ಕೇರಳ ಮೂಲದ ವ್ಯಕ್ತಿ ಕೂರ್ಗ್‌ನಲ್ಲಿ ಎಕರೆಗಟ್ಟಲೆ ಕಾಫಿ ಭೂಮಿಯನ್ನು ಖರೀದಿಸುತ್ತಾರೆ. ಅದೇ ಜಾಗದಲ್ಲಿ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿ ಎಂಬಂತೆ ರೆಸಾರ್ಟ್‌, ಸ್ವಿಮ್ಮಿಂಗ್‌ ಪೂಲ್‌, ಬಾರ್‌ & ರೆಸ್ಟೋರೆಂಟ್‌ ಸ್ಥಾಪಿಸುತ್ತಾರೆ. ಆ ವ್ಯಕ್ತಿಯ ಹೆಸರು ಥಾಮಸ್ ಇ. ರಾಮಪುರಂ. ಅವರು ಸ್ಥಾಪಿಸಿದ ರೆಸಾರ್ಟ್‌ನ ಹೆಸರು ಇವಾಲ್ವ್‌ ಬ್ಯಾಕ್.‌ ಮೂವತ್ತು ವರ್ಷಗಳ ಹಿಂದೆ ಕೂರ್ಗ್‌ನಲ್ಲಿ ಪ್ರಾರಂಭವಾದ ಈ ರೆಸಾರ್ಟ್‌ ಮೂಲ ಬೇರು. ರೆಂಬೆ ಕೊಂಬೆಗಳಂತೆ ಕೂರ್ಗ್‌, ಕಬಿನಿ, ಹಂಪಿ ಮತ್ತು ದಕ್ಷಿಣ ಆಫ್ರಿಕಾದ ಕಲಹರಿಯಲ್ಲಿ ಇವಾಲ್ವ್‌ ಬ್ಯಾಕ್ ತಲೆ ಎತ್ತಿನಿಂತಿದೆ. ಆತಿಥ್ಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ. ರಾಮಪುರಂ ಕಂಡ ಕನಸು ನನಸಾಗಿ ಇಂದು ಅದರ ಖ್ಯಾತಿ ಗಗನ ಚುಂಬಿಸಿದೆ. ರಾಮಪುರಂ ಕುಟುಂಬ ಹೋಲ್ಡಿಂಗ್ಸ್‌ ಬ್ಯುಸಿನೆಸ್‌ನಲ್ಲಿ ನೂರು ವರ್ಷಕ್ಕೂ ಅಧಿಕ ವೃತ್ತಿ ಅನುಭವ ಹೊಂದಿದ್ದಾರೆ. ಈ ಮೊದಲು ಈ ಪ್ರಾಪರ್ಟಿ ಆರೆಂಜ್‌ ಕೌಂಟಿ ಕಂಪೆನಿಯ ಅಡಿ ಕಾರ್ಯನಿರ್ವಹಿಸುತ್ತಿತ್ತು. ಈಗಲೂ ಕಂಪೆನಿಯ ಒಡೆತನದಲ್ಲೇ ಇದೆ. ಇ. ಥಾಮಸ್‌ ರಾಮಪುರಂ ಅವರಿಗೆ ಏಳು ಪುತ್ರರು. ಇದೀಗ ಅವರೇ ರೆಸಾರ್ಟ್‌ ಉದ್ದಿಮೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ರೆಸಾರ್ಟ್‌ ಉದ್ಯಮ ವಿಶಾಲವಾಗುತ್ತಿದೆ. ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ ಕೂಡ ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಪ್ರಕೃತಿ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು, ಅದ್ಭುತ ಅನುಭವಗಳನ್ನು ಒದಗಿಸುವುದು ಇವಾಲ್ವ್‌ ರೆಸಾರ್ಟ್‌ನ ಮುಖ್ಯ ಧ್ಯೇಯ. ನಾವು ಹಂಪಿಯ ಕಮಲಾಪುರದಲ್ಲಿರುವ ಇವಾಲ್ವ್‌ ಬ್ಯಾಕ್ ರೆಸಾರ್ಟ್‌ ಬಗ್ಗೆ ಹೇಳಲು ಹೊರಟಿದ್ದೇವೆ. ಹಾಂ. ನೆನಪಿರಲಿ, ಅದು ಕೂಡ ರಾಮಪುರಂ ಕುಟುಂಬದ ನೇತೃತ್ವದಲ್ಲಿಯೇ ನಡೆಯುತ್ತಿದೆ. ಆ ರೆಸಾರ್ಟ್‌ ಅತ್ಯುನ್ನತ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹಂಪಿ ಎಂದರೆ ಕೇಳಬೇಕೆ? ಅಲ್ಲಿನ ಪ್ರತಿ ಕಲ್ಲೂ ವೈಭವದ ದಿನಗಳ ಬಗ್ಗೆ ಕಥೆ ಹೇಳುತ್ತದೆ. ಪರಂಪರೆಯನ್ನು ಮೈಗೆ ಹೊದ್ದುಕೊಂಡಿದೆ. ಹಂಪಿ ವಿಶ್ವ ಪಾರಂಪರಿಕ ತಾಣ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವೂ ಹೌದು. ಇಂಥ ಅದ್ಭುತವಾದ ಜಾಗದಲ್ಲಿ ಒಂದು ರೆಸಾರ್ಟ್‌ ಇದೆ ಎಂದರೆ? ಸ್ವರ್ಗವೇ ಧರೆಗಿಳಿದಂತೆ! ಇವಾಲ್ವ್‌ ಬ್ಯಾಕ್ ರೆಸಾರ್ಟ್‌ ಐಷಾರಾಮಿ ರೆಸಾರ್ಟ್‌ ಆಗಿರಬಹುದು. ಆದರೆ ಅಲ್ಲಿ ಪುರಾತನ ಕಾಲದ ವೈಬ್‌ ಇದೆ. ಅರಮನೆ ಮಾದರಿಯ ಕೋಣೆಗಳು ಮತ್ತು ನೆಲ ಹಾಸಿದೆ. ಅಲ್ಲಿನ ಪ್ರತಿ ಕೋಣೆಯನ್ನೂ ಅರಮನೆಯ ಮಾದರಿಯಲ್ಲೇ ನಿರ್ಮಿಸಲಾಗಿದೆ. ಮೂವತ್ತು ವರ್ಷಗಳಿಂದ ರೆಸಾರ್ಟ್‌ ಉದ್ಯಮದಲ್ಲಿ ಛಾಪು ಬೀರಿರುವ ರಾಮಪುರಂ ಕುಟುಂಬ 2016ರಲ್ಲಿ ಹಂಪಿಯಲ್ಲಿ ತನ್ನ ಶಾಖೆಯನ್ನು ತೆರೆಯಿತು. 46 ಕಾಟೇಜ್‌ಗಳಿವೆ. 180ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಶೇ. 60ರಷ್ಟು ಸ್ಥಳೀಯ ಜನರಿಗೆ ಉದ್ಯೋಗ ನೀಡಿರುವುದು ವಿಶೇಷ. ವಾಸ್ತುಶಿಲ್ಪದಿಂದ ಹಿಡಿದು ಪ್ರಾಚೀನ ಪರಂಪರೆಯೊಂದಿಗೆ ಕಳೆದು ಹೋಗಬಹುದು. ಅರೆ.. ಮದುವೆಯಾದ ನವ ಜೋಡಿಗಳ ಹನಿಮೂನ್‌ಗೂ ಇದು ಅದ್ಭುತ ರೆಸಾರ್ಟ್‌. ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನಲ್ಲಿ ನಿವಾಸ, ನಿಲಯ, ಝೆನಾನ, ಜಲಮಹಲ್‌ ಎಂಬ ನಾಲ್ಕು ಸೂಟ್‌ಗಳಿವೆ ಎಂಬುದನ್ನೂ ಮರೆಯಬೇಡಿ. ಸಾಧ್ಯವಾದರೆ ಎಲ್ಲವನ್ನೂ ಹಿಡಿಯಾಗಿ ಅಲ್ಲ. ಇಡಿಯಾಗಿ ಅನುಭವಿಸಿ. ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ ಹಂಪಿ ಒದಗಿಸುವ ಸೌಲಭ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಪ್ರತಿ ಪ್ರವಾಸಿಯೂ ಭೇಟಿ ನೀಡಲೇಬೇಕಾದ ಐತಿಹಾಸಿಕ ತಾಣ

