ರೆಸಾರ್ಟ್ ಉದ್ಯಮದಲ್ಲಿ ಹೊಸ ʼಸೃಷ್ಟಿʼ.. ಪಕ್ಕಾ ವಿಲೇಜ್ ವೈಬ್!
ಈಗೆಲ್ಲ ಮದುವೆ ಛತ್ರಗಳಲ್ಲಿ ಮದುವೆಗಳಾಗುತ್ತಿಲ್ಲ. ಈಗಿನ ವೆಡ್ಡಿಂಗ್ ಸ್ಪಾಟ್ಗಳನ್ನು ನೋಡಿದ್ದೀರಾ? ನಿಸರ್ಗದ ಮಡಿಲಲ್ಲಿ, ಆಗಸ ಎಂಬ ಚಾಮರದ ಕೆಳಗೆ ಮದುವೆಯಾಗಲು ನವ ಜೋಡಿಗಳು ಇಷ್ಟಪಡುತ್ತಿದ್ದಾರೆ. ರೆಸಾರ್ಟ್ಗಳು ಇಂದು ಹಾಟ್ ವೆಡ್ಡಿಂಗ್ ಸ್ಪಾಟ್ಗಳಾಗಿ ಬದಲಾಗಿವೆ. ಮದುವೆ ಛತ್ರದ ಪರಿಕಲ್ಪನೆಯೇ ಈಗ ಉಳಿದಿಲ್ಲ ಎನ್ನಬಹುದು. ಸರ್ಜಾಪುರದ ನೆರಿಗೆ ಗ್ರಾಮದಲ್ಲಿರುವ ಸೃಷ್ಟಿ ವಿಲೇಜ್ ರೆಸಾರ್ಟ್ ವೀಕೆಂಡ್ ರಿಲ್ಯಾಕ್ಸ್ ತಾಣವಷ್ಟೇ ಅಲ್ಲ ವೆಡ್ಡಿಂಗ್ ಡೆಸ್ಟಿನೇಷನ್ ಕೂಡ ಹೌದು.
ʼತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿʼ ರೆಟ್ರೋ ಹಾಡನ್ನು ನಿಮ್ಮಿಷ್ಟಕ್ಕೆ ನೀವೇ ಗುನುಗಿಕೊಂಡು ಸೃಷ್ಟಿ ಲೋಕದೊಳಗೆ ಕಾಲಿಡಿ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತವರಿಗೆ ಸೃಷ್ಟಿ ನವ ಚೈತನ್ಯ ತುಂಬುತ್ತದೆ. ʼಓ ಮನಸೇ ರಿಲ್ಯಾಕ್ಸ್ʼ ಎಂದು ಹೇಳುತ್ತದೆ. ಅದೆಷ್ಟು ದಿನ ಅಂತ ಯಾಂತ್ರಿಕವಾದ ಬದುಕನ್ನು ಬದುಕುತ್ತೀರಿ? ನಿಮ್ಮ ದೇಹ ದಣಿದಿದೆ. ಮನಸೂ ಮೂಕವಾಗಿದೆ. ನಿಮಗೆ ಹಳ್ಳಿಯ ವೈಬ್ ಬೇಕಿದೆ. ಹಸಿರಿನ ವಾತಾವರಣ ಮಧ್ಯೆ ನೀವು ಕಳೆದು ಹೋಗಬೇಕಿದೆ. ನಮ್ಮ ಜತೆಗೆ ಬರ್ತೀರಾ? ಸೃಷ್ಟಿ ವಿಲೇಜ್ ರೆಸಾರ್ಟ್‌ನಲ್ಲಿ ಸುತ್ತಾಡಿಸುತ್ತೇವೆ. ಹೆಚ್ಚೇನೂ ದೂರವಿಲ್ಲ. ನಮ್ಮದೇ ಬೆಂಗಳೂರಿನ ಸರ್ಜಾಪುರದ ಬಳಿಯಿರುವ ನೆರಿಗೆ ಹಳ್ಳಿಯಲ್ಲಿ ಈ ರೆಸಾರ್ಟ್ ಇದೆ. ಹಾಂ. ಬನ್ನಿ ಮತ್ತೆ.. ಒಂದು ನಿಮಿಷ ಇಲ್ಕೇಳಿ; ನಿಮ್ಮ ಫೋನ್ ಸ್ವಿಚ್‌ಆಫ್ ಮಾಡಬಹುದಾ? ಸಾಕು ಫೋನ್ ಒಳಗೆ ನೀವು ಮುಳುಮುಳುಗಿ ಎದ್ದದ್ದು!
