Tuesday, May 12, 2026
Tuesday, May 12, 2026

ಮಾಲ್ಡೀವ್ಸ್‌ ಕಡಲ ತಡಿಯ ಲಾಮುನಲ್ಲಿ ಆರಾಮ

ಈ ಫೈ ಸ್ಟಾರ್‌ ರೆಸಾರ್ಟ್‌ ಬುಕ್‌ ಮಾಡಿಕೊಂಡರೆ, ನಿಮ್ಮನ್ನು ರೆಸಾರ್ಟ್‌ಗೆ ತಲುಪಿಸಲು ಕಿಮೀಗಟ್ಟಲೆ ದೂರದವರೆಗೆ ಐಷಾರಾಮಿ ಕಾರ್‌ಗಳು ಬರುವುದಿಲ್ಲ. ಬದಲಿಗೆ ಜೆಟ್‌ಗಳು ಅಥವಾ ದ್ವಿಚಕ್ರ ವಾಹನಗಳೇ ಬರುತ್ತವೆ. ಸೈಕಲ್‌ಗಳೂ ಬರಬಹುದು. ಏಕೆಂದರೆ ಈ ರೆಸಾರ್ಟ್‌ ಸಮುದ್ರದ ಮೇಲೆ ಇದ್ದು, ಅದಕ್ಕೆ ತಲುಪಲು ಮರಮುಟ್ಟಿನ ಪುಟ್ಟ ದಾರಿ ಮಾತ್ರ ಇದೆ. ಹಾಗಾಗಿ ಇಲ್ಲಿಗೆ ಕಡಲ ಕಿನಾರೆಯಿಂದ ನಡೆದುಕೊಂಡೋ ದ್ವಿಚಕ್ರ ವಾಹನದಲ್ಲೋ ಅಥವಾ ಜೆಟ್‌ ಪ್ಲೇನ್‌ಗಳ ಮೂಲಕ ಅಲ್ಲಿಗೆ ಬರಬೇಕು.

ಬೇಸಗೆಯ ಸಮಯ ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಇದಕ್ಕಿಂತ ಮುನ್ನ ದಿನಗಳಿಗೆ ಹೋಲಿಸಿದರೆ ಈಗಿನ ವಾತಾವರಣ ತಂಪಾಗಿದೆ. ಆದರೂ ಬೇಸಗೆ ರಜೆಯ ಕಾರಣಕ್ಕಾದರೂ ಒಂದು ವಿದೇಶ ಪ್ರವಾಸ ಮಾಡಬೇಕು, ಸಮುದ್ರ ತೀರಗಳಲ್ಲಿ ತಿರುಗಾಡಬೇಕು, ನೀರಿನಲ್ಲಿ ಈಜಬೇಕು, ಸಾಹಸ ಚಟುವಟಿಕೆಗಳ ಮೂಲಕ ಸಮುದ್ರದ ನೀರಿನಲ್ಲಿ ಮಿಂದೇಳಬೇಕು ಎನ್ನುವ ಆಸೆ ಪ್ರವಾಸಪ್ರಿಯರಿಗೆ ಇರುವುದು ಸಾಮಾನ್ಯ.

ಇದನ್ನೂ ಓದಿ: ರೆಸಾರ್ಟ್ ಅಥವಾ ವಿಲ್ಲಾ! ಹೇಗೆ ಕರೆದರೂ ಬೇಸರವಿಲ್ಲಾ!

ಈ ಆಸೆಗಳಿಗೆ ಮಾಲ್ಡೀವ್ಸ್‌ ಸಮುದ್ರದಲ್ಲಿನ ʻಸಿಕ್ಸ್‌ ಸೆನ್ಸ್‌ ಲಾಮುʼನಲ್ಲಿ ಒಂದೇ ಒಂದು ವಾಸ್ತವ್ಯ ಸಾಕಾಗಬಹುದು. ಇಲ್ಲಿ ನೀವು ಸಮುದ್ರದ ಮೇಲೆ ತೇಲಬಹುದು. ಒಳಗೆ ಡೈವಿಂಗ್‌ ಮಾಡಲೂಬಹುದು ಜತೆಗೆ ಸಮುದ್ರದ ಮೇಲಿನ ಮನೆಯಲ್ಲಿ ವಾಸ್ತವ್ಯವನ್ನೂ ಅನುಭವಿಸಬಹುದು. ಆದರೆ ʻವಿಟಮಿನ್‌ ಎಂʼ ಪ್ರಾಬ್ಲಮ್‌ ಇರುವವರಿಗೆ ಇದು ಸುಲಭಕ್ಕೆ ದಕ್ಕುವ ಫಲವಲ್ಲ!