ಸೌಲಭ್ಯಗಳು

ಇವಾಲ್ವ್ ಬ್ಯಾಕ್ ಅಕ್ಷರಶಃ ಹಂಪಿಯ ಗತವೈಭವವನ್ನು ಪ್ರತಿಬಿಂಬಿಸುತ್ತದೆ. ಅಲ್ಲಿನ ಕಣ ಕಣದಲ್ಲೂ ಭವ್ಯತೆ ಯಿದೆ. ಆಧುನಿಕ ವಿನ್ಯಾಸವಿದ್ದರೂ ಪುರಾತನ ಕಾಲದ ವೈಬ್‌ ಇದೆ. ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ ಇಂದು ಜಾಗತಿಕಮಟ್ಟದಲ್ಲಿ ಪ್ರಸಿದ್ಧಿಯಾಗಿದೆ. ಅದಕ್ಕೆ ಕಾರಣ ಅದು ಒದಗಿಸುವ ಸೌಲಭ್ಯಗಳು. ಅಲ್ಲಿ ಇನ್ಫಿನಿಟಿ ಪೂಲ್ ಇದೆ. ವಿಶ್ವ ದರ್ಜೆಯ ಆಯುರ್ವೇದ ಸೆಂಟರ್‌ ಇದೆ. ವಿಶ್ರಾಂತಿ ಕೋಣೆಗಳಿವೆ. 180ಕ್ಕೂ ಹೆಚ್ಚು ಸಿಬ್ಬಂದಿಗಳು ಅತಿಥಿಗಳನ್ನು ಆಪ್ತವಾಗಿ ಸತ್ಕರಿಸುತ್ತಾರೆ.

Untitled design (88)

ಇನ್ಫಿನಿಟಿ ಪೂಲ್

ಇನ್ಫಿನಿಟಿ ಪೂಲ್‌ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನ ಪ್ರಮುಖ ಆಕರ್ಷಣೆ. ಮಕ್ಕಳಿಗೆ ಪ್ರವೇಶವಿಲ್ಲ. ವಯಸ್ಕರು ಮಾತ್ರ ಈ ಪೂಲ್‌ ಒಳಗೆ ಇಳಿದು ವಾಟರ್‌ ಥೆರಪಿ ಮಾಡಿಕೊಳ್ಳಬಹುದು. ವಿಜಯ ನಗರ ಕಾಲದ ಕೊಳಗಳಿಂದ ಪ್ರೇರಣೆಗೊಂಡು ಈ ಇನ್ಫಿನಿಟಿ ಪೂಲ್‌ ಅನ್ನು ನಿರ್ಮಿಸಲಾಗಿದೆ. ಅತ್ಯಾಪ್ತವಾದ ವಾತಾವರಣದ ನಡುವೆ ಈ ಪೂಲ್‌ ಇದ್ದು, ಸುತ್ತಲೂ ಹಂಪಿಯ ಬಂಡೆಗಳಿವೆ. ಪೂಲ್‌ನ ನೀರು ಶುಭ್ರವಾಗಿದೆ. ಮಳೆಗಾಲದಲ್ಲಂತೂ ಇನ್ಫಿನಿಟಿ ತುಂಬಿ ತುಳುಕುತ್ತಿರುತ್ತದೆ.

ರೀಡಿಂಗ್‌ ರೂಮ್

ಇವಾಲ್ವ್‌ ಬ್ಯಾಕ್‌ನ ರೀಡಿಂಗ್‌ ರೂಮ್‌ ಅನ್ನು ನೋಡುತ್ತಿದ್ದಂತೆ ನಮ್ಮೊಳಗಿನ ಓದುಗ ತಕ್ಷಣಕ್ಕೆ ಜಾಗೃತನಾಗುತ್ತಾನೆ. ಇಡೀ ಕೋಣೆಯ ವಾತಾವರಣ ಮತ್ತು ಅಲ್ಲಿನ ವ್ಯವಸ್ಥೆ ನಮ್ಮನ್ನು ಓದಲು ಪ್ರೇರೇಪಿಸುತ್ತದೆ. ಕಿಟಕಿಯ ಕರ್ಟನ್‌ ಸರಿಸಿದರೆ ಹಂಪಿಯ ವೈಭವ ಕಾಣುತ್ತದೆ. ಅಲ್ಲಿನ ನೆಲ ಹಾಸಿನಲ್ಲೂ ಸೊಗಸಿದೆ. ಕೂರುವ ಕುರ್ಚಿಯಲ್ಲೂ ವೈಭೋಗವಿದೆ. ಸುಸಜ್ಜಿತ ಗ್ರಂಥಾಲಯವಿದೆ. ಐತಿಹಾಸಿಕ ಗ್ರಂಥಗಳೂ ಇವೆ. ಈ ಕೋಣೆ ಥೇಟ್‌ ರಾಜ ಮಹಾರಾಜರ ಓದುವ ಕೋಣೆಯಂತಿದೆ. ಇವಾಲ್ವ್‌ ಬ್ಯಾಕ್‌ನವರ ಸಿಗ್ನೇಚರ್ ಬ್ರ್ಯಾಂಡ್ ಆದ ಹಬೆಯಾಡುವ 'ಸಿದಾಪುರ್' ಕಾಫಿಯನ್ನು ಹೀರುತ್ತಾ ಪುಟಗಳನ್ನು ತಿರುವಬಹುದು.

