Saturday, October 17, 2026
Saturday, October 17, 2026

ಮಲೆನಾಡಿನ ಮಡಿಲಲ್ಲೊಂದು ‘ಮಾಲ್ಡೀವ್ಸ್’

ಮಲೆನಾಡಿನ ಹಸಿರಿನ ನಡುವೆ, ಬೆಟ್ಟ-ಕಣಿವೆಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ನೆಮ್ಮದಿಯ ಕ್ಷಣಗಳನ್ನು ಕಳೆಯಲು ಶೂಲಿನ್ ಹಿಲ್ ವ್ಯೂಸ್‌ ಪರ್ಫೆಕ್ಟ್‌ ಪ್ಲೇಸ್‌.

  • ನಂದಿನಿ ಪಟೇಲ್‌

ಚಿಕ್ಕಮಗಳೂರಿನ ಮಲೆನಾಡು ಎಂದರೆ ಕಾಫಿ ತೋಟಗಳು, ಹಸಿರು ಬೆಟ್ಟಗಳು, ಮಂಜಿನ ಮುಸುಕು ಮತ್ತು ತಂಪಾದ ವಾತಾವರಣ ನೆನಪಾಗುತ್ತದೆ. ಇದೇ ಪ್ರಕೃತಿ ಸೌಂದರ್ಯದ ನಡುವೆ, ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುವ ತಾಣವೊಂದು ಗಮನ ಸೆಳೆಯುತ್ತಿದೆ. ಅದುವೇ ಮುಡಿಗೆರೆ ಸಮೀಪದ ʼಶೂಲಿನ್ ಹಿಲ್ ವ್ಯೂಸ್ʼ. ಬೆಟ್ಟ-ಕಾಡುಗಳ ಹಸಿರಿನ ನಡುವೆ ಇರುವ ಈ ರೆಸಾರ್ಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಕರ್ನಾಟಕದ ಮಾಲ್ಡೀವ್ಸ್’ ಎಂದೂ ಕರೆಯಲಾಗುತ್ತಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲೊಂದು ಮೀನಾಕ್ಷಿ ಹೊಟೇಲ್‌

ಪ್ರಕೃತಿಯ ನಡುವಿನ ನೆಮ್ಮದಿಯ ತಾಣ

ಶೂಲಿನ್ ಹಿಲ್ ವ್ಯೂಸ್ ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲೂಕಿನ ಗುಟ್ಟಿಹಳ್ಳಿ ಗ್ರಾಮ, ದೇವರಮನೆ ಪ್ರದೇಶದಲ್ಲಿ, ಹಸಿರು ಬೆಟ್ಟಗಳ ನಡುವೆ ನೆಲೆಸಿದೆ. ಸುತ್ತಲೂ ಕಾಣಿಸುವ ಬೆಟ್ಟಗಳು, ಕಣಿವೆಗಳು, ಮಂಜಿನ ವಾತಾವರಣ ಮತ್ತು ದಟ್ಟ ಹಸಿರು ಪ್ರವಾಸಿಗರಿಗೆ ನಗರ ಜೀವನದ ಗದ್ದಲದಿಂದ ದೂರವಿರುವ ಅನುಭವ ನೀಡುತ್ತವೆ. ಇಲ್ಲಿನ ಪ್ರಕೃತಿ ನೋಟಗಳೇ ಈ ತಾಣದ ಪ್ರಮುಖ ಆಕರ್ಷಣೆ.

Untitled design (90)

ತಂಗಲು ಹಲವು ಆಯ್ಕೆಗಳು

ಪ್ರವಾಸಿಗರ ಅಗತ್ಯಕ್ಕೆ ಅನುಗುಣವಾಗಿ ಇಲ್ಲಿ ವಿವಿಧ ರೀತಿಯ ವಸತಿ ವ್ಯವಸ್ಥೆಗಳಿವೆ. ಟ್ರೀ ಹೌಸ್ ಕಾಟೇಜ್, ಲಕ್ಸುರಿ ಕಾಟೇಜ್, ಎಕ್ಸಿಕ್ಯೂಟಿವ್ ರೂಮ್ ಮತ್ತು ಡಾರ್ಮಿಟರಿ ಆಯ್ಕೆಗಳಿವೆ. ಮರಗಳ ನಡುವೆ ಎತ್ತರದಲ್ಲಿ ನಿರ್ಮಿಸಿರುವ ಟ್ರೀ ಹೌಸ್ ಕಾಟೇಜ್ ಪ್ರಕೃತಿಯೊಂದಿಗೆ ಇನ್ನಷ್ಟು ಹತ್ತಿರವಾಗಿರುವ ಅನುಭವ ನೀಡುತ್ತದೆ. ಲಕ್ಸುರಿ ಕಾಟೇಜ್‌ನಲ್ಲಿ ವಿಶಾಲ ಕೊಠಡಿಗಳು, ಖಾಸಗಿ ಸಿಟ್‌ಔಟ್ ಅಥವಾ ಬಾಲ್ಕನಿಯಿಂದ ಬೆಟ್ಟ-ತೋಟಗಳ ನೋಟವನ್ನು ಆಸ್ವಾದಿಸಬಹುದು.