New Project (36)

ಸಮುದ್ರದ ನೀಲರಾಶಿ, ಅದರಲ್ಲೂ ಮಾಲ್ಡೀವ್ಸ್‌ ಸಮುದ್ರದ ಸ್ಪಟಿಕ ಶುದ್ಧ ನೀರಿನ ಮೇಲೆ ʻಸಿಕ್ಸ್‌ ಸೆನ್ಸ್‌ ಲಾಮುʼ ಇದೆ. ಇದು ಐಷಾರಾಮಿ ವಾಸ್ತವ್ಯದ ತಾಣ. ಮಾಲೆ ದ್ವೀಪದಲ್ಲಿನ ಏಕೈಕ ಫೈ ಸ್ಟಾರ್‌ ರೆಸಾರ್ಟ್‌ ಇದು. ಇಲ್ಲಿಂದ ಸಮುದ್ರವನ್ನಾದರೂ ನೋಡಿ, ಅದರೊಳಗೆ ಇಳಿದು ಈಜಾದರೂ ಆಡಿ, ಸೂರ್ಯಾಸ್ತ ನೋಡುತ್ತಾ ಅಂಗಾತವಾದರೂ ಮಲಗಿ ಎಲ್ಲದಕ್ಕೂ ಅವಕಾಶವಿದೆ. ಖುದ್ದು ಕೊಠಡಿಗಳೇ ಈ ಎಲ್ಲಾ ಕಾರ್ಯಕ್ಕೆ ಒಗ್ಗುವಂತೆ ಡಿಸೈನ್‌ ಆಗಿವೆ.

ಯಾವುದಕ್ಕಿಲ್ಲ ಅವಕಾಶ

ಈ ಫೈ ಸ್ಟಾರ್‌ ರೆಸಾರ್ಟ್‌ ಬುಕ್‌ ಮಾಡಿಕೊಂಡರೆ, ನಿಮ್ಮನ್ನು ರೆಸಾರ್ಟ್‌ಗೆ ತಲುಪಿಸಲು ಕಿಮೀಗಟ್ಟಲೆ ದೂರದವರೆಗೆ ಐಷಾರಾಮಿ ಕಾರ್‌ಗಳು ಬರುವುದಿಲ್ಲ. ಬದಲಿಗೆ ಜೆಟ್‌ಗಳು ಅಥವಾ ದ್ವಿಚಕ್ರ ವಾಹನಗಳೇ ಬರುತ್ತವೆ. ಸೈಕಲ್‌ಗಳೂ ಬರಬಹುದು. ಏಕೆಂದರೆ ಈ ರೆಸಾರ್ಟ್‌ ಸಮುದ್ರದ ಮೇಲೆ ಇದ್ದು, ಅದಕ್ಕೆ ತಲುಪಲು ಮರಮುಟ್ಟಿನ ಪುಟ್ಟ ದಾರಿ ಮಾತ್ರ ಇದೆ. ಹಾಗಾಗಿ ಇಲ್ಲಿಗೆ ಕಡಲ ಕಿನಾರೆಯಿಂದ ನಡೆದುಕೊಂಡೋ ದ್ವಿಚಕ್ರ ವಾಹನದಲ್ಲೋ ಅಥವಾ ಜೆಟ್‌ ಪ್ಲೇನ್‌ಗಳ ಮೂಲಕ ಅಲ್ಲಿಗೆ ಬರಬೇಕು. ಪರಿಸರ ಸ್ನೇಹಿ ವಸ್ತುಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಈ ರೆಸಾರ್ಟ್‌ನ ವಿಶೇಷ.

ಅಗತ್ಯಕ್ಕೆ ತಕ್ಕಂತೆ ವಿಲ್ಲಾಗಳು

ಸಮುದ್ರ ಸೌಂದರ್ಯ ಇಷ್ಟಕ್ಕೇ ಸೀಮಿತ ಎನ್ನುವಂತಿಲ್ಲ ಅಲ್ವಾ? ಸೂರ್ಯಾಸ್ತ, ಸಮುದ್ರಾಂತರಾಳ ಜೀವರಾಶಿ, ರಮಣೀಯ ನೀಲರಾಶಿ, ಮನರಂಜನಾ ಚಟುವಟಿಕೆಗಳು ಹೀಗೆ ಸಾಕಷ್ಟು ಕಾರಣಗಳಿಂದ ಸಮುದ್ರ ಮಹತ್ವ ಪಡೆದಿರುತ್ತದೆ. ಅದರಲ್ಲೂ ಮಾಲ್ಡೀವ್ಸ್‌ನಲ್ಲಿ ಕಿಮೀಗಟ್ಟಲೆ ದೂರದವರೆಗೂ ನೀರಿನ ಆಳ ಕಡಿಮೆ ಇದ್ದು, ಸ್ಪಟಿಕ ಶುದ್ಧ ಕಡಲ ತೀರಗಳಿವೆ.

ಇಂಥ ಕಡಲ ಥಡಯಲ್ಲಿರುವ ʻಸಿಕ್ಸ್‌ ಸೆನ್ಸ್‌ ಲಾಮುʼನಲ್ಲಿ ಇರುವ ವಿಲ್ಲಾಗಳೆಂದರೆ,

ಲಗೂನ್‌ ವಾಟರ್‌ ವಿಲ್ಲಾ

ಡಬಲ್‌ ಡೆಕ್‌ನ ವಿಲ್ಲಾ ಇದಾಗಿದ್ದು, ಸಂಪೂರ್ಣ ಮರದಿಂದ ನಿರ್ಮಾಣವಾಗಿದೆ. ಮೇಲಿನ ಡೆಕ್‌ನಿಂದ ವಿಶಾಲ ಸಮುದ್ರದ ನೋಟವನ್ನು ಕಾಣಬಹುದು. ಕೆಳಗಿನ ಡೆಕ್‌ನಿಂದ ಸಮುದ್ರಕ್ಕೆ ನೇರವಾಗಿ ಇಳಿದು ಈಜಾಡಲೂಬಹುದು. ಈ ವಿಲ್ಲಾಗಳು ಸಮುದ್ರದ ತೀರದಲ್ಲಿದ್ದು, ಹೆಚ್ಚು ಆಳ ಇರುವುದಿಲ್ಲ.

New Project (40)

ಓಷಿಯನ್‌ ವಾಟರ್‌ ವಿಲ್ಲಾ

ಇದೂ ಡಬಲ್‌ ಡೆಕ್‌ನ ವಿಲ್ಲಾ. ಸೂರ್ಯಾಸ್ತ ಮತ್ತು ಸೂರ್ಯೋದಯಗಳನ್ನು ಈ ವಿಲ್ಲಾಗಳಿಂದ ವೀಕ್ಷಿಸುವುದು ಅದ್ಭುತವಾಗಿರುತ್ತವೆ. ಸೈಕಲ್‌ ಮೂಲಕ ಈ ವಿಲ್ಲಾಕ್ಕೆ ನೀವು ತಲುಪಬಹುದು. ಸ್ನಾರ್ಕಲಿಂಗ್‌ ಮಾಡಲು ಅವಕಾಶವಿರುತ್ತದೆ.