ಆಯುರ್ವೇದ ಕೇಂದ್ರ

ವೆಲ್‌ನೆಸ್‌ ರೆಸಾರ್ಟ್‌ಗಳಲ್ಲಿ ಇರುವಂತೆ ಇವಾಲ್ವ್‌ ಬ್ಯಾಕ್‌ನಲ್ಲೂ ಆಯುರ್ವೇದ ಸೆಂಟರ್‌ ಇದೆ. ರೆಸಾರ್ಟ್‌ನ ಪ್ರಾರಂಭದ ದಿನಗಳಿಂದಲೂ ಈ ಆಯುರ್ವೇದ ಕೇಂದ್ರ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ರೆಸಾರ್ಟ್‌ನಲ್ಲಿ ದಶಕಗಳ ಕಾಲ ತರಬೇತಿ ಪಡೆದ ಅನುಭವಿ ವೈದ್ಯರ ತಂಡವೇ ಇದೆ. ಮಸಾಜ್ ಥೆರಪಿಸ್ಟ್‌ಗಳೂ ಇದ್ದಾರೆ. ಬಗೆ ಬಗೆಯ ಮಸಾಜ್‌ಗಳನ್ನು ಮಾಡಿಸಿಕೊಳ್ಳುತ್ತಾ ಆಯಾಸವನ್ನು ಕಳೆಯಬಹುದು. ಅಗತ್ಯವಿರುವ ಚಿಕಿತ್ಸೆ ಮತ್ತು ಸಲಹೆಗಳೊಂದಿಗೆ ರಾಜ ಮನೆತನದ ಶಾಂತ ವಾತಾವರಣದಲ್ಲಿ ಕಾಲು ಚಾಚಿಕೊಂಡು ಆರಾಮವಾಗಿ ಮಲಗಬಹುದು.

Untitled design (87)

ಫ್ಯಾಮಿಲಿ ಪೂಲ್

ಇನ್ಫಿನಿಟಿ ಪೂಲ್‌ ಮತ್ತು ಫ್ಯಾಮಿಲಿ ಪೂಲ್‌ಗೆ ಸಾಮ್ಯವಿಲ್ಲ. ಆದರೆ ಎರಡೂ ಬಹಳಷ್ಟು ಅಚ್ಚುಕಟ್ಟಾಗಿದೆ. ಅತಿಥಿಗಳ ಮನ ಸೆಳೆಯುತ್ತವೆ. ಈ ಫ್ಯಾಮಿಲಿ ಪೂಲ್‌ನ ಸುತ್ತ ಕೂತು ಹಾಡಬಹುದು. ಹರಟಲೂಬಹುದು. ವಿನೋದದ ಕ್ಷಣಗಳನ್ನು ಕಳೆಯಲು ಇದು ಅತ್ಯಂತ ಸೂಕ್ತವಾಗಿದೆ. ಫ್ಯಾಮಿಲಿಗೆಂದೇ ಹೇಳಿ ಮಾಡಿಸಿರುವ ಈ ಪೂಲ್‌ನಲ್ಲಿ ಮಕ್ಕಳು ಕೂಡ ಆಟವಾಡಬಹುದು. ಅಲ್ಲಿನ ಹುಲ್ಲು ಹಾಸು, ಕೂರಲು ವ್ಯವಸ್ಥೆ ಮಾಡಿರುವ ಜಾಗವೆಲ್ಲವೂ ಅದ್ಭುತವಾಗಿದೆ.