ಸಾಹಸ ಚಟುವಟಿಕೆಗೂ ಇದೆ ಅವಕಾಶ

ಕೇವಲ ವಿಶ್ರಾಂತಿಗೆ ಸೀಮಿತವಾಗದೆ ಸಾಹಸ ಚಟುವಟಿಕೆಗಳಿಗೂ ಇಲ್ಲಿ ಅವಕಾಶವಿದೆ. ರೋಪ್ ಆ್ಯಕ್ಟಿವಿಟಿಗಳು, ಕೇಬಲ್ ಸೈಕ್ಲಿಂಗ್ ಸೇರಿದಂತೆ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಪ್ರಕೃತಿಯ ನೋಟಗಳ ನಡುವೆ ಇವು ಪ್ರವಾಸಕ್ಕೆ ಮತ್ತಷ್ಟು ರೋಚಕ ಅನುಭವ ನೀಡುತ್ತವೆ.

ರುಚಿಯೂ ಪ್ರಕೃತಿಯಷ್ಟೇ ವಿಶೇಷ

ಇಲ್ಲಿನ ರೆಸ್ಟೋರೆಂಟ್‌ನಲ್ಲಿ ಭಾರತೀಯ, ಪ್ರಾದೇಶಿಕ ಹಾಗೂ ಆಯ್ದ ಅಂತಾರಾಷ್ಟ್ರೀಯ ಖಾದ್ಯಗಳನ್ನು ಸವಿಯಬಹುದು. ಸ್ಥಳೀಯ ರುಚಿಗಳೊಂದಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು, ತಾಜಾ ಪಾನೀಯಗಳು ಹಾಗೂ ವಿಶೇಷ ಸಂದರ್ಭಗಳಿಗೆ ಕಸ್ಟಮೈಸ್ ಮಾಡಿದ ಊಟದ ವ್ಯವಸ್ಥೆಯೂ ಇದೆ. ಬೆಟ್ಟದ ನೋಟವನ್ನು ಆಸ್ವಾದಿಸುತ್ತಾ ಊಟ ಮಾಡುವುದೇ ಇಲ್ಲಿನ ಮತ್ತೊಂದು ಸುಂದರ ಅನುಭವ.

Untitled design (89)

ಎಲ್ಲ ವಯಸ್ಕರಿಗೂ ಹೊಂದುವ ಬೆಸ್ಟ್‌ ಪ್ಲೇಸ್‌

ಪ್ರಕೃತಿಯ ನಡುವೆ ಆರಾಮವಾಗಿ ಸಮಯ ಕಳೆಯಲು ಬಯಸುವ ಕುಟುಂಬಗಳು, ಕಪಲ್ಸ್, ಸ್ನೇಹಿತರ ಗುಂಪುಗಳು ಮತ್ತು ಪ್ರಕೃತಿ ಪ್ರಿಯರಿಗೆ ಈ ತಾಣ ಸೂಕ್ತವಾಗಿದೆ. ಹಿಲ್ ವ್ಯೂ, ಪ್ರಕೃತಿ ನಡಿಗೆ, ಈಜುಕೊಳ, ಬೋನ್‌ಫೈರ್ ಮತ್ತು ಇತರ ಅನುಭವಗಳ ಮೂಲಕ ಇಲ್ಲಿ ಪ್ರವಾಸವನ್ನು ವಿಶ್ರಾಂತಿ ಮತ್ತು ಸಾಹಸದ ಮಿಶ್ರಣವಾಗಿಸಿಕೊಳ್ಳಬಹುದು.

ಶೂಲಿನ್ ಹಿಲ್ ವ್ಯೂಸ್‌ನಲ್ಲಿ ಪ್ರಕೃತಿ, ನೆಮ್ಮದಿ, ಸಾಹಸ ಮತ್ತು ರುಚಿ ಒಂದೇ ಅನುಭವವಾಗಿ ಬೆಸೆದುಕೊಳ್ಳುತ್ತವೆ. ಬೆಟ್ಟ- ಕಣಿವೆಗಳ ಸೌಂದರ್ಯ, ಹಸಿರಿನ ನಡುವೆ ವಾಸ್ತವ್ಯ ಮತ್ತು ಮಲೆನಾಡಿನ ತಾಜಾ ಗಾಳಿ ಮನಸಿಗೆ ಮುದ ನೀಡುತ್ತವೆ.
ಸ್ಥಳೀಯ ರುಚಿಗಳ ಸೊಗಡನ್ನು ಸವಿಯುತ್ತಾ ಪ್ರಕೃತಿಯ ಮಡಿಲಲ್ಲಿ ಕಳೆಯುವ ಕ್ಷಣಗಳು ಪ್ರವಾಸವನ್ನು ಮತ್ತಷ್ಟು ವಿಶೇಷವಾಗಿಸುತ್ತವೆ.
ಕುಟುಂಬ, ಸ್ನೇಹಿತರು ಅಥವಾ ಜೋಡಿಯಾಗಿ ವಿಶ್ರಾಂತಿ ಪಡೆಯಲು ಇದು ವಿಭಿನ್ನ ಅನುಭವ ನೀಡುವ ತಾಣವಾಗಿದೆ. ಒಟ್ಟಿನಲ್ಲಿ, ಶೂಲಿನ್ ಹಿಲ್ ವ್ಯೂಸ್‌ನಿಂದ ಮರಳುವಾಗ ಪ್ರಕೃತಿಯ ಸೌಂದರ್ಯದ ಜತೆಗೆ ಸವಿನೆನಪುಗಳನ್ನೂ ಹೊತ್ತು ಬರುವುದು ಖಚಿತ.

---

ವಿಳಾಸ:

ಗುಟ್ಟಿಹಳ್ಳಿ ಗ್ರಾಮ, ದೇವರಮನೆ, ಗುಟ್ಟಿ ಪೋಸ್ಟ್, ಮುಡಿಗೆರೆ, ಚಿಕ್ಕಮಗಳೂರು – 577132.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