ಮದುವೆ, ಬರ್ತ್‌ಡೇ ಪಾರ್ಟಿಗೂ ಸೈ

ಸೃಷ್ಟಿ ವಿಲೇಜ್ ರೆಸಾರ್ಟ್‌ನಲ್ಲಿ ಪಕ್ಕಾ ಹಳ್ಳಿಯ ವೈಬ್ ಇದೆ. ಹಚ್ಚ ಹಸಿರಿನ ವಾತಾವರಣದ ಮಧ್ಯೆ ನಿರ್ಮಾಣವಾಗಿರುವ ಈ ರೆಸಾರ್ಟ್‌ನಲ್ಲಿ ಹಕ್ಕಿಗಳು ಗೂಡುಕಟ್ಟಿವೆ. ರೆಸಾರ್ಟ್‌ನಿಂದ ಅನತಿ ದೂರದಲ್ಲೇ ನವಿಲುಗಳು ಕುಲುಕುಲು ಸದ್ದು ಮಾಡುತ್ತಾ ಗರಿಬಿಚ್ಚಿ ಕುಣಿಯುತ್ತವೆ. ಮುಂಗುಸಿಗಳು ಸ್ವಾಗತ ಹೇಳುತ್ತವೆ. ಮಳೆಗಾಲದಲ್ಲಂತೂ ಸ್ವರ್ಗ ಸದೃಶ ವಾತಾವರಣ ನಮ್ಮನ್ನು ಇನ್ನಿಲ್ಲದಂತೆ ಆಕರ್ಷಿಸುತ್ತದೆ. ಇಂಥ ಬೊಂಬಾಟದ ರೆಸಾರ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿಗಳು ನಡೆಯುತ್ತವೆ. ಮದುವೆ ಮತ್ತು ನಿಶ್ಚಿತಾರ್ಥಗಳು ಇಲ್ಲಿ ಅದ್ದೂರಿಯಿಂದ ನಡೆಯುತ್ತವೆ. ವೆಡ್ಡಿಂಗ್ ಹಾಲ್‌ಗಳಲ್ಲಿ ಮದುವೆಯಾಗಲು ಇಚ್ಛಿಸುವವರಿಗೆ ವಿಶಾಲವಾದ ಹಾಲ್ ಇದೆ. ಪ್ರಕೃತಿಯ ಮಧ್ಯೆ ಸಪ್ತಪದಿ ತುಳಿಯಲು ಹಂಬಲಿಸುವ ಜೋಡಿಗಳಿಗೂ ಓಪನ್ ಸ್ಟೇಜ್ ಇದೆ. ಎತ್ತಿನಗಾಡಿಯ ಮೇಲೆ ಕೂತು ನವ ಜೋಡಿಗಳು ಫೊಟೋಗಳಿಗೆ ಪೋಸ್ ಕೊಡಬಹುದು. ಹಸು ಮತ್ತು ಕರುಗಳನ್ನು ಸುತ್ತ ನಿಲ್ಲಿಸಿಕೊಳ್ಳಬಹುದು. ನಗರದ ಗಲಾಟೆ,ಗದ್ದಲವನ್ನು ಮರೆಸುವಂಥ ವಾತಾವರಣವನ್ನು ಸೃಷ್ಟಿ ವಿಲೇಜ್ ರೆಸಾರ್ಟ್ ನಿಮಗೆ ಕಲ್ಪಿಸಿಕೊಡುತ್ತದೆ. ಸೃಷ್ಟಿಯ ವಿಸ್ಮಯ ಲೋಕದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡುವುದೇ ಸುಯೋಗ ಎಂಬುದು ಹಲವರ ಅಭಿಪ್ರಾಯವಾಗಿದೆ. ಬೇಸಿಗೆ ಕಾಲದಲ್ಲಿ 30% ರಿಯಾಯಿತಿ ದರದಲ್ಲಿ ರೆಸಾರ್ಟ್ ಅನ್ನು ಬಾಡಿಗೆಗೆ ನೀಡುತ್ತಾರೆ. ಅಲ್ಲಿನ ಸಿಬ್ಬಂದಿಯ ಆತ್ಮೀಯ ಆತಿಥ್ಯ ಮತ್ತು ಬೀಳ್ಕೊಡುಗೆ ಆಪ್ತವೆನಿಸುತ್ತದೆ. ಅಲ್ಲಿನ ಯಾರೊಬ್ಬರೂ ವ್ಯವಹಾರಸ್ಥರ ರೀತಿ ವರ್ತಿಸುವುದಿಲ್ಲ. ಮನೆಯ ನೆಂಟರಂತೆ ಮಾತಿಗಳಿದು ನಮ್ಮ ಬೇಕು,ಬೇಡಗಳನ್ನು ಈಡೇರಿಸುತ್ತಾರೆ. ಐವತ್ತರಿಂದ ಐದು ಸಾವಿರದಷ್ಟು ಅತಿಥಿಗಳು ಇಲ್ಲಿ ಸೇರಬಹುದು. ಇದು ಲಕ್ಸುರಿ ಬಾಂಕ್ವೆಟ್ ರೆಸಾರ್ಟ್ ಆಗಿದ್ದು ಬೆಂಗಳೂರಷ್ಟೇ ಅಲ್ಲದೆ ಹೊರ ಜಿಲ್ಲೆ ಮತ್ತು ರಾಜ್ಯದಲ್ಲೂ ಹೆಸರುವಾಸಿಯಾಗಿದೆ. ಪ್ರತಿ ವಾರವೂ ಇಲ್ಲಿ ಗೆಸ್ಟ್‌ಗಳು ತುಂಬಿ ತುಳುಕುತ್ತಿರುತ್ತಾರೆ. ಕಾರ್ಪೊರೇಟ್ ಮೀಟಿಂಗ್ ಮತ್ತು ಇನ್ನಿತರ ಸಭೆ ಮತ್ತು ಸಮಾರಂಭಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಫ್ರೆಂಡ್ಲಿ ರೂಮುಗಳು ಮತ್ತು ಹದಿನೈದು ಕಾಟೇಜ್‌ಗಳು ಇಲ್ಲಿದ್ದು ಏನೇನೂ ಯೋಚಿಸದೆ ಸೃಷ್ಟಿ ರೆಸಾರ್ಟ್‌ನಲ್ಲಿ ಉಳಿದುಕೊಳ್ಳಬಹುದು.
ವೈಫೈ ಮತ್ತು ಇಂಟರ್ನೆಟ್
ರೆಸಾರ್ಟ್‌ನಲ್ಲಿ ನೀವು ಇರುವಷ್ಟೂ ಹೊತ್ತು ಹೈ-ಸ್ಪೀಡ್ ವೈಫೈ ಮತ್ತು ಇಂಟರ್ನೆಟ್ ಸೇವೆ ಲಭ್ಯವಿರುತ್ತದೆ.
ಪವರ್ ಬ್ಯಾಕಪ್
ಸೃಷ್ಟಿ ವಿಲೇಜ್ ರೆಸಾರ್ಟ್‌ನಲ್ಲಿ 24/7 ಪವರ್ ಬ್ಯಾಕಪ್ ವ್ಯವಸ್ಥೆ ಇರುತ್ತದೆ. ಯಾವುದೇ ಅಡಚಣೆಗಳಿರುವುದಿಲ್ಲ. ವಾಸ್ತವ್ಯವನ್ನು ಆರಾಮವಾಗಿ ಆನಂದಿಸಬಹದು. ಹಿತವಾದ ವಾತಾವರಣದ ಮಧ್ಯೆ ನಿಮ್ಮ ಬಿಡುವಿನ ದಿನಗಳನ್ನು ಏಕಾಂತವಾಗಿ ಕಳೆಯಬಹುದು
ಈಜುಕೊಳ

ಹಚ್ಚ ಹಸಿರಿನ ಉದ್ಯಾನ ಮತ್ತು ಸನ್ ಲೌಂಜರ್‌ಗಳು ಮನ ಸೆಳೆಯುತ್ತವೆ. ವಿಶಾಲವಾದ ಈಜುಕೊಳವಿದೆ. ಕೆಮಿಕಲ್ ಇಲ್ಲದ ಶುದ್ಧ ನೀರು ಇರುವುದರಿಂದ ಪೂಲ್ ಒಳಗೆ ಗಂಟೆಗಟ್ಟಲೆ ಈಜಾಡಬಹುದು. ವಯಸ್ಸಿಗೆ ಅನುಗುಣವಾಗಿ ಈಜು ಉಡುಪುಗಳನ್ನು ಒದಗಿಸಲಾಗುತ್ತದೆ.