ದೀಪ್‌ ಮಹಲ್

ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನಲ್ಲಿರುವ ದೀಪ್‌ ಮಹಲ್‌ ಎಲ್ಲ ಹೊಗಳಿಕೆ ಮತ್ತು ಉತ್ಪ್ರೇಕ್ಷೆಗಳಿಗೂ ಮೀರಿದ್ದು. ಇಡೀ ಕೋಣೆಯ ಸೌಂದರ್ಯ ಎಂಥ ಅರಸಿಕನನ್ನೂ ಸೆಳೆಯುತ್ತದೆ. ವೈಭೋಗದ ಅರಮನೆಯಲ್ಲಿರುವ ವಿಶ್ರಾಂತಿ ಕೋಣೆಗಳು ಹೇಗಿರುತ್ತವೆಯೋ ಈ ದೀಪ್‌ ಮಹಲ್‌ ಕೂಡ ಹಾಗೇ ಇದೆ. ಗುಲಗಂಜಿಯಷ್ಟೂ ವ್ಯತ್ಯಾಸವಿಲ್ಲ ಎನ್ನಬಹುದು. ಕೋಣೆಯೊಳಗೆ ಸೂಸುವ ನಿಸರ್ಗದ ಬೆಳಕು 'ಓ ಮನಸೇ ರಿಲ್ಯಾಕ್ಸ್‌' ಎನ್ನುತ್ತದೆ.ಪ್ರತಿದಿನ ಸಂಜೆ ಏಳು ಗಂಟೆಗೆ ಇಲ್ಲಿ ದೀಪ ವನ್ನು ಹಚ್ಚಿ ಇಡಲಾಗುತ್ತದೆ. ವಿಜಯ ನಗರ ಕಾಲದ ಐತಿಹಾಸಿಕ ಕಥೆಗಳನ್ನು ಮೆಲುಕು ಹಾಕಲಾಗುತ್ತದೆ. ನಮ್ಮ ತರಲೆ ಮತ್ತು ತಾಪತ್ರಯಗಳೆಲ್ಲವೂ ಒಮ್ಮೆಲೇ ಮರೆತು ಹೋಗುತ್ತದೆ. ದೇಹ ಮತ್ತು ಮನಸು ವಿಶ್ರಾಂತಿ ಬಯಸುತ್ತದೆ. ಅಲ್ಲಿ ನಮ್ಮ ಧ್ವನಿ ಪ್ರತಿಧ್ವನಿಸುತ್ತದೆ. ಮೌನದ ಸದ್ದನ್ನೂ ಕದ್ದಾಲಿಸಬಹುದು. ದೀಪ್‌ ಮಹಲ್‌ ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನ ಸೆಂಟರ್‌ ಆಫ್‌ ದಿ ಅಟ್ರಾಕ್ಷನ್.