ಓಷಿಯನ್‌ ವಾಟರ್‌ ವಿಲ್ಲಾ ವಿತ್‌ ಪೂಲ್‌

ಈ ವಿಲ್ಲಾದಲ್ಲಿ ಉಳಿಯುವ ಅತಿಥಿಗಳಿಗಾಗಿ ಒಂದು ಖಾಸಗಿ ಈಜುಕೊಳದ ವ್ಯವಸ್ಥೆ ಇದೆ. ಈ ಈಜುಕೊಳ ವಿಲ್ಲಾದಿಂದ ಹೊರಕ್ಕೆ ಸಮುದ್ರದ ಕಡೆಗೆ ಚಾಚಿಕೊಂಡಿದ್ದು ಗಾಜಿನ ಕಟ್ಟಳೆಗಳನ್ನು ಹೊಂದಿದೆ. ಹಾಗಾಗಿ ಸಮುದ್ರದ ನೀರಿನಲ್ಲಿಯೇ ನೀವು ಮೀಯುತ್ತಿರುವಂತೆ ಭಾಸವಾಗುತ್ತದೆ. ಸಮುದ್ರದ ನೀರಿನಲ್ಲಿ ಸಾಹಸ ಚಟುವಟಿಕೆಗಳನ್ನೂ ಆನಂದಿಸಬಹುದು. ಸನ್‌ ಲಾಂಜರ್‌, ಗಾಜಿನ ಓವರ್‌ ವಾಟರ್‌ ಶವರ್‌, ಔಟ್‌ ಡೋರ್‌ ರೇನ್‌ ಶವರ್‌ ವ್ಯವಸ್ಥೆಗಳೂ ಇರುತ್ತವೆ.

New Project (38)

ಇನ್ನೂ ಸಾಕಷ್ಟು ವಿಲ್ಲಾಗಳ ಆಯ್ಕೆಗಳಿವೆ. ಅವುಗಳ ಹೆಸರುಗಳನ್ನು ಬರೆದರೂ ನೂರಾರು ಪದಗಳಗುತ್ತವೆ. ಒಟ್ಟಾರೆ ಖಾಸಗಿ ವಿಲ್ಲಾದಿಂದ ಹಿಡಿದು ಖಾಸಗಿ ಬೀಚ್‌ವರೆಗೆ ಬೇಕಾದ ಎಲ್ಲಾ ಆಯ್ಕೆಗಳಿಗೆ ಕಸ್ಟಮೈಸ್ಡ್‌ ಎನ್ನುವಂತೆ ಇಲ್ಲಿ ವಿಲ್ಲಾಗಳ ಆಯ್ಕೆ ಇದೆ.

ವಿಲ್ಲಾದಲ್ಲಿ ಏನೇನು ವ್ಯವಸ್ಥೆ ಇದೆ

ಯಾವುದೇ ವಿಲ್ಲಾವನ್ನು ಆಯ್ಕೆ ಮಾಡಿಕೊಂಡರು ಅಲ್ಲಿ ಸ್ಯಾಟಲೈಟ್‌ ಟಿವಿ, ಖಾಸಗಿ ಬಾರ್‌, ಐಡಿಡಿ ದೂರವಾಣಿ, ವೈ-ಫೈ, ರೇನ್‌ ಶವರ್‌, ತಿಜೋರಿ, ಎಸಿ, ಡಬಲ್‌ ಬೆಡ್‌ ವ್ಯವಸ್ಥೆ ಇದ್ದೇ ಇರುತ್ತದೆ. ಸೂರ್ಯಾಸ್ತ ಮತ್ತು ಸೂರ್ಯೋದಯ ವೀಕ್ಷಣೆಗಾಗಿ ಒಂದು ಬಾಲ್ಕನಿ ವ್ಯವಸ್ಥೆ, ವಿಶ್ರಾಂತಿ ವೇದಿಕೆ, ವಿಹಂಗಮ ನೋಟಗಳನ್ನು ಕಣ್ತುಂಬಿಕೊಳ್ಳುತ್ತಾ ಆಹಾರ ರುಚಿ ಸವಿಯಲು ಊಟದ ಡೆಕ್‌, ಸಮುದ್ರ ವೀಕ್ಷಣಾ ವೇದಿಕೆ, ವೈಯಕ್ತಿಕ ಈಜುಕೊಳದ ವ್ಯವಸ್ಥೆಯೂ ಇರುತ್ತವೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