ಹೊರಾಂಗಣ ಮತ್ತು ಒಳಂಗಾಣ ಕ್ರೀಡೆ
ರೆಸಾರ್ಟ್ ಎಂದಮೇಲೆ ಆಕ್ಟಿವಿಟಿಸ್‌ಗಳು ಇರಲೇಬೇಕು. ಅದರಲ್ಲೂ ಒಳಂಗಾಣ ಮತ್ತು ಹೊರಂಗಾಣ ಕ್ರೀಡೆಗಳು ಈಗಿನ ಟ್ರೆಂಡ್. ಸೃಷ್ಟಿ ರೆಸಾರ್ಟ್‌ನಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್‌ಬಾಲ್, ವಾಲಿಬಾಲ್, ಸೈಕ್ಲಿಂಗ್ ಇದೆ. ಟೇಬಲ್ ಟೆನಿಸ್, ಕೇರಂ ಮತ್ತು ಚೆಸ್ ಆಟಗಳನ್ನು ಆಡಬಹುದು. ಪುಟಾಣಿ ಮಕ್ಕಳಿಗಾಗಿ ಕಿಡ್ ಫ್ರೆಂಡ್ಲಿ ಪಾರ್ಕ್ ಇದೆ.
ಕೋವಿಡ್‌ನಲ್ಲಿ ಮಿಡಿದ ಸೃಷ್ಟಿ

ಐದಾರು ವರ್ಷಗಳ ಹಿಂದೆ ಕೋವಿಡ್ ಮಹಾಮಾರಿಯಿಂದಾಗಿ ಸಾಕಷ್ಟು ಬಡ ಮತ್ತು ಮಧ್ಯಮ ವರ್ಗದ ಜನರು ಕಷ್ಟ ಅನುಭವಿಸಿದರು. ದಿನ ನಿತ್ಯದ ಬದುಕಿನ ನಿರ್ವಹಣೆಯೂ ಕಷ್ಟವಾಯಿತು. ಅಂಥ ಸಂದರ್ಭದಲ್ಲಿ ಸೃಷ್ಟಿ ರೆಸಾರ್ಟ್ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿತು. ರೋಗವನ್ನು ತಡೆಗಟ್ಟಲು ಮಾಸ್ಕ್, ಸ್ಯಾನಿಟೈಸರ್ ಮತ್ತು ದಿನದ ಬಳಕೆಯ ಆಹಾರ ಕಿಟ್ ಅನ್ನು ಸಾವಿರಾರು ಕುಟುಂಬಗಳಿಗೆ ಹಂಚಿತು. ರೆಸಾರ್ಟ್ ಉದ್ಯಮಗಳು ನಷ್ಟ ಅನುಭವಿಸುತ್ತಿದ್ದ ಕಾಲದಲ್ಲೂ ಸೃಷ್ಟಿ ರೆಸಾರ್ಟ್ ಜನರಿಗಾಗಿ ಮಿಡಿಯಿತು. ವ್ಯಾವಹಾರಿಕವಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯನ್ನು ತೋರುವುದರೊಂದಿಗೆ ಮಾದರಿ ಎನಿಸಿಕೊಂಡಿತು.
ನಿಮ್ಮ ಮದುವೆ, ಎಂಗೇಜ್ಮೆಂಟ್ ಅಥವಾ ಬರ್ತ್‌ಡೇ ಪಾರ್ಟಿಗಳಿಗೆ ನೀವು ಸೃಷ್ಟಿ ಲೋಕಕ್ಕೆ ಹೋಗಿ. ಸೃಷ್ಟಿ ಜಗದ ವಿಸ್ಮಯವನ್ನು ನಿಮ್ಮೆದುರು ತಂದು ನಿಲ್ಲಿಸುತ್ತದೆ. ಸೃಷ್ಟಿಗೆ ವಶವಾಗಿ. ಹ್ಯಾವ್ ಎ ನೈಸ್ ಡೇ!
ವಿಳಾಸ & ಸಂಪರ್ಕ
ನೆರಿಗೆ ಗ್ರಾಮ, ಸರ್ಜಾಪುರ ಹೋಬಳಿ,
ಗುಂಜೂರು, ಆನೇಕಲ್- 562125
ಬೆಂಗಳೂರು ಗ್ರಾಮಾಂತರ, ಕರ್ನಾಟಕ
ಫೋನ್ : 9269 2630 30