ಇವಾಲ್ವ್‌ ಬ್ಯಾಕ್‌ಗೆ ಶೃಂಗಸಭೆಯ ಗರಿ

ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ ತನ್ನ ಐಷಾರಾಮಿ ಆತಿಥ್ಯ ಮತ್ತು ವಾಸ್ತವ್ಯದಿಂದಾಗಿ ಈಗಾಗಲೇ ಜಾಗತಿಕಮಟ್ಟದಲ್ಲಿ ಖ್ಯಾತಿಯಾಗಿದೆ. ಕಳೆದ ಹತ್ತು ವರ್ಷಗಳಿಂದ ಹತ್ತಾರು ಗರಿಗಳು ಹಂಪಿಯ ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನ ಮುಡಿಗೇರಿವೆ. ಆ ಪೈಕಿ 2023ರಲ್ಲಿ ನಡೆದ ಜಿ-20 ಮೂರನೆಯ ಶೆರ್ಪಾ ಶೃಂಗ ಸಭೆಯು ಅಧಿಕೃತವಾಗಿ ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನಲ್ಲಿ ನಡೆದಿತ್ತು. ಜಾಗತಿಕಮಟ್ಟದ ಶೃಂಗಸಭೆಯೊಂದು ಕರ್ನಾಟಕದ ಹಂಪಿಯಲ್ಲಿ, ಅದರಲ್ಲೂ ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನಲ್ಲಿ ನಡೆದದ್ದು ಹೆಮ್ಮೆಯ ವಿಷಯ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ದಿಗ್ಗಜರೆಲ್ಲರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೌದು, ಇವಾಲ್ವ್‌ ಬ್ಯಾಕ್ ಕಮಲಾಪುರ ಪ್ಯಾಲೇಸ್‌ ಅನ್ನು G20 ಸದಸ್ಯರ ಬಹು ನಿರೀಕ್ಷಿತ ಮೂರನೆಯ G20 ಸಂಸ್ಕೃತಿ ಕಾರ್ಯ ಗುಂಪು (CWG) ಮತ್ತು ಮೂರನೆಯ G20 ಶೆರ್ಪಾ ಸಭೆಗಳನ್ನು ಆಯೋಜಿಸಲು ಅಧಿಕೃತ ಸ್ಥಳ ಪಾಲುದಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಜುಲೈ 9ರಿಂದ 16, 2023ರ ನಡುವೆ ಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತ್ತು. 50ಕ್ಕೂ ಹೆಚ್ಚು ಶೆರ್ಪಾಗಳು ಮತ್ತು 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳ ಆರು ದಿನಗಳ ಸಭೆಯು ಸಂಸ್ಕೃತಿ ಮತ್ತು ವಿದೇಶಾಂಗ ಸಚಿವಾಲಯದ ಉಸ್ತುವಾರಿಯಲ್ಲಿ ಬಹುಪಕ್ಷೀಯ ಚರ್ಚೆಗಳನ್ನು ನಡೆಸಿತ್ತು. ಪ್ರಸಿದ್ಧ ವಿಜಯ ವಿಠಲ ದೇವಾಲಯದ ಪ್ರಶಾಂತ ವಾತಾವರಣದ ಮಧ್ಯೆ ಇವಾಲ್ವ್ ಬ್ಯಾಕ್ ಗಾಲಾ ನೈಟ್ ಮತ್ತು ಡಿನ್ನರ್ ಸಭೆಗಳನ್ನು ಆಯೋಜಿಸಿತ್ತು.

’ಇವಾಲ್ವ್ ಬ್ಯಾಕ್‌ಗೆ ಜಾಗತಿಕ ಮನ್ನಣೆ ತಂದುಕೊಟ್ಟ ಶೆರ್ಪಾ ಶೃಂಗಸಭೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ದಿಗ್ಗಜರು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಅತಿಥಿಗಳನ್ನು ನಾವು ಸಂತೋಷದಿಂದ ಸ್ವಾಗತಿಸಿದ್ದೆವು. ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅತ್ಯಂತ ಹೆಮ್ಮೆ ಮತ್ತು ಶ್ರೇಷ್ಠತೆಯಿಂದ ನಾವು ಪ್ರತಿನಿಧಿಸಿದ್ದೆವು. ಅಂದು ನಡೆದ ಐತಿಹಾಸಿಕ ಸಭೆಗೆ ಸಾವಿರಾರು ಪ್ರತಿನಿಧಿಗಳು ಸಾಕ್ಷಿಯಾಗಿದ್ದರು' ಎಂದು ಇವಾಲ್ವ್ ಬ್ಯಾಕ್‌ ರೆಸಾರ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಥಾಮಸ್ ರಾಮಪುರಂ ಹೇಳುತ್ತಾರೆ. ಮೂರು ವರ್ಷಗಳ ಹಿಂದಿನ ಕ್ಷಣಗಳನ್ನು ನೆನೆದು ರಾಮಪುರಂ ಈಗಲೂ ಸಂಭ್ರಮದಿಂದ ಹನಿಗಣ್ಣಾಗುತ್ತಾರೆ.

Untitled design (89)

