ್ಷೇಮವನದ ಶುಶ್ರೂಷಾ ವಿಧಾನಗಳಲ್ಲಿ ಹಲವು ಆಯ್ಕೆಗಳಿದ್ದು, 3 ರಿಂದ 21 ದಿನಗಳ ಸಮಗ್ರ ಕ್ಷೇಮಪಾಲನ ಪ್ಯಾಕೇಜ್‌ಗಳು ಇಲ್ಲಿ ಲಭ್ಯವಿವೆ. ಪೌಷ್ಠಿಕಾಂಶ, ಉಪಶಮನ, ವ್ಯಾಯಾಮ ಮತ್ತು ವಿಶ್ರಾಂತಿ ಮುಂತಾದ ಹಲವು ಶುಶ್ರೂಷಾ ವಿಧಾನಗಳು ಕ್ಷೇಮವನದಲ್ಲಿವೆ.

ಆಕ್ಯುಪಂಕ್ಚರ್, ಡಯೆಟ್ ಮತ್ತು ಉಪವಾಸ ಥೆರಪಿ, ಹೈಡ್ರೋಥೆರಪಿ, ಮಡ್ ಥೆರಪಿ, ಫಿಸಿಯೋಥೆರಪಿ, ರಿಫ್ಲೆಕ್ಸಾಲಜಿ, ಮಸಾಜ್, ಯೋಗ ಮುಂತಾದ ಚಿಕಿತ್ಸಾ ಪದ್ಧತಿಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.
ಎಲ್ಲೂ ಗುಣಮುಖ ಮಾಡಲು ಸಾಧ್ಯವೇ ಇಲ್ಲ ಎಂದಿದ್ದ ಹಲವು ಕಾಯಿಲೆಗಳನ್ನು ಇಲ್ಲಿ ಕೇವಲ ಪ್ರಕೃತಿ ಚಿಕಿತ್ಸೆ ಮೂಲಕ ಗುಣಪಡಿಸುವ ಮೂಲಕ ಎಲ್ಲವನ್ನೂ ಕಳೆದುಕೊಂಡ ಭಾವದಲ್ಲಿದ್ದ ರೋಗಿಗಳಿಗೆ ಹೊಸ ಚೈತನ್ಯವನ್ನು ನೀಡುವ ಕೆಲಸವನ್ನು ಕ್ಷೇಮವನ ಮಾಡಿಕೊಂಡು ಬರುತ್ತಿದೆ.