ಇವಾಲ್ವ್‌ ಬ್ಯಾಕ್‌ನಲ್ಲಿ ನಳಪಾಕ- ಇಲ್ಲಿ ಸಿಗುತ್ತೆ ಅರಮನೆ ಆತಿಥ್ಯ

ಇವಾಲ್ವ್‌ ಬ್ಯಾಕ್ ರೆಸಾರ್ಟ್‌ ಹತ್ತು ಹಲವು ಕಾರಣ ಮತ್ತು ವಿಶೇಷಗಳಿಗೆ ಈಗಾಗಲೇ ಜಗತ್‌ಪ್ರಸಿದ್ಧವಾಗಿದೆ. ಇವಾಲ್ವ್‌ ಬ್ಯಾಕ್ ಹತ್ತರಲ್ಲಿ ಮತ್ತೊಂದಲ್ಲ. ಅದು ನೀಡುವ ಆತಿಥ್ಯ ಮತ್ತು ಒದಗಿಸುವ ಸೌಲಭ್ಯಗಳಿಂದಲೇ ದೇಶ-ವಿದೇಶದ ಅತಿಥಿಗಳನ್ನು ತನ್ನತ್ತ ಸೆಳೆದಿದೆ. ಇವಾಲ್ವ್‌ ಬ್ಯಾಕ್ ರೆಸಾರ್ಟ್‌ನಲ್ಲಿ ಸಿಗುವ ಊಟ ಕರ್ನಾಟಕದ ಬೇರೆ ಯಾವ ರೆಸಾರ್ಟ್‌ನಲ್ಲೂ ಸಿಗುವುದಿಲ್ಲ ಎನ್ನುತ್ತಾರೆ ಅಲ್ಲಿಗೆ ಹೋಗಿ ಬಂದವರು. ಇವಾಲ್ವ್‌ ಬ್ಯಾಕ್ ಎಲ್ಲ ವಿಧದಲ್ಲೂ ಸ್ಟಾರ್‌. ಎರಡು ಬಗೆಯ ಡೈನಿಂಗ್‌ ಹಾಲ್‌ಗಳಿವೆ. ಉಳಿದ ನಾಲ್ಕು ರೆಸಾರ್ಟ್‌ಗಳನ್ನು 'Experiential' ಅಂದರೆ ವಿಶೇಷ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಪ್ರತಿ ಕಡೆಯೂ ವಿಧ ವಿಧವಾದ ಮತ್ತು ಅತ್ಯಂತ ವಿಶೇಷವಾದ ಡಿನ್ನರ್‌ ಇದೆ. ಸಾಂಪ್ರದಾಯಿಕ ಪಾಕಪದ್ಧತಿಯೂ ಇದೆ. ಆಧುನಿಕ ಖಾದ್ಯಗಳನ್ನೂ ತಯಾರಿಸುತ್ತಾರೆ. ತುಳುವಾ, ಬಹ್ಮನಿ, ಆನಂದ, ಪುಷ್ಕರಣಿ, ಕಥಾ, ಬೌಲ್ಡರ್ಸ್‌ ಇದು ಇವಾಲ್ವ್‌ ಬ್ಯಾಕ್ ನಲ್ಲಿರುವ ರೆಸ್ಟೋರೆಂಟ್‌ಗಳ ಹೆಸರುಗಳು. ಹಂಪಿ ಮತ್ತು ವಿಜಯ ನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಹೆಸರುಗಳನ್ನೇ ಇಡಲಾಗಿದೆ. ತುಳುವಾ ಮಲ್ಟಿಕ್ಯೂಸಿನ್ ರೆಸ್ಟೋರೆಂಟ್ ಆಗಿದ್ದು, ಅಲ್ಲಿ ಪ್ರಾದೇಶಿಕ ಶೈಲಿಯ ಅಡುಗೆ ಇರುತ್ತದೆ. ಅನಂತ ಕೊಳದ ಭವ್ಯ ವಾತಾವರಣದಲ್ಲಿದೆ. ಇನ್ನು ಬಹ್ಮನಿ ರೆಸ್ಟೋರೆಂಟ್‌ ಹೆಸರೇ ಹೇಳುವಂತೆ ನವಾಬ ಶೈಲಿಯ ಖಾದ್ಯಗಳು ತಯಾರಾಗುತ್ತವೆ. ವಿಜಯನಗರದ ಅರಸರಿಗೆ ಪ್ರತಿಸ್ಫರ್ಧಿಯಾಗಿದ್ದ ಬಹಮನಿ ಸುಲ್ತಾನನ ಹೆಸರನ್ನು ಈ ರೆಸ್ಟೋರೆಂಟ್‌ಗೆ ಇಡಲಾಗಿದೆ. ಐಷಾರಾಮಿ ಭೋಜನವನ್ನು ಅಲ್ಲಿ ಸವಿಯಬಹುದು. ಇನ್ನು ಆನಂದ ರೆಸ್ಟೋರೆಂಟ್‌ನಲ್ಲಿ ಪ್ರತಿ ಕ್ಷಣವನ್ನೂ ಆನಂದಿಸುತ್ತಾ ಊಟ ಮಾಡಬಹುದು. ಇಂಟಿಮೇಟ್‌ ಡೈನಿಂಗ್‌ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ವಿಜಯನಗರದ ಕೃಷ್ಣದೇವರಾಯರನ್ನು ನೆನಪಿಸುವ ಪುಷ್ಕರಣಿ ರೆಸ್ಟೋರೆಂಟ್‌ ಇನ್ಫಿನಿಟಿ ಪೂಲ್‌ ಹತ್ತಿರವೇ ಇದ್ದು ಅಲ್ಲಿ ಐದು ಬಗೆಯ ಖಾದ್ಯದ ರುಚಿ ನೋಡುತ್ತಾ, ಊಟವಾದ ನಂತರ ಲೋಟಸ್‌ ವೈನ್‌ ಅನ್ನು ಸಿಪ್‌ ಬೈ ಸಿಪ್‌ ಹೀರಿ ಮೇಲಕ್ಕೇಳಬಹುದು. ಕಥಾ ಮತ್ತು ಬೌಲ್ಡರ್ಸ್‌ನಲ್ಲೂ ಉತ್ತಮ ವ್ಯವಸ್ಥೆಯಿದೆ. ಕಥಾ ರೆಸ್ಟೋರೆಂಟ್‌ನಲ್ಲಿ ಟೆರೇಸ್‌ ಮೇಲೆ ಕೂತು ಊಟ ಮಾಡಬಹುದು. ಹಂಪಿಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಊಟ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಅಲ್ಲವೇ? ಬೌಲ್ಡರ್ಸ್‌ ರೆಸ್ಟೋರೆಂಟ್‌ನ ಮಜ ಏನು ಗೊತ್ತಾ? ವಿಶಾಲವಾದ ಅರಣ್ಯದ ನಡುವೆ ನೀವು ಊಟ ಮಾಡಬಹುದು. ಈ ಹಿಂದೆಯೆಲ್ಲ ರಾಜರು ಬೇಟೆಯ ಸಮಯದಲ್ಲಿ ಕಾಡಿನ ಮಧ್ಯೆ ಬಿಡಾರ ಹೂಡಿ, ಟೆಂಟ್‌ ಕಟ್ಟಿ ಊಟ ಮಾಡುತ್ತಿದ್ದರಲ್ಲ ಅದೇ ರೀತಿ. ಬೌಲ್ಡರ್ಸ್‌ನಲ್ಲಿ ಬೀಟಾ ಮತ್ತು ಶಿಕಾರ್‌ ಎಂಬ ಅಡುಗೆ ಮನೆಯಿಂದ ತಯಾರಾದ ಊಟವನ್ನು ಬಡಿಸುತ್ತಾರೆ. ಈಗ ಹೇಳಿ ಈ ಥರದ ಊಟ ಮತ್ತು ವಾತಾವರಣ ಯಾವ ರೆಸಾರ್ಟ್‌ನಲ್ಲಿ ಸಿಗುತ್ತದೆ. ಇವಾಲ್ವ್‌ ಬ್ಯಾಕ್ ದಿ ಬೆಸ್ಟ್‌ ಎಂದು ಹೇಳಲು ಮತ್ತೇನು ಬೇಕು?

ಸಂಪರ್ಕ:

ಡೈರೆಕ್ಟ್‌ ರಿಸರ್‌ವೇಶನ್: +91 63 6692 0434

ವಾಟ್ಸಾಪ್: +91 63 6692 0339

ಟ್ರಾವೆಲ್‌ ಏಜೆಂಟ್‌: +91 63 6693 7266

ಇಮೇಲ್: info@evolveback.com


ವಿಳಾಸ

ಹಳ್ಳಿಕೆರೆ ಗ್ರಾಮ, ಕಮಲಾಪುರ ಅಂಚೆ
ಪಿಕೆ ಹಳ್ಳಿ ರಸ್ತೆ, ಹೊಸಪೇಟೆ ತಾಲೂಕು
ವಿಜಯನಗರ ಹಂಪಿ. ಪಿನ್‌ : 583 221

ರೆಸಾರ್ಟ್ ಸಂಪರ್ಕ: +91 (0) 83 9429 4700

ರೆಸಾರ್ಟ್ ಇಮೇಲ್: hampi@evolveback.com